ಸಿದ್ದರಾಮಯ್ಯ- ಡಿಕೆಶಿಗೆ ಹೋಗಿ ಕಂಪ್ಲೇಂಟ್​ ಕೊಡ್ತೇನೆ! 'ಕೊತ್ತಲವಾಡಿ' ಕುರಿತು ಯಶ್​ ಅಮ್ಮ ಪ್ರತಿಕ್ರಿಯೆ...

Published : Aug 12, 2025, 09:51 PM IST
Pushpa Arunkumar about KOTHALAVADI

ಸಾರಾಂಶ

'ಕೊತ್ತಲವಾಡಿ' ಸಿನಿಮಾದ ಬಗ್ಗೆ ಮಾತನಾಡಿದವರ ಕುರಿತಂತೆ ಗರಂ ಆಗಿರೋ ಯಶ್​ ಅಮ್ಮ ಪುಷ್ಪಾ ಅರುಣ್​ ಕುಮಾರ್​ ಅವರು ಸಿದ್ದರಾಮಯ್ಯ-ಡಿಕೆಶಿಗೆ ಹೋಗಿ ಕಂಪ್ಲೇಂಟ್​ ಕೊಡ್ತೇನೆ ಎಂದಿದ್ದಾರೆ. ಅವರು ಹೇಳಿದ್ದೇನು? 

ಕೆಜಿಎಫ್​ ಸ್ಟಾರ್ ಯಶ್ (Yash) ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಬಹುನಿರೀಕ್ಷಿತ ಕೊತ್ತಲವಾಡಿ (Kothalavadi) ಚಿತ್ರ ಆಗಸ್ಟ್​1ರಂದು ತೆರೆ ಕಂಡಿದ್ದು, ಬಾಕ್ಸ್​ ಆಫೀಸ್​​​ ನಿರೀಕ್ಷೆಗಳನ್ನು ತಲುಪುವಲ್ಲಿ ಹಿನ್ನೆಡೆ ಕಂಡಿದೆ ಎಂದು ಹೇಳಲಾಗುತ್ತಿದೆ. ಯಶ್​ ಅವರ ಅಮ್ಮನಾಗಿರುವ ಕಾರಣ, ಜನರು ಸಹಜವಾಗಿ ಚಿತ್ರಮಂದಿರಕ್ಕೆ ಬರುತ್ತಾರೆ ಎಂದುಕೊಳ್ಳಲಾಗಿತ್ತು. 'ಕೊತ್ತಲವಾಡಿ' ಬಿಡುಗಡೆಗೂ ಮುನ್ನ ಕ್ರೇಜ್​​ ಕ್ರಿಯೇಟ್​ ಮಾಡಿತ್ತು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಸಕ್ಸಸ್​ ಕಂಡಿಲ್ಲ ಎಂದು ತಿಳಿದುಬಂದಿದೆ. ಈ ಸಕ್ಸಸ್​ ಕಾಣದೇ ಇರುವುದಕ್ಕೆ ಇದೀಗ ಪುಷ್ಪಾ ಅವರು ತಮ್ಮದೇ ಆಗಿರೋ ಕಾರಣವನ್ನು ನೀಡಿದ್ದಾರೆ. ಟಾಕಿಂಗ್​ ಪ್ಯಾರೆಟ್ಸ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಪುಷ್ಪಾ ಅವರು, ನಮ್ಮ ಪ್ರಚಾರ ನೋಡಿ ಭಯ ಇತ್ತು ಅವರಿಗೆ, ಸಿನಿಮಾ ಚೆನ್ನಾಗಿ ಓಡತ್ತೆ ಎಂದು. ಅದೇ ಕಾರಣಕ್ಕೆ ನಮ್ಮ ಸಿನಿಮಾ ಬಗ್ಗೆ ಮೊದಲೇ ಸುಳ್ಳು ಸುದ್ದಿ ಹಬ್ಬಿಸಿಬಿಟ್ಟಿದ್ದಾರೆ. ಇದು ನನಗೆ ಮೊದಲು ಗೊತ್ತೇ ಆಗಲಿಲ್ಲ. ಅದು ಈಗ ಗೊತ್ತಾಯ್ತು ನನಗೆ. ಏನು ಬೇಕೋ ಅದನ್ನು ಮಾಡಿದ್ದೇನೆ. ಸುಳ್ಳು ಸುದ್ದಿ ಹರಡಿಸಿದ್ದನ್ನೆಲ್ಲಾ ತೆಗೆಸಿದ್ದೇನೆ ಎಂದು ಪುಷ್ಪಾ ಹೇಳಿದ್ದಾರೆ. ಇಂಥವರ ವಿರುದ್ಧ ಕೇಸ್​ ಹಾಕಬೇಕು. ಸಿದ್ದರಾಮಯ್ಯನವರು ಇದರ ಬಗ್ಗೆ ಗಮನ ಹರಿಸಬೇಕು. ಹೀಗೆ ಸುಳ್ಳು ಸುದ್ದಿ ಹರಡುವವರ ಬಗ್ಗೆ ಸಿದ್ದರಾಮಯ್ಯ-ಡಿಕೆಶಿಗೆ ಹೋಗಿ ಕಂಪ್ಲೇಂಟ್​ ಕೊಡ್ತೇನೆ ಎಂದು ಪುಷ್ಪಾ ಅವರು ಗರಂ ಆಗಿ ನುಡಿದಿದ್ದಾರೆ.

ಅಷಕ್ಕೂ ಪುಷ್ಪಾ ಅವರು ಇದಾಗಲೇ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಹಲವರ ಮೇಲೆ ಮುನಿಸು ಮಾಡಿಕೊಂಡಿರೋದು ಇದೆ. ಪ್ರಮೋಷನ್​ ಸಮಯದಲ್ಲಿ ಕೂಡ ಕಿಡಿ ಕಾರಿದ್ದರು. ಅವರಿಗೆ ಸಹಜವಾಗೇ ನಿಮ್ಮ ಮಗನಿಗೆ ಕೊತ್ತಲವಾಡಿ ಸಿನಿಮಾ ತೋರಿಸಿದ್ರಾ., ರಾಕಿಂಗ್ ಸ್ಟಾರ್ (Rocking Star) ನಿಮ್ಮ ಸಿನಿಮಾ ನೋಡಿ ಏನಂದ್ರು ಅನ್ನೋ ಪ್ರಶ್ನೆ ತೂರಿಬಂದಿತ್ತು. ಆಗ ಯಶ್ ತಾಯಿ ಮಾರ್ಮಿಕವಾದ ಉತ್ತರ ಕೊಟ್ಟಿದ್ದರು. ಯಶ್ ನೋಡಿದ ಮಾತ್ರಕ್ಕೆ ಸಿನಿಮಾ ಓಡಲ್ಲ...ಹಣ ಬರಲ್ಲ.. ಜನ ಬಂದು ನೋಡಿದ್ರೇನೆ ಸಿನಿಮಾ ಗೆಲ್ಲೋದು ಅಂದಿದ್ದಾರೆ. ಮಗನ ಅನಿಸಿಕೆ ಬೇಕಾಗಿಲ್ಲ. ಈ ಸಿನಿಮಾ ಮಾಡಿರೋದು ಜನಕ್ಕೆ ಅಂದಿದ್ದರು. ಅವರ ನಟನೆ ನಿರ್ಮಾಣದ ರಾಮಾಯಣದ ಬಗ್ಗೆ ನನಗೇನೂ ಕೇಳಬೇಡಿ ಅಂತಿದ್ದರು.

ಕೊತ್ತಲವಾಡಿ ಸಿನಿಮಾ ಸ್ಟೋರಿ

ಇನ್ನು ಕೊತ್ತಲವಾಡಿ ಸಿನಿಮಾ ಕುರಿತು ಹೇಳುವುದಾದರೆ, ಹಳ್ಳಿ ಸೊಗಡಿನ ಕಥೆಗೆ ಶ್ರೀರಾಜ್ ನಿರ್ದೇಶನ ಮಾಡಿದ್ದಾರೆ. ಪೃಥ್ವಿ ಅಂಬಾರ್, ಕಾವ್ಯ ಶೈವ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ, ಅವಿನಾಶ್, ಬಲ ರಾಜ್ವಾಡಿ ಹಾಗೂ ರಘು ರಾಮನಕೊಪ್ಪ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಕಾರ್ತಿಕ್ ಎಸ್ ಕ್ಯಾಮರಾ ವರ್ಕ್​, ವಿಕಾಸ್ ವಸಿಷ್ಠ ಸಂಗೀತ, ರಾಮಿಸೆಟ್ಟಿ ಪವನ್ ಸಂಕಲನ ಮತ್ತು ರಘು ನಿಡುವಳ್ಳಿ ಡೈಲಾಗ್ಸ್​ ಚಿತ್ರಕ್ಕಿದೆ. ಚಿತ್ರ ಮೊದಲ ವಾರ ಕೇವಲ 17 ಲಕ್ಷ ರೂಪಾಯಿ ಗಳಿಕೆ ಮಾಡಿದೆ ಎಂದು ತಿಳಿದುಬಂದಿದೆ. ಇದಕ್ಕೆ ತಮ್ಮ ಚಿತ್ರದ ವಿರುದ್ಧ ಮಾಡಿರುವ ಅಪಪ್ರಚಾರವೇ ಕಾರಣ ಎನ್ನುವುದು ಪುಷ್ಪಾ ಅವರ ಮಾತು.

ಇನ್ನು ಈ ಸಿನಿಮಾ ಸ್ಟೋರಿ ಹೇಳುವುದಾದರೆ, ಕೊತ್ತಲವಾಡಿ ಎನ್ನುವುದು ಒಂದು ಗ್ರಾಮದ ಹೆಸರು, ಕಾವೇರಿ ನದಿಯ ಸಮೀಪ ಈ ಗ್ರಾಮವಿದೆ. ಗುಜರಿ ಬಾಬು ಎಂಬಾತ ಗುಜರಿ ಆಯ್ದುಕೊಂಡು ಜೀವನ ಸಾಗಿಸುತ್ತಿರುತ್ತಾನೆ. ಕಸದಿಂದ ರಸ ತೆಗೆಯುವ ಜಾಣ್ಮೆ ಆತನದ್ದು. ಅದೇ ಇನ್ನೊಂದೆಡೆ ನಾಯಕ ಮೋಹನನ ಕೆಲಸ ಜನರನ್ನು ಒಟ್ಟು ಮಾಡಿ ಕಳಿಸುವುದು. ಈ ನಡುವೆ ಗುಜರಿ ಬಾಬು ಮತ್ತು ನಾಯಕನ ನಡುವೆ ಸಂಬಂಧ ಬೆಳೆಯುತ್ತದೆ. ಅದೇ ವೇಳೆ ಈ ಊರಿಗೆ ಒಂದು ಸಮಸ್ಯೆ ಎದುರಾಗುತ್ತದೆ. ಎಲ್ಲರೂ ಸಂಕಷ್ಟದಲ್ಲಿ ಇರುತ್ತಾರೆ. ಆ ಸಮಸ್ಯೆಯನ್ನು ಎದುರಿಸಲು ಹೋದಾಗ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?