ಸ್ಯಾಂಡಲ್‌ವುಡ್ ಸ್ಟಾರ್ಸ್ ಜೊತೆಗೆ ಟಾಲಿವುಡ್ ಸ್ಟಾರ್ಸ್ ಇಂದಲೂ ಸಹ ನಟ ದರ್ಶನ್ ಭೇಟಿಗೆ ಯತ್ನ ನಡೆಯುತ್ತಿದೆ. ಈ ಮಧ್ಯೆ ಟಾಲಿವುಡ್ ನಟ ಸದ್ದಿಲ್ಲದೆ ದರ್ಶನ್‌ರನ್ನು ಭೇಟಿಯಾಗಿದ್ದಾರೆ.
ಬೆಂಗಳೂರು (ಜು.26): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಹಲವಾರು ಸೆಲೆಬ್ರಿಟಿಗಳಿಂದ ದರ್ಶನ್ ಭೇಟಿಗೆ ಯತ್ನಿಸುತ್ತಿದ್ದಾರೆ. ಕೆಲವರು ಭೇಟಿಯಾಗಲು ಯಶಸ್ವಿಯಾದ್ರೆ ಮತ್ತೆ ಕೆಲವರಿಗೆ ದರ್ಶನ್ ದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಸ್ಯಾಂಡಲ್‌ವುಡ್ ಸ್ಟಾರ್ಸ್ ಜೊತೆಗೆ ಟಾಲಿವುಡ್ ಸ್ಟಾರ್ಸ್ ಇಂದಲೂ ಸಹ ಭೇಟಿಗೆ ಯತ್ನ ನಡೆಯುತ್ತಿದೆ. ಈ ಮಧ್ಯೆ ಟಾಲಿವುಡ್ ನಟ ಸದ್ದಿಲ್ಲದೆ ದರ್ಶನ್‌ರನ್ನು ಭೇಟಿಯಾಗಿದ್ದಾರೆ.
ಹೌದು! ತೆಲುಗಿನ ಖ್ಯಾತ ನಟ ನಾಗಶೌರ್ಯ ಇಂದು ಜೈಲಲ್ಲಿ ದರ್ಶನ್‌ರನ್ನು ಭೇಟಿ ಮಾಡಿದ್ದಾರೆ. ದರ್ಶನ್ ಕುಟುಂಬದ ಜೊತೆ ಹೋಗಿ ಜೈಲಲ್ಲಿ ದಾಸ ದರ್ಶನ್ ಕ್ಷೇಮವನ್ನು ನಾಗಶೌರ್ಯ ವಿಚಾರಿಸಿದ್ದಾರೆ. ಹೇಗಿದ್ಯಾ ಹೀರೊ, ಹೇಗೆ ನಡೀತಿದೆ ಪ್ರಾಜೆಕ್ಟ್. ಯಾವ ಫಿಲಂ ಶೂಟಿಂಗ್ ನಡೀತಿದೆ. ರಿಲೀಸ್ ಯಾವಾಗ ಅಂತೆಲ್ಲಾ ದರ್ಶನ್ ಇಂದ ಮಾತುಕತೆಯಾಗಿದೆ. ಇನ್ನು ಜೈಲಿಗೆ ನೋಡಲು ಬಂದ ನಾಗಶೌರ್ಯ ಯೋಗಕ್ಷೇಮವನ್ನು ದರ್ಶನ್ ವಿಚಾರಿಸಿ ಆತ್ಮೀಯವಾಗಿ ಮಾತನಾಡಿ ನಾಗಶೌರ್ಯರನ್ನ ಕಳಿಸಿಕೊಟ್ಟಿದ್ದಾರೆ.
undefined
ದರ್ಶನ್ ಅಣ್ಣ ಸಹೃದಯಿ, ಕನಸಲ್ಲೂ ಕೇಡು ಬಯಸುವವರಲ್ಲ: ಇನ್ನು ಈ ಹಿಂದೆ ದರ್ಶನ್ ಪರವಾಗಿ ನಾಗಶೌರ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ಅವರು, ದರ್ಶನ್ ಈ ರೀತಿ ಕೊಲೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಆರಂಭದಲ್ಲಿ, ಮೃತ ರೇಣುಕಾಸ್ವಾಮಿಯ ಸಾವಿಗೆ ಮರಗಿರುವ ನಾಗಶೌರ್ಯ ಅವರು, ಕುಟುಂಬದ ಬಗ್ಗೆ ಕೇಳಿದಾಗ ನನ್ನ ಹೃದಯ ಮರುಗುತ್ತೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ಸಿಗಲಿ ಎಂದು ನಾನು ಬಯಸುತ್ತೇನೆ ಎಂದಿದ್ದರು. ಈ ಥರದ ಕಷ್ಟದ ಸಂದರ್ಭದಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ ಎನ್ನುತ್ತಲೇ ದರ್ಶನ್ ಈ ರೀತಿ ಮಾಡಲು ಸಾಧ್ಯವೇ ಇಲ್ಲ ಎಂದು ಅವರು ಬರೆದುಕೊಂಡಿದ್ದರು.
ಕೊಲೆ ಆರೋಪಿ ದರ್ಶನ್‌ಗೆ ಬಿರಿಯಾನಿ ಕೊಡಲಾಗದು: ಕೋರ್ಟ್ ಹೇಳಿದ್ದೇನು?
ನಾಗಶೌರ್ಯ ಅವರು ತಮ್ಮ ಪೋಸ್ಟ್ನಲ್ಲಿ, ರೇಣುಕಾಸ್ವಾಮಿ ಕೊಲೆ ವಿಷಯದಲ್ಲಿ ಜನರು ಈಗಲೇ ತೀರ್ಮಾನಕ್ಕೆ ಬರುತ್ತಿರುವುದನ್ನು ನೋಡುವುದು ಕಷ್ಟವಾಗುತ್ತಿದೆ. ದರ್ಶನ್ ಅಣ್ಣ ಕನಸಿನಲ್ಲಿಯೂ ಯಾರಿಗೂ ಕೇಡು ಬಯಸುವವರಲ್ಲ, ತೊಂದರೆ ಕೊಡುವವರಲ್ಲ. ದರ್ಶನ್ ಅಣ್ಣ ಉದಾರತೆ, ಸಹೃದಯ ಸ್ವಭಾವ, ಇತರರಿಗೆ ಸಹಾಯ ಮಾಡುವ ಗುಣ ಹೊಂದಿರುವವರು. ಎಷ್ಟೋ ಮಂದಿ ಅಸಹಾಯಕರಿಗೆ ಅವರು ನೆರವಿನ ಹಸ್ತ ನೀಡಿದ್ದಾರೆ, ಹಲವರಿಗೆ ಶಕ್ತಿಯಾಗಿದ್ದಾರೆ. ಆದರೆ... ಅವರನ್ನು ಈ ಕೇಸ್ನಲ್ಲಿ ಸಿಲುಕಿಸಲಾಗಿದೆ. ಅವರು ಕೊಲೆ ಮಾಡಿದ್ದಾರೆ ಎನ್ನುವ ಸುದ್ದಿ ನನ್ನಿಂದ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿದ್ದು, ಆದಷ್ಟು ಬೇಗ ಸತ್ಯ ಹೊರಬೀಳಲಿದೆ ಎಂದು ಆಶಿಸುತ್ತೇನೆ ಎಂದು ನಾಗಶೌರ್ಯ ಅವರು ಹೇಳಿದ್ದರು.