‘ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ’ಕ್ಕೆ ರಿಷಬ್ ಶೆಟ್ಟಿ ನಿರ್ಮಾಣದ, ನಟೇಶ್ ಹೆಗ್ಡೆ ನಿರ್ದೇಶನದ ‘ಪೆದ್ರೋ’ ಸಿನಿಮಾ ಆಯ್ಕೆಯಾಗದ ಕಾರಣಕ್ಕೆ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ.
‘ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ’ಕ್ಕೆ (Bengaluru International Film Festival) ರಿಷಬ್ ಶೆಟ್ಟಿ (Rishab Shetty) ನಿರ್ಮಾಣದ, ನಟೇಶ್ ಹೆಗ್ಡೆ (Natesh Hegde) ನಿರ್ದೇಶನದ ‘ಪೆದ್ರೋ’ (Pedro) ಸಿನಿಮಾ ಆಯ್ಕೆಯಾಗದ ಕಾರಣಕ್ಕೆ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ‘ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ವಿಮರ್ಶಕರಿಂದ ಮೆಚ್ಚುಗೆ ಪಡೆದ ಪೆದ್ರೋ ಚಿತ್ರ ಬೆಂಗಳೂರು ಚಿತ್ರೋತ್ಸವಕ್ಕೆ ಯಾಕೋ ರುಚಿಸಿಲ್ಲ’ ಎಂದು ರಿಷಬ್ ಶೆಟ್ಟಿ ಪತ್ರದ (Letter) ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಿರ್ದೇಶಕ ನಟೇಶ್ ಹೆಗ್ಡೆಯವರು, ‘ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ (Sunil Puranik) ಅವರು ಪತ್ರಿಕಾ ಹೇಳಿಕೆಯೊಂದರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಂಶ ಚಿತ್ರದಲ್ಲಿದೆ ಎಂದು ಹೇಳಿದ್ದಾರೆ. ಅದನ್ನು ಓದಿ ನನಗೆ ಬಹಳ ಬೇಸರವಾಗಿದೆ ಎಂದು ಹೇಳಿದ್ದಾರೆ.
ಚಿತ್ರತಂಡದ ಆಕ್ಷೇಪಕ್ಕೆ ಸ್ಪಷ್ಟನೆ ಪಡೆಯಲು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರನ್ನು ಸಂಪರ್ಕಿಸಿದಾಗ ‘ಈ ವಿವಾದ ಅಗತ್ಯವಿರಲಿಲ್ಲ. ಮೊದಲನೆಯದಾಗಿ ನಾನು ಪೆದ್ರೋ ಸಿನಿಮಾ ನೋಡಿಲ್ಲ. ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಂಶವಿದೆ ಎಂಬ ಮಾತನ್ನು ನಾನು ಎಲ್ಲಿಯೂ ಹೇಳಿಲ್ಲ. ಚಿತ್ರೋತ್ಸವಕ್ಕೆ ಸಿನಿಮಾಗಳನ್ನು ಆಯ್ಕೆ ಮಾಡುವುದು ತೀರ್ಪುಗಾರರು. ಅವರಿಗೆ ಕೆಲವು ಗೈಡ್‌ಲೈನ್ಸ್ ಇರುತ್ತದೆ. ಸಿನಿಮಾ ಆಯ್ಕೆ ತೀರ್ಪುಗಾರರ ನಿರ್ಧಾರ. ಆದಾಗ್ಯೂ ಅವರ ತಂಡಕ್ಕೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಅದಕ್ಕೂ ಮೀರಿ ತೇಜೋವಧೆಗೆ ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಆಲೋಚನೆ ಮಾಡಬೇಕಾಗುತ್ತದೆ’ ಎಂದು ಹೇಳಿದರು.
BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ, ಮನೇಲಿ ಮೂವಿ ನೋಡ್ಬಹುದಾ?
ಇಂದಿನಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ: ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ಸಹಯೋಗದಲ್ಲಿ ನಡೆಯುತ್ತಿರುವ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಗುರುವಾರ ಪ್ರಾರಂಭವಾಗಲಿದೆ. ಮಾರ್ಚ್ 3ರಿಂದ ಮಾರ್ಚ್ 10ರವರೆಗೆ ನಡೆಯಲಿರುವ ಈ ಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮ ಗುರುವಾರ ಸಂಜೆ 4.30ಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಉದ್ಘಾಟನೆ ಮಾಡಲಿದ್ದಾರೆ.
ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Sitharaman) ಮತ್ತು ಕೌಶಲ್ಯಾಭಿವೃದ್ಧಿ, ಉಮ್ಯಮಶೀಲತೆ, ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಎಂ. ರಾಜೀವ್ ಚಂದ್ರಶೇಖರ್ (M Rajeev Chandrasekhar) ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ (Priyadarshan) ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಈ ಬಾರಿ ಚಲನಚಿತ್ರ ನಿರ್ಮಾಪಕರ ಸಂಘಗಳ ಅಂತರರಾಷ್ಟ್ರೀಯ ಒಕ್ಕೂಟದ ಮಾನ್ಯತೆ ದೊರಕಿದೆ. ಈ ಮಾನ್ಯತೆಯಿಂದಾಗಿ ಬೆಂಗಳೂರು ಚಿತ್ರೋತ್ಸವದ ಹಿರಿಮೆ ಹೆಚ್ಚಾಗಿದೆ. ರಾಜಾಜಿನಗರದ ಒರಾಯನ್ ಮಾಲ್, ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಫಿಲ್ಮ್ ಸೊಸೈಟಿ ಮತ್ತು ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಸಿನಿಮಾ ಪ್ರದರ್ಶನ ಇರುತ್ತದೆ.
Duniya Vijay ನಟನೆ, ನಿರ್ದೇಶನದ ಹೊಸ ಚಿತ್ರ 'ಭೀಮ'
ಈ ಸಲದ ಚಿತ್ರೋತ್ಸವದಲ್ಲಿ ಆರು ವಿಭಾಗಗಳಿರುತ್ತವೆ. 200 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ವಿಶ್ವ ಸಿನಿಮಾ, ಏಷಿಯನ್ ಸ್ವರ್ಧಾ ವಿಭಾಗ, ಭಾರತೀಯ ಸ್ವರ್ಧಾ ವಿಭಾಗ, ಕನ್ನಡ ಸ್ಪರ್ಧಾ ವಿಭಾಗ, ಜನಪ್ರಿಯ ಚಿತ್ರಗಳು ಹಾಗೂ ವಿಮರ್ಶಕರ ವಿಭಾಗಗಳಲ್ಲಿ ಪ್ರದರ್ಶನ ಇರುತ್ತದೆ. ಚಿತ್ರಗಳ ಪಟ್ಟಿಹಾಗೂ ಪ್ರದರ್ಶನದ ದಿನಾಂಕ ಮತ್ತು ವೇಳೆಗಾಗಿ ಚಿತ್ರೋತ್ಸವದ ವೆಬ್‌ಸೈಟ್ www.biffes.org ನೋಡಬಹುದು.