ರಂಜಾನ್ ಉಪವಾಸ ಬಿಟ್ಟು ಕಾಟೇರಮ್ಮ ದೇವಸ್ಥಾನಕ್ಕೆ ಓಡಿ ಬಂದ ರೀಲ್ಸ್ ರೇಶ್ಮಾ ಆಂಟಿ!

ದೇವರ ಹೆಸರು ತೆಗೆದ ತಕ್ಷಣವೇ ಸಮಸ್ಯೆಗೆ ಪರಿಹಾರ ಸಿಗ್ತು. ಲಾಯರ್ ಕೊಟ್ಟ ಸಿಹಿ ಸುದ್ದಿ ಕೇಳಿ ಕಾಟೇರಮ್ಮನ ಗುಡಿಗೆ ಓಡಿ ಬಂದ ರೀಲ್ಸ್ ಆಂಟಿ.

Reels reshma vists kateramma temple for personal problem during ramzan vcs

ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿ ಮಾಡುತ್ತಿರುವ ರೀಲ್ಸ್ ರೇಶ್ಮಾ ಆಂಟಿ ಇಂದು ಕಾಟೇರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಫುಲ್ ಖುಷಿಯಾಗಿದ್ದಾರೆ. ರಂಜಾನ್ ಆಚರಣೆಯಲ್ಲಿ ಇಡೀ ಫ್ಯಾಮಿಲಿ ಸಂಭ್ರಮಿಸುತ್ತಿದ್ದರೆ ರೇಶ್ಮಾ ಮಾತ್ರ ಕಾಟೇರಮ್ಮನ ಗುಡಿಯಲ್ಲಿ ಕಾಯಿ ಕಟ್ಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರೀಲ್ಸ್ ರೇಶ್ಮಾ ಜೊತೆ ಡೋಲೋ 650 ಶಶಿಕಲಾ ಕೂಡ ಆಗಮಿಸಿದ್ದರು. ಹಲವು ವರ್ಷಗಳಿಂದ ಕಾಡುತ್ತಿದ್ದ ಸಂಕಷ್ಟವನ್ನು ಇಲ್ಲಿ ಹಂಚಿಕೊಂಡ ಎರಡೇ ದಿನದಲ್ಲಿ ಸರಿ ಆಗಿದೆ ಎಂದು ಖುಷಿ ವ್ಯಕ್ತ ಪಡಿಸಿದ್ದಾರೆ.

'ಸುಮಾರು 18 ವರ್ಷಗಳಿಂದ ನಾನು ಅಂದುಕೊಂಡ ಕೆಲಸ ಆಗಿರಲಿಲ್ಲ ಆದರೆ ಕಾಟೇರಮ್ಮ ದೇವಸ್ಥಾನಕ್ಕೆ ಬಂದಿದ್ದಕ್ಕೆ ಆಯ್ತು. ನನ್ನ ಕೆಲಸಗಳು ಹೇಗ್ ಅಯ್ತು ಅಂತ ಹೇಳುತ್ತೀನಿ ನೋಡಿ....ನನ್ನ ಆಪ್ತರ ಬಳಿ ನನ್ನ ಕಷ್ಟ ಹೇಳಿಕೊಂಡು ದುಖಃದಲ್ಲಿ ಕಣ್ಣೀರಿಟ್ಟ ಆಗ ಅವರೇ ಕಾಟೇರಮ್ಮ ದೇವಸ್ಥಾನದ ಬಗ್ಗೆ ಹೇಳಿದ್ದು. ಕಾಟೇರಮ್ಮ ದೇವಸ್ಥಾನಕ್ಕೆ ಹೋಗೋಣ ಅಲ್ಲಿ ನಿಮ್ಮ ಕಷ್ಟಗಳಿಗೆ ಬೇಗ ಪರಿಹಾರ ಸಿಗುತ್ತದೆ ಎಂದು ಹೇಳಿದರು. ದೇವಸ್ಥಾನಕ್ಕೆ ಬಂದಿಲ್ಲ ಆದರೆ ಇದ್ದಲ್ಲಿ ಪ್ರಾರ್ಥನೆ ಮಾಡಿದ ಎರಡು ದಿನಗಳಲ್ಲಿ ನನ್ನ ಕೆಲಸ ಯಶಸ್ಸು ಆಯ್ತು ಅಂತ ಲಾಯರ್ ಫೋನ್ ಮಾಡಿ ಹೇಳಿದರು. ಮೈ ಚುಮ್ ಆಯ್ತು ತುಂಬಾ ಖುಷಿ ಆಯ್ತು ನಂಗೆ. ನಾನು ಆ ದೇವಸ್ಥಾನಕ್ಕೆ ಹೋಗಿಲ್ಲ ದೇವರನ್ನು ನೋಡಿ ಹೆಸರು ಹೇಳಿದ ತಕ್ಷಣ ಕೆಲಸ ಆಯ್ತು ಅಷ್ಟು ಪವರ್‌ಫುಲ್ ಇದ್ಯಾ ಅಂತ ಅಮ್ಮನ ದರ್ಶನ ಮಾಡಲು ಓಡಿ ಬಂದಿದ್ದೀನಿ' ಎಂದು ರೀಲ್ಸ್ ರೇಶ್ಮಾ ಮಾತನಾಡಿದ್ದಾರೆ.

