ನಿನ್ನ ರವಿಕೆ ಬಿಗಿಯಾಗಿದ್ದು ನನ್ನ ನೆನಪಲ್ ತಾನೇ; ಹಂಸಲೇಖ ಸಾಹಿತ್ಯ ಮತ್ತೊಮ್ಮೆ ವೈರಲ್

Published : Aug 12, 2025, 03:41 PM IST
Hamsalekha Upendra

ಸಾರಾಂಶ

ಹಂಸಲೇಖ ಸಂಗೀತ ನಿರ್ದೇಶನದ ಉಪೇಂದ್ರ ಅಭಿನಯದ ಸೂಪರ್ ಸ್ಟಾರ್ ಸಿನಿಮಾದ 'ಬಕ್ರಾ ಬಕ್ರಾ' ಹಾಡಿನ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 'ನಿನ್ನ ರವಿಕೆ ಬಿಗಿಯಾಗಿದ್ದು ನನ್ನ ನೆನಪಲ್ಲೇ ತಾನೇ' ಎಂಬ ಸಾಲು ಝೆನ್‌-ಜಿ ಸಮುದಾಯವನ್ನು ಆಕರ್ಷಿಸುತ್ತಿದೆ.

ಬೆಂಗಳೂರು: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಳೆಯ ವಿಡಿಯೋ ವೈರಲ್ ಆಗುತ್ತಿರುತ್ತವೆ. ಅದರಲ್ಲಿಯೂ ಸಂಗೀತ ನಿರ್ದೇಶಕ ಹಂಸಲೇಖ ಅವರ ಹಾಡುಗಳಲ್ಲಿನ ಕೆಲವು ಸಾಲುಗಳು ಮಾತ್ರ ಮುನ್ನಲೆಗೆ ಬರುತ್ತವೆ. ಹಂಸಲೇಖ ಅಂದ್ರೆ ನಾದಬ್ರಹ್ಮ ಅಂತಾನೇ ಕರೆಯಲಾಗುತ್ತದೆ. ಸಾವಿರಾರು ಹಾಡುಗಳ ರಚನೆ ಜೊತೆಯಲ್ಲಿ ಸಂಗೀತವನ್ನು ನೀಡಿದ್ದಾರೆ. ವಿ.ರವಿಚಂದ್ರನ್ ಮತ್ತು ಹಂಸಲೇಖ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಹಾಡುಗಳು ಕೇಳುಗರಿಗೆ ಇಂದಿಗೂ ಹೊಸತನದ ಅನುಭವವನ್ನು ನೀಡುತ್ತವೆ. ಪ್ರತಿಬಾರಿಯೂ ಕೇಳಿದಾಗಲೂ ಹೊಸತನ ನಿಮ್ಮ ಅನುಭವಕ್ಕೆ ಬರುತ್ತದೆ. ಇದೀಗ ಹಂಸಲೇಖ ಸಂಯೋಜನೆ, ರಿಯಲ್ ಸ್ಟಾರ್ ಉಪೇಂದ್ರ ನಟನೆ ಮತ್ತು ನಾಗತೀಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದು ಹಾಡುಗಳು ವೈರಲ್ ಅಗುತ್ತದೆ.

ಡವ್ ರಾಣಿ, ಲವ್ ರಾಣಿ ಪದ ಬಳಸಿದ್ರು ಹಂಸಲೇಖ

ಉಪೇಂದ್ರ ಅಭಿನಯದ ಸೂಪರ್ ಸ್ಟಾರ್ ಸಿನಿಮಾ 2002ರಲ್ಲಿ ಬಿಡುಗಡೆಯಾಗಿತ್ತು. ಪ್ರೀತಿಗೆ ಹೊಸ ಸ್ವರೂಪ ನೀಡಿದ್ದ ಈ ಸಿನಿಮಾ ಮ್ಯೂಸಿಕಲ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಹಾಡುಗಳನ್ನು ಹಂಸಲೇಖ ನೀಡಿದ್ದರು. ಸೂಪರ್ ಸ್ಟಾರ್ ಸಿನಿಮಾ 'ಬಕ್ರಾ ಬಕ್ರಾ' ಹಾಡಿನಲ್ಲಿನ ನಿನ್ನ ರವಿಕೆ ಬಿಗಿಯಾಗಿದ್ದು ನನ್ನ ನೆನಪಲ್ಲೇ ತಾನೇ ಎಂಬ ಸಾಲು ಝೆನ್‌-ಜಿ ಸಮುದಾಯವನ್ನು ಆಕರ್ಷಿಸುತ್ತಿದೆ. ಹಳೆ ಹಾಡುಗಳಲ್ಲಿ ಈ ರೀತಿಯ ಸಾಲುಗಳಿವೆಯಾ ಎಂದು ಆಶ್ಚರ್ಯವ್ಯಕ್ತಪಡಿಸುತ್ತಿದ್ದಾರೆ.  ಇದೇ ಹಾಡಿನಲ್ಲಿ ಡವ್ ರಾಣಿ, ಲವ್ ರಾಣಿ ಎಂಬ ಪದಗಳನ್ನು ಸಹ ಬಳಕೆ ಮಾಡಲಾಗಿದೆ.

