ಜೀವನ ನಾನು ಅಂದುಕೊಂಡ ರೀತಿಯಲ್ಲಿ ನಡೆಯುತ್ತಿಲ್ಲ: ರಚಿತಾ ರಾಮ್ ಶಾಕಿಂಗ್ ಹೇಳಿಕೆ!

Published : Jun 12, 2023, 04:48 PM IST
ಜೀವನ ನಾನು ಅಂದುಕೊಂಡ ರೀತಿಯಲ್ಲಿ ನಡೆಯುತ್ತಿಲ್ಲ: ರಚಿತಾ ರಾಮ್ ಶಾಕಿಂಗ್ ಹೇಳಿಕೆ!

ಸಾರಾಂಶ

ಈ ವರ್ಷ ರಚಿತಾ ರಾಮ್ ಮದ್ವೆ ಆಗ್ತಾರಾ? ಜೀವನದಲ್ಲಿ ಅಂದುಕೊಂಡ ರೀತಿ ನಡೆಯುತ್ತಿಲ್ಲ ಅಂದಿದ್ಯಾಕೆ?  

ಸ್ಯಾಂಡಲ್‌ವುಡ್‌ ಬುಲ್ ಬುಲ್ ರಚಿತಾ ರಾಮ್ ಸದ್ಯಕ್ಕೆ ಬೇಡಿಯ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದಿರುವ ನಟಿ. ಕೈ ತುಂಬಾ ಆಫರ್‌ಗಳಿದೆ ಶೂಟಿಂಗ್ ಮಾಡಲು ಸಮಯವಿಲ್ಲ. ಎಲ್ಲರಿಗೂ ಕಾಲ್ ಶೀಟ್‌ನಲ್ಲಿ ಡೇಟ್ ಕೊಟ್ಟು ಕೊಟ್ಟು ಸಿನಿಮಾ ಸಹಿ ಮಾಡಿ ಮಾಡಿ ಒಟ್ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ರಚ್ಚು ಅಭಿಮಾನಿಗಳು ಎಷ್ಟು ಜನ ಇದ್ದಾರೆ ನೋಡಬೇಕು ಅಂದ್ರೆ ವೀಕೆಂಡ್‌ನಲ್ಲಿ ಅವರ ಮನೆ ಬಳಿ ಹೋಗಬೇಕು ಇಲ್ಲ ಅಂದ್ರೆ ಹುಟ್ಟುಹಬ್ಬಕ್ಕೆ ಕೇಕ್ ಮತ್ತು ಹಾರ ಹಿಡಿದುಕೊಂಡು ಬರ್ತಾರೆ ಆಗ ನೋಡಬೇಕು. ಜನವೋ ಜನ. ಈ ವರ್ಷ ಹುಟ್ಟುಹಬ್ಬದ ಸಮಯದಲ್ಲಿ ರಚಿತಾ ರಾಮ್ ನೀಡಿದ ಹೇಳಿಕೆ ಈ ವೈರಲ್ ಆಗುತ್ತಿದೆ. 

'ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ಸಮಯದಲ್ಲಿ ಏನಾದರೂ ಒಂದು ಅಂದುಕೊಳ್ಳುವೆ ಸಾಧನೆ ಮಾಡುವೆ. ಆದರೆ 2023ರಲ್ಲಿ ನಾನು ಏನೂ ಅಂದುಕೊಳ್ಳುವುದಿಲ್ಲ ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ ಈ ಸಲ ಏನೂ ಅಂದುಕೊಂಡಿಲ್ಲ ಏಕೆಂದರೆ ಅಂದುಕೊಂಡ ರೀತಿಯಲ್ಲಿ ಯಾವುದು ನಡೆಯುತ್ತಿಲ್ಲ. ಜೀವನದಲ್ಲಿ ಕಷ್ಟಗಳು ಬಂದ್ಹಂಗೆ ಬರ್ತಾ ಇರಲಿ ಏನೇ ಇದ್ದರೂ ಎದುರಿಸಲು ರೆಡಿಯಾಗಿರುವೆ. ಖುಷಿ ಆಯ್ತಾ ಖುಷಿಯಾಗಿ ಇರೋಣ. ಪ್ರತಿಯೊಬ್ಬರ ಜೀವನದಲ್ಲೂ ಮೇಲೆ ಕೆಳಗಿ ಇರುತ್ತದೆ ಪ್ರತಿ ಸಲನೂ ಯಶಸ್ಸು ಸಿಗುತ್ತದೆ ಯಶಸ್ಸು ಸಿಗಬೇಕು ಅಂದುಕೊಳ್ಳುವುದು ತಪ್ಪಾಗುತ್ತದೆ. ಸೋಲು ಅನುಭವಿಸಿದಾಗ ಅದನ್ನು ಅರ್ಥ ಮಾಡಿಕೊಳ್ಳಬೇಕು..ಯಾಕೆ ಸೋಲಾಯ್ತು ಅದನ್ನು ಹೇಗೆ ಸರಿ ಮಾಡಿಬೇಕು ಎಂದು ಯೋಚನೆ ಮಾಡಬೇಕು. ಕೆಲಸದ ಬಗ್ಗೆ ಫೋಕಸ್ ಮಾಡಬೇಕು ಸಾಧನೆ ಮಾಡಬೇಕು ಅನ್ನೋದು ನನ್ನ ಗುರಿ.  ಭಗವಂತ ಏನು ಕಳುಹಿಸುತ್ತಾನೆ ಅದನ್ನು ಧೈರ್ಯದಿಂದ ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಕೊಡು ಎಂದು ಬೇಡುವೆ' ಎಂದು ಖಾಸಗಿ ಕನ್ನಡ ಚಾನೆಲ್‌ನಲ್ಲಿ ರಚ್ಚು ಮಾತನಾಡಿದ್ದರು.

