
ಕನ್ನಡ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಮೂರು ವರ್ಷದ ಮುದ್ದು ಮಗಳು ಅಶ್ಮಿತಾ ಜೊತೆ ಲಾಕ್‌ಡೌನ್ ಸಮಯ ಕಳೆಯುತ್ತಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ತಮ್ಮ ಮುಂದಿನ ಚಿತ್ರ 'ಹೋಪ್' ಚಿತ್ರೀಕರಣ ಮುಗಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾ ಮೂಲಕ ಫಿಟ್ನೆಸ್, ಪೇರೆಂಟಿಂಗ್ ಹಾಗೂ ಕೆಲಸದ ಬಗ್ಗೆ ಅಪ್ಡೇಟ್ ನೀಡುತ್ತಿರುತ್ತಾರೆ.
ಕೈಯಲ್ಲಿ ಬೇವು ಹಿಡಿದು ಬೆಲ್ಲಿ ಡ್ಯಾನ್ಸ್ ಮಾಡಿದ ನಟಿ ಶ್ವೇತಾ ಕಾಲೆಳೆದ ನೆಟ್ಟಿಗರು?
ಶ್ವೇತಾ ಪುತ್ರಿ ಅಶ್ಮಿತಾ ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷ 50 ಸಾವಿರ ಫಾಲೋವರ್ಸ್ ಹೊಂದಿದ್ದು, ಅನೇಕ ಖಾಸಗಿ ಕಾರ್ಯಕ್ರಮಗಳಿಗೆ ತಾಯಿ ಜೊತೆ ಗೆಸ್ಟ್ ಆಗಿಯೂ ಭಾಗಿಯಾಗಿದ್ದಾರೆ. ಈ ಲಾಕ್‌ಡೌನ್‌ನಲ್ಲಿ ಲಿಟಲ್ ಸ್ಟಾರ್ ಕಿಡ್ ಏನು ಮಾಡುತ್ತಾಳೆ, ದಿನಚರಿ ಹೇಗಿರುತ್ತದೆ ಎಂದು ಪೋಷಕರು ಆಗಾಗ ಹೇಳುತ್ತಿರುತ್ತಾರೆ. ಮೂರು ವರ್ಷದ ಮಕ್ಕಳು ಹಟ ಮಾಡುವುದು ಜಾಸ್ತಿ. ಈ ಬೆಳವಣಿಗೆ ಸಮಯದಲ್ಲಿ ಪೋಷಕರು ಹೇಗಿರಬೇಕು, ಏನೆಲ್ಲಾ ಮಾಡಬೇಕು ಎಂದು ಶ್ವೇತಾ ವಿಡಿಯೋವೊಂದರಲ್ಲಿ ಹಂಚಿಕೊಂಡಿದ್ದಾರೆ.
'ನನ್ನ ಮಗಳು ಮೊದಲಿನಿಂದಲೂ ಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುವುದು. ಎರಡನೇ ಅಲೆಗಿಂತ ಮೂರನೇ ಅಲೆಯಿಂದ ಮಕ್ಕಳಿಗೆ ತೊಂದರೆ ಆಗಬಹುದು ಎಂಬ ಚಿಂತೆ ಇದೆ. ಅಶ್ಮಿತಾ ಬೆಳೆಯುವ ವಯಸ್ಸಿದು, ಜನರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವುದನ್ನು ನೋಡುತ್ತಾ ಇದೇ ನಾರ್ಮಲ್ ಜೀವನ ಎಂದುಕೊಂಡಿದ್ದಾಳೆ ಹಾಗೂ ಸ್ವಚ್ಚತೆ ಬಗ್ಗೆ ಗಮನ ಕೊಡುತ್ತಾಳೆ. ಶಾಲೆ ಆನ್‌ಲೈನ್ ಆಗಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಹೋಗಿ ಸ್ನೇಹಿತರ ಜೊತೆ ಸಮಯ ಕಳೆಯುವುದಕ್ಕೆ ಇನ್ನೂ ಸಮಯ ಬೇಕಾಗುತ್ತದೆ. ಮೊಬೈಲ್ ಬಿಟ್ಟರೆ ಬೇರೆ ಯಾವ ರೀತಿಯಲ್ಲಿ ಅವರನ್ನು ಆ್ಯಕ್ಟಿವ್ ಆಗಿಡಬಹುದು ಎಂದು ನಾನು ಹುಡುಕುವೆ. ವರ್ಕಿಂಗ್ ವಿಮೆನ್‌ಗೆ ನನ್ನ ಸಲ್ಯೂಟ್, ಮಕ್ಕಳನ್ನು ಸಂಭಾಳಿಸಿಕೊಂಡು ಕೆಲಸವನ್ನೂ ಮಾಡುತ್ತಾ ಎರಡನ್ನೂ ಬ್ಯಾಲೆನ್ಸ್ ಮಾಡೋದು ತುಂಬಾನೇ ಕಷ್ಟ,' ಎಂದು ಶ್ವೇತಾ ತಮ್ಮ ಅನಿಸಿಕೆಯನ್ನು ಇಂಗ್ಲಿಷ್ ದೈನಿಕವೊಂದಕ್ಕೆ ಹಂಚಿ ಕೊಂಡಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.