ಸೂಪರ್ ಹಿಟ್ ಯಜಮಾನ ಚಿತ್ರದ ಅದ್ಭುತ ಕ್ಷಣಗಳನ್ನು ನೆನಪಿಸಿಕೊಂಡ ಅಭಿಜಿತ್. ವಿಷ್ಣು ದಾದ ಸರಳತೆ ಬಿಚ್ಚಿಟ್ಟ ಅನುಶ್ರೀ.....
ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಟನೆಯ ಯಜಮಾನ ಸಿನಿಮಾ ರಿಲೀಸ್ ಆಗಿದೆ 24 ವರ್ಷ ಕಳೆದರೂ ಈಗಲೂ ಜನರು ಗಸಗಸೆ ಪಾಯಿಸ ಮರೆತ್ತಿಲ್ಲ. ವಿಷ್ಣುವರ್ಧನ್ ಡಬಲ್ ಆಕ್ಟಿಂಗ್, ಪ್ರೇಮಾ ಸರಳಗೆ....ಅಭಿಜಿತ್, ಶಶಿಕುಮಾರ್, ಹಿರಿಯ ಕಲಾವಿದೆ ಲಕ್ಷ್ಮಿ ದೇವಿ, ರಮೇಶ್ ಭಟ್ ಮತ್ತು ಅವೀನಾಶ್ ನಟನೆಯಿಂದ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಮುಟ್ಟಿತ್ತು. ಇತ್ತೀಚಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಮಹಾನಟಿ ರಿಯಾಲಿಟಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ನಟ ಅಭಿಜಿತ್ ಆಗಮಿಸಿದ್ದರು. ತೀರ್ಪುಗಾರ್ತಿ ಪ್ರೇಮಾ ಜೊತೆ ಯಜಮಾನ ಸಿನಿಮಾಗಳ ಅದ್ಭುತ ಕ್ಷಣಗಳನ್ನು ಹಂಚಿಕೊಂಡರು.
'ಯಜಮಾನ ಚಿತ್ರದ ಪ್ರಮುಖ ಹೈಲೈಟ್ ವಿಷ್ಣುವರ್ಧನ್ ಸರ್. ನಂತರ ಬಂದ ಪಾತ್ರಗಳಿಗೆ ಪರ್ಫೆಕ್ಟ್ ಆಗಿರುವ ಆರ್ಟಿಸ್ಟ್‌ಗಳನ್ನು ಹುಡುಕಿದರು. ಯಜಮಾನ ಸಿನಿಮಾವನ್ನು ಜನರು ಪ್ರೀತಿಯಿಂದ ಅಪ್ಪಿಕೊಂಡರು. ಈ ಸಿನಿಮಾ ನನ್ನ ಜೀವನದ ದೊಡ್ಡ ಮೈಲಿಗಲ್ಲು. ಯಾವತ್ತೂ ಮರೆಯಲು ಸಾಧ್ಯವಿಲ್ಲದೆ ಸಿನಿಮಾ ಇದು. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಪ್ರೇಮಾ ತುಂಬಾ ಬ್ಯುಸಿಯಾಗಿದ್ದರೂ ಆದರೂ ಅಲ್ಲಿಂದ ಬಂದು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದರು, ಬಿಟ್ಟು ಕೊಡುತ್ತಿರಲಿಲ್ಲ. 8 ಗಂಟೆಗೆ ನಾವು ಮೇಕಪ್ ಧರಿಸಿ ಕ್ರಿಕೆಟ್ ಆಟವಾಡಲು ಶುರು ಮಾಡುತ್ತಿದ್ದೆವು...9 ಆಯ್ತು ಅಂತ ಗಂಟೆ ನೋಡುವಷ್ಟರಲ್ಲಿ ವಿಷ್ಣು ಸರ್ ಬರುತ್ತಿದ್ದರು. ತೆರೆ ಹಿಂದೆ ಹೆಣ್ಣು ಮಕ್ಕಳ ಜೊತೆ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು ಎಂದು ತೋರಿಸಿಕೊಡುತ್ತಿದ್ದರು' ಎಂದು ಅಭಿಜಿತ್ ಮಾತನಾಡಿದ್ದಾರೆ.
ಗಂಡು ದಿಕ್ಕಿಲ್ಲದ ಸಂಸಾರವನ್ನು ನಾನೇ ನೋಡಿಕೊಂಡೆ; 'ಶಾಸ್ತ್ರಿ' ನಟಿ ಮಾನ್ಯ ಭಾವುಕ
ವಿಷ್ಣು ದಾದ ಸರಳತೆ:
'ನಾನು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾಗ ...ವಿಷ್ಣುವರ್ಧನ್ ಸರ್ ಸಂದರ್ಶನ ಮಾಡಲು ಅವರ ಮನೆಗೆ ಹೋಗಿದ್ದೆ. ಸಾಮಾನ್ಯವಾಗಿ ಮನೆಯ ಗಾರ್ಡನ್ ಏರಿಯಾದಲ್ಲಿ ಸಂದರ್ಶನ ಕೊಡುತ್ತಾರೆ, ಅಲ್ಲೊಂದು ಕಲ್ಲಿನ ಕಟ್ಟೆ ಇತ್ತು ಇದ್ದಕ್ಕಿದ್ದಂತೆ ಮಳೆ ಬರಲು ಶುರುವಾಯ್ತು. ತಕ್ಷನ ಚತ್ರಿ ತರೆಸಿಕೊಂಡರು. ಆಗಷ್ಟೇ ನಾನು ಇಂಡಸ್ಟ್ರಿಗೆ ಬಂದಿದ್ದ ಕಾರಣ ಚತ್ರಿ ಹಿಡಿಯಲು ಮುಂದಾದೆ, ತಕ್ಷಣವೇ ಹಿಂಪಡೆದು ಹೆಣ್ಣು ಮಕ್ಕಳ ಕೈಗೆ ಅಲ್ಲ ಚತ್ರಿ ನಾವು ಗಂಡು ಮಕ್ಕಳು ಇಟ್ಟಿಕೊಳ್ಳಬೇಕು ಅಂದ್ರು. ಸಂದರ್ಶನ ಪೂರ್ತಿ ಅವರು ಕೈಯಲ್ಲಿ ಚತ್ರಿ ಹಿಡಿದುಕೊಂಡು ಮಾತನಾಡಿದ್ದರು. ಸಾಹಸ ಸಿಂಹ ವಿಷ್ಣು ಸರ್ ರಿಯಲ್ ಲೈಫ್ ಹೀರೋ ಏಕೆಂದರೆ ಹೆಣ್ಣು ಮಕ್ಕಳಿಗೆ ಅಷ್ಟು ಗೌರವ ಕೊಡುತ್ತಾರೆ' ಎಂದು ಆಂಕರ್ ಅನುಶ್ರೀ ಹೇಳಿದ್ದಾರೆ.