ಮಹಿಳೆಯರು ನಿರ್ದೇಶಿಸಿದರೆ ಸಣ್ಣ ಪುಟ್ಟ ವಿಚಾರಕ್ಕೆ ಪ್ರಾಮುಖ್ಯತೆ ಇರುತ್ತದೆ: ಲಕ್ಷ್ಮಿ ಗೋಪಾಲಸ್ವಾಮಿ

Published : May 17, 2022, 12:56 PM IST
ಮಹಿಳೆಯರು ನಿರ್ದೇಶಿಸಿದರೆ ಸಣ್ಣ ಪುಟ್ಟ ವಿಚಾರಕ್ಕೆ ಪ್ರಾಮುಖ್ಯತೆ ಇರುತ್ತದೆ: ಲಕ್ಷ್ಮಿ ಗೋಪಾಲಸ್ವಾಮಿ

ಸಾರಾಂಶ

ಓಟಿಟಿ ಕ್ಷೇತ್ರದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿರುವ ಅದ್ಭುತ ನಟಿ ಕಮ್ ಡ್ಯಾನ್ಸರ್ ಲಕ್ಷ್ಮಿ ಗೋಪಾಲಸ್ವಾಮಿ ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ.

ಬಹುಭಾಷಾ ನಟಿ ಲಕ್ಷ್ಮಿ ಗೋಪಾಲಸ್ವಾಮಿ (Lakshmi Gopalaswamy) ಕನ್ನಡ ಸೀರಿಸ್ ಆಗಿರುವ ನಮ್ಮೂರಿನ ರಸಿಕರು (Nammorina Rasikaru ) ಮತ್ತು ತಮಿಳು ಸೀರಿಸ್ ಅನಂತಮ್‌ನಲ್ಲಿ (Anantham) ತುಂಬಾ ಸ್ಟ್ರಾಂಗ್ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿ ರಸಿದರು ಸಿನಿಮಾ ನೋಡುವ ರೀತಿ ಬದಲಾಗಿದೆ ಹಾಗೂ ಹೊಸ ಮಾಧ್ಯಮಗಳು ಎಷ್ಟರ ಮಟ್ಟಕ್ಕೆ ಜನಪ್ರಿಯತೆ ಪಡೆಯುತ್ತಿದೆ ಎಂದು ಲಕ್ಷ್ಮಿ ಮಾತನಾಡಿದ್ದಾರೆ. 

ಓಟಿಟಿ ಬಗ್ಗೆ:

ಓಟಿಟಿ (OTT) ಕ್ಷೇತ್ರಗಳಿಗೆ ತುಂಬಾ ದೊಡ್ಡದಾಗಿದೆ ಹಾಗೆ ಬೇರೆ ಭಾಷೆಯ ಜನರನ್ನು ಸೆಳೆಯುತ್ತದೆ. ರೀಜನಲ್, ಸೋಷಿಯಲ್ ಮತ್ತು ಭಾಷೆ ಬಾರ್ಡರ್‌ಗಳನ್ನು ಓಟಿಟಿ ದಾಟಿದೆ. ಜನರು ಸೌತ್ ಸಿನಿಮಾ ಅಥವಾ ನಾರ್ಥ್ ಸಿನಿಮಾ ಎಂದು ಮಾತನಾಡುವುದಿಲ್ಲ ಒಳ್ಳೆಯ ಕಲಾವಿದರು ಎಂದಷ್ಟೇ ಹೇಳುವುದು. ನಾನು ತುಂಬಾ ಮಹತ್ವ ಹೊಂದಿರುವ ವಿಚಾರಗಳನ್ನು ಓಟಿಟಿಯಲ್ಲಿ ನೋಡುತ್ತಿದ್ದೀನಿ. ಹೀಗಾಗಿ ನನಗೆ ಇದು ಎಕ್ಸೈಟಿಂಗ್ ಸಮಯ. ಕಲಾವಿದೆಯಾಗಿ ಓಟಿಟಿ ಆತ್ಮವಿಶ್ವಾಸ ಕೊಟ್ಟಿದೆ. ಯಾವುದೇ ಬ್ಯಾರಿಯರ್‌ ಇಲ್ಲದೆ ನಾನು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ. ತೆಲುಗು ಸಿನಿಮಾಗಳಲ್ಲಿ ನಾನು ತಾಯಿ ಪಾತ್ರಗಳನ್ನು ಮಾಡಿದ್ದೀನಿ ಅದರಿಂದ ಹಣ ಬಂತು. ಆದರೆ ಈಗ ಅದೆಲ್ಲಾ ಅವಶ್ಯಕತೆ ಅಲ್ಲ ನಾನು ಆ ರೀತಿ ಪಾತ್ರಗಳಿಗೆ No ಎಂದು ಹೇಳ ಬಹುದು' ಎಂದು ಇ-ಟೈಮ್ಸ್‌ ಸಂದರ್ಶನದಲ್ಲಿ ಲಕ್ಷ್ಮಿ ಮಾತನಾಡಿದ್ದಾರೆ.

