ಪ್ರಜ್ವಲ್ ದೇವರಾಜ್ 'ಕರಾವಳಿ' ಚಿತ್ರದಿಂದ ದರ್ಶನ್ ಔಟ್?; ಸೆಲೆಬ್ರಿಟಿಗಳು ಫುಲ್ ಗಾಬರಿ

Published : Jul 09, 2024, 09:04 AM IST
ಪ್ರಜ್ವಲ್ ದೇವರಾಜ್ 'ಕರಾವಳಿ' ಚಿತ್ರದಿಂದ ದರ್ಶನ್ ಔಟ್?; ಸೆಲೆಬ್ರಿಟಿಗಳು ಫುಲ್ ಗಾಬರಿ

ಸಾರಾಂಶ

ದೊಡ್ಡ ಪ್ರಾಜೆಕ್ಟ್‌ ಚಿತ್ರದಿಂದ ಹೊರ ಬಂದ್ರಾ ದರ್ಶನ್. ಬಂಡವಾಳ ಹಾಕಿದ ಕಥೆಗಳು ಏನು?

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿರುವ ಕರಾವಳಿ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್‌ ಹುಟ್ಟುಹಬ್ಬದ ದಿನ ಚಿತ್ರತಂಡ ನಾಯಕನ ಹೊಸ ಲುಕ್ ರಿವೀಲ್ ಮಾಡಿದೆ. ಈ ಚಿತ್ರದಲ್ಲಿ ಮಹಾವೀರ್‌ ಎಂದು ವಿಶೇಷ ಪಾತ್ರವಿದೆ, ಈ ಪಾತ್ರದಲ್ಲಿ ಸ್ಟಾರ್ ನಟರು ಕಾಣಿಸಿಕೊಂಡರೆ ಸೂಪರ್ ಎನ್ನುವ ಮಾತುಗಳು ಕೇಳಿ ಬಂದಿತ್ತು. ನಟ ಪ್ರಜ್ವಲ್ ದೇವರಾಜ್‌ ಮತ್ತು ನಟ ದರ್ಶನ್ ಆಪ್ತರಾಗಿರುವ ಕಾರಣ ಈ ಸ್ಪೆಷಲ್ ಪಾತ್ರವನ್ನು ದರ್ಶನ್ ಮಾಡಲಿದ್ದಾರೆ ಎಂದು ಈ ಹಿಂದೆ ಅನೌನ್ಸ್ ಮಾಡಿದ್ದರು. ಆದರೆ ಸದ್ಯ ದರ್ಶನ್ ಜೈಲಿನಲ್ಲಿ ಇರುವ ಕಾರಣ ಮುಂದೆ ಏನು ಅನ್ನೋ ಆಲೋಚನೆಗೆ ಇಲ್ಲಿದೆ ಇತ್ತರ......

ಬಿಗ್ ಬಜೆಟ್ ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರಬೇಕಿದ್ದ ನಟ ದರ್ಶನ್ ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂದರ್ ಆಗಿದ್ದು ಎರಡನೇ ಆರೋಪಿ. ದರ್ಶನ್‌ನನ್ನು ಸೇರಿ 13 ಜನ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ 4 ಜನ ಆರೋಪಿಗಳು ತುಮಕೂರು ಜೈಲಿನಲ್ಲಿದ್ದಾರೆ. ದರ್ಶನ್‌ನ ನಂಬಿ ಬಂಡವಾಳ ಹಾಕಿರುವ ನಿರ್ಮಾಪಕರು ಆತಂಕದಲ್ಲಿದ್ದಾರೆ. ಸದ್ಯ ಕರಾವಳಿ ಚಿತ್ರತಂಡ ಏನು ಹೇಳುತ್ತದೆ...

ರೀಲ್ಸ್‌ಗೆ ಕುಣಿದು ಕುಣಿದು ಹಣ ಸಂಪಾದನೆ ಮಾಡಿದ ಆಂಟಿ ಮನೆಗೆ ಬಂತು ಹೊಸ ಸ್ಕೂಟಿ!

ಕರಾವಳಿ ಚಿತ್ರದಿಂದ ದರ್ಶನ್‌ ಔಟ್ ಆಗಿದ್ದಾರೆ ಈ ಪಾತ್ರಕ್ಕೆ ಬೇರೆ ಅವರು ಬರಲಿದ್ದಾರೆ ಎನ್ನುವ ಮಾತುಗಳು ಗಾಂಧಿ ನಗರದಲ್ಲಿ ಕೇಳಿ ಬರುತ್ತಿದೆ. ಕರಾವಳಿ ಚಿತ್ರದಿಂದ ದರ್ಶನ್‌ರನ್ನು ಕೈ ಬಿಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ ಇದು ಸತ್ಯಕ್ಕೆ ದೂರವಾದದ್ದು ಎಂದು ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ ಎಂದು ಖಾಸಗಿ ವೆಬ್ ಪೋರ್ಟಲ್ ಸುದ್ದಿ ಮಾಡಿದೆ.  ಹಾಗಿದ್ರೆ ದರ್ಶನ್ ಸ್ಥನಕ್ಕೆ ಯಾರು ಬರಲಿದ್ದಾರೆ ಎಂದು ಯೋಚನೆ ಮಾಡಿದಾಗ ನೆಟ್ಟಿಗರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಕಿಚ್ಚ ಸುದೀಪ್, ರಿಷಬ್ ಶೆಟ್ಟಿ...ಹೀಗೆ ಸಾಕಷ್ಟು ಸಲಹೆ ಕೊಟ್ಟಿದೆ. ಶೀಘ್ರದಲ್ಲಿ ಚಿತ್ರತಂಡ ಘೋಷಣೆ ಮಾಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep