ಕಳೆದ 35 ವರ್ಷಗಳ ಹಿಂದೆಯೇ ಮೆಟ್ರೋ ರೈಲು ಸೇವೆಯ ಕನಸು ಕಂಡಿದ್ದ ನಟ ಶಂಕರ್ ನಾಗ್ ಅವರ ಹೆಸರನ್ನು ಬೆಂಗಳೂರಿನ ಒಂದು ಮೆಟ್ರೋ ನಿಲ್ದಾಣಕ್ಕಾದರೂ ನಾಮಕರಣ ಮಾಡಿ ಎಂದು ಹಿರಿಯ ನಟ ರಮೇಶ್ ಭಟ್ ಮನವಿ ಮಾಡಿದ್ದಾರೆ.
ಬೆಂಗಳೂರು (ಜು.08): ನಟ ಹಾಗೂ ನಿರ್ದೇಶಕ ಶಂಕರ್ ನಾಗ್ ಅವರು ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ 1989ರಲ್ಲಿಯೇ ಮೆಟ್ರೋ ರೈಲು ಸೇವೆಯ ಕನಸು ಕಂಡು, ಬರೋಬ್ಬರಿ 9 ಲಕ್ಷ ರೂ. ಹಣವನ್ನು ವೆಚ್ಚ ಮಾಡಿ ಒಂದು ನೀಲನಕ್ಷೆಯನ್ನೂ ರಚಿಸಿದ್ದರು. ಈಗ ಬೆಂಗಳೂರು ಮೆಟ್ರೋ ಸೇವೆ ಆರಂಭವಾಗಿ 13 ವರ್ಷ ಕಳೆದರೂ ಒಂದೇ ಒಂದು ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಟ್ಟಿಲ್ಲ. ಈ ಬಗ್ಗೆ ಹಿರಿಯ ನಟ ರಮೇಶ್ ಭಟ್ ಅವರು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿದ್ದು, 2011ರಲ್ಲಿ. ಆದರೆ, ಇದಕ್ಕೂ ಮುಂಚಿತವಾಗಿ ಸುಮಾರು 22 ವರ್ಷಗಳ ಹಿಂದೆಯೇ 1989ರಲ್ಲಿ ನಟ ಹಾಗೂ ನಿರ್ದೇಶಕ ಶಂಕರ್ ನಾಗ್ ಅವರು ಬೆಂಗಳೂರಿಗೆ ಮೆಟ್ರೋ ರೈಲು ಸೇವೆ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಭಾರಿ ಆಕಾಂಕ್ಷೆ ಹೊಂದಿದ್ದರು. ಈ ನಿಟ್ಟಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಅಂದಿನ ಕಾಲದಲ್ಲಿಯೇ ಬರೋಬ್ಬರಿ 9 ಲಕ್ಷ ರೂ. ಖರ್ಚು ಮಾಡಿ ಮೆಟ್ರೋ ಮಾರ್ಗ ಎಲ್ಲೆಲ್ಲಿ ಮಾಡಬೇಕು ಎಂಬುದರ ಕುರಿತು ನೀಲಿನಕ್ಷೆಯನ್ನೂ (Blue print) ಸಿದ್ಧಪಡಿಸಿದ್ದರು. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿ ಮೆಟ್ರೋ ರೈಲು ಸೇವೆ ಒದಗಿಸಬೇಕು ಎನ್ನುವ ಆಶಯ ಹೊಂದಿದ್ದಾಗಲೇ ಅವರು ಭೀಕರ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪಿದ್ದರು.
ಶೆಟ್ರು ಮನೆ ಕೋಳಿ ಕೊನೆಗೆ ಮೊಟ್ಟೆ ಹಾಕದೆನೆ ಮನೆ ಬಿಟ್ಟಿತು; ನಿವೇದಿತಾ ಗೌಡಗೆ ಇದೆಂಥಾ ಕಾಮೆಂಟ್!
