ಡಾ ರಾಜ್‌ ಕಿಡ್ನಾಪ್ ಮಾಡಿ ಹೊರಟ ವೀರಪ್ಪನ್‌ಗೆ ಪಾರ್ವತಮ್ಮನವರು ಚಿಟಿಕೆ ಹೊಡೆದು ಹೀಗೆ ಹೇಳಿದ್ದರಂತೆ!

By Shriram Bhat  |  First Published Mar 2, 2024, 3:10 PM IST

ಅಂದು ಭೀಮನ ಅಮಾವಾಸ್ಯೆಯ ಕಗ್ಗತ್ತಲ ರಾತ್ರಿ. ಡಾ ರಾಜ್‌ಕುಮಾರ್ ತಮ್ಮ ಹುಟ್ಟೂರು ಚಾಮರಾಜನಗರದ ಗಾಜನೂರಿನಲ್ಲಿದ್ದರು. ಹಿರಿಯ ಜೀವ, ನಟ ಡಾ ರಾಜ್‌ಕುಮಾರ್ ಅಪಾಯದ ಯಾವ ಮನ್ಸೂಚನೆಯೂ ಇಲ್ಲದೇ ರಾತ್ರಿ ತಮ್ಮ ಹಳ್ಳಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.


ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರನ್ನು ದಂತಚೋರ, ಕಾಡುಗಳ್ಳ ವೀರಪ್ಪನ್ 30 ಜುಲೈ 2000ರಂದು ಅಪಹರಿಸಿಕೊಂಡು (Kidnap)ಹೋಗಿದ್ದು ಎಲ್ಲರಿಗೂ ಗೊತ್ತು. ಬಳಿಕ ಡಾ ರಾಜ್‌ ಅವರು 108 ದಿನಗಳ ಕಾಲ ವೀರಪ್ಪನ್ (Veerappan) ಜತೆ ಇದ್ದು, 15 ನವೆಂಬರ್ 2000ರಂದು ಬಿಡುಗಡೆಗೊಂಡು ಮನೆಗೆ ಮರಳಿದ್ದು ಈಗ ಇತಿಹಾಸ. ಅದೇ ವೇಳೆ ನಟ ಡಾ ರಾಜ್‌ಕುಮಾರ್ ಪತ್ನಿ, ಸ್ಯಾಂಡಲ್‌ವುಡ್ ದೊಡ್ಮನೆಯ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್‌ (Parvathamma Rajkumar) ಅವರು ವೀರಪ್ಪನ್‌ಗೆ 'ಚಿಟಿಕೆ' ಹೊಡೆದು ಒಂದು ಮಾತು ಹೇಳಿದ್ದರಂತೆ. ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. 

ಅಂದು ಭೀಮನ ಅಮಾವಾಸ್ಯೆಯ ಕಗ್ಗತ್ತಲ ರಾತ್ರಿ. ಡಾ ರಾಜ್‌ಕುಮಾರ್ ತಮ್ಮ ಹುಟ್ಟೂರು ಚಾಮರಾಜನಗರದ (Gajanuru) ಗಾಜನೂರಿನಲ್ಲಿದ್ದರು. ಹಿರಿಯ ಜೀವ, ನಟ ಡಾ ರಾಜ್‌ಕುಮಾರ್ ಅಪಾಯದ ಯಾವ ಮನ್ಸೂಚನೆಯೂ ಇಲ್ಲದೇ ರಾತ್ರಿ ತಮ್ಮ ಹಳ್ಳಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಕಾಡುಗಳ್ಳ ವೀರಪ್ಪನ ತನ್ನ ಕೆಲವು ಸಹಚರರೊಡನೆ ಅಲ್ಲಿಗೆ ಬಂದು ಡಾ ರಾಜ್‌ಕುಮಾರ್ ಅವರ  ಕೈ ಹಿಡಿದುಕೊಡು, ಪಾರ್ವತಮ್ಮನವರ ಕಡೆ ನೋಡಿ, ಕ್ಯಾಸೆಟ್‌ ಒಂದನ್ನು ಕೊಡುತ್ತ ;ಇದನ್ನು ನಾನು ಹೇಳಿದವರಿಗೆ ಕೊಡು.. ಪೊಲೀಸಿನವರ ಕೈಗೆ ಏನಾದ್ರೂ ಕೊಟ್ಟರೆ, ನಿನ್ನ ಗಂಡನ್ನ ಪೀಸ್‌ ಪೀಸ್‌ ಮಾಡಿಬಿಡ್ತೀನಿ' ಎಂದಿದ್ದರು.  

