'ಟಾಕ್ಸಿಕ್' ಸಿನಿಮಾ ಸ್ಕ್ರಿಪ್ಟ್ ಕೇಳಿ ಅದರಿಂದ ಪ್ರೇರಣೆಗೊಂಡು ಈ ಹೇರ್ ಸ್ಟೈಲ್ ಟ್ರೈ ಮಾಡಿದ್ದು. ನಾನು ಸ್ಕ್ರಿಪ್ಟ್ ಅನ್ನು ಕೇಳಿದಾಗ, ಶಾರ್ಟ್ ಹೇರ್ಸ್ಟೈಲ್ ಪಾತ್ರಕ್ಕೆ ಸೂಕ್ತ ಎನಿಸಿತು. ನಾವು ಅವರ ಪಾತ್ರ ಮತ್ತು ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಕಸ್ಟಮೈಸ್ ಮಾಡಿದ ಪಾಂಪಡೋರ್ ಸ್ಟೈಲ್ ಚೆನ್ನಾಗಿರುತ್ತದೆ ಎಂದು ನಿರ್ಧರಿಸಿದೆವು.
ಕೆಜಿಎಫ್ 2 ನಂತರ ಯಶ್ 2 ವರ್ಷ ಬ್ರೆಕ್ ಪಡೆದು ಟಾಕ್ಸಿಕ್ ಅನೌನ್ಸ್ ಮಾಡಿದ್ದಾರೆ. ಯಶ್ ಟಾಕ್ಸಿಕ್ ಲುಕ್ ಹೇಗಿರುತ್ತೋ ಅಂದುಕೊಂಡವರಿಗೆ ಅಂಬಾನಿ ಮದುವೆಯಲ್ಲಿ ಯಶ್ ಹೇರ್ ಸ್ಟೈಲ್ ರಿವೀಲ್ ಆಗಿ ಹೋಗಿತ್ತು. ಯಶ್ ನ್ಯೂ ಲುಕ್ ಸ್ಯಾಂಡಲ್ವುಡ್ನಿಂದ ಬಾಲಿವುಡ್ವರೆಗೆ ಸೆನ್ಸೇಷನ್ ಹುಡ್ಡು ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಸುದ್ದಿ ವೈರಲ್ ಆಗಿಹೋಯ್ತು!. ಯಶ್ ಈ ಹೊಸ ಲುಕ್ನ ಹಿಂದಿನ ಮಾಂತ್ರಿಕ ಇದೀಗ ಯಾರೆಂದು ರಿವೀಲ್ ಆಗಿದೆ. ಯಶ್ ವರ್ಷನುಗಟ್ಟಲೆ ಬೆಳಸಿದ ಗಡ್ಡಕ್ಕೆ ಕತ್ತರಿ ಹಾಕಿದ್ದು ಇವರೆ ನೋಡಿ. ಖ್ಯಾತ ಸೆಲೆಬ್ರೆಟಿ ಹೇರ್ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್.
ಯಶ್ ಗೆ ವಿಭಿನ್ನ ಹೇರ್ಸ್ಟೈಲ್ನಲ್ಲಿ ಹೊಸದಾಗಿ ತೋರಿಸಿ ಅಲೆಕ್ಸ್ ವಿಜಯಕಾಂತ್ ಕಮಾಲ್ ಮಾಡಿದ್ದಾರೆ. ಇದೀಗ ಯಶ್ ಹೇರ್ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ. "ಅಂದು ನಾವು ಹೋಟೆಲ್ ತಲುಪುವ ಮುನ್ನ ಯಶ್ ಹೊಸ ಹೇರ್ಸ್ಟೈಲ್ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಸಾಕಷ್ಟು ಚರ್ಚೆ ಆಯಿತು. 'ಟಾಕ್ಸಿಕ್' ಸಿನಿಮಾ ಸ್ಕ್ರಿಪ್ಟ್ ಕೇಳಿ ಅದರಿಂದ ಪ್ರೇರಣೆಗೊಂಡು ಈ ಹೇರ್ ಸ್ಟೈಲ್ ಟ್ರೈ ಮಾಡಿದ್ದು. ನಾನು ಸ್ಕ್ರಿಪ್ಟ್ ಅನ್ನು ಕೇಳಿದಾಗ, ಶಾರ್ಟ್ ಹೇರ್ಸ್ಟೈಲ್ ಪಾತ್ರಕ್ಕೆ ಸೂಕ್ತ ಎನಿಸಿತು. ನಾವು ಅವರ ಪಾತ್ರ ಮತ್ತು ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಕಸ್ಟಮೈಸ್ ಮಾಡಿದ ಪಾಂಪಡೋರ್ ಸ್ಟೈಲ್ ಚೆನ್ನಾಗಿರುತ್ತದೆ ಎಂದು ನಿರ್ಧರಿಸಿದೆವು.
undefined
ಯಶ್ ಹೊಸ ಹೇರ್ಸ್ಟೈಲ್ ಅನ್ನು ಸ್ಟೈಲಿಶ್ ಪಾಂಪಡೋರ್, ಸ್ಕ್ರಿಪ್ಟ್ಗೆ ತಕ್ಕಂತೆ ಕೊಂಚ ಬದಲಿಸಿದ್ದೇವೆ" ಎಂದಿದ್ದಾರೆ. ಹೊಸ ಲುಕ್ನಲ್ಲಿ ತಮ್ಮನ್ನು ತಾವು ನೋಡಿಕೊಂಡು "ಯಶ್ ನನ್ನನ್ನು ತಬ್ಬಿಕೊಂಡರು. ಅಲೆಕ್ಸ್ ನೀವು ಸಾಧಿಸಿದಿರಿ" ಎಂದು ಬೆನ್ನು ತಟ್ಟಿದ್ದಾಗಿ ಅಲೆಕ್ಸ್ ವಿವರಿಸಿದ್ದಾರೆ. 'KGF' ಸರಣಿ ಸಮಯದಿಂದಲೂ ಯಶ್ ಉದ್ದನೆಯ ಕೂದಲು, ಗಡ್ಡ ಲುಕ್ ಕಾಪಾಡಿಕೊಂಡು ಬಂದಿದ್ದರು. ಸಾಕಷ್ಟು ಜನ ಯಾವಾಗ ಇದಕ್ಕೆ ಕತ್ತರಿ ಹಾಕುತ್ತೀರಾ ಎಂದು ಕೇಳುತ್ತಾ ಬಂದಿದ್ದರು. ಆಗ ಯಶ್ ನಕ್ಕು ಸುಮ್ಮನಾಗುತ್ತಿದ್ದರು. ಕೊನೆಗೂ ಹೊಸ ಅವತಾರದಲ್ಲಿ ದರ್ಶನ ಕೊಟ್ಟು ಹುಬ್ಬೇರಿಸಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭಕ್ಕೆ ಪತ್ನಿ ಸಮೇತ ಯಶ್ ಹಾಜರಾಗಿದ್ದರು. ಎಲ್ಲರೂ ಒಂದು ಕ್ಷಣ ವಾವ್ ಎಂದಿದ್ದರು.
ಅತಂತ್ರ ಸ್ಥಿತಿಯಲ್ಲಿ ದರ್ಶನ್ ನಂಬಿದ ನಿರ್ಮಾಪಕರು: ಕೋಟಿ ಕೋಟಿ ಹಾಕಿ ಹಣ ಕೈ ಸುಟ್ಟುಕೊಂಡ್ರಾ?
ಯಶ್ ಮುಮದಿನ ಸಿನಿಮಾ 'ಟಾಕ್ಸಿಕ್' ಚಿತ್ರಕ್ಕೆ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಲಂಡನ್ನಲ್ಲಿ ಶೂಟಿಂಗ್ ನಡೆಯುತ್ತಿದೆ ಎನ್ನಲಾಗಿತ್ತು.. 'ಟಾಕ್ಸಿಕ್' ಡ್ರಗ್ಸ್ ಮಾಫಿಯಾ ಕುರಿತ ಕಥೆ ಎನ್ನಲಾಗ್ತಿದೆ. ಚಿತ್ರದಲ್ಲಿ ಯಶ್ ಸ್ಟೈಲಿಶ್ ಡಾನ್ ಆಗಿ ನಟಿಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಚಿತ್ರದಲ್ಲಿ 60, 70ರ ದಶಕದ ಕಥೆ ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ತಾರಾಗಣದಲ್ಲಿ ನಯನತಾರಾ, ಕೈರಾ ಅದ್ವಾನಿ ಕುಡ ಇದ್ದಾರೆ ಎನ್ನುವ ಚರ್ಚೆ ನಡೀತಿದೆ. ಆದರೆ ಅಧಿಕೃತವಾಗಿ ಚಿತ್ರತಂಡ ಮಾತ್ರ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ 'ಟಾಕ್ಸಿಕ್' ಚಿತ್ರ ನಿರ್ಮಿಸುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.