ಕನ್ನಡದ ಖ್ಯಾತ ನಿರ್ಮಾಪಕ ಕೆ ಮಂಜು ಜೈಲಿನಲ್ಲಿ ಇರುವ ನಟ ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಬಳಿಕ ಮಾಧ್ಯಮ ಮಿತ್ರರೊಡನೆ ಮಾತನಾಡಿದ ಕೆ ಮಂಜು 'ಎಲ್ಲಾ ಒಳ್ಳೆಯದಾಗುತ್ತೆ..
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ನಟ ದರ್ಶನ್ (Actor Darshan) ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವುದು ಗೊತ್ತೇ ಇದೆ. ಇಂದಿಗೆ ಬರೋಬ್ಬರಿ ಒಂದು ತಿಂಗಳ ಹಿಂದೆ ನಟ ದರ್ಶನ್ ಅವರನ್ನು ಆರೋಪಿ ಎಂದು ಪೊಲೀಸ್ ಕಷ್ಟಡಿಗೆ ನೀಡಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಿ ಈಗ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಈಗ ವಾರಕ್ಕೆ ಮೂರು ಜನರಂತೆ ಕಾನೂನಿನ ಪ್ರಕಾರವೇ ದರ್ಶನ್ ಆಪ್ತರು ಅವರನ್ನು ಭೇಟಿಯಾಗಿ ಬರುತ್ತಿದ್ದಾರೆ.
ಇವತ್ತು, ಅಂದರೆ 8 ಜುಲೈ 2024ರಂದು ಕನ್ನಡದ ಖ್ಯಾತ ನಿರ್ಮಾಪಕ ಕೆ ಮಂಜು (K Manju) ಅವರು ಜೈಲಿನಲ್ಲಿ ಇರುವ ನಟ ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಬಳಿಕ ಮಾಧ್ಯಮ ಮಿತ್ರರೊಡನೆ ಮಾತನಾಡಿದ ಕೆ ಮಂಜು 'ಎಲ್ಲಾ ಒಳ್ಳೆಯದಾಗುತ್ತೆ, ದೇವರಿದ್ದಾನೆ' ಎಂದಿದ್ದಾರೆ. ಬಳಿಕ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ 'ಹೌದು, ನಟ ದರ್ಶನ್ ನೋವಿನಲ್ಲಿದ್ದಾರೆ. ಮಾಡ
ತಂದೆ-ಮಗಳ ಬಾಂಧವ್ಯಕ್ಕೆ ಕಪ್ಪು ಚುಕ್ಕೆ ಇಟ್ಟ ಯೂಟ್ಯೂಬರ್ ವಿರುದ್ಧ ಕೇಸ್; ಸಾಯಿ ಧರಮ್ ತೇಜ ಗರಂ!
ಕೆ ಮಂಜು ಅವರ ಮಾತನ್ನು ಉಲ್ಲೇಖಿಸಿ 'ಹಾಗಿದ್ರೆ, ನಟ ದರ್ಶನ್ ಅವರು ಕೊಲೆ ಮಾಡಿಲ್ವಾ?' ಎಂಬ ಮಾಧ್ಯಮದವರ ಪ್ರಶ್ನೆಗೆ 'ದರ್ಶನ್ ತಾವು ಕೊಲೆ ಮಾಡಿಲ್ಲ, ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ' ಎಂದಿದ್ದಾರೆ. ಹೇಗೂ ಪ್ರಕರಣ ಪೊಲೀಸ್ ತನಿಖೆಯಲ್ಲಿದೆ. ಕಾನೂನಿನ ಮೇಲೆ ನಮಗೂ ಅವರಿಗೂ ನಂಬಿಕೆಯಿದೆ. ಸತ್ಯ ಆಚೆ ಬರುತ್ತೆ, ದರ್ಶನ್ ಆದಷ್ಟು ಬೇಗ ಹೊರಗಡೆ ಬರಲಿದ್ದಾರೆ' ಎಂದಿದ್ದಾರೆ ಕೆ ಮಂಜು. 'ಬೇರೆ ಏನೇನು ಮಾತನಾಡಿದಿರಿ' ಎಂದಿದ್ದಕ್ಕೆ 'ಎಲ್ಲವನ್ನು ಹೇಳಲಿಕ್ಕೆ ಆಗುವುದಿಲ್ಲ, ನಮ್ಮ ವೈಯಕ್ತಿಕ ಮಾತುಗಳೂ ಇರುತ್ತವೆಯಲ್ಲ' ಎಂದಿದ್ದಾರೆ.
ಪಾಪ...ಕರುಳು ಕಿತ್ತು ಬರುತ್ತೆಅನುಶ್ರೀ ಕಥೆ ಕೇಳಿದ್ರೆ, ಕೆನ್ನೆ ಮೇಲೆ ಬಿಸಿ ಹನಿ ಬೀಳದಿದ್ರೆ ನಿಮಗೇನೋ ಆಗಿದೆ..!
'ಬೇಲ್ ತೆಗೆದುಕೊಳ್ತಾರಾ' ಎಂಬ ಪ್ರಶ್ನೆಗೆ , ' ಆ ಬಗ್ಗೆ ಏನೂ ಹೇಳಿಲ್ಲ, ಎಲ್ಲವೂ ಕಾನೂನಿನ ಪ್ರಕಾರ ನಡೆಯಲಿದೆ. ಕೆಲವು ಸಂಗತಿಗಳನ್ನು ನಾನು ಹೇಳಲಿಕ್ಕೆ ಆಗುವುದಿಲ್ಲ. ನಾನೇನೋ ಹೇಳಿದರೆ ಅದು ಇನ್ನೇನೋ ಅರ್ಥ ಕಲ್ಪಿಸಿ ಅವಾಂತರ ಸೃಷ್ಟಿಯಾಗಬಹುದು. ಸದ್ಯಕ್ಕೆ ನಟ ದರ್ಶನ್ ನೋವಿನಲ್ಲಿದ್ದಾರೆ. ಹೀಗಾಗಿ ಚಿತ್ರಗಳ ಬಗ್ಗೆ, ಚಿತ್ರರಂಗದ ಬಗ್ಗೆ ಮಾತನಾಡಿಲ್ಲ' ಎಂದಿದ್ದಾರೆ.
ಸೋಮವಾರದ ವೃತ ಕೆಡಿಸಿಬಿಟ್ಟಿದ್ರು ಅಂಬರೀಷ್; ಡಾ ರಾಜ್ ಆಚರಣೆ ಬಗ್ಗೆ ಪಾರ್ವತಮ್ಮ ಏನಂದಿದ್ರು?