ಇನ್ನು ನಟ ಶಂಕರ್ ನಾಗ್ ಅವರು ಬೆಂಗಳೂರು ಮೆಟ್ರೋ ಸೇವೆ ಕುರಿತು ಕನಸು ಕಂಡಿದ್ದ ಮೊದಲ ವ್ಯಕ್ತಿ ಎಂಬುದು ಎಲ್ಲ ರಾಜಕಾರಣಿಗಳಿಗೂ ಗೊತ್ತಿರುವ ವಿಚಾರವಾಗಿದೆ. ಈವರೆಗೆ ಮೆಟ್ರೋ ಸೇವೆ ಆರಂಭವಾಗಿ ಬರೋಬ್ಬರಿ 13 ವರ್ಷಗಳು ಕಳೆದಿವೆ. ಅಂದರೆ, ಶಂಕರ್ ನಾಗ್ ಅವರು ಮೆಟ್ರೋ ಸೇವೆಯ ಕನಸು ಕಂಡು 35 ವರ್ಷಗಳೇ ಕಳೆದಿವೆ. ಆದರೂ, ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಯಾವುದೇ ರಾಜಕಾರಣಿಗಳು ಮಾಡಿಲ್ಲ. ಬೆಂಗಳೂರಿನಲ್ಲಿ ಬರೋಬ್ಬರಿ 65 ಮೆಟ್ರೋ ನಿಲ್ದಾಣಗಳಿವೆ. ಅವುಗಳಲ್ಲಿ ಸ್ವಾಮೀಜಿಗಳು, ಕವಿಗಳು, ಹಳ್ಳಿಗಳು, ಕಂಪನಿಗಳ ಹೆಸರನ್ನು ಮೆಟ್ರೋ ನಿಲ್ದಾಣಗಳಿಗೆ ಹೆಸರಿಡಲಾಗಿದೆ. ಅದರೆ, ಬೆಂಗಳೂರಿಗೆ ಮೆಟ್ರೋ ರೂವಾರಿ ಎಂದೇ ಹೇಳಬಹುದಾದ ನಟ ಶಂಕರ್ ನಾಗ್ ಅವರ ಹೆಸರನ್ನು ಒಂದೇ ಒಂದು ಮೆಟ್ರೋ ನಿಲ್ದಾಣಕ್ಕೂ ನಾಮಕರಣ ಮಾಡಿಲ್ಲ ಎಂದು ಹಿರಿಯ ನಟ ರಮೇಶ್ ಭಟ್ ಅಳಲು ತೋಡಿಕೊಂಡಿದ್ದಾರೆ.
ನಟ ರಮೇಶ್ ಭಟ್ ಹೇಳಿದ್ದೇನು?
ಬೆಂಗಳೂರಿಗೆ ಮೆಟ್ರೋ ಸೇವೆ ಸಿಗಬೇಕು ಎಂದು ಕನಸು ಕಂಡಿದ್ದೇ ಶಂಕರ್ ನಾಗ್. ಈವರೆಗೆ ಅವನು ಕನಸು ಕಂಡು 35 ವರ್ಷಗಳು ಕಳೆದಿದ್ದು, ಮೆಟ್ರೋ ಸೇವೆ ಆರಂಭವಾಗಿ ಹಲವು ವರ್ಷಗಳು ಕಳೆದಿವೆ. ಈವರೆಗೂ ಶಂಕರ್ ನಾಗ್ ಹೆಸರನ್ನು ಒಂದೇ ಒಂದು ನಿಲ್ದಾಣಕ್ಕೂ ಇಟ್ಟಿಲ್ಲ. ಅದ್ಯಾಕೆ ಅದನ್ನು ಮಾಡಿಲ್ಲವೋ, ಯಾರಿಗೆ ಗೌರವ ಕೊಡಬೇಕೋ ನಮಗೆ ತಿಳಿಯುತ್ತಿಲ್ಲ. ಇದಕ್ಕಾಗಿ 9 ರಿಂದ 9.5 ಲಕ್ಷಕ್ಕೂ ಅಧಿಕ ಹಣವನ್ನೂ ಖರ್ಚು ಮಾಡಿಲ್ಲ. ಭವಿಷ್ಯದಲ್ಲಿ ಏನೇನು ಮಾಡಬೇಕು ಎಂಬುದನ್ನು ಕನಸು ಕಂಡಿದ್ದನು. ಬೆಂಗಳೂರಿಗೆ ಮೆಟ್ರೋ, ಅಮ್ಯೂಸ್‌ಮೆಂಟ್ ಪಾರ್ಕ್, ಕ್ಲಬ್, ರೋಪ್‌ವೇ ಎಲ್ಲವನ್ನು ಮಾಡಬೇಕು ಎಂದು ಕನಸು ಕಂಡಿದ್ದನು. ಕೇವಲ ಕರಾಟೆ ಕಿಂಗ್ ಎಂದು ಹೆಸರು ಮಾಡಿದರಷ್ಟೇ ಸಾಲದು, ಮರ ಸುತ್ತಿಕೊಂಡು ಡಿಶುಂ, ಡಿಶುಂ ಮಾಡಿಕೊಂಡು ಹೋಗಬಾರದು. ಮಕ್ಕಳಿಗೆ ನಾವೇನಾದರೂ ಮಾಡಿದ್ದೇವೆ ಎಂದು ಹೇಳಲಿಕ್ಕೆ ಸಾಮಾಜಿಕ ಸೇವೆ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದರು. ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಡಲಿಲ್ಲವೆಂಬುದು ಈಗಲೂ ಬೇಸರ ಕಾಡುತ್ತಿದೆ ಎಂದು ಹಿರಿಯ ನಟ ರಮೇಶ್ ಭಟ್ ಅಳಲು ತೋಡಿಕೊಂಡಿದ್ದಾರೆ.
ಕಾಲೇಜು ಹುಡ್ಗೀರಿಗೆ ಮರ್ಮಾಂಗ ತೋರಿಸಿದ ಮರ್ಯಾದೆಗೇಡಿ ಅಯೂಬ್ ಅಂಕಲ್ ಅರೆಸ್ಟ್
ಶಂಕರ್ ನಾಗ್ ಹೆಸರಿಡಲು ಮುಂದಾದವರು ಮಾಜಿ ಆದರು:
ಇನ್ನು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬೈರತಿ ಬಸವರಾಜ್ ಅವರು ಬೆಂಗಳೂರಿನ ಮೆಟ್ರೋ ನಿಲ್ದಾಣಕ್ಕೆ ನಟ ಶಂಕರ್ ನಾಗ್ ಅವರ ಹೆಸರಿಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಆದರೆ, ಸಚಿವ ಬೈರತಿ ಬಸವರಾಜ ಅವರ ಹೇಳಿಕೆ ಎಲ್ಲೆಡೆ ಭಾರಿ ಸುದ್ದಿ ಆಗಿತ್ತು. ಅವರ ಹೇಳಿಕೆ ಜಾರಿಗೆ ಬರದೇ ಕೇವಲ ಸುದ್ದಿಯಾಗಲು ಮಾತ್ರ ಸೀಮಿತವಾಯಿತು. ಈಗ ಬೈರತಿ ಬಸವರಾಜ್ ಮಾಜಿ ಸಚಿವ ಆಗಿದ್ದಾರೆ, ಅವರಿಗೆ ಸರ್ಕಾರಕ್ಕೆ ಸಲ್ಲಿಕೆ ಬಿಟ್ಟರೆ ಬೇರಾವ ರೀತಿ ಒತ್ತಡ ಹಾಕಲೂ ಸಾಧ್ಯವಿಲ್ಲ.