ಪ್ರಶಾಂತ್‌ ನೀಲ್‌ ಚಿತ್ರರಂಗದ ವೀರಪ್ಪನ್, 100 ಕೋಟಿ ನಷ್ಟವಾಗಿದೆ: ನಿರ್ದೆಶಕ RGV ಗರಂ

Published : May 05, 2022, 12:51 PM IST
ಪ್ರಶಾಂತ್‌ ನೀಲ್‌ ಚಿತ್ರರಂಗದ ವೀರಪ್ಪನ್, 100 ಕೋಟಿ ನಷ್ಟವಾಗಿದೆ: ನಿರ್ದೆಶಕ RGV ಗರಂ

ಸಾರಾಂಶ

ಇಡೀ ಭಾರತೀಯ ಚಿತ್ರರಂಗವೇ ನೀಲ್‌ನ ಹೊಗಳುತ್ತೀರುವಾಗ ಆರ್‌ಜಿವಿ ಮಾಡಿದ ಟ್ವೀಟ್ ಸಖತ್ ವೈರಲ್ ಆಗುತ್ತಿದೆ....

ಉಗ್ರಂ (Ugram) ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಶಾಂತ್ ನೀಲ್ (Prashanth Neel), ಕೆಜಿಎಫ್ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ಗೆದಿದ್ದಾರೆ. ವಿಶ್ವಾದ್ಯಂತ ಕೆಜಿಎಫ್ (KGF), ಯಶ್ (Yash) ಮತ್ತು ನೀಲ್‌ ಅವರದ್ದೇ ಜಪಾ. ನೂರಾರೂ ಕೋಟಿಯಲ್ಲಿ ಕಲೆಕ್ಷನ್ ಮಾಡಿರುವ ಸಿನಿಮಾ ಮಾಡಲು ಅಷ್ಟೇ ಕೋಟಿಯಲ್ಲಿ ಹಣ ಖರ್ಚು ಮಾಡಲಾಗಿದೆ. ನೀಲ್ ಶ್ರಮವನ್ನು ಹಾಡಿ ಹೊಗಳುತ್ತಿರುವಾಗ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮ (Ram gopa varma) ಶಾಕಿಂಗ್ ಟ್ವೀಟ್ ಮಾಡಿದ್ದಾರೆ. 

ಸಿನಿಮಾಗಿಂತ ಕಾಂಟ್ರವರ್ಸಿಯಲ್ಲಿ ಹೆಚ್ಚು ಹೆಸರು ಮಾಡುವ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ತಮ್ಮ ಟ್ವಿಟರ್‌ ಖಾತೆನ ತುಂಬಾ ಸುಲಭ ಮಾಡಿಕೊಂಡಿದ್ದಾರೆ. ಸಿನಿಮಾ ಪ್ರಚಾರ ಮಾತ್ರವಲ್ಲ ಒಬ್ಬರ ಕಾಲೆಳೆಯುವುದು ಹೊಗಳುವುದು ಎಲ್ಲವೂ ಮಾಡುತ್ತಾರೆ ಹೀಗಾಗಿ ಅವರ ಪ್ರತಿಯೊಂದು ಟ್ವೀಟ್‌ ಬ್ರೇಕಿಂಗ್ ನ್ಯೂಸ್ ಆಗಿರುತ್ತದೆ. ಕೆಜಿಎಫ್ ಸಿನಿಮಾ ನೋಡಿ ಮೆಚ್ಚಿಕೊಂಡ ಆರ್‌ಜಿವಿ ಈಗ ಮಾಡಿರುವ ಟ್ವೀಟ್‌ ನೆಟ್ಟಿಗರಿಗೆ ಕನ್ಫ್ಯೂಸ್ ಮಾಡಿದೆ. 

ಆರ್‌ಜಿವಿ ಟ್ವೀಟ್:

'ಪ್ರಶಾಂತ್‌ ನೀಲ್‌ ಸರ್‌, ನೀವು ಕ್ವಿಂಟಾಲ್‌ಗಟ್ಟಲೇ ಹಣ ಗಳಿಸಿದ್ದೀರಿ. ಆದರೆ ಭಾರತದ ಉಳಿದ ಚಿತ್ರರಂಗ ಟನ್‌ಗಟ್ಟಲೆ ದುಡ್ಡನ್ನು ಮರು ಚಿತ್ರೀಕರಣಕ್ಕೆ, ಮರು ನಿರ್ಮಾಣಕ್ಕೆ, ಮರು ಚಿಂತನೆಗೆ ಮತ್ತು ಅಸ್ತಿತ್ವ ಮರಳಿ ಕಂಡುಕೊಳ್ಳುವ ಹಪಹಪಿಯಲ್ಲಿ ಕಳೆದುಕೊಳ್ಳುತ್ತಿದೆ. ಆದರೆ ಕೆಜಿಎಫ್‌ 2 ಚಿತ್ರ ಹೇಗೆ ಗೆಲ್ತು ಅನ್ನೋದು ಮಾತ್ರ ವಿಪರ್ಯಾಸವಾಗಿ ಉಳಿದಿದೆ' ಎಂದು ಟ್ವೀಟ್ ಮಾಡಿದ್ದಾರೆ.

