ಮದ್ವೆ ಮಕ್ಕಳು ಅಂತ ಬ್ಯುಸಿಯಾಗಿರುವ 'Kirik Party' ಗ್ಯಾಂಗ್; ಬ್ಯಾಂಕಾಕ್‌ನಲ್ಲಿ 'ಪಾರ್ಟಿ' ಕಥೆ ಬಿಚ್ಚಿಟ್ಟ ಅಭಿಜಿತ್ ಮಹೇಶ್

By Vaishnavi Chandrashekar  |  First Published Dec 19, 2023, 3:00 PM IST

7 ವರ್ಷ ಆದ್ಮೇಲೆ ಕಿರಿಕ್ ಪಾರ್ಟಿ ಗ್ಯಾಂಗ್ ಏನು ಮಾಡುತ್ತಿರುತ್ತೆ? ಮುಂದುವರೆದ ಭಾಗವಲ್ಲ ಆದರೂ ಲಿಂಕ್‌ ಇದೆ ಎಂದ ಅಭಿಜಿತ್ ಮಹೇಶ್...
 


ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ, ರಿಷಬ್ ಶೆಟ್ಟಿ ಮತ್ತು ಪ್ರಮೋಷ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಕಿರಿಕ್ ಪಾರ್ಟ ಸಿನಿಮಾ ರಿಲೀಸ್ ಆಗಿ 7 ವರ್ಷ ಆದರೂ ಇನ್ನೂ ಚಿತ್ರದ ಕ್ರೇಜ್ ಕಡಿಮೆ ಆಗಿಲ್ಲ. ಹಲವಾರು ಕಾಲೇಜ್ ಹಾಸ್ಟಲ್‌ಗಳ ಮೇಲೆ ಸಿನಿಮಾ ಬಂದ್ರೂ ಕಿರಿಕ್ ಗ್ಯಾಂಗ್‌ನ ಮೀರಿಸುವವರು ಇಲ್ಲ. 7 ವರ್ಷ ಆಯ್ತು ಶೆಟ್ರು ಗ್ಯಾಂಗ್ ಕಿರಿಕ್ ಸ್ಟುಡೆಂಟ್‌ಗಳ ಬಗ್ಗೆ ಯೋಚನೆ ಮಾಡಿಲ್ವಾ? ಖಂಡಿತಾ ಮಾಡಿದ್ದಾರೆ. ಅಭಿಮಾನಿಗಳಿಗೋಸ್ಕರ ಬ್ಯಾಚುಲರ್ ಪಾರ್ಟಿ ಟೈಟಲ್ ಮತ್ತು ಫಸ್ಟ್‌ ಲುಕ್ ರಿವೀಲ್ ಮಾಡಿದ್ದಾರೆ. 

ನಟ ಹಾಗೂ ಬರಹಗಾರ ಅಭಿಜಿತ್ ಮಹೇಶ್ ಬ್ಯಾಚುಲರ್ ಪಾರ್ಟಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನನ್ನ ನೆಚ್ಚಿನ ಜಾನರ್ ಬಡ್ಡಿ ಕಾಮಿಡಿಗಳಿಗೆ ಈ ಬ್ಯಾಚುಲರ್ ಪಾರ್ಟಿ ಸಿನಿಮಾ ಸೇರುತ್ತದೆ ಎಂದು ಸಣ್ಣ ಸುಳಿವು ನೀಡಿದ್ದಾರೆ. ಅವನೇ ಶ್ರೀಮನ್ನಾರಾಯಣ ಮತ್ತು 777 ಚಾರ್ಲಿ ಸಿನಿಮಾ ಕಥೆಗೆ ಅಭಿಜಿತ್ ಕೊಡುಗೆ ಇದೆ.

Tap to resize

Latest Videos

ಕಿರಿಕ್ ಪಾರ್ಟಿ ಆದ್ಮೇಲೆ ಬ್ಯಾಚುಲರ್ ಪಾರ್ಟಿ; ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಲೂಸ್ ಮಾದಾ- ದೂದ್ ಪೇಡಾ!

ಕಿರಿಕ್ ಪಾರ್ಟಿ ಚಿತ್ರದ ಮುಂದುವರೆದ ಭಾಗ ಅಥವಾ ಸಂಬಂಧ ಪಟ್ಟ ಭಾಗದಲ್ಲಿ ಬ್ಯಾಚುಲರ್ ಪಾರ್ಟಿ ಬರುವುದಿಲ್ಲ. 'ಗುಂಪಿನ ವಿದ್ಯಾರ್ಥಿಗಳು ಇಂಜಿನಿಯರಿಂಗ್‌ ಓದುತ್ತಾರೆ ಅದರ ಸುತ್ತ ನಡೆಯುವ ಕಥೆ ಕಿರಿಕ್ ಪಾರ್ಟಿ. ಆದರೆ ಬ್ಯಾಚುಲರ್ ಪಾರ್ಟಿ ಅದರ ಮುಂದುವರೆದ ಭಾಗವಲ್ಲ. ಆದರೆ ಇದರಲ್ಲಿ ವರ್ಷಗಳು ಕಳೆದ ನಂತರ ಕಿರಿಕ್ ಪಾರ್ಟಿ ಗ್ಯಾಂಗ್ ಹೇಗಿರುತ್ತಾರೆ ಅನ್ನೋ ಕಲ್ಪನೆ ಮಾಡುತ್ತಿದ್ದೀವಿ. ಈಗ ಎಲ್ಲರೂ ಮದುವೆ ಮಾಡಿಕೊಂಡು ಫ್ಯಾಮಿಲಿ ಅಂತ ಬ್ಯುಸಿಯಾಗಿರುತ್ತಾರೆ ಅಷ್ಟಾಗಿ ಸ್ನೇಹಿತರನ್ನು ಭೇಟಿ ಮಾಡುವುದಿಲ್ಲ. ಈಗ ಅವರೆಲ್ಲಾ ಸೇರಿಕೊಂಡು ಒಟ್ಟಿಗೆ ಟ್ರಿಪ್ ಮಾಡಿದರೆ ಹೇಗಿರುತ್ತದೆ? ಅದನ್ನು ಬ್ಯಾಚುಲರ್ ಪಾರ್ಟಿಯಲ್ಲಿ ತೋರಿಸಿದ್ದೀವಿ' ಎಂದು ಅಭಿಜಿತ್ ಟೈಮ್‌ ಆಫ್‌ ಇಂಡಿಯಾದಲ್ಲಿ ಮಾತನಾಡಿದ್ದಾರೆ. 

ಚಾರ್ಲಿ ಬಿಗ್ ಬಾಸ್‌ಗೆ ಹೋಗ್ಬಾರ್ದು ಅನ್ನೋದು ರಕ್ಷಿತ್ ಶೆಟ್ಟಿ ನಿರ್ಧಾರ; ಹರಿದು ಬಂತು ಪತ್ರಗಳು!

ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ದೂದ್ ಪೇಡಾ ದಿಗಂತ್, ಅಚ್ಯುತ್ ಕುಮಾರ್ ಮತ್ತು ಯೋಗಿ ನಟಿಸುತ್ತಿದ್ದಾರೆ. ಎಂದೂ ನೋಡಿರದ ಲುಕ್ ಮತ್ತು ಪಾತ್ರದಲ್ಲಿ ಮಿಂಚಲಿದ್ದಾರೆ. ' ಒಂದು ಕಾರಣಕ್ಕೆ ಈ ಮೂವರು ಬ್ಯಾಂಕಾಕ್‌ಗೆ ತೆರಳುತ್ತಾರೆ...ಇದು ಸಣ್ಣು ಪುಟ್ಟ ಕಾರಣ ಅಥವಾ ಎಲ್ಲರೂ ಕಲ್ಪನೆ ಮಾಡಿಕೊಳ್ಳುವ ಕಾರಣ ಅಲ್ವೇ ಅಲ್ಲ. ಇದರ ಕಾರಣ ತುಂಬಾ ಇಂಟ್ರೆಸ್ಟಿಂಗ್ ಆಗಿದೆ...ಅದೇ ಚಿತ್ರದ ಹೈಲೈಟ್' ಎಂದಿದ್ದಾರೆ ಅಭಿಜಿತ್. 

 

click me!