Yuva Rajkumar: ಹುಟ್ಟುಹಬ್ಬದಂದು ಕೇಕ್ ಕಟ್ ಮಾಡದ ಯುವ ರಾಜ್‌ಕುಮಾರ್, ಉಗ್ರರ ಕೃತ್ಯ ಖಂಡಿಸಿದ ನಟ!

Published : Apr 23, 2025, 01:52 PM ISTUpdated : Apr 23, 2025, 02:39 PM IST
Yuva Rajkumar: ಹುಟ್ಟುಹಬ್ಬದಂದು ಕೇಕ್ ಕಟ್ ಮಾಡದ ಯುವ ರಾಜ್‌ಕುಮಾರ್, ಉಗ್ರರ ಕೃತ್ಯ ಖಂಡಿಸಿದ ನಟ!

ಸಾರಾಂಶ

ಯುವ ರಾಜ್‍ಕುಮಾರ್ ಹುಟ್ಟುಹಬ್ಬದಂದು 'ಎಕ್ಕ' ಚಿತ್ರದ ಟೀಸರ್ ಬಿಡುಗಡೆಗೆ ಯೋಜಿಸಲಾಗಿತ್ತು. ಪಹಲ್ಗಾಮ್ ಉಗ್ರದಾಳಿಯ ಹಿನ್ನೆಲೆಯಲ್ಲಿ ಸಂಜೆಗೆ ಮುಂದೂಡಲಾಗಿದೆ. ಕೇಕ್ ಕತ್ತರಿಸದ ಯುವ ರಾಜ್, ದಾಳಿಯನ್ನು ಖಂಡಿಸಿ, ಉಗ್ರರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. 'ಎಕ್ಕ' ಚಿತ್ರದ ಮೇಲೆ ಸಿನಿರಸಿಕರ ನಿರೀಕ್ಷೆ ಹೆಚ್ಚಿದೆ.

ಇಂದು, ನಟ ಯುವ ರಾಜ್ ಕುಮಾರ್ (Yuva Rajkumar) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿದ ನಟ ಯುವ ರಾಜ್‌ಕುಮಾರ್ ಅವರು ಕೇಕ್ ಕಟ್ ಮಾಡಲೇ ಇಲ್ಲ. ಅಷ್ಟೇ ಅಲ್ಲ, ಹುಟ್ಟುಹಬ್ಬದ ವಿಶೇಷವಾಗಿ ಎಕ್ಕ ಸಿನಿಮಾ ಟೀಸರ್ ಬಿಡುಗಡೆ ಆಗಬೇಕಿತ್ತು. ಆದರೆ, 
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಟೀಸರ್ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. 

ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಟೀಸರ್ ಬಿಡುಗಡೆಯನ್ನೇ ಮುಂದೂಡಿದ ಚಿತ್ರತಂಡ, ಈ ಬಗ್ಗೆ ಕಂಬನಿ ಮಿಡಿದಿದೆ. ಪ್ರವಾಸಿಗರನ್ನು ಗುರಿಯಾಗಿಸಿ ಮಾಡಿದ ಈ ದಾಳಿ ಬಗ್ಗೆ ಭಾರತ ಹಾಗೂ ವಿದೇಶಗಳ ಬಹುತೇಕ ಕಡೆಗಳಿಂದ ವಿರೋಧ ವ್ಯಕ್ತವಾಗಿದೆ. ಬೆಳಗ್ಗೆ ಬಿಡುಗಡೆ ಆಗಬೇಕಿದ್ದ ಟೀಸರ್ ಅನ್ನು ಸಂಜೆ ಬಿಡುಗಡೆ ಮಾಡಲು ನಿರ್ಧಾರ, ಈ ಬಗ್ಗೆ ಟ್ವೀಟ್ ಮಾಡಿರೋ ನಿರ್ಮಾಪಕ ಕಾರ್ತಿಕ್ ಗೌಡ. ಯುವ ರಾಜಕುಮಾರ್ ಮನೆಯಲ್ಲಿ ಇಂದು ಬರ್ತ್ಡೇ ಸಂಭ್ರಮ ಮನೆಮಾಡಿದೆ. 

