ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ 2ನೇ ಸಿನಿಮಾ ಕೆಜಿಎಫ್‌ 2!

Published : May 06, 2022, 09:02 AM IST
ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ 2ನೇ ಸಿನಿಮಾ ಕೆಜಿಎಫ್‌ 2!

ಸಾರಾಂಶ

ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡುತ್ತಿದೆ ಯಶ್, ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ. ಮೊದಲ ಸ್ಥಾನದಲ್ಲಿ ಬಾಹುಬಲಿ, ಎರಡನೇ ಸ್ಥಾನದಲ್ಲಿ ಕೆಜಿಎಫ್ 2, ಮೂರನೇ ಸ್ಥಾನದಲ್ಲಿ ದಂಗಲ್.

ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಸಾಲಿನಲ್ಲಿ ‘ಕೆಜಿಎಫ್‌ 2’ ಎರಡನೇ ಸ್ಥಾನಕ್ಕೆ ಏರಿದೆ. ಅಮೀರ್‌ಖಾನ್‌ ನಟನೆಯ ‘ದಂಗಲ್‌’ ಚಿತ್ರವನ್ನು ಹಿಂದಿಕ್ಕಿರುವ ಕೆಜಿಎಫ್‌ 2 ಹಿಂದಿ ವರ್ಶನ್‌ ಒಂದರಲ್ಲೇ 21 ದಿನಕ್ಕೆ 391.65 ಕೋಟಿ ರು. ಗಳಿಕೆ ಮಾಡಿದೆ. ಮೊದಲನೇ ಸ್ಥಾನದಲ್ಲಿ ‘ಬಾಹುಬಲಿ 2’ ಇದೆ. ಇದು ಹಿಂದಿಯಲ್ಲಿ 510 ಕೋಟಿ ರು. ಗಳಿಕೆ ಮಾಡಿತ್ತು.

ವಿಶ್ವಾದ್ಯಂತ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ‘ದಂಗಲ್‌’ನಲ್ಲಿದೆ. ಈ ಚಿತ್ರ ಒಟ್ಟಾರೆ 2100 ಕೋಟಿ ರೂ. ಗಳಿಕೆ ಮಾಡಿತ್ತು. ‘ಕೆಜಿಎಫ್‌ 2’ ಈಗಾಗಲೇ ವಿಶ್ವಾದ್ಯಂತ 20 ದಿನಕ್ಕೆ ಒಟ್ಟು 1050 ಕೋಟಿ ರು. ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ.

ಓಟಿಟಿ ಹಕ್ಕಿಗೆ ರು.320 ಕೋಟಿ:

ಕೆಜಿಎಫ್‌ 2 ಚಿತ್ರದ ಐದು ಭಾಷೆಯ ಡಿಜಿಟಲ್‌ ಹಕ್ಕುಗಳನ್ನು ಅಮೆಜಾನ್‌ ಪ್ರೈಮ್‌ ಪಡೆದುಕೊಂಡಿದೆ. ಮೂಲಗಳ ಪ್ರಕಾರ ಓಟಿಟಿ ಹಕ್ಕಿಗೆ 320 ಕೋಟಿ ರು. ಪಾವತಿಯಾಗಿದೆ ಎನ್ನಲಾಗಿದೆ. ಮೇ 27ರಿಂದ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ಪ್ರಸಾರವಾಗುವ ಸಾಧ್ಯತೆ ಇದೆ.

KGF 2 ಗೆಲುವಿನ ರಹಸ್ಯ ಮೇಕಿಂಗ್‌ನಲ್ಲಿ ರಿವೀಲ್!

ಒಟ್ಟಾರೆ ಪ್ರಶಾಂತ್‌ ನೀಲ್‌ ನಿರ್ದೇಶನದ, ಯಶ್‌ ನಟನೆಯ, ವಿಜಯ್‌ ಕಿರಗಂದೂರು ನಿರ್ಮಾಣದ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

ಹಿಂದಿ ಕಲೆಕ್ಷನ್ ವಿವರ

ಕೆಜಿಎಫ್-2 ಹಿಂದಿಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. 16 ದಿನಗಳಲ್ಲಿ ಕೆಜಿಎಫ್-2 ಬರೋಬ್ಬರಿ 353 ಕೋಟಿ ರೂಪಾಯಿ ಲೆಕ್ಷನ್ ಮಾಡಿದೆ. ಅಜಯ್ ದೇವಗನ್ ರನ್ ವೇ 34 ಮತ್ತು ಹೀರೋಪಂಕ್ತಿ ಸಿನಿಮಾಗಳ ನಡುವೆಯೂ ಕೆಜಿಎಫ್-2 ಉತ್ತಮ ಕಲೆಕ್ಷನ್ ಮಾಡಿದೆ. ಏಪ್ರಿಲ್ 29 ಶುಕ್ರವಾರವೂ ಸಹ ಕೆಜಿಎಫ್-24.25 ಕೋಟಿ ರೂ. ಕಲೆಕ್ಷನ್ ಮಾಡಿದೆ. ಅಂದಹಾಗೆ ಹಿಂದಿಯಲ್ಲಿ ಕೆಜಿಎಫ್-2 ಬಿಡುಗಡೆಯಾಗಿ 2ನೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿತ್ತು. ಹಿಂದಿ ಕಲೆಕ್ಷನ್ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಶಾಂತ್‌ ನೀಲ್‌ ಚಿತ್ರರಂಗದ ವೀರಪ್ಪನ್, 100 ಕೋಟಿ ನಷ್ಟವಾಗಿದೆ: ನಿರ್ದೆಶಕ RGV ಗರಂ

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ, ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಪ್ರೇಕ್ಷಕರ ಮನಸೆಳೆದಿದೆ. ಸಿನಿಮಾ ಬಿಡುಗಡೆಯಾಗಿ 16 ದಿನಗಳಾಗಿದ್ದರೂ ಸಹ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.

ಯಶ್ ಮಾತು:

'ಕೆಜಿಎಫ್ ಚಾಪ್ಟರ್ 3 ಚಿತ್ರಕ್ಕೆ ಪ್ರಶಾಂತ್ ನೀಲ್ (Prashanth Neel) ಮತ್ತು ನಾನು ಆಗಲೇ ದೃಶ್ಯಗಳ ಪ್ಲ್ಯಾನಿಂಗ್ ಮಾಡಿದ್ದೀನಿ. ಚಾಪ್ಟರ್ 2ರಲ್ಲಿ ತುಂಬಾ ವಿಚಾರಗಳನ್ನು ತೋರಿಸಲು ಅಗಲಿಲ್ಲ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ kiss ass ದೃಶ್ಯಗಳು ರೆಡಿಯಾಗಿದೆ. ಇದು ನಮಗೆ ಇರುವ ಐಡಿಯಾ ಅಷ್ಟೆ. ಈ ವಿಚಾರವನ್ನು ಸದ್ಯಕ್ಕೆ ಇಲ್ಲಿಗೆ ಬಿಟ್ಟಿದ್ದೀವಿ ಮುಂದಕ್ಕೆ ಯೋಚನೆ ಮಾಡಿಲ್ಲ' ಎಂದು ಯಶ್ ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep