
ವಿದೇಶದಲ್ಲಿ ಆಪರೇಷನ್ ಮುಗಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದಂತೆ ಜೀ ಕನ್ನಡ ವೇದಿಕೆ ಆಗಮಿಸಿದ ಶಿವಣ್ಣ ಮತ್ತು ಪತ್ನಿ ಗೀತಾ ಅವರನ್ನು ನೋಡಿ ಇಡೀ ಕರ್ನಾಟಕವೇ ಶಾಕ್ ಆಗಿದೆ. ಕಾರ್ಯಕ್ರಮದಲ್ಲಿ ಆಗಮಿಸಿದ್ದ ನಟಿ ಸುಧಾರಾಣಿ, ನಟಿ ತಾರಾ ಅನುರಾಧ ಮತ್ತು ನಟಿ ಶ್ರುತಿ ಭಾವುಕರಾಗಿದ್ದಾರೆ.
'ಶಿವಣ್ಣ ಆರೋಗ್ಯವಾಗಿದ್ದಾರೆ ಅನ್ನೋದನ್ನು ಕೇಳಿ ಖುಷಿ ಆಯ್ತು. ವಿದೇಶದಲ್ಲಿ ಇದ್ದಾಗ ಫೋನ್‌ನಲ್ಲಿ ಮಾತನಾಡಿದ್ದೆ ಆಗ ಹುಷಾರಾಗಿದ್ದಾರೆ ಅಂತ ಕೇಳಿ ಖುಷಿ ಆಗಿತ್ತು. ಶಿವಣ್ಣ ಮತ್ತು ಗೀತಕ್ಕೆ ಅವರಿಗೆ ಫೋನ್ ಮಾಡಬೇಕು ಮಾತನಾಡಬೇಕು ಅಂದುಕೊಳ್ಳುತ್ತಿದ್ವಿ ಆದರೆ ಅವರನ್ನು ನೇರವಾಗಿ ನೋಡಿ ಸರ್ಪ್ರೈಸ್ ಅಲ್ಲದೆ ಖುಷಿ ಕೂಡ ಆಯ್ತು' ಎಂದು ಸುಧಾರಾಣಿ ಮಾತನಾಡಿದ್ದಾರೆ.
ಸಾಕ್ಷಾತ್ ಮಹಾಲಕ್ಷ್ಮಿ ತರ ನಮ್ಮ ತಾರಾ ಎಂದ ನೆಟ್ಟಿಗರು; ಫೋಟೋ ವೈರಲ್
'ಅಲ್ಲಿ ಕುಳಿತುಕೊಂಡು ನೋಡುವಾಗ ಯಾರೋ ಸರ್ಪ್ರೈಸ್ ಅಂದ್ರೆ ನಮ್ಮ ಫ್ಯಾಮಿಲಿಯಿಂದ ಯಾರನ್ನಾದರೂ ಕರೆಸಿರುತ್ತೀರಾ ಅಂದುಕೊಂಡೆ. ಇಡೀ ಕರ್ನಾಟಕದ ಕುಟುಂಬವನ್ನು ಪ್ರತಿನಿಧಿಸುವಂತ ಅಣ್ಣ ಮತ್ತು ಅತ್ತಿಗೆಯನ್ನು ಕರೆದುಕೊಂಡು ಬರುತ್ತೀರಿ ಅಂತ ನಾನು ಅಂದುಕೊಂಡಿರಲಿಲ್ಲ. ಶಿವಣ್ಣ ಗೀತಕ್ಕ ಕಣ್ಣಿಗೆ ಕಾಣಿಸಿದ ತಕ್ಷಣ ಕರೆಂಟ್ ಪಾಸ್ ಆದಂತೆ ಆಯ್ತು. ನಿಮ್ಮಬ್ಬರನ್ನು ನೋಡಿ ನನಗೆ ಮಾತೇ ಬರುತ್ತಿಲ್ಲ. ಡಾಕ್ಟರ್ ಡಾ ರಾಜ್‌ಕುಮಾರ್ ಅಪ್ಪಾಜಿ ಅವರು ಅದೆಷ್ಟೋ ಕಲಾವಿದರಿಗೆ ಬದುಕುವುದು ಹೇಗೆ ಅಂತ ತೋರಿಸಿಕೊಟ್ಟರು. ಆದರೆ ಶಿವಣ್ಣ ಬದುಕನ್ನು ಗೆದ್ದು ಬರುವುದು ಹೇಗೆ ಅಂತ ತೋರಿಸಿಕೊಟ್ಟಿದ್ದೀರಿ. ಆದರ್ಶ ದಂಪತಿಗಳು ಅಂದ್ರೆ ಹೀಗೆ ಇರ್ತಾರ ಅಂತ ತೋರಿಸಿಕೊಟ್ಟಿದ್ದೀರಿ ಇಬ್ಬರೂ. ಅಪ್ಪಾಜಿ ಜೊತೆ ಅಮ್ಮ ಹೇಗಿದ್ರು ಅಂತ ನಮ್ಮ ಅಪ್ಪ ಅಮ್ಮ ಹೇಳುತ್ತಿದ್ದರು. ಯಾವುದೋ ಹಳ್ಳಿಯಿಂದ ಬಂದು ಸಿನಿಮಾ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ತಿಳಿದುಕೊಂಡು ಸಿನಿಮಾ ನಿರ್ಮಾಣ ಮಾಡಲು ಮುಂದಾದರು ಅಣ್ಣಾವ್ರು ಅಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡಲು ಸಾಥ್ ಕೊಟ್ಟರು ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಅದನ್ನು ನಾನು ಕಣ್ಣಲ್ಲಿ ನೋಡಲು ನನಗೆ ಆಗಲಿಲ್ಲ. ಅವರು ಬದುಕಿದ್ದು ಹೇಗೆ ಎಂದು ನಿಮ್ಮನ್ನು ನೋಡುತ್ತಿದ್ದೀವಿ. ನಮಗೆಲ್ಲಾ ಬದುಕು ಕೊಟ್ಟವೂ ನೀವು ಹೀಗಾಗಿ ನಿಮ್ಮ ಬದುಕು ಬಂಗಾರ ಆಗಬೇಕು. ಇಂತಹ ಪರಿಸ್ಥಿತಿಯಲ್ಲಿ ಯಾರು ಕಾರ್ಯಕ್ರಮಕ್ಕೆ ಬರಲು ಧೈರ್ಯ ಮಾಡುತ್ತಿರಲಿಲ್ಲ ಆದರೆ ನೀವು ಬಂದಿರುವುದು ನಿಜಕ್ಕೂ ಖುಷಿ ಆಯ್ತು. ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗುತ್ತೀವಿ ಆದರೆ ದೇವರೇ ನಡೆದುಕೊಂಡು ಬಂದಿರುವುದು ನೋಡಿ' ಎಂದು ನಟಿ ಶ್ರುತಿ ಹೇಳಿದ್ದಾರೆ.
ಸುಮ್ಮನಿದ್ದವಳನ್ನು ಕರೆಸಿ ಅವಮಾನ ಮಾಡಿದ್ರು, ನಾನಾಗಿ ಸತ್ರೆ ಯಾರು ಹೊಣೆ : ಚಿತ್ರಾಲ್
'ನಮ್ಮ ಕರ್ನಾಟಕದಲ್ಲಿ ನಮ್ಮ ಕಣ್ಣ ಮುಂದೆ ಇರುವ ಸಾಕ್ಷಾತ್ ಆದರ್ಶ ದಂಪತಿಗಳು ಅಂದ್ರೆ ಶಿವಣ್ಣ ಮತ್ತು ಗೀತಕ್ಕ. ಗೀತಾ ಅವರನ್ನು ಮಗುವಿನಂತೆ ಶಿವಣ್ಣ ನೋಡಿಕೊಂಡಿದ್ದಾರೆ. ತಲೆ ಬಾಚುವುದು, ಕೈ ಹಿಡಿದು ನಡೆದುಕೊಂಡು ಹೋಗುವುದು....ನನ್ನ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ ಈ ರೀತಿ ಆಗುತ್ತದೆ. ಶಿವಣ್ಣ ಫುಲ್ ಆಫ್ ಎನರ್ಜಿ. ಶಿವಣ್ಣ ಅಂದ ತಕ್ಷಣ ಯೂಥ್‌ಫುಲ್. ಶಿವಣ್ಣ ಅಂದ ತಕ್ಷಣ ಒಂದು ಮಗು, ಶಿವಣ್ಣ ಅಂದ ತಕ್ಷಣ ತಂದೆ ಒಬ್ಬ ಅಣ್ಣ ....ಶಿವಣ್ಣ ಅಂದ ತಕ್ಷಣ ನಮ್ಮೊನ್ನು ಶಿವಣ್ಣ. ಶಿವಣ್ಣ ಈ ಸಮಯದಲ್ಲಿ ಕುಗ್ಗಿದ ತಕ್ಷಣ...ನಾನು ನಿಮ್ಮನ್ನು ನೋಡಿಕೊಳ್ಳುತ್ತೀನಿ ಎಂದು ಧೈರ್ಯವಾಗಿ ನಿಂತಿದ್ದು ತಾಯಿ ಗೀತಕ್ಕೆ. ಗೀತಾ ಮಾತನಾಡಿರುವ ವಿಡಿಯೋ ಕಳುಹಿಸಿದಾಗ ನಾನು ಮಾತನಾಡಬೇಕು ಎಂದು ವಿಡಿಯೋ ಮಾಡಿದೆ. ಅದಕ್ಕೂ ಗೀತಾ ತಕ್ಷಣ ಮಾತನಾಡಿದ್ದರು' ಎಂದಿದ್ದಾರೆ ತಾರಾ.
ಬೆಂಗಳೂರಿನ ಐಷಾರಾಮಿ ಪಬ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶ್ರುತಿ ಹರಿಹರನ್; ಫೋಟೋ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.