ಇಲ್ನೋಡಿ.. '4.50'ರಲ್ಲೇ ಅದೆಂಥಾ ಕಮಾಲ್ ಮಾಡಿದ್ರು ಶಿವರಾಜ್‌ಕುಮಾರ್-ಸುಧಾರಾಣಿ ಜೋಡಿ!

'ಉಗ್ರರಿಗೆ ತಕ್ಕ ಶಿಕ್ಷೆ ಆಗ್ಬೇಕು' ಎಂದು ನಟ ಯುವ ರಾಜ್‍ಕುಮಾರ್ ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಯುವ ರಾಜ್‌ಕುಮಾರ್ 'ಕಾಶ್ಮೀರದ ಪಹಲ್ಗಾಂನಲ್ಲಿ ನಡೆದಿರೋ ದಾಳಿ ಖಂಡನೀಯ. ಈ ರೀತಿ ಮುಗ್ಧ ಜನರನ್ನು ಕೊಲ್ಲೋದು ಸರಿಯಲ್ಲ. ದಾಳಿ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ ಆಗ್ಬೇಕು.. ಮತ್ತೆ ಮತ್ತೆ ಈ ರೀತಿಯ ದಾಳಿ ಆಗ್ತಿದ್ದು, ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಕಾಶ್ಮೀರದಲ್ಲಿ ಯುವ ಸಾಂಗ್ ಶೂಟ್ ಆಗಿದೆ. ಯುವ ಸಿನಿಮಾದ ಹಾಡೊಂದನ್ನು ನಾವು ಲಡಾಕ್ನಲ್ಲಿ ಚಿತ್ರೀಕರಣ ನಡೆಸಿದ್ವಿ.. ಅಲ್ಲಿ ದಾಳಿಯ ಯಾವುದೇ ಅನುಭವ ಆಗಿರಲಿಲ್ಲ.. ಅಲ್ಲಿ ಸೇನೆಯ ರಕ್ಷಣೆಯಿತ್ತು. ಯಾವುದೇ ಅಹಿತಕರ ಘಟನೆಗಳು ಆಗಿರಲಿಲ್ಲ.' ಎಂದಿದ್ದಾರೆ ಬರ್ತ್‌ಡೇ ಬಾಯ್ ಯುವ ರಾಜ್‌ಕುಮಾರ್. 

ಅಂದಹಾಗೆ, ಕಾರ್ತಿಕ್ ಗೌಡ ನಿರ್ಮಾಣದ 'ಎಕ್ಕ' ಸಿನಿಮಾ ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಚಾರ ಶುರು ಮಾಡುತ್ತಿದೆ ಚಿತ್ರತಂಡ. ಆದರೆ, ಟೀಸರ್ ಬಿಡುಗಡೆಯನ್ನು ಬೆಳಿಗ್ಗೆ ಬದಲು ಸಂಜೆ ಮಾಡುತ್ತಿದೆ ಎಕ್ಕ ಟೀಂ. ಈ ಚಿತ್ರದ ಬಗ್ಗೆ ಕನ್ನಡ ಸಿನಿಪ್ರೇಕ್ಷಕರು ಹಾಗೂ ಕನ್ನಡ ಸಿನಿಉದ್ಯಮದಲ್ಲಿ ಸಾಕಷ್ಟು ನಿರೀಕ್ಷೆ ಮನೆಮಾಡಿದೆ. ಯುವ ಸಿನಿಮಾದ ಬಳಿಕ, ಈ ಚಿತ್ರದ ಬಗ್ಗೆ ನಿರೀಕ್ಷೆ ಮಾಡಿದ್ದು, ಯುವ ನಟನೆಯ ಸಿನಿಮಾ ತೆರೆಗೆ ಬರುವುದನ್ನು ಕಾಯುತ್ತಿದ್ದಾರೆ. 

Mahesh Babu: ಮಹೇಶ್ ಬಾಬುಗೆ ಶಾಕ್ ನೀಡಿದ ಇಡಿ, ಟಾಲಿವುಡ್ ಪ್ರಿನ್ಸ್ ಮಾಡಿದ ತಪ್ಪೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