Latest Videos

ದೇವರ ಮುಂದೆ ಯಾರೂ ಸೂಪರ್‌ ಸ್ಟಾರ್ ಅಲ್ಲ...: ಧ್ರುವ ಸರ್ಜಾ ಪತ್ನಿ ಹೇಳಿಕೆ ವೈರಲ್

'ಇಲ್ಲಿ ಬಂದು ನೋಡಿದರೆ ಎಷ್ಟು ಜನ ಇದ್ದಾರೆ ಎಷ್ಟು ಪವರ್ ಇದೆ ಅಂತ ಈಗ ಖುಷಿ ಆಯ್ತು. ಮನಸ್ಸಿನಲ್ಲಿ ಏನಾದರೂ ಅಂದುಕೊಂಡು ಖಾಸು ಗೋಡೆ ಮೇಲೆ ಅಂಟಿಸಿದಬೇಕು...ಒಂದು ವೇಳೆ ಅದು ಅಂಟಿಕೊಂಡರೆ ನಾವು ಅಂದುಕೊಂಡಿದ್ದು ನಡೆಯುತ್ತದೆ ಅಂದ್ರು. ನಾನು ಕಾಸು ಇಷ್ಟ ತಕ್ಷಣ ಅಂಟಿಕೊಂಡಿತ್ತು. ಪ್ರತಿಯೊಬ್ಬರು ಒಮ್ಮೆ ಈ ದೇವಸ್ಥಾನಕ್ಕೆ ಬಂದು ನೋಡಿ..ನಿಮ್ಮ ಕೆಲಸ ಆಯ್ತು ಅಂತ ನನಗೆ ನೀವೇ ಮೆಸೇಜ್ ಮಾಡಿ ಹೇಳ್ತೀರಾ. ನಿಮ್ಮ ಮನೆಯಲ್ಲಿ ಗಂಡನ, ಮಗ ಅಥವಾ ಅಳಿಯನ ಕಾಟ ಸಮಸ್ಯೆ ಇದ್ರೆ ಇಲ್ಲಿ ಪರಿಹಾರ ಸಿಗುತ್ತದೆ. ನಾನು ರಂಜಾನ್ ಉಪವಾಸ ಬಿಡ್ಡು ಕಾಟೇರಮ್ಮ ದೇವಸ್ಥಾನಕ್ಕೆ ಬಂದಿದ್ದೀನಿ' ಎಂದು ರೇಶ್ಮಾ ಹೇಳಿದ್ದಾರೆ. ಇಷ್ಟು ದಿನ ಗಂಡ ಹೊಡೆದ, ಅಡುಗೆ ಮಾಡಿಲ್ಲ ಎಂದು ರೀಲ್ಸ್ ಮಾಡುತ್ತಿದ್ದ ರೇಶ್ಮಾ ಹಾಡುಗಳಿಗೆ ಹೆಜ್ಜೆ ಹಾಕಲು ಶುರು ಮಾಡಿದ್ದಾರೆ. ನವೀನ್‌ ಎಂಬುವವರ ಜೊತೆ ವಿಡಿಯೋ ಮಾಡುತ್ತಿದ್ದ ಎಲ್ಲರೂ ಕಟ್ಟಪ್ಪ, ಅಣ್ಣ ತಂಗಿ, ಬಾಯ್‌ಫ್ರೆಂಡ್ ಹಾಗೆ ಹೀಗೆ ಎಂದು ಸಾಕಷ್ಟು ನೆಗೆಟಿವ್ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಫ್ಯಾನ್ಸ್‌ ಎದುರು ಆ ಹುಡುಗನಿಗೆ 'ಏಯ್ ಮನೆ ಹಿಂದೆ ಏನೋ ಇದೆ' ಎಂದು ಪುನೀತ್ ಗದರಿದ್ದು ಯಾಕೆ; ವಿಡಿಯೋ ವೈರಲ್

click me!