ಯಶ್ ಮುಂದಿನ ಸಿನೇಮಾ ಬಗೆಗಿನ ಕುತೂಹಲಕ್ಕೆ ಇಲ್ಲಿದೆ ಉತ್ತರ?

Suvarna News   | stockphoto
Published : Jun 17, 2021, 12:56 PM ISTUpdated : Jun 17, 2021, 01:04 PM IST
ಯಶ್ ಮುಂದಿನ ಸಿನೇಮಾ ಬಗೆಗಿನ ಕುತೂಹಲಕ್ಕೆ ಇಲ್ಲಿದೆ ಉತ್ತರ?

ಸಾರಾಂಶ

ನರ್ತನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಯಶ್ ನೌಕಾಸೇನೆ ಅಧಿಕಾರಿಯ ಪಾತ್ರ  ಪರಮ ಕೋಪಿಷ್ಠ ವ್ಯಕ್ತಿಯೊಬ್ಬ ಅಧಿಕಾರಿಯಾದರೆ ಏನಾಗುತ್ತದೆ ಎಂಬುದು ಚಿತ್ರದ ಕತೆ  ನಿರ್ದೇಶಕ ನರ್ತನ್ ಅಥವಾ ಯಶ್ ಅವರು ಅಧಿಕೃತವಾಗಿ ಯಾವುದೇ ಹೇಳಿಕೆ

ನರ್ತನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಯಶ್ ನೌಕಾಸೇನೆ ಅಧಿಕಾರಿಯ ಪಾತ್ರ ವಹಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪರಮ ಕೋಪಿಷ್ಠ ವ್ಯಕ್ತಿಯೊಬ್ಬ ಅಧಿಕಾರಿಯಾದರೆ ಏನಾಗುತ್ತದೆ ಎಂಬುದು ಚಿತ್ರದ ಕತೆ ಎನ್ನಲಾಗುತ್ತಿದೆ. ಈ ಬಗ್ಗೆ ನಿರ್ದೇಶಕ ನರ್ತನ್ ಅಥವಾ ಯಶ್ ಅವರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ನುಡಿದಂತೆ ನಡೆದ ಯಶ್; ಕಲಾವಿದರ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ! ...

ಯಶ್ ಅವರು ‘ಕೆಜಿಎಫ್’ ನಂತರ ಯಶ್ ಯಾವ ಸಿನಿಮಾ ಮಾಡಲಿದ್ದಾರೆ ಎನ್ನುವ ಕುತೂಹಲ ಹಾಗೂ ನಿರೀಕ್ಷೆ ಎಲ್ಲರಲ್ಲೂ ಇದೆ. ಹೀಗಾಗಿಯೇ ಸಾಕಷ್ಟು ಯೋಚನೆ ಮಾಡಿಯೇ ಕತೆ ಹಾಗೂ ಪಾತ್ರವನ್ನು ಆಯ್ಕೆ ಮಾಡಿಕೊಳ್ಳತ್ತಿರುವ ಯಶ್ ಅವರ ಮುಂದೆ ನೇವಿ ಅಧಿಕಾರಿ ಬಂದು ಕೂತಿದ್ದಾರೆ. ಅರ್ಥಾತ್, ಈ ಪಾತ್ರ ಯಶ್ ಅವರನ್ನು ಆವರಿಸಿಕೊಳ್ಳಲಿದೆ ಎಂಬುದು ಸದ್ಯದ ಮಾತು.

ದಕ್ಷಿಣ ಭಾರತದಲ್ಲಿ ಕ್ರೇಜ್‌ ಕಾ ಬಾಪ್ ರಾಕಿಂಗ್ ಸ್ಟಾರ್ ಯಶ್!

ಆಂಗ್ರಿ ಯಂಗ್‌ಮ್ಯಾನ್ ಮತ್ತು ಅತ್ಯುನ್ನತ ಹುದ್ದೆ ಈ ಎರಡನ್ನೂ ಕಾಂಬಿನೇಷನ್ ಮಾಡಿಕೊಂಡು ನರ್ತನ್ ಸಿನಿಮಾ ಮಾಡುತ್ತಿದ್ದಾರೆ ಎಂದು ರಾಕಿಂಗ್ ಸ್ಟಾರ್ ವಲಯದಲ್ಲಿ ಎದ್ದಿರುವ ಸುದ್ದಿ. ಒಂದು ವೇಳೆ ಅಂದುಕೊಂಡಿದ್ದು ನಿಜ ಆದರೆ, ದೊಡ್ಡ ಮಟ್ಟದಲ್ಲಿ ಅದ್ದೂರಿ ಮೇಕಿಂಗ್ ಸಿನಿಮಾ ಇದಾಗುವ ಜತೆಗೆ ಸ್ಯಾಂಡಲ್‌ವುಡ್‌ನ ತೆರೆ ಮೇಲೂ ನೇವಿ ಅಽಕಾರಿ ರಾರಾಜಿಸಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್
ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನವೇ ದರ್ಶನ್‌ಗೆ ಗುಡ್ ನ್ಯೂಸ್; ಅಭಿಮಾನಿಗಳೂ ಫುಲ್ ಖುಷ್!