ಮದುಮಗ ಡಾಲಿ ಧನಂಜಯ್​ ದರ್ಶನ್​ರನ್ನು ಮದ್ವೆಗೆ ಯಾಕೆ ಕರೆದಿಲ್ಲ? ಕಾರಣ ಅವರ ಬಾಯಲ್ಲೇ ಕೇಳಿ...

Published : Feb 05, 2025, 06:49 PM ISTUpdated : Feb 06, 2025, 10:33 AM IST
 ಮದುಮಗ ಡಾಲಿ ಧನಂಜಯ್​ ದರ್ಶನ್​ರನ್ನು ಮದ್ವೆಗೆ ಯಾಕೆ ಕರೆದಿಲ್ಲ? ಕಾರಣ ಅವರ ಬಾಯಲ್ಲೇ ಕೇಳಿ...

ಸಾರಾಂಶ

ಡಾಲಿ ಧನಂಜಯ್‌ ಮದುವೆಗೆ ದರ್ಶನ್‌ ಆಗಮಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. ಡಾಲಿ ಅವರು ದರ್ಶನ್‌ರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಆದರೆ, ದರ್ಶನ್‌ ಬೇರೆಯವರನ್ನು ಭೇಟಿಯಾಗುತ್ತಿರುವುದರಿಂದ ಡಾಲಿ ಹೇಳಿಕೆಯಿಂದ ದರ್ಶನ್‌ಗೆ ಬೇಸರವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಹಿಂದೆ ದರ್ಶನ್‌ ಕಾನೂನು ಸಮಸ್ಯೆಯಲ್ಲಿ ಸಿಲುಕಿದ್ದಾಗ ಡಾಲಿ ನೀಡಿದ ಹೇಳಿಕೆಯೂ ಈ ಊಹಾಪೋಹಗಳಿಗೆ ಕಾರಣ.

ಸ್ಯಾಂಡಲ್​ವುಡ್​ ನಟ ಡಾಲಿ ಧನಂಜಯ್​ ಅವರು ವೈದ್ಯೆಯಾಗಿರುವ ಧನ್ಯತಾ ಅವರೊಂದಿಗೆ ಇದೇ 16ರಂದು ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಮ್ಮ ಮದುವೆಯ ಬಗ್ಗೆ ಹಾಗೂ ಭಾವಿ ಪತ್ನಿ ಧನ್ಯತಾ ಅವರನ್ನು ಪರಿಚಯಿಸುವ ಸಲುವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರಿಗೆ ಎದುರಾದ ಪ್ರಶ್ನೆಗೆ ದರ್ಶನ್​ ಅವರನ್ನು ಯಾಕೆ ಕರೆದಿಲ್ಲ ಎನ್ನುವುದು. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ದರ್ಶನ್ ನಟನೆಯ 'ಯಜಮಾನ' ಚಿತ್ರದಲ್ಲಿ ಡಾಲಿ ಧನಂಜಯ್ ಮಿಠಾಯಿ ಸೂರಿ ಎಂಬ ಪಾತ್ರದಲ್ಲಿ ನಟಿಸಿದ್ದರು. ಆ ಮಟ್ಟಿಗೆ ಇವರಿಬ್ಬರ ನಡುವೆ ಅನ್ಯೋನ್ಯತೆಯಿದೆ. ಆದರೆ, ದರ್ಶನ್​ ಅವರನ್ನು ಆಹ್ವಾನಿಸದೇ ಇರುವುದು ಹಲವರ ಅನುಮಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅವರನ್ನು ಪತ್ರಿಕಾಗೋಷ್ಠಿಯಲ್ಲಿ ಕೇಳಲಾಗಿದೆ. 

ಅದಕ್ಕೆ ಡಾಲಿ ಅವರು, ಕಳೆದೆರಡು ತಿಂಗಳಿನಿಂದ ಆಮಂತ್ರಣ ಪತ್ರಿಕೆ ಹಂಚುತ್ತಿದ್ದೇನೆ. ವಿವಿಧ ಕ್ಷೇತ್ರದವರನ್ನು ಆಹ್ವಾನಿಸುತ್ತಿದ್ದೇನೆ. ಹೀಗೆ ಇರುವಾಗ ದರ್ಶನ್​ ಅವರನ್ನು ಕರೆಯದೇ ಇರುತ್ತೇನೆಯೆ ಎಂದು ಪ್ರಶ್ನಿಸಿದ್ದಾರೆ. ಅವರನ್ನೂ ಕರೆಯುವ ಪ್ರಯತ್ನ ಮಾಡಿದ್ದೆ. ಆದರೆ  ಅವರನ್ನು ರೀಚ್ ಮಾಡುವುದಕ್ಕೆ ಸಾಧ್ಯವಾಗ್ತಿಲ್ಲ. ಆದ್ದರಿಂದ ಇಲ್ಲಿಂದಲೇ ದರ್ಶನ್​ ಅವರು  ತುಂಬಾ ಆತ್ಮೀಯತೆಯಿಂದ ನನ್ನ ಮದುವೆಗೆ ಆಹ್ವಾನಿಸುತ್ತಿದ್ದೇನೆ ಎಂದಿದ್ದಾರೆ. 