Latest Videos

undefined

ಬಹಳಷ್ಟು ಸ್ಟಾರ್ ನಟರ ಜೊತೆ ನಟಿಸಿದ್ದ ಮಾಲಾಶ್ರೀ ನಟ ವಿಷ್ಣುವರ್ಧನ್‌ಗೆ ಯಾಕೆ ಜೋಡಿಯಾಗಲಿಲ್ಲ?

ನರಹಂತಕ ವೀರಪ್ಪನ್ ಎದುರಿಗೆ ಇದ್ದರೂ ಸ್ವಲ್ಪವೂ ಅಂಜದ ಗಟ್ಟಿಗಿತ್ತಿ ಪಾರ್ವತಮ್ಮನವರು ವೀರಪ್ಪನ್‌ಗೆ ಚಿಟಿಕೆ ಹೊಡೆದು 'ನೀನು ಹೀಗೆ ಕರೆದುಕೊಂಡು ಹೋಗು.., ನಾನು ಹಾಗೆ ಕರೆದುಕೊಂಡು ಬರುತ್ತೇನೆ' ಎಂದು ಹೇಳಿದ್ದರು.  ಈ ಸಂಗತಿಯನ್ನು ಸ್ವತಃ ಪಾರ್ವತಮ್ಮನವರೇ ಬದುಕಿದ್ದಾಗ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಅದನ್ನು ಅವರ ಆಪ್ತರು ಕೆಲವರಿಗೆ ಹೇಳಿ, ಈಗ ಅದು ಸೋಷಿಯಲ್ ಮೀಡಿಯಾಗಳ ಮೂಲಕ ವೈರಲ್ ಆಗುತ್ತಿದೆ. ವೀರಪ್ಪನ್ ಎದುರು ಬಂದು ನಿಂತರೆ ಕೆಲವರಿಗೆ ಹಾರ್ಟೇ ನಿಂತುಹೋಗಬಹುದು. ಆದರೆ, ಪಾರ್ವತಮ್ಮ ತುಂಬಾ ಧೈರ್ಯಶಾಲಿಯಾಗಿದ್ದು, ವೀರಪ್ಪನ್‌ಗೆ ಹೆದರಿರಲಿಲ್ಲ.  

ನಟಿ ತನಿಷಾ ಬಳಿ ಅದೆಷ್ಟು ಆಸ್ತಿಯಿದೆ. ಏನೇನೆಲ್ಲಾ ಮಾಡ್ಕೊಂಡಿದಾರೆ; ಬಾಯ್ಬಿಟ್ಟು ಹೇಳ್ಕೊಂಡಿದಾರೆ ನೋಡ್ರೀ!

