ಮಗಳ ಮೊದಲ ಚಿತ್ರದಲ್ಲೂ ನಾನೇ ತಂದೆ, ಸೆಟ್‌ನಲ್ಲಿ ಶಿಸ್ತು ಇರಲೇ ಬೇಕು : ದುನಿಯಾ ವಿಜಯ್

Published : Dec 19, 2023, 10:12 AM ISTUpdated : Dec 21, 2023, 11:17 AM IST
ಮಗಳ ಮೊದಲ ಚಿತ್ರದಲ್ಲೂ ನಾನೇ ತಂದೆ, ಸೆಟ್‌ನಲ್ಲಿ ಶಿಸ್ತು ಇರಲೇ ಬೇಕು : ದುನಿಯಾ ವಿಜಯ್

ಸಾರಾಂಶ

ಶೀಘ್ರದಲ್ಲಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ಮೋನಿಕಾ ವಿಜಯ್. ಮಗಳ ಚಿತ್ರದಲ್ಲಿ ನಾನೇ ತಂದೆ ಆಗಬೇಕು ಎಂದ ದುನಿಯಾ....

ಕನ್ನಡ ಚಿತ್ರರಂಗದ ಅದ್ಭುತ ನಟ ವಿನಯ್ ಕುಮಾರ್ ಉರ್ಫ್ ದುನಿಯಾ ವಿಜಯ್ ಹಿರಿ ಮಗಳನ್ನು ಕನ್ನಡ ಚಿತ್ರರಂಗಕ್ಕೆ ಕರೆತರಲು ಸಜ್ಜಾಗಿದ್ದಾರೆ. ಕಳೆದ ವಾರ ಫೋಟೋಶೂಟ್ ಮೂಲಕ ಸಿಹಿ ಸುದ್ದಿ ರಿವೀಲ್ ಮಾಡಿದ್ದರು. 'ತಂದೆಯಾಗಿ ನನ್ನ ಮಕ್ಕಳ ಬಗ್ಗೆ ನನಗೆ ತುಂಬಾ ಕನಸುಗಳು ಇದೆ ಅದರಲ್ಲಿ ಒಂದು ಕನಸು ನನಸಾಗುತ್ತಿದೆ. ಶೀಘ್ರದಲ್ಲಿ ಮೊನಿಕಾ ಮುಂದಿನ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾಳೆ' ಎಂದು ದುನಿಯಾ ವಿಜಯ್ ಖುಷಿ ವಿಚಾರ ಹಂಚಿಕೊಂಡಿದ್ದಾರೆ. 

'ಮೊನಿಕಾ ನಟಿಸುತ್ತಿರುವುದು ಒಂದು ಫ್ಯಾಮಿಲಿ ಡ್ರಾಮಾ ಸಿನಿಮಾದಲ್ಲಿ. ಮೊನಿಕಾ ಆನ್‌ ಸ್ಕ್ರೀನ್ ತಂದೆಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿರುವೆ' ಎಂದು ವಿಜಯ್ ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ. ಗುರು ಶಿಷ್ಯರು ಚಿತ್ರ ನಿರ್ದೇಶನ ಮಾಡಿರುವ ಜಗದೀಶ್ ಕೆ ಹಂಪಿ ಜೊತೆ ವಿಜಯ್ ಕೈ ಜೋಡಿಸಿದ್ದಾರೆ. 'ಮಗಳು ಮೋನಿಕಾ ಥಿಯೇಟರ್‌ನಲ್ಲಿ ಇದ್ದವಳು ಹೀಗಾಗಿ ಸಿನಿಮಾ ಕೊಂಚ ಸುಲಭವಾಗಲಿದೆ. ಸೆಟ್ ವಿಚಾರದ ಬಗ್ಗೆ ಹೇಳಬೇಕು ಅಂದ್ರೆ ನಾನು ತುಂಬಾ ಶಿಸ್ತು ಫಾಲೋ ಮಾಡುವ ವ್ಯಕ್ತಿ ಅದನ್ನೇ ಮಕ್ಕಳಿಗೂ ಹೇಳಿಕೊಟ್ಟಿರುವೆ. ಮಗಳ ಕೋ-ಆಕ್ಟರ್ ನಾನು ಆಗಿರುವ ಕಾರಣ ಕೊಂಡ professionalism ನಿರೀಕ್ಷೆ ಮಾಡುತ್ತೀನಿ' ಎಂದಿದ್ದಾರೆ ವಿಜಯ್. 

ಮೊದಲ ಸಲ ಸಾಬೀತು ಮಾಡಿಲ್ಲ ಅಂದ್ರೆ ದಾರಿ ಗೊತ್ತಾಗದಂತೆ ಹೂಳುತ್ತಾರೆ: ಪುತ್ರಿಯರ ಬಗ್ಗೆ ದುನಿಯಾ ವಿಜಯ್

'ಮಕ್ಕಳ ಮತ್ತು ನನ್ನ ನಡುವೆ ಇರುವ ಬಾಂಡ್‌ ನನಗೆ ತುಂಬಾ ಸ್ಪೆಷಲ್. ಒಂದು ಕಡೆ ಅವರಿಗೆ ಕ್ಲೋಸ್ ಸ್ನೇಹಿತನಾಗಿರುವ ಮತ್ತೊಂದು ಕಡೆ ಜವಾಬ್ದಾರಿ ಇರುವ ತಂದೆ ಆಗಿರುವೆ. ಮೂವರು ಮಕ್ಕಳು ತಮ್ಮ ಕನಸುಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ ಆದರೆ ಡೆಸ್ಟಿನಿ ನನ್ನ ಕೈಯಲ್ಲಿಲ್ಲ. ಶ್ರಮ ಅವರದ್ದು. ಮಕ್ಕಳ ಆಸೆ ಪಟ್ಟಿರುವ ಜೀವನವನ್ನು ಬದುಕುತ್ತಿದ್ದಾರೆ ಅದನ್ನು ನೋಡುವುದು ನನ್ನ ಭಾಗ್ಯ' ಎಂದು ವಿಜಯ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?