ಗಂಡಸ್ರಿಗೆ ಮದ್ವೆಯಾಗಿದೆ ಅಂತ ಗೊತ್ತಾಗೋ 3 ಲಕ್ಷಣ ಹೇಳಿದ್ರು ಯೋಗರಾಜ ಭಟ್ರು! ಒಪ್ತೀರಾ ಇದನ್ನು?

Published : Mar 08, 2025, 03:36 PM ISTUpdated : Mar 08, 2025, 03:55 PM IST
ಗಂಡಸ್ರಿಗೆ ಮದ್ವೆಯಾಗಿದೆ ಅಂತ ಗೊತ್ತಾಗೋ 3 ಲಕ್ಷಣ ಹೇಳಿದ್ರು ಯೋಗರಾಜ ಭಟ್ರು! ಒಪ್ತೀರಾ ಇದನ್ನು?

ಸಾರಾಂಶ

ಖ್ಯಾತ ನಿರ್ದೇಶಕ, ಗೀತರಚನೆಕಾರ ಯೋಗರಾಜ ಭಟ್ಟರು ಹಾಸ್ಯಪ್ರವೃತ್ತಿಗೆ ಹೆಸರುವಾಸಿ. ಇತ್ತೀಚೆಗೆ, ಕಿರಿಕ್ ಕೀರ್ತಿ ಯೂಟ್ಯೂಬ್ ಚಾನೆಲ್‌ನಲ್ಲಿ ಹೆಂಗಸರು, ಗಂಡಸರ ಮದುವೆ ಗುರುತುಗಳ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಹೆಂಗಸರಿಗೆ ತಾಳಿ ಇದ್ದರೆ, ಗಂಡಸರಿಗೆ ಮುಖ, ಕೈಯಲ್ಲಿ ಮೊಸರು, ಕೊತ್ತಂಬರಿ ಸೊಪ್ಪು, ಬೀದಿ ನಾಯಿ ಬೊಗಳದಿರುವುದು ಗುರುತು ಎಂದಿದ್ದಾರೆ. ಈ ಹಿಂದೆ ಪತ್ನಿ ರೇಣುಕಾ, ಭಟ್ಟರ ಮದುವೆ ದಿನಾಂಕ ಮರೆವು ಹಾಗೂ ತಂದೆಯ ಒತ್ತಾಯದ ಮದುವೆಯ ಬಗ್ಗೆ ಹೇಳಿಕೊಂಡಿದ್ದರು.  

ಕನ್ನಡ ಚಿತ್ರರಂಗ ನಿರ್ದೇಶಕ ಹಾಗೂ ಗೀತ ರಚನೆಕಾರ ಯೋಗರಾಜ ಭಟ್ಟರು ವಿಕಟಕವಿ ಎಂದೇ ಫೇಮಸ್​ ಆದವರು. ಅಷ್ಟು ಹಾಸ್ಯ ಪ್ರವೃತ್ತಿ ಅವರಲ್ಲಿದೆ. ಯೋಗರಾಜ್ ಭಟ್ ಅವರ ಹಾಡುಗಳೆಂದರೆ ಅದಕ್ಕೆ ಅದರದ್ದೇ ಆದ ವಿಶೇಷತೆಗಳಿವೆ. ರಂಗ SSLC, ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ದನ ಕಾಯೋನು, ವಾಸ್ತು ಪ್ರಕಾರ, ಡ್ರಾಮಾ,  ಮುಗುಳುನಗೆ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದರು.  ಭಟ್ಟರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಫೀಸಿನಲ್ಲಿ ಉತ್ತಮ ಕಲೆಕ್ಷನ್ ಜೊತೆ ಒಳ್ಳೆಯ ವಿಮರ್ಶೆ ಕೂಡ ಪಡೆದಿವೆ.  ಯೋಗರಾಜ್​ ಭಟ್ ಅವರು ಉತ್ತರಾಕಾಂಡ ಚಿತ್ರದಲ್ಲಿ ನಟಿಸಿದ್ದಾರೆ. 'ಪಾಟೀಲ' ಎಂಬ  ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು,‌ ಈ ಮೂಲಕ ವಿಭಿನ್ನವಾಗಿ ಆಕ್ಷನ್ ಕಟ್ ಹೇಳಿಸಿಕೊಂಡಿದ್ದಾರೆ.  'ಉತ್ತರಕಾಂಡ (Uttarakaanda)' ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ರೋಹಿತ್ ಪದಕಿ ನಿರ್ದೇಶಕರು.   

ಇದೀಗ ಅವರು ಕಿರಿಕ್ ಕೀರ್ತಿ ಯೂಟ್ಯೂಬ್​ ಚಾನೆಲ್​ಗೆ ನೀಡಿದ್ದ ವಿಡಿಯೋ ಒಂದು ವೈರಲ್​ ಆಗಿದ್ದು, ಅದರಲ್ಲಿ ಕೆಲವೊಂದು ತರ್ಲೆ ಪ್ರಶ್ನೆಗಳಿಗೆ ಯೋಗರಾಜ್​ ಭಟ್​ ಅವರು ಉತ್ತರ ನೀಡಿದ್ದಾರೆ. ಅದರಲ್ಲಿ ಒಂದು ಎಂದರೆ ಹೆಣ್ಣುಮಕ್ಕಳಿಗೆ ಮದುವೆಯಾಗಿದೆ ಎನ್ನೋದಕ್ಕೆ ತಾಳಿ ನೋಡಿದ್ರೆ ಗೊತ್ತಾಗತ್ತೆ. ಪುರುಷರ ಮದ್ವೆಯಾಗಿದೆ ಎಂದು ಗೊತ್ತಾಗೋದು ಹೇಗೆ ಎಂದು ಕೀರ್ತಿ ಅವರು ಕೇಳಿದ್ದಾರೆ. ಅದಕ್ಕೆ ಭಟ್ಟರು, ಗಂಡಸರ ಮೂತಿ ನೋಡಿದ್ರೆ ಗೊತ್ತಾಗಲ್ವೇನ್ರೀ ಅವರಿಗೆ ಮದ್ವೆಯಾಗಿದೆ ಅಂತ ಎಂದು ಉತ್ತರಿಸಿದ್ದಾರೆ. ಗಂಡಸರ ಮುಖ ನೋಡಿದ್ರೆ ಅವರು ಮದ್ವೆಯಾಗೋದು ಗೊತ್ತಾಗುತ್ತದೆ ಎನ್ನುವುದು ಒಂದು ಲಕ್ಷಣವಾದ್ರೆ ಇನ್ನೆರಡು ಇಂಟರೆಸ್ಟಿಂಗ್​ ಲಕ್ಷಣಗಳನ್ನು ಅವರು ಹೇಳಿದ್ದಾರೆ.

ನನ್ ಹೆಂಡ್ತಿ ಉಗಿದಿರೋ ಎಲ್ಲಾ ಸಾಂಗೂ ಹಿಟ್ಟೇ: ಯೋಗರಾಜ ಭಟ್ಟರ ಯಶಸ್ವಿನ ಹಿಂದಿರೋ ಗುಟ್ಟು ಇದಂತೆ!

ಎರಡನೆಯ  ಲಕ್ಷಣ ಎಂದರೆ ಕೈಯಲ್ಲಿ ಮೊಸ್ರು, ಕೊತ್ತಂಬರಿ ಸೊಪ್ಪು ಹಿಡ್ಕೊಂಡು ಹೋಗ್ತಾ ಇರ್ತಾರಂತೆ. ಇನ್ನು ಮೂರನೇ ಲಕ್ಷಣ ಎಂದ್ರೆ ಬೀದಿ ನಾಯಿ ಬೊಗಳಲ್ವಂತೆ, ನಾವಿಬ್ಬರೂ ಒಂದೇ ಎನ್ನೋ ಕಾರಣಕ್ಕೆ.... ಹೀಗೆಲ್ಲಾ ಹೇಳಿದ್ದಾರೆ ಯೋಗರಾಜ ಭಟ್ಟರು! 

 ಈ ಹಿಂದೆ ಸಂದರ್ಶನವೊಂದರಲ್ಲಿ ಅವರ ಪತ್ನಿ ರೇಣುಕಾ ಅವರು ತಮ್ಮ ಪತಿಯ ಕೆಲವೊಂದು ಗುಣಗಳನ್ನು ತೆರೆದಿಟ್ಟಿದ್ದರು.  ಯೋಗರಾಜ್​ ಭಟ್​ ಅವರಿಗೆ ತಾವು ಮಾಡುವ ಸಿನಿಮಾ, ಹಾಡುಗಳ ಸಂಪೂರ್ಣ ಡಿಟೇಲ್ಸ್​ ನೆನಪಿದ್ದರೂ, ಕನಸಿನಲ್ಲಿ ಕೂಡ ಪರ್ಫೆಕ್ಟ್​ ಆಗಿ ಹೇಳಿದರೂ ತಮ್ಮ ಮದುವೆಯ ದಿನಾಂಕ ಮಾತ್ರ ನೆನಪು ಇರುವುದಿಲ್ಲ ಎಂದಿದ್ದರು.  ಇವರನ್ನು ಮದ್ವೆಯಾದದ್ದು ನನ್ನ ತಂದೆಯ ಒತ್ತಾಯಕ್ಕೆ ಎಂದು ರೇಣುಕಾ ಅವರು ಓಪನ್​ ಆಗಿಯೇ ಹೇಳಿಕೊಂಡಿದ್ದರು. ಕೆಲಸಕ್ಕೆ ಹೋಗುತ್ತಿದ್ದ ನನಗೆ ಕೆಲಸ ಬಿಡಿಸಿದ್ರು, ಎಲ್ಲರಿಗೂ ಕೆಲಸ ಬಿಡಿಸಿ ತಮ್ಮ ಬಳಿ ಇಟ್ಟುಕೊಳ್ಳುವುದು ಎಂದರೆ ಇವರಿಗೆ ತುಂಬಾ ಖುಷಿ ಎನ್ನುತ್ತಲೇ ಭಟ್ಟರಂಥ ಪತಿಯನ್ನು ಪಡೆದಿರುವುದು ತಮ್ಮ ಪುಣ್ಯ ಎಂದೂ ಹೇಳಿದ್ದರು. ಶಿವರಾಜ್​ ಕುಮಾರ್​ ಜೊತೆಗಿನ ಸಂದರ್ಶನದಲ್ಲಿ ಭಟ್ಟರು ನಮ್ಮ ಹೆಂಡ್ತಿಯನ್ನು ನಾವು ಪ್ರೀತಿಸ್ತೇವೆ ಎಂದ ಮಾತ್ರಕ್ಕೆ, ಬೇರೆಯವರ ಪತ್ನಿಯರನ್ನು ಕಡೆಗಣಿಸ್ತೇವೆ ಎನ್ನೋದು ಅರ್ಥವಲ್ಲ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ದೊಡ್ಡದಾಗಿ ನಗುತ್ತ, ರೇಣುಕಾ ಅವರು ನಾನು ಏನೂ ಹೇಳಲ್ಲಪ್ಪ ಎನ್ನುತ್ತ ಬಾಯಿಗೆ ಬೀಗ ಹಾಕಿಕೊಂಡಿದ್ದರು. 

ಇವ್ರಿಗೆ ಮೊಸರು ತರಲು ಹೇಳಿದ್ದೇ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು: ಯೋಗರಾಜ್​ ಭಟ್ಟರ ಪತ್ನಿ ಮಾತು ಕೇಳಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್