ಅದೊಂದು ಘಟನೆ ಮಾತ್ರವಲ್ಲ, ಆ ಮೊದಲು ಕೂಡ ಪಾರ್ವತಮ್ಮನವರು ಜೀವನದಲ್ಲಿ ಹಲವಾರು ಬಾರಿ ತಮ್ಮ ಧೈರ್ಯ ಹಾಗೂ ದೃಢ ನಿರ್ಧಾರ ಪ್ರದರ್ಶಿಸಿದ್ದರು.  ಡಾ ರಾಜ್‌ಕುಮಾರ್ ಅವರು ಸ್ಟಾರ್ ನಟರಾಗಿದ್ದ ಕಾಲದಲ್ಲಿ, ಅವರ ನಟನೆಯ ಹಲವು ಸಿನಿಮಾಗಳು ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದ್ದವು, ಥಿಯೇಟರ್‌ಗಳು ತುಂಬಿ ತುಳುಕುತ್ತಿದ್ದವು. ಆದರೆ, ಡಾ ರಾಜ್‌ ನಟನೆಯ ಚಿತ್ರದ ನಿರ್ಮಾಪಕರು, ವಿತರಕರು ಮಾತ್ರ ತಮಗೆ ಲಾಭವಾಗಿಲ್ಲ, ನಷ್ಟವಾಗಿದೆ ಎಂದೇ ಹೇಳುತ್ತಿದ್ದರು. ಈ ಮೂಲಕ ಡಾ ರಾಜ್‌ಕುಮಾರ್ ಬಗ್ಗೆ ಅಪಪ್ರಚಾರ ಆಗುತ್ತಿರಲು ಸೂಕ್ಷ್ಮವಾಗಿ ಗಮನಿಸಿದ ಬುದ್ದಿವಂತೆ ಪಾರ್ವತಮ್ಮನವರು ಒಂದು ಗಟ್ಟಿಯಾದ ನಿರ್ಧಾರಕ್ಕೆ ಬಂದುಬಿಟ್ಟರು. ಆ ಬಗ್ಗೆ ಘೋಷಣೆಯನ್ನೂ ಮಾಡಿಬಿಟ್ಟರು. 

ಕಾರ್ತಿಕ್ ಮಹೇಶ್ ಜೊತೆ ನಮ್ರತಾ ಗೌಡ ಮದುವೆ; ಏಷ್ಯಾನೆಟ್ ಸುವರ್ಣಾ'ಗೆ ಸ್ಪಷ್ಟನೆ ಕೊಟ್ಟ ಬಿಗ್ ಬಾಸ್ ವಿನ್ನರ್

'ಇನ್ಮುಂದೆ ಡಾ ರಾಜ್‌ಕುಮಾರ್‌ ಚಿತ್ರವನ್ನು ನಾನೇ ನಿರ್ಮಾಣ ಮಾಡುತ್ತೇನೆ, ವಿತರಣೆಯನ್ನೂ ನಾನೇ ಮಾಡುತ್ತೇನೆ. ಅಥವಾ ವಿತರಣೆಯನ್ನು ನನ್ನ ಜವಾಬ್ದಾರಿಯಲ್ಲೇ ಮಾಡಿಸುತ್ತೇನೆ' ಎಂದು ಹೇಳಿ ಅದರಂತೆ ನಡೆದುಕೊಂಡರು. ತಮ್ಮದೇ ನಿರ್ಮಾಣ ಸಂಸ್ಥೆ 'ವಜ್ರೇಶ್ವರಿ ಕಂಬೈನ್ಸ್‌' ಮೂಲಕ ತಮ್ಮ ಪತಿ ಹಾಗೂ ಕರ್ನಾಟಕದ ಸ್ಟಾರ್ ನಟ ಡಾ ರಾಜ್‌ಕುಮಾರ್ ಅವರ 'ತ್ರಿಮೂರ್ತಿ' ಚಿತ್ರವನ್ನು (Thrimurthy) ನಿರ್ಮಾಣ ಮಾಡಿ ರಿಲೀಸ್ ಕೂಡ ಮಾಡಿದರು. ಮುಂದಾಗಿದ್ದು ಈಗ ಇತಿಹಾಸ. ತ್ರಿಮೂರ್ತಿ ಸಿನಿಮಾ ಸೂಪರ್ ಹಿಟ್ ಆಗದಿದ್ದರೂ ಡಾ ರಾಜ್‌ಕುಮಾರ್ ಸಿನಿಮಾದಿಂದ ನಷ್ಟವಾಗುವುದು ಎಂಬ ಟೀಕೆಯನ್ನು ಅಲ್ಲಗಳೆಯಲು ಸಹಾಯವಾಯ್ತು. ಬಳಿಕ ವಜ್ರೇಶ್ವರಿ ಸಂಸ್ಥೆಯಿಂದ ಡಾ ರಾಜ್‌ಕುಮಾರ್ ನಟನೆಯ ಹಲವಾರು ಸಿನಿಮಾಗಳು ನಿರ್ಮಾಣ ಕಂಡು ಸೂಪರ್ ಹಿಟ್ ದಾಖಲಿಸಿ ಹೇರಳ ಹಣ ಗಳಿಸಿದವು. 