ಡ್ಯಾನ್ಸ್‌ ರಿಯಾಲಿಟಿ ಶೋನಿಂದ ಪುಟ್ಟಗೌರಿ ಔಟ್; ಕಾರಣ ಪ್ರಸಾರ ಮಾಡಿಲ್ಲ ಯಾಕೆ?

ಮಹಿಳಾ ನಿರ್ದೇಶಕಿ:

'ಮಹಿಳೆಯರು ನಿರ್ದೇಶನ ಮಾಡಿದರೆ ಸಣ್ಣ ಪುಟ್ಟ ವಿಚಾರಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಅವರಲ್ಲಿ ತಾಯಿ ಗುಣ ಇರುತ್ತದೆ ಯಾರಿಗೆ ಏನೇ ಆದರೂ ಆರೈಕೆ ಮಾಡುತ್ತಾರೆ. ಸೆಟ್‌ನಲ್ಲಿ ಎಲ್ಲರು ತಪ್ಪದೆ ಊಟ ನೋಡಿಕೊಳ್ಳುತ್ತಾರೆ. ಅವರ ಸಹಾನುಭೂತಿಯುಳ್ಳವರು, ಜೀವನದಲ್ಲಿ ಎಲ್ಲವೂ ಅನುಭವಿಸಿದರುತ್ತಾರೆ. ವಿದ್ಯಾವಂತ ಮಹಿಳೆಯರು ತುಂಬಾ ಲಿಬರಲ್ ಆಗಿರುತ್ತಾರೆ ಅದು ನಮಗೆ ಬೋನಸ್‌ ಪಾಯಿಂಟ್‌ ಇದ್ದ ಹಾಗೆ. ಅವರಿಗೆ ಹಕ್ಕು ಮತ್ತು ಪ್ರಜಾಪ್ರಭುತ್ವದ ಅರಿವಿದೆ' ಎಂದು ಲಕ್ಷ್ಮಿ ಹೇಳಿದ್ದಾರೆ.

ಪಾತ್ರ ಬದಲಾವಣೆ:

'ಈಗ ಬರಹಗಾರರು ಬರೆಯುತ್ತಿರುವ ಪಾತ್ರಗಳನ್ನು ನೋಡಿ ಖುಷಿಯಾಗಿರುವೆ. ಅನಂತಮ್‌ ಸೀರಿಸ್‌ನಲ್ಲಿ ನಾನು 40 ವರ್ಷದ ಮಹಿಳೆಯಾಗಿ ನನಗಿಂತ 8 ವರ್ಷ ಕಿರಿಯವರನ್ನು ಇಷ್ಟ ಪಡುತ್ತಿರುವೆ. ಮಹಿಳೆಯರು ಕಥೆ ಬರೆದಿದ್ದರಿಂದ ಸಾಮಾನ್ಯ ಸ್ಟೀರಿಯೋಟೈಪ್‌ಗಳು ಇಲ್ಲ, ಸೂಕ್ಷ್ಮಿ ವ್ಯಾತ್ಯಾಸಗಳನ್ನು ಹೊಂದಿದ್ದಾರೆ. ಈ ರೀತಿ ಪಾತ್ರಗಳನ್ನು ಹೊರ ತೆಗೆಯಲು ಓಟಿಟಿಗೆ ಮಾತ್ರ ಸಾಧ್ಯ ಅಲ್ಲದೆ ಸ್ಟೀರಿಯೋಟೈಪ್‌ನ ಮುರಿಯುತ್ತದೆ. ಪ್ರಾಮಾಣಿಕವಾಗಿ ಮಾಡುವ ಕಥೆಗಳನ್ನು ಜನರು ಒಪ್ಪಿಕೊಳ್ಳುತ್ತಿದ್ದಾರೆ. ಪಬ್ಲಿಕ್‌ಗೆ ಏನು ಬೇಕು ಎಂದು ನಾವು ಸರಿಯಾಗಿ ಚಿಂತಿಸಬೇಕು.  ಒಳ್ಳೆ ಪ್ರತಿಭೆಗಳು ಹೊಸ ಪ್ರತಿಭೆಗಳು ಹೊರ ಬರುವುದಕ್ಕೆ ಇದು ಸರಿಯಾದ ಕ್ಷೇತ್ರ ಆಗಿರಲಿದೆ. ಅನೇಕರ ಬಳಿ ಒಳ್ಳೆ ಅನುಭವಗಳು ಒಳ್ಳೆ ಕಥೆಗಳು ಇದೆ ಅದೆಲ್ಲವೂ ಓಟಿಟಿಗೆ ಹೊಂದುತ್ತದೆ ಆದರೆ ದೊಡ್ಡ ಪರದೆ ಮೇಲೆ ತರುವುದಕ್ಕೆ ಭಯವಿರುತ್ತದೆ. ಒಳ್ಳೆ ಟ್ಯಾಲೆಂಟ್‌ಗಳ ಜೊತೆ ಕೆಲಸ ಮಾಡುವುದಕ್ಕೆ ನನಗೆ ಅವಕಾಶ ಸಿಕ್ಕಿದೆ ಖುಷಿ' ಎಂದಿದ್ದಾರೆ ಲಕ್ಷ್ಮಿ.

ಸೊಂಟ ದಪ್ಪ ಅಂತ ಫ್ಯಾಟ್‌ ಸರ್ಜರಿ ಒಳಗಾದ ಕಿರುತೆರೆ ನಟಿ ಚೇತನಾ ರಾಜ್ ನಿಧನ!

ಸೋಷಿಯಲ್ ಮೀಡಿಯಾ:

ಸೋಷಿಯಲ್ ಮೀಡಿಯಾದಿಂದ ಒಳ್ಳೆ ಪ್ರತಿಭೆಗಳನ್ನು ನೇರವಾಗಿ ಸಂಪರ್ಕಿಸಲು ನಮಗೆ ಸಾಧ್ಯವಗಿದೆ. ನಾನು ಸೋಷಿಯಲ್ ಮೀಡಿಯಾ ಗೇಮ್‌ನಲ್ಲಿ ಗ್ರೇಟ್‌ ಇಲ್ಲ ಏಕೆಂದರೆ ಬೇರೆಯೊಬ್ಬರು ನನ್ನ ಪರವಾಗಿ ಪೋಸ್ಟ್‌ ಮಾಡುವುದು ಎಷ್ಟು ಸರಿ? ದಿನ ಪೋಸ್ಟ್‌ ಮಾಡುವುದಕ್ಕೂ ಆಗುವುದಿಲ್ಲ. ಆದರೆ ಸೋಷಿಯಲ್ ಮೀಡಿಯಾದ ಸೆನ್ಸೇಷನ್‌ ಹೇಗೆ ಕೆಲಸ ಮಾಡುತ್ತಿದೆ ಅನ್ನೋದನ್ನು ಮರೆಯಬಾರದು. ಒಂದು ಕಡೆ ಕುಳಿತುಕೊಂಡು ಇಲ್ಲ ನಾನು ಹೆಸರು ಮಾಡಿದ್ದೀನಿ ನಾನು ಇರುವುದೇ ಹೀಗೆ ಎಂದು ಹೇಳುವುದಕ್ಕೆ ಆಗೋಲ್ಲ. ಗೊಂದಲದ ಜೀವನದಲ್ಲಿ ಗುರುತಿಸಿಕೊಳ್ಳುವುದೇ ದೊಡ್ಡ ಚಾಲೆಂಜ್. ಇದು ಡೈನಾಮಿಕ್‌ ಜಾಗವಾಗಿದ್ದು ಬೇಗ ಬದಲಾವಣೆಗಳು ಆಗುತ್ತದೆ' ಎಂದು ಲಕ್ಷ್ಮಿ ಗೋಪಾಲಸ್ವಾಮಿ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