ಬಕ್ರಾ ಬಕ್ರಾ ಹಾಡಿನ ಸಾಲುಗಳು ಹೀಗಿವೆ

ಒನ್ ಟೂ ಒನ್ ಟೂ ತ್ರೀ ಫೋರ್, ಬಕ್ರಾ..... ಬಕ್ರಾ..... ಫೀಲ್ ದ ರಿದಂ ಫ್ರೀ ಯುವರ್ ಮೈಂಡ್, ಚೆಕ್ ದ ಬೇಬಿ ಕಮಾನ್ ಬಕ್ರಾ.....ಬಕ್ರಾ.....!

ನಿನ್ನ ರವಿಕೆ ಬಿಗಿಯಾದದ್ದು ನನ್ನ ನೆನಪಲ್ ತಾನೆ..ಬಕ್ರಾ.... ಪಿಳ್ಳೆ ನೆವದಲ್ ಬೀದಿಗ್ ಬಂದಿದ್ ನನ್ನ ಹುಡುಕೊಂಡ್ ತಾನೆ

ಬಕ್ರಾ.... ನಿನ್ನ ಎದೆಯಾ ಸಿಡಿ ಒಳಗೆ ನಂದೇ ಮ್ಯೂಸಿಕ್ ತಾನೆ.. ಬಕ್ರಾ ..... ನಿನ್ನ ಕಣ್ಣಿನ್ ಕ್ಯಾಮೆರಾ, ತುಂಬಾ ಈ ಸೂಪರ್ ಸ್ಟಾರ್ ತಾನೆ..ಬಕ್ರಾ…

ಸೂಪರ್‌ಸ್ಟಾರ್ ಸಿನಿಮಾದ ಕಥೆ ಏನು?

ಚಿತ್ರದಲ್ಲಿ ಉಪೇಂದ್ರ ಓರ್ವ ಸೂಪರ್ ಸ್ಟಾರ್ ರಾಕ್‌ ಸ್ಟಾರ್ ರಾಕಿ ಆಗಿರುತ್ತಾರೆ. ಈ ಸ್ಟಾರ್‌ಗೆ ಸಾಮಾನ್ಯ ಹುಡುಗಿ ದೇವಯಾನಿ ಮೇಲೆ ಪ್ರೇಮವಾಗುತ್ತದೆ. ಆದ್ರೆ ಈಕೆ ನಟನ ಪ್ರೀತಿಯನ್ನು ಹಲವು ಕಾರಣಗಳಿಂದ ಒಪ್ಪಿಕೊಳ್ಳಲ್ಲ. ಸೂಪರ್ ಸ್ಟಾರ್ ಮಾತ್ರ ದೇವಯಾನಿ ಹಿಂದೆಯೇ ಸುತ್ತುತ್ತಿರುತ್ತಾನೆ. ಮುಂದೆ ಆಕೆಯೊಂದಿಗೆ ವಿದೇಶಕ್ಕೆ ತೆರಳುತ್ತಾನೆ. ಅಲ್ಲಿಯ ನಟಿಯ ಜೀವನದಲ್ಲಾದ ಘಟನೆ ಗೊತ್ತಾಗುತ್ತದೆ. ಮುಂದೆ ಏನಾಗುತ್ತೆ ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬಹುದು. ಸಿನಿಮಾದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ನೇಪಾಳದ ರಾಜಕುಮಾರ್ ದೀಪೇಂದ್ರ ಮತ್ತು ಸೂಪರ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ. ದೇವಯಾನಿಯಾಗಿ ಕೀರ್ತಿ ರೆಡ್ಡಿ ನಟಿಸಿದ್ದಾರೆ.

ಸೂಪರ್ ಸ್ಟಾರ್‌ ಚಿತ್ರವನ್ನು ಏಳೆಂಟು ವಿಭಿನ್ನ ನಿರ್ದೇಶಕರು ನಿರ್ದೇಶಿಸಬೇಕಿತ್ತು. ಆದರೆ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡುವ ಮೊದಲು ವಿವಿಧ ಕಾರಣಗಳಿಂದ ಹಿಂದೆ ಸರಿದರು. ನಾಗತಿಹಳ್ಳಿ ಚಂದ್ರಶೇಖರ್ ಅವರು ಸಂದರ್ಶನವೊಂದರಲ್ಲಿ ನಿರ್ದೇಶಕ ಎಂದು ಹೇಳಿಕೊಂಡರೂ, ಸೆಟ್‌ನಲ್ಲಿ ಅವರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿಲ್ಲ. ಚಿತ್ರೀಕರಣದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡವರು ಉಪೇಂದ್ರ ಎಂದು ಹೇಳಿದ್ದರು.

ಇದನ್ನೂ  ಓದಿ: ರಾಜ ರಾಜ ಹಾಡಿನ 'ಕನ್ಯಾ ಸೆರೆಗೆ ನನ್ನ ಶಾ...' ಸಾಲಿನ ವಿವಾದಕ್ಕೆ ತೆರೆ: ಸಂಗೀತ ನಿರ್ದೇಶಕ ವಿ ಮನೋಹರ್ ಸ್ಪಷ್ಟನೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