ಏಳುಬೀಳುಗಳ ನಡುವೆಯೂ ಗಟ್ಟಿ ಬದುಕು ಕಟ್ಟಿಕೊಂಡ ಜಯಮಾಲಾ ಅದೆಂಥ ಸಮಸ್ಯೆಗೆ ಸಿಲುಕಿದ್ದರು?

ಹೆಣ್ಣು ಅಬಲೆಯಲ್ಲ, ಮನಸ್ಸು ಮಾಡಿದರೆ ಅವಳು ತುಂಬಾ ದೈರ್ಯಶಾಲಿಯಾಗಿ ವ್ಯಾಪಾರ-ವ್ಯವಹಾರನ್ನೂ ಯಶಸ್ವಿಯಾಗಿ ನಿಭಾಯಿಸಬಲ್ಲಳು ಎಂಬುದಕ್ಕೆ ಅಂದು ಜೀವಂತ ಉದಾಹರಣೆಯಾಗಿದ್ದರು ದೊಡ್ಮನೆ ಪಾರ್ವತಮ್ಮ ರಾಜ್‌ಕುಮಾರ್. ಸಾಕಷ್ಟು ಕಾದಂಬರಿಗಳನ್ನು ಓದುತ್ತಿದ್ದು, ಡಾ ರಾಜ್‌ ಸಿನಿಮಾಗಳ ಕಥೆ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದುದು ಇದೇ ಪಾರ್ವತಮ್ಮನವರು. ಡಾ ರಾಜ್‌ಕುಮಾರ್ ಅವರು 'ತುಂಬಾ ಸರಳ ವ್ಯಕ್ತಿಯಾಗಿದ್ದರು. ಅವರಿಗೆ ತುಂಬಾ ಹಣ ಎಣಿಸಲು ಬರುತ್ತಿರಲಿಲ್ಲ, ಅವರು ಒಂದು ರೂಪಾಯಿಯನ್ನೂ ಸಹ ಜೇಬಿನಲ್ಲಿ ಇರಿಸಿಕೊಂಡು ಓಡಾಡುತ್ತಿರಲಿಲ್ಲ' ಎಂದು ಅವರನ್ನು ಬಲ್ಲ ಹಲವರು ಹೇಳಿದ್ದಾರೆ. ಇಡೀ ದೊಡ್ಮನೆಯ ವ್ಯವಹಾರ ಹಾಗೂ 'ಅಣ್ಣಾವ್ರ' ಸಿನಿಮಾಗಳ ಸಂಪೂರ್ಣ ವ್ಯವಹಾರವನ್ನು ನೋಡಿಕೊಂಡು, ಜತೆಗೆ ಯಶಸ್ವಿ ಸಂಸಾರ ಕೂಡ ನಡೆಸಿದವರು ಪಾರ್ವತಮ್ಮ ಎಂಬುದನ್ನು ಹೇಳಿ, ಹತ್ತಿರದಿಂದ ಬಲ್ಲವರು ಅವರನ್ನು ಈಗಲೂ ಕೊಂಡಾಡುತ್ತಾರೆ. 

ಒಂದೇ ಫ್ರೇಮಲ್ಲಿ 80-90ರ ದಶಕದ ಹೀರೋಯಿನ್ಸ್, ನಿಮ್ಮ ನೆಚ್ಚಿನ ನಟಿ ಯಾರು?

click me!