ಯಶ್ ಟೈಮ್ಸ್ ಹೆಸರಿನಲ್ಲಿ ಅಭಿಮಾನಿಗಳಿಂದ 8 ದಿನಗಳ ಸಂಭ್ರಮಾಚಾರಣೆ. ಈಗಲ್ಲೂ ರಾಮಚಾರ ಎವರ್‌ಗ್ರೀನ್ ಸಿನಿಮಾ....
ನಟ ಯಶ್ ಅವರಿಗೆ ‘ಕೆಜಿಎಫ್’ ಚಿತ್ರಕ್ಕೂ ಮೊದಲು ಯಶಸ್ಸು ಕೊಟ್ಟಚಿತ್ರಗಳ ಪೈಕಿ ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ ಚಿತ್ರಕ್ಕೆ ಈಗ ಎಂಟು ವರ್ಷಗಳ ಸಂಭ್ರಮ. ಸಂತೋಷ್ ಆನಂದ್ ರಾಮ್ ನಿರ್ದೇಶಿಸಿ, ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದ ಈ ಚಿತ್ರ 2014ರಲ್ಲಿ ಡಿಸೆಂಬರ್ 25ರಂದು ತೆರೆಕಂಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಆಗಲೇ ಚಿತ್ರವನ್ನು ನಿರ್ದೇಶಕ ರಾಜಮೌಳಿ ಅವರು ಕೂಡ ನೋಡಿ ಮೆಚ್ಚಿಕೊಂಡಿದ್ದರು. ಈಗ ಯಶ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಎಂಟು ವರ್ಷಗಳ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಕಿಭಾಯ್ ಅಭಿಮಾನಿಗಳು ಜನವರಿ 1ರಿಂದ 8ರವರೆಗೂ ‘ಯಶ್ ಟೈಮ್ಸ್’ ಹೆಸರಿನಲ್ಲಿ ‘ರಾಮಾಚಾರಿ’ ಚಿತ್ರದ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಜ.8ಕ್ಕೆ ಯಶ್ ಅವರ ಹುಟ್ಟು ಹಬ್ಬ. ಜತೆಗೆ ನಟ ಯಶ್ ಅವರು ಚಿತ್ರರಂಗಕ್ಕೆ ಬಂದು 37 ವರ್ಷಗಳಾಗುತ್ತಿವೆ. ಈ ಎಲ್ಲದಕ್ಕೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ವಿಶೇಷವಾದ ಗೌರವ ಸೂಚಿಸಲು ನಿರ್ಧರಿಸಿದ್ದಾರೆ.
ಸಂತೋಷ್ ಆನಂದ್‌ರಾಮ್ ಟ್ವೀಟ್
ನಮ್ಮ ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ ಚಿತ್ರಕ್ಕೆ ಎಂಟು ವರ್ಷಗಳ ಸಂಭ್ರಮ. ನನ್ನ ಪ್ರತಿಭೆಯನ್ನು ಗುರುತಿಸಿ ಅವಕಾಶ ಕೊಟ್ಟು ಬೆನ್ನುತಟ್ಟಿದ ಯಶ್ ಅವರಿಗೆ ಸದಾ ಕೃತಜ್ಞನಾಗಿರುತ್ತೇನೆ. ನನ್ನ ಚಿತ್ರತಂಡಕ್ಕೆ ಹಾಗೂ ಚಿತ್ರದ ನಾಯಕಿ ರಾಧಿಕಾ ಪಂಡಿತ್ ಅವರಿಗೆ ನನ್ನ ಧನ್ಯವಾದ. ಈ ಚಿತ್ರಕ್ಕೆ ಆಶೀರ್ವದಿಸಿದ ಸಾಹಸ ಸಿಂಹ ವಿಷ್ಣುದಾದಾ ಅವರಿಗೆ ಹಾಗೂ ಈ ಚಿತ್ರವನ್ನು ಇತಿಹಾಸ ಪುಟ ಸೇರಿಸಿದ ಕನ್ನಡಿಗರಿಗೆ ಧನ್ಯವಾದ.
