ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್ 2' ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾದು ಕುಳಿತಿದೆ. ಇದೀಗ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ (Sandalwood) ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್ 2' (KGF 2) ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾದು ಕುಳಿತಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ (Prashanth Neel) ಆಕ್ಷನ್ ಕಟ್ ಹೇಳಿದ್ದಾರೆ. ಮುಖ್ಯವಾಗಿ 'ಕೆಜಿಎಫ್' (KGF) ಮೊದಲ ಭಾಗ ಮಾಡಿದ ಅಬ್ಬರ ನಮ್ಮೆಲ್ಲರಿಗೂ ಗೊತ್ತಿದೆ. ಇದೀಗ ಭಾಗ 2ರ ಮೂಲಕ ಅದೇ ಅಬ್ಬರ ಮುಂದುವರಿಸೋಕೆ ರಾಕಿ ಭಾಯ್ ಸಜ್ಜಾಗಿದ್ದಾರೆ. ಇದೀಗ 'ಕೆಜಿಎಫ್ 2' ಕುರಿತು ಬಿಗ್ ಅಪ್ಡೇಟ್ ಸಿಕ್ಕಿದೆ. ಸಿನಿಮಾ ಟ್ರೇಲರ್ (Triler) ಬಗ್ಗೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿ (Social Media) ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಹೌದು! 'ಕೆಜಿಎಫ್ 2' ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಈ ಮಧ್ಯೆ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ. ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದ್ದು, ಮಾರ್ಚ್ 27ರಂದು 'ಕೆಜಿಎಫ್ 2' ಟ್ರೇಲರ್ ಲಾಂಚ್ ಆಗಲಿದೆ. ಈ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ಚಂಡಮಾರುತದ ಮೊದಲು ಯಾವಾಗಲೂ ಗುಡುಗು ಇರುತ್ತದೆ! 'ಕೆಜಿಎಫ್ ಚಾಪ್ಟರ್ 2' ಟ್ರೇಲರ್ ಮಾರ್ಚ್ 27 ರಂದು ಸಂಜೆ 6:40ಕ್ಕೆ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡು ಯಶ್ ರಾ ಲುಕ್‌ನಲ್ಲಿರುವ ಫೋಟೊವೊಂದನ್ನು ಪ್ರಶಾಂತ್ ನೀಲ್ ಹಂಚಿಕೊಂಡಿದ್ದಾರೆ.
KGF 2: ನಾನು ಮೊದಲು ಪ್ರೇಕ್ಷಕ, ಆಮೇಲೆ ನಟ ಅಂದ್ರು ರಾಕಿಬಾಯ್, ಏನೀ ಮಾತಿನ ಮರ್ಮ?
ಈ ಹಿಂದೆ ಹೊಂಬಾಳೆ ಫಿಲ್ಸ್ಮ್ 'ಕೆಜಿಎಫ್' ಅಭಿಮಾನಿಗಳಿಗೆ (Fans) ಟ್ವೀಟ್ಟರ್‌ನಲ್ಲಿ (Twitter) ಪ್ರಶ್ನೆಯೊಂದನ್ನು ಕೇಳಿತ್ತು. ನಿಮಗೆ 'ಕೆಜಿಎಫ್ ಚಾಪ್ಟರ್ 2' ರಲ್ಲಿ ಮೊದಲು ಏನನ್ನು ನೋಡಬೇಕು ಅಂದುಕೊಂಡಿದ್ದೀರಿ ಎಂದು ಪ್ರಶ್ನೆ ಕೇಳಿತ್ತು. ಈ ಪೈಕಿ ಆಯ್ಕೆಗಳನ್ನು ಕೂಡ ಹೊಂಬಾಳೆ ಫಿಲ್ಸ್ಮ್ ನೀಡಿತ್ತು. ಅದರಲ್ಲಿ ಹಾಡು, ಟ್ರೈಲರ್ ಮತ್ತು ಸರ್ಪ್ರೈಸ್ ಬೇಕಾ ಎಂದು ಕೇಳಲಾಗಿತ್ತು. ಇದರಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಭಿಮಾನಿಗಳು ಟ್ರೈಲರ್ ಬೇಕು ಎಂದು ಉತ್ತರಿಸಿದ್ದರು. ಹೀಗಾಗಿ 'ಕೆಜಿಎಫ್ 2' ಟ್ರೈಲರ್ ರಿಲೀಸ್ ಬಿಡುಗಡೆ ಮಾಡುವುದಾಗಿ ಇಂದು 'ಹೊಂಬಾಳೆ ಫಿಲ್ಸ್ಮ್' ಸಂಸ್ಥೆ ಟ್ವೀಟ್ಟರ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದೆ.
ಈ ಹಿಂದೆ ಯಶ್ ಅವರ ಹುಟ್ಟುಹಬ್ಬಕ್ಕೆ 'ಕೆಜಿಎಫ್ 2' ಚಿತ್ರದ ಹೊಸ ಪೋಸ್ಟರ್ವೊಂದು ರಿಲೀಸ್ ಆಗಿತ್ತು. 'ಡೇಂಜರ್ ಆಹೆಡ್' ಎಂಬ ಬರಹ ಬರೆದು ಪೋಸ್ಟರ್ ರಿಲೀಸ್ ಮಾಡಲಾಗಿತ್ತು. 'ಕೆಜಿಎಫ್ 2' ಕೆಲಸಗಳಲ್ಲಿ ಯಶ್ ಬ್ಯುಸಿಯಾಗಿದ್ದು, ಚಿತ್ರತಂಡ ಇತ್ತೀಚೆಗೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ (Sri Krishna Mutt) ಭೇಟಿಕೊಟ್ಟು ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು ಬಂದಿದ್ದರು. ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ಬಾಲಿವುಡ್ ನಡಿ ರವೀನಾ ಟಂಡನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರಿಂದ ಸ್ಫೂರ್ತಿ ಪಡೆದಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇದು ಇಂದಿರಾ ಗಾಂಧಿಯಿಂದ ಸ್ಫೂರ್ತಿ ಪಡೆದ ಪಾತ್ರವಲ್ಲ ಎನ್ನುವ ಸ್ಪಷ್ಟನೆ ರವೀನಾ ಕಡೆಯಿಂದ ಬಂದಿದೆ.
KGF Yash: ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್
ಇನ್ನು ರವಿ ಬಸ್ರೂರ್ ಸಂಗಿತ ಸಂಯೋಜನೆ 'ಕೆಜಿಎಫ್ 2' ಚಿತ್ರಕ್ಕಿದ್ದು, ಪ್ರಕಾಶ್ ರಾಜ್ (Prakash Raj), ಬಾಲಿವುಡ್ ನಟ ಸಂಜಯ್ ದತ್ (Sanjay Dutt), ತೆಲುಗು ನಟ ರಾವ್ ರಮೇಶ್ (Rao Ramesh) ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ. 'ಕೆಜಿಎಫ್ 2' ಸಿನಿಮಾ ಏಪ್ರಿಲ್ 14ಕ್ಕೆ ವಿಶ್ವದಾದ್ಯಾಂತ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು (Vijay Kiragandur) ನಿರ್ಮಿಸಿದ್ದಾರೆ.