ಮಳೆಗಾಲ ಎಂ​ಜಾಯ್​ ಮಾಡ್ತಿರೋ ಯಶ್​-ರಾಧಿಕಾ: ವೈರಲ್​ ಫೋಟೋಗೆ ಫ್ಯಾನ್ಸ್​ ಫಿದಾ!

Published : Jun 25, 2023, 11:37 AM IST
ಮಳೆಗಾಲ ಎಂ​ಜಾಯ್​ ಮಾಡ್ತಿರೋ ಯಶ್​-ರಾಧಿಕಾ: ವೈರಲ್​ ಫೋಟೋಗೆ ಫ್ಯಾನ್ಸ್​ ಫಿದಾ!

ಸಾರಾಂಶ

ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್​ ಯಶ್​- ರಾಧಿಕಾ ಮಳೆಗಾಲವನ್ನು ಎಂಜಾಯ್​ ಮಾಡುತ್ತಿದ್ದು, ಈ ಬಗ್ಗೆ ರಾಧಿಕಾ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿದ್ದಾರೆ.  

ಸ್ಯಾಂಡಲ್​ವುಡ್​ನ ಕ್ಯೂಟ್​ ಜೋಡಿ ಯಾವುದು ಎಂದು ಕೇಳಿದರೆ ಅದರಲ್ಲಿ ಟಾಪ್​ ಸ್ಥಾನದಲ್ಲಿ ಕೇಳಿಬರುವ ಹೆಸರು ನಟರಾದ ರಾಕಿಂಗ್ ಸ್ಟಾರ್ ಯಶ್​ (Yash) ಮತ್ತು ರಾಧಿಕಾ ಪಂಡಿತ್​ (Radhika Pandit) ಅವರದ್ದು. 2012 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್  ನಿರ್ದೇಶನ  ಡ್ರಾಮಾ ಚಿತ್ರದಲ್ಲಿ  ಯಶ್   ರಾಧಿಕಾ ಪಂಡಿತ್ ನಟಿಸಿದ್ದರು. ಬಳಿಕ ಬಂದ ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿ ಸಿನಿಮಾದಲ್ಲಿಯೂ ಒಟ್ಟಾಗಿ ನಟಿಸಿದ್ದರು. ಬಳಿಕ ಸೆಟ್​ನಲ್ಲಿಯೇ ಲವ್​ ಆಗಿದೆ. 2016 ಡಿಸೆಂಬರ್‌  9ರಂದು ಗೋವಾದಲ್ಲಿ ಮದುವೆಯಾದ ಈ ಜೋಡಿ ಈಗ ಇಬ್ಬರು ಮುದ್ದಾದ ಮಕ್ಕಳ ಪಾಲಕರು.  ಐರಾ ಹಾಗೂ ಯಥರ್ವ್ ಎಂಬ ಮಕ್ಕಳ ಲಾಲನೆಯಲ್ಲಿ ರಾಧಿಕಾ ಬಿಜಿಯಾಗಿದ್ದಾರೆ. ಯಶ್ ಅವರನ್ನು ಮದುವೆಯಾದ ಬಳಿಕ  ರಾಧಿಕಾ  ಹಚ್ಚೇನು ಸಿನಿಮಾ ಮಾಡಿಲ್ಲ.  ಮನೆ, ಸಂಸಾರ ಎಂದು ಬಿಜಿಯಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕುಟುಂಬದ ಫೋಟೋ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಹೆಚ್ಚಾಗಿ ಅವರು  ಮಕ್ಕಳ ಜೊತೆಗಿನ ಫೋಟೋಗಳು  ಹಂಚಿಕೊಳ್ಳುತ್ತಾರೆ. ಪತಿ ಯಶ್​ ಮತ್ತು ಮಕ್ಕಳ ಜೊತೆ  ಆಗಾಗ್ಗೆ ಟೂರ್​ಗೆ ಹೋಗುತ್ತಾ ಅದರ ಫೋಟೋಗಳನ್ನೂ ಶೇರ್​ ಮಾಡಿಕೊಳ್ಳುತ್ತಾರೆ. 

ಇದೀಗ ಅವರು,   ಮಾನ್ಸೂನ್​ ಎಂಜಾಯ್ ಮಾಡುತ್ತಿದ್ದಾರೆ. ಈ ಬಗೆಗಿನ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.  ಯಶ್ ಹಾಗೂ ಮಕ್ಕಳ ಜೊತೆಗಿನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್  ಹಾಯ್​ ಮಾನ್ಸೂನ್​ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಇತ್ತೀಚಿಗಷ್ಟೇ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಮೈಸೂರಿನಲ್ಲಿ ಪ್ರವಾಸ ಕೈಗೊಂಡಿದ್ದರು. ಸಫಾರಿ ಮಾಡಿ ಎಂಜಾಯ್ ಮಾಡಿದ್ರು. ಅಷ್ಟೇ ಅಲ್ಲದೇ ನಂಜನಗೂಡಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.  ಆದರೆ ಈಗ ಶೇರ್​ ಮಾಡಿರುವ  ಫೋಟೋ ಎಲ್ಲಿ ತೆಗೆದಿರುವುದು ಎಂಬ ಬಗ್ಗೆ ಫೋಟೋದಲ್ಲಿ ಉಲ್ಲೇಖವಿಲ್ಲ. ಆದರೆ ಈ ಫೋಟೋದಲ್ಲಿ ಪತಿ ಯಶ್ ಹಾಗೂ ಮಕ್ಕಳ ಜೊತೆ ರಾಧಿಕಾ ಪ್ರಕೃತಿಯನ್ನು ಸವಿಯುತ್ತಾ ಇರುವುದನ್ನು ನೋಡಬಹುದು.  ನಾಲ್ವರೂ ನಿಂತಿರುವ ಫೋಟೋ ಇದಾಗಿದ್ದು,  ಮಳೆಗಾಲ ಒಂದು ರೀತಿ ಹಿತವೆನಿಸುತ್ತದೆ ಅಲ್ಲವೇ ಎಂದು ಬರೆದುಕೊಂಡಿದ್ದಾರೆ.