ತಮಿಳು ಧಾರಾವಾಹಿಯಲ್ಲಿ ನಟಿ ರಚಿತಾ ರಾಮ್ ಸಹೋದರಿ; ಗರಂ ಆದ ಕನ್ನಡಿಗರು!

'ನನ್ನ ಮದುವೆ ವಿಚಾರದಲ್ಲಿ ದೇವರು ಹೇಗೆಲ್ಲಾ ಪ್ಲ್ಯಾನ್ ಮಾಡಿದ್ದಾನೆ ಗೊತ್ತಿಲ್ಲ ಈಗ ನಡೆಯುತ್ತಿರುವುದು ಅವನ ಲೀಲೆ. ಇಷ್ಟೊಂದು ಅಭಿಮಾನಿಗಳ ಪ್ರೀತಿ ಹಾಗೂ ನನ್ನ ಮನೆ ಬಳಿ ಬಂದು ಪ್ರೀತಿ ತೋರಿಸುವ ರೀತಿ ಎಲ್ಲಾ ಜನರ ಮೂಲಕ ನನಗೆ ಬರುತ್ತಿದೆ. ನನಗೆಂದು ದೇವರು ಏನು ಪ್ಲ್ಯಾನ್ ಮಾಡಿದ್ದಾನೆ ಗೊತ್ತಿಲ್ಲ ಆದರೆ ಪ್ಲ್ಯಾನ್ ಚೆನ್ನಾಗಿರಲಿ ಎಂದು ಪ್ರಾರ್ಥನೆ ಮಾಡುವೆ ಅಷ್ಟೆ' ಎಂದು ರಚ್ಚು ಹೇಳಿದ್ದಾರೆ. 

ಕೋಟಿ ದುಡಿದರೂ ಆಭರಣ ಹಾಕಿಲ್ಲ; ರಚಿತಾ ರಾಮ್ ಸಿಂಪ್ಲಿಸಿಟಿ ಮೆಚ್ಚಿದ ನೆಟ್ಟಗರು

ರಚ್ಚು ಮದುವೆ ಯಾವಾಗ ಅನ್ನೋದು ಇಡೀ ಕರ್ನಾಟಕದ ಜನರ ಪ್ರಶ್ನೆ. ಏಕ್ ಲವ್ ಯಾ ಸಿನಿಮಾ ಪ್ರಚಾರದ ವೇಳೆ ನನಗೂ ಬ್ರೇಕಪ್ ಆಗಿದೆ ಎಂದು ರಚ್ಚು ಹೇಳುತ್ತಿದ್ದರು..ಹುಡುಗ ಯಾರು ಸಂಬಂಧ ಹೇಗೆ ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಸೀತಾರಾಮಾ ಕಲ್ಯಾಣ ಸಿನಿಮಾ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಜೊತೆ ಹೆಸರು ಕಟ್ಟಿದ್ದರು ಆದರೆ ಅದೇ ವರ್ಷ ನಿಖಿಲ್ ಮದುವೆ ಮಾಡಿಕೊಂಡರು. ಹೀಗಾಗಿ ರಚ್ಚು ಕೈ ಹಿಡಿಯುವ ಹುಡುಗ ಯಾರು ಅನ್ನೋದು ಜನರ ಕ್ಯೂರಿಯಾಸಿಟಿ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?