Yash; 4 ವರ್ಷದ ಸಂಭ್ರಮದಲ್ಲಿ KGF: Chapter 1; ವಿಶೇಷ ದಿನ ನೆನೆದು ಹೊಂಬಾಳೆ ಫಿಲ್ಮ್ಸ್ ಹೇಳಿದ್ದೇನು?
ಈ ಗೆಲುವಿನ ಕ್ರೆಡಿಟ್ಟು ಯಶ್‌ಗೆ ಸೇರಬೇಕು: ಜಯಣ್ಣ
ತಮ್ಮ ನಿರ್ಮಾಣದ ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ ಚಿತ್ರದ 8 ವರ್ಷಗಳ ಸಂಭ್ರಮವನ್ನು ನಿರ್ಮಾಪಕ ಜಯಣ್ಣ ನೆನಪಿಸಿಕೊಂಡಿದ್ದಾರೆ. ‘ಒಳ್ಳೆಯ ಚಿತ್ರವನ್ನು ಕೊಟ್ಟಹೆಮ್ಮೆ ನಮ್ಮ ಸಂಸ್ಥೆಗೆ ಇದೆ. ಬಾಕ್ಸ್ ಅಫೀಸ್‌ನ ಎಲ್ಲ ದಾಖಲೆಗಳನ್ನು ಮೀರಿ ಗೆದ್ದ ಸಿನಿಮಾ ಇದು. ಈ ಯಶಸ್ಸು ನಟ ಯಶ್ ಅವರಿಗೆ ಸೇರಬೇಕು. ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರಿಗೆ ಮೊದಲ ನಿರ್ದೇಶನದ ಚಿತ್ರವಾಗಿತ್ತು. ಯಶ್ ಅವರೇ ನಿರ್ದೇಶಕರನ್ನು ಕರೆದು ಒಳ್ಳೆಯ ಕತೆ ಮಾಡಿಸಿ, ಎಲ್ಲ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಲಾಭದ ಲೆಕ್ಕಾಚಾರ ನೋಡಿದರೆ ‘ಕೆಜಿಎಫ್’ ಸಿನಿಮಾ ಬರುವವರೆಗೂ ‘ರಾಮಾಚಾರಿ’ ಚಿತ್ರವೇ ಗಳಿಕೆಯಲ್ಲಿ ನಂಬರ್ ವನ್ ಸ್ಥಾನದಲ್ಲಿತ್ತು’ ಎನ್ನುತ್ತಾರೆ ಜಯಣ್ಣ.
Yash: ರಾಕಿಂಗ್ ಸ್ಟಾರ್ ಯಶ್ ಜೊತೆ ಫೋಟೋ ಪಡೆದು ದಿಲ್ ಖುಷ್ ಆದ ಫ್ಯಾನ್ಸ್..
ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿರುವ ಯಶ್ ಮತ್ತು ರಾಧಿಕಾ ಮಾತ್ರವಲ್ಲ ಸ್ನೇಹಿತರಾಗಿ ಕಾಣಿಸಿಕೊಂಡ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ಕಸ್ತೂರಿ ಮತ್ತು ಸುವರ್ಣ ಪಾತ್ರದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರು. ಅಚ್ಯುತ್ ಕುಮಾರ್, ಮಾಳವಿಕಾ ಅವೀನಾಶ್, ವಿಶಾಲ್ ಹೆಗಡೆ, ಅಶೋಕ್ ಶರ್ಮಾ, ಕಾವ್ಯಾ ಶಾ, ರವಿ ಭಟ್, ಹೊನ್ನವಳ್ಳಿ ಕೃಷ್ಣ, ರಾಕ್‌ಲೈನ್ ಸುಧಾಕರ್, ಸಾಧು ಕೋಕಿಲಾ ಮತ್ತು ಮೈಸೂರು ನಾಯ್ಡು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.