
ಆ್ಯಂಕರ್ ಅನುಶ್ರೀ ಎಂದರೆ ಸಾಕು, ಅವರ ಅಸಂಖ್ಯ ಅಭಿಮಾನಿಗಳಿಗೆ ಒಂದೇ ಚಿಂತೆ. ಅದು ಅವರ ಮದುವೆಯ ಬಗ್ಗೆ. ಅನುಶ್ರೀ ಅವರು ತಲೆ ಕೆಡಿಸಿಕೊಳ್ಳದಷ್ಟು ಹೆಚ್ಚು ತಲೆ ಕೆಡಿಸಿಕೊಂಡವರು ಅವರ ಫ್ಯಾನ್ಸ್. ಅಷ್ಟಕ್ಕೂ ಕೆಲ ದಿನಗಳ ಹಿಂದಷ್ಟೇ ಆ್ಯಂಕರ್ ಅನುಶ್ರೀ ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದರು. ಇದೇ ವರ್ಷ ತಮ್ಮ ಮದುವೆ ಆಗುತ್ತದೆ ಎನ್ನುವ ಮೂಲಕ, ಹಲವು ವರ್ಷಗಳಿಂದ ಅಭಿಮಾನಿಗಳು ಕೇಳ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು. ನಟಿಯರಾದ ಮಲೈಕಾ ವಸುಪಾಲ್ ಮತ್ತು ನಾಗಭೂಷಣ್ ಅವರು ನಟಿಸಿರುವ ವಿದ್ಯಾಪತಿ ಸಿನಿಮಾ ರಿಲೀಸ್ಗೂ ಮೊದಲು, ಆ ಚಿತ್ರದ ಪ್ರಮೋಷನ್ಗಾಗಿ ನಟರು ಬಂದಿದ್ದಾಗ, ಅನುಶ್ರೀ ಅವರು, ಈ ವಿಷಯ ಬಹಿರಂಗಪಡಿಸಿದ್ದರು. ಮಲೈಕಾ ವಸುಪಾಲ್ ಅವರು ನಿಮ್ಮ ಗಂಡ ಹೇಗಿರಬೇಕು ಎಂದು ಪ್ರಶ್ನಿಸಿದ್ದರು. ಆಗ ಅನುಶ್ರೀ ಅವರು, ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದರು. ಕೊನೆಗೆ ಮಲೈಕಾ ಅವರು ಯಾವಾಗ ಮದುವೆ ಎಂದು ಕೇಳಿದಾಗ, ಈ ವರ್ಷ 'ಅನುಪತಿ' ಬಂದೇ ಬರ್ತಾನೆ ಎಂದಿದ್ದರು.
ಆದರೂ, ಅದರ ಸುದ್ದಿನೇ ಇಲ್ಲ. ಆದರೆ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಪುಷ್ಟಾ ಅವರ ಚೊಚ್ಚಲ ಸಿನಿಮಾ ಕೊತ್ತಲವಾಡಿಯ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಅಲ್ಲಿ ಆ್ಯಂಕರ್ ಆಗಿ ಬಂದಿರುವ ಅನುಶ್ರೀ ಅವರ ಮದುವೆಯ ವಿಷಯ ಚರ್ಚೆಯಾಗಿದೆ. ಅನುಶ್ರೀ ಅವರು ವೇದಿಕೆ ಮೇಲೆ ಬರುತ್ತಿದ್ದಂತೆಯೇ ಮದುವೆಯ ಬಗ್ಗೆ ಯಾರೋ ಪ್ರಶ್ನಿಸಿದ್ದಾರೆ. ಅದಕ್ಕೆ ಅನುಶ್ರೀ ಅಬ್ಬಾ ಟಿವಿಯಲ್ಲಿ ಮದುವೆ ಮಾಡಿಸಿದ್ರು, ಯೂಟ್ಯೂಬ್ನಲ್ಲಂತೂ ಎಷ್ಟೋ ಬಾರಿ ಮದುವೆ ಆಗಿ ಹೋಯ್ತು. ನಿಜವಾಗಿ ಈ ಬಾರಿಯಾದರೂ ಮದುವೆ ಆಗಲಪ್ಪಾ ಎಂದರು.
ಕೊನೆಗೂ ಆ್ಯಂಕರ್ ಅನುಶ್ರೀ ಬೆರಳಿಗೆ ಬಂತು ಉಂಗುರ! ಮದುವೆಗೆ ರೋಚಕ ಟ್ವಿಸ್ಟ್ ಕೊಟ್ಟ ನಟಿ...
ಆಗ ಪುಷ್ಪಾ ಅವರು ನಿನ್ನನ್ನ ಬಳಿ ಮಾತನಾಡಬೇಕು. ನನ್ನನ್ನು ಮನೆಗೆ ಕರಿಯಮ್ಮಾ ಎಂದರು. ಅದಕ್ಕೆ ಅನುಶ್ರೀ ಹೌದು. ನನಗೆ ಹುಡುಗ ನೋಡ್ತೀನಿ ಅಂತ ಹೇಳಿದ್ರಿ ಎಂದರು. ಆಗ ಪುಷ್ಪಾ ಅವರು ನಾನೊಬ್ಬಳೇ ಬಾಕಿ ಇದ್ದೆ ನೋಡಮ್ಮಾ. ಆದರೂ ನಿನ್ನ ಮದುವೆ ಮಾಡಿಸ್ತೇನೆ. ನಿನ್ನ ಮದುವೆಯಾದರಷ್ಟೇ ಮಳೆ ಬೆಳೆ ಚೆನ್ನಾಗಿ ಆಗೋದು ಅಂತ ಎಲ್ಲರೂ ಅದರ ಬಗ್ಗೆಯೇ ಮಾತನಾಡ್ತಾ ಇದ್ದಾರೆ ಎಂದರು. ಅದಕ್ಕೆ ಅನುಶ್ರೀ ಅವರು, ನೀವೇ ಮದುವೆ ಮಾಡಿಸಬೇಕು ಎಂದರು. ಆಗ ಯಶ್ ಅಮ್ಮ ಪುಷ್ಪಾ ಇಬ್ಬರ ಮದುವೆ ಮಾಡಿಸಿದ್ದೇನೆ. ನಿಮ್ಮ ಮದುವೆ ಮಾಡಿಸಲ್ವಾ, ಮಾಡಿಸ್ತೇನೆ ಎಂದು ಚಟಾಕಿ ಹಾರಿಸಿದರು. ಆಗ ಆ್ಯಂಕರ್ ಅನುಶ್ರೀ ಫುಲ್ ಖುಷ್ ಆದರು. ಮೂರನೆಯ ಮದ್ವೆ ನಂದೇ ಆಗಲಿ ಎನ್ನುತ್ತಲೇ ನಾಳೆಯೇ ಮನೆಗೆ ಬರುತ್ತೇನೆ ಎಂದರು. ಇದರ ವಿಡಿಯೋ ಅನ್ನು ಎಸ್ಎಸ್ಟಿವಿ ಯುಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಲಾಗಿದೆ.
ಇನ್ನು, ಕೊತ್ತಲವಾಡಿಯ ಮೂಲಕ ಯಶ್ ತಾಯಿ ಸ್ಯಾಂಡಲ್‌ವುಡ್ ನಿರ್ಮಾಪಕಿಯಾಗಿ ಎಂಟ್ರಿ ಕೊಡ್ತಿದ್ದಾರೆ. ನಟ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arun Kumar) ಅವರು ‘ಪಿಎ ಪ್ರೊಡಕ್ಷನ್ಸ್’ ಎಂಬ ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಯಶ್ ತಾಯಿ ಹೆಸರು ಪುಷ್ಪ, ತಂದೆ ಅರುಣ್ ಕುಮಾರ್ ಹೀಗಾಗಿ ನಿರ್ಮಾಣ ಸಂಸ್ಥೆಗೆ ‘ಪಿಎ ಪ್ರೊಡಕ್ಷನ್ಸ್’ ಎಂದು ಇಡಲಾಗಿದೆ. ಈ ಸಂಸ್ಥೆಯ ಮೂಲಕ ಈಗಾಗಲೇ ಸಿನಿಮಾ ಕೆಲಸ ಶುರುವಾಗಿದೆ. ಶ್ರೀರಾಜ್ ನಿರ್ದೇಶನದ ಈ ಚಿತ್ರದಲ್ಲಿ, ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದಾರೆ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ ಅವರೊಂದಿಗೆ ‘ಕೆಂಡಸಂಪಿಗೆ’ ಖ್ಯಾತಿಯ ಕಾವ್ಯ ಶೈವ, ಗೋಪಾಲ ಕೃಷ್ಣ ದೇಶಪಾಂಡೆ ಸೇರಿದಂತೆ ಅನೇಕರು ಇದ್ದಾರೆ. ಅದರ ಟೀಸರ್ ಇಂದು ಬಿಡುಗಡೆಯಾಯಿತು.
ಈ ವರ್ಷವೇ 'ಅನುಪತಿ' ಆಗಮನ ಎಂದ ಆ್ಯಂಕರ್ ಅನುಶ್ರೀ: ಭಾವಿ ಗಂಡನ ಬಗ್ಗೆ ನೇರಪ್ರಸಾರದಲ್ಲಿ ಮಾತು...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.