ಅಪ್ಪು ಸಿನಿಮಾ ನೋಡಿ ಅಶ್ವಿನಿ ಮೇಡಂಗೆ ಬರ್ತ್‌ ಡೇ ವಿಶ್‌ ಮಾಡಿದ ಅನುಶ್ರೀ

ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಅಪ್ಪು ಸಿನಿಮಾ ತೆರೆಗೆ ಬಂದಿದೆ. ಥಿಯೇಟರ್ನಲ್ಲಿ ಅಪ್ಪು ಸಿನಿಮಾ ನೋಡಿ, ಆಂಕರ್ ಅನುಶ್ರೀ ಸಂಭ್ರಮಿಸಿದ್ದಾರೆ. 
 

Anchor Anushree celebrated after watching Puneeth Rajkumar Appu movie

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಮೊಟ್ಟ ಮೊದಲು ನಾಯಕ ನಟನಾಗಿ ಅಭಿನಯಿಸಿದ್ದ ಅಪ್ಪು ಚಿತ್ರ (Appu Movie) ಇಂದು ರಾಜ್ಯಾದ್ಯಂತ ರಿ ರಿಲೀಸ್ ಆಗಿದೆ. 25 ವರ್ಷಗಳ ನಂತ್ರ ಮತ್ತೆ ಅಪ್ಪು ಸಿನಿಮಾ ತೆರೆಗೆ ಬಂದಿದ್ದು,  ಥಿಯೇಟರ್ ನಲ್ಲಿ ಅಪ್ಪು ಸಿನಿಮಾ ನೋಡಿದ ಫ್ಯಾನ್ಸ್ ಹಬ್ಬ ಆಚರಿಸಿದ್ದಾರೆ. ಬೆಂಗಳೂರಿನ ವೀರೇಶ್ ಥಿಯೇಟರ್ ಗೆ ಆಗಮಿಸಿದ್ದ ನಿರೂಪಕಿ ಅನುಶ್ರೀ, ಪುನೀತ್ ರಾಜ್ ಕುಮಾರ್ ಅವರನ್ನು ತೆರೆ ಮೇಲೆ ನೋಡಿ ಭಾವುಕರಾಗಿದ್ದಾರೆ.

ಅನುಶ್ರೀ, ಅಪ್ಪು ಕಟ್ಟಾ ಅಭಿಮಾನಿ. ಅನೇಕ ಬಾರಿ ಅನುಶ್ರೀ ಇದನ್ನು ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವನ್ನು ಅನುಶ್ರೀ ಬಿಡೋದಿಲ್ಲ ಅಂದ್ರೆ ತಪ್ಪಾಗೋದಿಲ್ಲ. ಪುನೀತ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾದ ಅಪ್ಪು ಸಿನಿಮಾವನ್ನು ಅವರು ವೀಕ್ಷಿಸಿದ್ದಾರೆ.  ತೆರೆ ಮೇಲೆ ಅಪ್ಪು ನೋಡಿ ಅನುಶ್ರೀ ಸಂಭ್ರಮಿಸಿದ್ದಾರೆ. ತಮ್ಮ ಇನ್ಸ್ಟಾ ಖಾತೆಯಲ್ಲಿ ಆ ಸುಂದರ ಕ್ಷಣವನ್ನು ಅನುಶ್ರೀ ಹಂಚಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಜೊತೆಗಿರುವ ಫೋಟೋ ಹಾಗೂ ಅಪ್ಪು ಸಿನಿಮಾ ಟೈಟಲ್ ಕಾರ್ಡ್ ವಿಡಿಯೋವನ್ನು ಅನುಶ್ರೀ ಹಂಚಿಕೊಂಡಿದ್ದಾರೆ. ಅಪ್ಪು ಅಪ್ಪುಗೆಯ ಪ್ರೀತಿ ಅಶ್ವಿನಿ ಮೇಡಂಗೆ ಹುಟ್ಟುಹಬ್ಬದ ಶುಭಾಶಯಗಳು. ಇಂದು ಅಪ್ಪು ಅವರು ಮತ್ತೆ ಬಂದಿದ್ದಾರೆ. ಅವರನ್ನು ಮನಸಾರೆ ಅಪ್ಪಿದ ಕ್ಷಣ. ನಮ್ಮ ರಕ್ಷಿತಾ ಮೇಡಂ ಮುಗ್ದ ನಗು ಸೆರೆ ಹಿಡಿದ ಕ್ಷಣ. ಗುರುಕಿರಣ್ ಮ್ಯೂಜಿಕ್ ಆಲಿಸಿದ ಕ್ಷಣ. ಎಲ್ಲಕ್ಕಿಂತ ಅಪ್ಪು ಅಭಿಮಾನಿಗಳ ಸಂತೋಷ, ಕಣ್ಣೀರು, ಅಭಿಮಾನದ ಹೊಳೆಯಲ್ಲಿ ಮಿಂದ ಕ್ಷಣ, ಮೈ ರೋಮಾಂಚನ ಎಂದು ಅನುಶ್ರೀ ಶೀರ್ಷಿಕೆ ಹಾಕಿದ್ದಾರೆ.