ನಮ್​ ಮದ್ವೆ ದಿನ ಮಾವನೇ ಮಿಸ್ಸಿಂಗು: ಅವ್ರು ಇಲ್ದೇ ನಂಗೆ ಮಂಟಪಕ್ಕೆ ನೋ ಎಂಟ್ರಿ! ಅಂದಿನ ಫಜೀತಿ ನೆನೆದ ರಕ್ಷಿತಾ

ಇದಕ್ಕೆ ಸೋಷಿಯಲ್​  ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದಕ್ಕೆ ಒಂದು ಹಿಂದಿನ ಘಟನೆಯೂ ಇದೆ. ಕೊಲೆ ಕೇಸ್​ನಲ್ಲಿ  ದರ್ಶನ್ ಅವರು ಜೈಲು ಸೇರಿದ ಸಂದರ್ಭದಲ್ಲಿ ಮಾಧ್ಯಮದವರು ಎಲ್ಲರಿಂದಲೂ ಪ್ರತಿಕ್ರಿಯೆ ಪಡೆಯುತ್ತಿದ್ದರು. ಆಗ ಡಾಲಿ ಧನಂಜಯ್​ ಅವರ ಎದುರು ಮೈಕ್​ ಹಿಡಿದಿದ್ದಾಗ, ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡಲು ಆರಂಭದಲ್ಲಿ ಡಾಲಿ ಹಿಂದೇಟು ಹಾಕಿದ್ದರು. ಕೊನೆಯಲ್ಲಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ದರ್ಶನ್ ಸಹೋದರನಾಗಿ ಹೇಳುತ್ತೇನೆ, ಅವರಿಂದ ತಪ್ಪಾಗಿದ್ದರೆ ಶಿಕ್ಷೆಯಾಗಲಿ ಎಂದಷ್ಟೇ ಹೇಳಿದ್ದರು. ಜೊತೆಗೆ, ಈ ವಿಷಯದಲ್ಲಿ ನಾನೇನು ಹೇಳುವುದು ಎಂದು ಸ್ವಲ್ಪ ಅಸಮಾಧಾನವನ್ನೇ ಹೊರ ಹಾಕಿದ್ದರು. ಅಲ್ಲೊಂದು ಜೀವ ಹೋಗಿದೆ.  ರೇಣುಕಾಸ್ವಾಮಿ ಪೋಷಕರು ಹಾಗೂ ಹೆಂಡತಿಯ ಮುಖ ನೋಡಿದಾಗ ಖಂಡಿತಾ ನೋವಾಗುತ್ತದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಆ ಜೀವಕ್ಕೆ ಏನು ನ್ಯಾಯ ಸಿಗಬೇಕೋ ಅದು ಸಿಗುತ್ತೆ ಎಂದಿದ್ದರು. 

ಈ ಹೇಳಿಕೆ ಬಗ್ಗೆ ಈಗ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಏಕೆಂದರೆ, ದರ್ಶನ್​ ಅವರು ಇದಾಗಲೇ ಎಷ್ಟೋ ಮಂದಿಯನ್ನು ಮೀಟ್​ ಮಾಡಿದ್ದಾರೆ.  ಇತ್ತೀಚೆಗೆ ರಾಯಲ್ ಸಿನಿಮಾ ನೋಡುವ ಸಂದರ್ಭದಲ್ಲಿ ಅವರು ಎಲ್ಲರ ಜೊತೆ ಇದ್ದರು. ಹಾಗಿದ್ದರೆ ಓರ್ವ ನಟನಿಗೇ ಅವರು ಸಿಗುವುದಿಲ್ಲವೆ, ಅಭಿಮಾನಿಗಳಿಗೆ ಸಿಗುವ ದರ್ಶನ್​, ಡಾಲಿ ಅವರಿಗೆ ಸಿಗುವುದಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು, ಬಹುಶಃ ಡಾಲಿ ಧನಂಜಯ್​ ಹೇಳಿಕೆಯಿಂದ ದರ್ಶನ್​ ಅವರಿಗೆ ಬೇಸರ ಆಗಿರಬಹುದು ಎನ್ನುತ್ತಿದ್ದಾರೆ. 

ಈ ಬ್ಯೂಟಿ ನೋಡಿ ಎಲ್ಲೆಲ್ಲೋ ಚಿವುಟಿದ್ರು, ಬೇರೆ ಬೇರೆ ಪ್ರೊಡ್ಯೂಸರ್ಸ್​ ಬಂದು... ನಟ ದೀಪಕ್​ ಹೇಳಿದ್ದೇನು ಕೇಳಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