ಆದಿಪುರುಷ್​ ಪಾರ್ಟ್​-2! ರಾಮ, ಸೀತೆಯಾಗಿ ಮಿಂಚುತಿರೋ ಯಶ್​- ರಾಧಿಕಾ ಜೋಡಿ
  
ಮೊನ್ನೆ ತಾನೇ, ಈ ಯಶ್​-ರಾಧಿಕಾ ಸೀತೆ-ರಾಮನ ಪಾತ್ರದಲ್ಲಿ ವೈರಲ್​ ಆಗಿದ್ದರು. ಆದಿಪುರುಷ್​ನಲ್ಲಿ ಸೀತೆ-ರಾಮನ ಪಾತ್ರವನ್ನೇ ಹೋಲುವಂತೆ ಯಶ್​-ರಾಧಿಕಾರನ್ನು ಸೀತೆ-ರಾಮ ಪಾತ್ರವನ್ನಾಗಿ ಎಡಿಟ್​ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿದೆ. ಇಬ್ಬರೂ ಕಾವಿ ಧರಿಸಿ ರಾಮ ಸೀತೆಯಂತೆ ಕಾಣಿಸಿಕೊಂಡಿದ್ದಾರೆ. ಆದಿಪುರುಷ್​ ಗಲಾಟೆ ಏನೇ ಇದ್ದರೂ ಈ ಕ್ಯೂಟ್​ ಜೋಡಿಯನ್ನು ಮಾತ್ರ ಜನರು ಅದರಲ್ಲಿಯೂ ಯಶ್​-ರಾಧಿಕಾ (Yash-Radhika) ಫ್ಯಾನ್ಸ್​ ಸಕತ್​ ಇಷ್ಟಪಡುತ್ತಿದ್ದಾರೆ. ಆದಿಪುರುಷ್​ ಪಾರ್ಟ್​-2 ಎನ್ನುತ್ತಿದ್ದಾರೆ ನೆಟ್ಟಿಗರು. ಆದಿಪುರುಷ್​ ಪಾರ್ಟ್​ 1 (Adipurush) ಫ್ಲಾಪ್​ ಆದ್ರೂ ಪಾರ್ಟ್​-2 ಸಕತ್​ ಹಿಟ್​ ಆಗಲಿದೆ ಎನ್ನುತ್ತಿದ್ದಾರೆ. 

ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ, ಸದ್ಯ ರಾಧಿಕಾ ಸಿನಿ ರಂಗದಿಂದ ದೂರವಿದ್ದರೆ,  ಯಶ್​ ಅವರ ಮುಂದಿನ ಸಿನಿಮಾ ಕುರಿತು ಸಾಕಷ್ಟು ಕುತೂಹಲವಿದೆ. ಮೈಸೂರಿನ ನಂಜನಗೂಡು (Nanjangudu) ಶ್ರೀಕಂಠೇಶ್ವರನ ಸನ್ನಿಧಿಗೆ ಭೇಟಿ ನೀಡಿದ್ದ ಯಶ್​, ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತಾಡಿದ್ದರು. ಶೀಘ್ರದಲ್ಲೇ ಹೊಸ ಚಿತ್ರದ  ಘೋಷಣೆ ಮಾಡುವುದಾಗಿ ಯಶ್​ ಹೇಳಿದ್ದರಿಂದ ಫ್ಯಾನ್ಸ್​ ಕಾತರರಾಗಿದ್ದಾರೆ. ಇವರು  ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ನಂತರ  ರಾಮಾಯಣ ಸಿನಿಮಾದಲ್ಲಿ ರಾವಣನಾಗುತ್ತಾರೆ ಎನ್ನೋ ಮಾತೂ ಇದ್ದು, ಸದ್ಯ ಅವರ ನಡೆ ಸೀಕ್ರೇಟ್​ ಆಗಿ ಉಳಿದಿದೆ. ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುವವರಿಗೆ ಉತ್ತರವಾಗಿ ಈ ರಾಕಿಂಗ್ ಸ್ಟಾರ್​,  ಜನರು ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಉಚಿತವಾಗಿ ಸಿನಿಮಾ ನೋಡುವುದಿಲ್ಲ. ನಾವು ಅವರು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವಂತೆ ಸಿನಿಮಾ (Cinema) ಮಾಡಬೇಕು ಎಂದು ಹೇಳುವ ಮೂಲಕ ಭರ್ಜರಿ ಚಿತ್ರವನ್ನು ಕೊಡಲಿದ್ದಾರೆ ಎಂದು ಹಿಂಟ್​ ಕೊಟ್ಟಿದ್ದಾರೆ.


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!