Latest Videos

ಪುನೀತ್‌ ರಾಜ್‌ಕುಮಾರ್‌ ‌ʼಅಪ್ಪುʼ ಸಿನಿಮಾ ರೀ ರಿಲೀಸ್; ʼಹ್ಯಾಪಿ ಬರ್ತಡೇ ಆಂಟಿʼ ಎಂದ ಯುವರಾಜ್‌ಕುಮಾರ್!‌

ಸಿನಿಮಾ ವೀಕ್ಷಣೆ ನಂತ್ರ ಮಾಧ್ಯಮಗಳ ಜೊತೆ ಮಾತನಾಡಿದ ಅನುಶ್ರೀ, ಸಾಮಾನ್ಯರಿಗೆ ಇದು ಸಿನಿಮಾ ರಿಲೀಸ್. ಆದ್ರೆ ನಮ್ಮಂದ ಅಪ್ಪು ಸರ್ ಅಭಿಮಾನಿಗಳಿಗೆ ಇದೊಂದು ರೀತಿ ಹಬ್ಬ. ಅವರನ್ನು ಮತ್ತೆ ಸ್ಕ್ರೀನ್ ಮೇಲೆ ನೋಡೋಕೆ, ಅವರು ತೆರೆ ಮೇಲೆ  ಬಂದಾಗ ವಿಸಿಲ್ ಹೊಡೆಯೋಕೆ ಇನ್ನೂ ಒಂದು ವರ್ಷ ಕಾಯಬೇಕು. ಏನೇ ಆಗ್ಲಿ, ಒಂದು ವರ್ಷ ಕಾದ್ರೂ ಅಪ್ಪು ಸರ್ ಸಿನಿಮಾವನ್ನು ಲಾಂಚಿಂಗ್ ಟೈಂನಲ್ಲಿ ಹೇಗೆ ಸಂಭ್ರಮಿಸಿದ್ವೋ ಅದೇ ರೀತಿ ಸಂಭ್ರಮಿಸುತ್ತೇವೆ ಎಂದು ಅನುಶ್ರೀ ಹೇಳಿದ್ದಾರೆ. ಇಂದು ಅಶ್ವಿನಿ ಮೇಡಂ ಹುಟ್ಟುಹಬ್ಬವಾಗಿದ್ದು, ಎಲ್ಲ ಅಪ್ಪು  ಅಭಿಮಾನಿಗಳ ಪರವಾಗಿ, ಅಶ್ವಿನಿ ಮೇಡಂಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಅನುಶ್ರೀ ಹೇಳಿದ್ದಾರೆ.

ಫ್ಯಾನ್ಸ್‌ ಎದುರು ಆ ಹುಡುಗನಿಗೆ 'ಏಯ್ ಮನೆ ಹಿಂದೆ ಏನೋ ಇದೆ' ಎಂದು ಪುನೀತ್ ಗದರಿದ್ದು ಯಾಕೆ; ವಿಡಿಯೋ ವೈರಲ್

ಮಾರ್ಚ್ 17ರಂದು ಪುನೀತ್ ರಾಜ್ ಕುಮಾರ್ 50ನೇ ಹುಟ್ಟುಹಬ್ಬವಿದೆ.  ಹುಟ್ಟುಹಬ್ಬಕ್ಕೆ ಮೂರು ದಿನ ಮೊದಲು, ಅಶ್ವಿನಿ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಅಪ್ಪು ಸಿನಿಮಾ ರಿ ರಿಲೀಸ್ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ 100 ಥಿಯೇಟರ್ ನಲ್ಲಿ ಸಿನಿಮಾ ತೆರೆಗೆ ಬಂದಿದೆ. ಅಪ್ಪು ಹುಟ್ಟು ಹಬ್ಬದ ಸಮಯದಲ್ಲಿ ಅವರ ಸಿನಿಮಾಗಳನ್ನು ರಿ ರಿಲೀಸ್ ಮಾಡಲಾಗುತ್ತದೆ. ಹಿಂದಿನ ವರ್ಷ ಜಾಕಿ ಸಿನಿಮಾವನ್ನು ರಿ ರಿಲೀಸ್ ಮಾಡಲಾಗಿತ್ತು. ಈ ಬಾರಿ ಅಪ್ಪು ಸಿನಿಮಾ ತೆರೆಗೆ ಬಂದಿದೆ. ಅಪ್ಪು ಸಿನಿಮಾ ಏಪ್ರಿಲ್ 22, 2002ರಲ್ಲಿ ತೆರೆಗೆ ಬಂದಿತ್ತು. 200 ದಿನಗಳ ಕಾಲ ಚಿತ್ರ ಭರ್ಜರಿ ಪ್ರದರ್ಶನ ಕಂಡಿತ್ತು. ಇದು ರಕ್ಷಿತಾ ಅವರ ಮೊದಲ ಚಿತ್ರ. ಪುನೀತ್ ನಾಯಕ ನಟನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ. ಇಂದು ವೀರೇಶ್ ಥಿಯೇಟರ್ಗೆ ಸೆಲೆಬ್ರಿಟಿಗಳ ದಂಡೇ ಹರಿದು ಬಂದಿತ್ತು. ನಟಿ ರಕ್ಷಿತಾ ಪ್ರೇಮ್ ಕೂಡ ಥಿಯೇಟರ್ ಗೆ ಬಂದು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಮ್ರತಾ, ಅಪ್ಪು ತೆರೆ ಮೇಲೆ ಬರ್ತಿದ್ದಂತೆ ಸೀಟಿ ಊದಿ ತಮ್ಮ ಅಭಿಮಾನ ಮೆರೆದಿದ್ದಾರೆ.  
 

click me!