 

ಮೇ 4ರಂದು ವಿಶ್ವ ನಿರ್ದೇಶಕರ ದಿನ ಇದ್ದ ಪ್ರಯುಕ್ತ ಪ್ರತಿಯೊಬ್ಬರು ನಮ್ಮ ನೆಚ್ಚಿನ ನಿರ್ದೇಶಕರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದರ ಪ್ರಯುಕ್ತ ಆರ್‌ಜಿವಿ, ಪ್ರಶಾಂತ್ ನೀಲ್‌ ಬಗ್ಗೆ ಟ್ವೀಟ್ ಮಾಡಿದ್ದಾರೆ. 

ಯಾರಿಗೂ ಭಯ ಪಡದೆ ಇರುವ ಒಬ್ಬರೇ ನಿರ್ದೇಶಕ ಅಂದ್ರೆ RGV; ಉಪೇಂದ್ರ

'ನಿರ್ದೇಶಕ ಪ್ರಶಾಂತ್ ನೀಲ್ ಅವರು ಬಾಲಿವುಡ್‌ (Bollywood), ಸ್ಯಾಂಡಲ್‌ವುಡ್‌ (Sandalwood), ಕಾಲಿವುಡ್‌, ಟಾಲಿವುಡ್‌ನ ಎಲ್ಲಾ ನಿರ್ದೇಶಕರ ತಲೆ ಕೆಡಿಸಿದ್ದಾರೆ. ಹೀಗಾಗಿ ಆ ಎಲ್ಲಾ ನಿರ್ದೇಶಕರಿಗೂ ನಾನು ಅನ್‌ಹ್ಯಾಪಿ ಡೈರೆಕ್ಟರ್ಸ್‌ ಡೇ (Unhappy directors Day) ಅಂತ ವಿಶ್ ಮಾಡುತ್ತೀನಿ. ಪ್ರಶಾಂತ್ ನೀಲ್ ಅವರೇ ನೀವು ಭಾರತೀಯ ಚಿತ್ರರಂಗದ ವೀರಪ್ಪನ್' ಎಂದು ವರ್ಮಾ ಹೇಳಿದ್ದಾರೆ. 

 

'95% ಸಂಪ್ರದಾಯ ಆಧಾರಿತ ಸಾಂಪ್ರದಾಯಿಕ ಚಲನಚಿತ್ರೋದ್ಯಮದ ಜನರು ಕೆಜಿಎಫ್ 2 ಅನ್ನು ದ್ವೇಷಿಸಿದ್ದಾರೆ. ಇದೊಂದು ಕಾರಣ ಸಾಕು ನೀಲ್ ಚಿತ್ರರಂಗದಲ್ಲಿ ಗೆದಿದ್ದಾರೆ ಎಂದು ಹೇಳುವುದಕ್ಕೆ. ಒಳೆ ಇಂಡಸ್ಟ್ರಿನ ದೂರ ಮಾಡಿ ಹೊಸ ಇಂಡಸ್ಟ್ರಿನ ತಂದಿದ್ದಾರೆ. ಅದೇ ಕೆಜಿಎಫ್‌ ಚಾಪ್ಟರ್ 2 ಇಂಡಸ್ಟ್ರಿ' ಎಂದಿದ್ದಾರೆ ಆರ್‌ಜಿವಿ. 

ಹಿಂದಿಯವರಿಗೆ ಕನ್ನಡದ ಬಗ್ಗೆ ಗೊತ್ತಿರಲಿಲ್ಲ, ಇಂದು ವಿಶ್ವವೇ ಮಾತಾಡುತ್ತಿದೆ- RGV

ಆರ್‌ಜಿವಿ ಟ್ವೀಟ್ ನೋಡಿದ ತಕ್ಷಣ ಇದೇನಪ್ಪ ಎಲ್ಲರು ಕೂಲ್ ಆಗಿರುವಾಗ ಜಗಳ ಶುರು ಮಾಡಿದ್ದಾರೆ ಅಂದುಕೊಳ್ಳಬೇಡಿ. ಇದು ಆರ್‌ಜಿವಿ ಸ್ಟೈಲ್‌ನಲ್ಲಿ ನಿರ್ದೇಶಕರನ್ನು ಹೊಗಳುವ ಕೆಲಸ. ಆರ್‌ಜಿವಿ ಇರೋದೆ ಹೀಗೆ ಬಳಸುವ ಪದಗಳು ಕೊಂಚ ಶಾಕಿಂಗ್ ಆಗಿರಬಹುದು, ಕೆಲವೊಮ್ಮೆ ಬೀಪ್ ಇರಬಹುದು ಆದರೆ ನೇರ ನೇರ ಮಾತುಗಳು ಆಗಿರುತ್ತದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!