ಬಾಗಿಲು ತೆಗಿ ಭಾಗೀರಥಿ ಎಂದ್ರು ಪ್ರಶಾಂತ್ ಸಿದ್ಧಿ; 'ಮತ್ಸ್ಯಗಂಧ'ದ ಕಿಕ್ ಕೊಟ್ಟು ಎಲ್ಲಿಗೆ ಕರೀತಿದಾರೆ ನೋಡ್ರಿ!

By Shriram Bhat  |  First Published Jan 11, 2024, 4:28 PM IST

ಅಂದ್ಹಾಗೆ ಭಾಗೀರಥಿ ಹಾಡು ಕೇಳೋದಕ್ಕೆ ಸಖತ್ ಕ್ಯಾಚಿಯಾಗಿರೋ ಈ ಹಾಡನ್ನ ಪ್ರಶಾಂತ್ ದೇಸಿ ಪೆಪ್ಪಿ ಸ್ಟೈಲಲ್ಲಿ ಕಂಪೋಸ್ ಮಾಡಿದ್ದಾರೆ. ದೇವರಾಜ್ ಪೂಜಾರಿ ಸಾಹಿತ್ಯ ಈ ಹಾಡಿಗಿದ್ದು, ಇಂದು ನಾಗರಾಜ್ ಹಾಗೂ ಪ್ರಶಾಂತ್ ಸಿದ್ದಿ ಮತ್ತು ಸಂಗಡಿಗರು ಹಾಡಿದ್ದಾರೆ.


ಯೋಗರಾಜ್ ಭಟ್ , ಸೂರಿ ಸಿನಿಮಾಗಳ ಖಾಯಂ ಪಾತ್ರದಾರಿ , ಪ್ರತಿಭಾನ್ವಿತ ನಟ, ರಂಗಭೂಮಿ ಹಿನ್ನೆಲೆಯ ಬಹುಮುಖ ಪ್ರತಿಭೆ ಪ್ರಶಾಂತ್ ಸಿದ್ದಿ, ತಮ್ಮ ಪ್ರತಿಭೆಯ ಮತ್ತೊಂದು ಮುಖವನ್ನ ಪರಿಚಯಿಸಿದ್ದಾರೆ. ಪೃಥ್ವಿ ಅಂಬರ್ ಅಭಿನಯದ ದೇವರಾಜ್ ಪೂಜಾರಿ ನಿರ್ದೇಶನದ ಮತ್ಸ್ಯಗಂಧ ಚಿತ್ರಕ್ಕೆ ಸಂಗೀತ ಸಂಯೋಜಿಸೋ ಮೂಲಕ ಸಂಗೀತ ನಿರ್ದೇಶಕನಾಗಿದ್ದಾರೆ. ಇತ್ತೀಚೆಗಷ್ಟೇ ಮತ್ಸ್ಯಗಂಧ ಚಿತ್ರದ ಭಾಗೀರಥಿ ಅನ್ನೋ ಡ್ಯಾನ್ಸಿಂಗ್ ನಂಬರ್ ನ ರಿಲೀಸ್ ಮಾಡಿರೋ ಚಿತ್ರತಂಡಕ್ಕೆ ಸಿನಿಪ್ರಿಯರಿಂದ ಈ ಹಾಡಿಗೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ. 

ಭಾಗೀರಥಿ ಹಾಡು ರಿಲೀಸ್ ಆದ ಮೊದಲನೇ ದಿನವೇ ಹಾಡು ಯೂಟ್ಯೂಬ್ ಟ್ರೆಂಡಿಂಗ್ ಲಿಸ್ಟಿಗೆ ಬಂದಿದ್ದು, ಮೂರೇ ದಿನದಲ್ಲಿ ಏಳು ಲಕ್ಷ ವೀವ್ಸ್ ದಾಟಿದ್ದು ಒಂದು ಮಿಲಿಯನ್ ವೀವ್ಸ್ ನತ್ತ ಮುನ್ನುಗ್ತಿದೆ. ಈ ಸಂಭ್ರಮವನ್ನ ಹಂಚಿಕೊಳ್ಳಲು ಪತ್ರಿಕಾಗೋಷ್ಠಿಯನ್ನ ಕರೆದಿದ್ದ ಚಿತ್ರತಂಡ, ಚಿತ್ರದ ಬಗ್ಗೆ ಕಿರುಮಾಹಿತಿಯನ್ನ ನೀಡೋದ್ರ ಜೊತೆಗೆ ಪ್ರಶಾಂತ್ ಸಿದ್ದಿಯವರನ್ನ ಸಂಗೀತ ನಿರ್ದೇಶಕನಾಗಿ ಪರಿಚಯಿಸಿರೋ ವಿಚಾರವನ್ನ ಹಂಚಿಕೊಂಡಿತ್ತು. 

Tap to resize

Latest Videos

ಈ ವೇಳೆ ಮಾತನಾಡಿದ ಪ್ರಶಾಂತ್ ಸಿದ್ದಿ, ತಮ್ಮ ಮನೆ ಪರಿಸರ ಬದುಕೇ ಸಂಗೀತ ನಾಟಕದಿಂದ ಕೂಡಿತ್ತು. ಹುಟ್ಟಿನಿಂದಲೇ  ಮೈಯೊಳಗಿದ್ದ ರಿದಮ್ ಮತ್ತು ಅಮ್ಮನ ಹಾಡುಗಾರಿಕೆ ತಮ್ಮನ್ನ ಇಲ್ಲಿಯವರೆಗೂ ತಂದಿದೆ ಎಂದೂ ತಮ್ಮ ಸಂಗೀತ ಪ್ರತಿಭೆಯ ಹಿಂದಿನ ವಿಚಾರವನ್ನ ಹಂಚಿಕೊಂಡರು. ಹಾಗೇ ಮತ್ಸ್ಯಗಂಧ ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ, ತಮ್ಮ ವೃತ್ತಿ ಬದುಕಿಗೆ ಹೊಸ ಮೈಲಿಗಲ್ಲಾಗಿ, ಹೊಸ ದಾರಿಯಾಗಲಿದೆ ಎಂದರು. 

ಮಕರ ಸಂಕ್ರಾಂತಿಯಂದು ಸ್ಟಾರ್ ಸುವರ್ಣದಲ್ಲಿ 'ಬೊಂಬಾಟ್ ಭೋಜನ' ಸ್ಪೆಷಲ್ ಸಂಚಿಕೆ ಝಲಕ್!

ಅಂದ್ಹಾಗೆ ಭಾಗೀರಥಿ ಹಾಡು ಕೇಳೋದಕ್ಕೆ ಸಖತ್ ಕ್ಯಾಚಿಯಾಗಿರೋ ಈ ಹಾಡನ್ನ ಪ್ರಶಾಂತ್ ದೇಸಿ ಪೆಪ್ಪಿ ಸ್ಟೈಲಲ್ಲಿ ಕಂಪೋಸ್ ಮಾಡಿದ್ದಾರೆ. ದೇವರಾಜ್ ಪೂಜಾರಿ ಸಾಹಿತ್ಯ ಈ ಹಾಡಿಗಿದ್ದು, ಇಂದು ನಾಗರಾಜ್ ಹಾಗೂ ಪ್ರಶಾಂತ್ ಸಿದ್ದಿ ಮತ್ತು ಸಂಗಡಿಗರು ಹಾಡಿದ್ದಾರೆ. ಈ ಹಾಡಲ್ಲಿ ಅಂಜಲಿ ಪಾಂಡೆ ಮೈ ಬಳುಕಿಸಿ, ಕುಲುಕಿಸಿದ್ರೆ, ಪೃಥ್ವಿ ಅಂಬರ್, ನಾಗರಾಜ್ ಬೈಂದೂರು ಜೊತೆಗೆ ಹೆಜ್ಜೆ ಹಾಕಿದ್ದಾರೆ. ಧನಂಜಯ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. 

ಇಬ್ಬರ ಜಗಳ, ಮೂರನೆಯವರಿಗೆ ಲಾಭ; ಸಂಗೀತಾ-ಕಾರ್ತಿಕ್ ಜಟಾಪಟಿ ನೋಡಿ ನಗುತ್ತಿರೋದು ಇವರೇನು!?

ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಬಿ.ಎಸ್ ವಿಶ್ವನಾಥ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಹಾಡಿನೊಂದಿಗೆ ಪ್ರಚಾರ ಕಾರ್ಯವನ್ನಾರಂಭಿಸಿರೋ ಚಿತ್ರತಂಡ, ಫೆಬ್ರುವರಿಗೆ ಪ್ರೇಕ್ಷಕರೆದುರಿಗೆ ಬರುವ ಸನ್ನಾಹದಲ್ಲಿದೆ. 

click me!