ಚಿರು ಸಹಿ ಇನ್ನೂ ಉಳಿದಿದೆ; ಬೆಡ್‌ರೂಮ್‌ ವಿಡಿಯೋ ರಿವೀಲ್ ಮಾಡಿದ ಮೇಘನಾ ರಾಜ್!

Published : Jun 10, 2023, 12:17 PM ISTUpdated : Jun 10, 2023, 12:18 PM IST
ಚಿರು ಸಹಿ ಇನ್ನೂ ಉಳಿದಿದೆ; ಬೆಡ್‌ರೂಮ್‌ ವಿಡಿಯೋ ರಿವೀಲ್ ಮಾಡಿದ ಮೇಘನಾ ರಾಜ್!

ಸಾರಾಂಶ

ರಾಯನ್ ರಾಜ್ ಸರ್ಜಾ ತುಂಟಾಟ ನೋಡಿ. ಮಕ್ಕಳಿರುವ ಮನೆ ಹೀಗೆ ಅಂತಾರೆ ಮೇಘನಾ ರಾಜ್..   

ಚಂದನವನದ ಸುಂದರ ನಟಿ ಮೇಘನಾ ರಾಜ್‌ ತತ್ಸಮ ತದ್ಭವ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಕಿರುತೆರೆ ರಿಯಾಲಿಟಿ ಶೋಗಳಿಗೆ ಕಾಲಿಟ್ಟ ವೇಳೆ ಯುಟ್ಯೂಬ್ ಚಾನೆಲ್ ಆರಂಭಿಸಿದರು. ಕಡಿಮೆ ಅವಧಿಯಲ್ಲಿ ಸಿಲ್ವರ್ ಪ್ಲೇ ಬಟನ್‌ ಕೂಡ ಗಳಿಸಿ ಯಶಸ್ಸನ್ನು ವೀಕ್ಷಕರಿಗೆ ಕ್ರಿಡಿಟ್ ಮಾಡಿದ್ದಾರೆ. ಮೇಘನಾ ಚಾನೆಲ್‌ನ ಮತ್ತೊಂದು ಹೈಲೈಟ್ ಏನೆಂದರೆ ರಾಯನ್ ತುಂಟಾಟ ಅಲ್ಲಲ್ಲೇ ಕಾಣಿಸಿಕೊಳ್ಳುವುದು. 

ಮೇಘನಾ ರಾಜ್ ಹೊಸ ಮನೆ ಹೇಗಿದೆ? ಯಾವ ರೀತಿ ಅಲಂಕಾರ ಮಾಡಿದ್ದಾರೆ  ಎಂದು ನೆಟ್ಟಿಗರು ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು. ಹೀಗಾಗಿ ಈ ಸಲ ತಮ್ಮ ಬೆಡ್‌ ರೂಮ್ ಹೇಗಿದೆ ಎಂದು ರಿವೀಲ್ ಮಾಡಿದ್ದಾರೆ. ಆರಂಭದಲ್ಲಿ ರಾಯನ್ ರೂಮ್‌ನಲ್ಲಿ ಆಟ ಆಡುತ್ತಿರುವುದು, ಹಾಸಿಗೆ ಮೇಲೆ ಉರುಳಾಡುತ್ತಿರುವುದು, ತೊದಲ ಮಾತುಗಳನ್ನು ನೋಡಬಹುದು ಆನಂತರ ಮೇಘನಾ ತಮ್ಮ ಸ್ಪೆಷಲ್ ಬೆಡ್‌ ತೋರಿಸುತ್ತಾರೆ. ಮೇಘನಾ ಹಾಸಿಗೆ ಕೆಳಗೆ ನಾಲ್ಕು ಭಾಗವಿದೆ ಒಂದರಲ್ಲಿ ಚಪ್ಪಲಿ ಮತ್ತೊಂದರಲ್ಲಿ ಬೆಡ್‌ಶೀಟ್‌ ಮತ್ತೊಂದು ಕವರ್ ಬಟ್ಟೆ ಹೀಗೆ ತುಂಬಿಸಿ ಇಟ್ಟಿದ್ದಾರೆ.  

ನಮಸ್ತೆ ಅಪ್ಪ ನಮಸ್ತೆ ಅಪ್ಪ ಎಂದು ಚಿರು ಸಮಾಧಿ ಮುಂದೆ ಕಣ್ಣೀರಿಟ್ಟ ರಾಯನ್!

ಮೇಘನಾ ರೂಮ್ ಪ್ರವೇಶ ಮಾಡಿದರೆ ಮೊದಲು ಸಿಗುವುದು ಟಿವಿ...ಟಿವಿ ತುದಿಯಲ್ಲಿ ರಾಯನ್ ಕಲರ್ ಕಲರ್ ಕೂಲಿಂಗ್ ಕ್ಲಾಸ್‌ಗಳು. ಅದರ ಕೆಳಗಿರುವ ಟೇಬಲ್ ಮೇಲೆ ಸಿಲ್ವರ್ ಪ್ಲೇ ಬಟನ್ ಇಟ್ಟಿದ್ದಾರೆ. ಮತ್ತೊಂದು ಕಡೆ ದೊಡ್ಡ ಕಬೋರ್ಡ್‌ ಇದೆ ಅದರಲ್ಲಿ ದುಬಾರಿ ಬೆಲೆ ಬ್ಯಾಗ್‌ಗಳನ್ನು ಇಟ್ಟಿದ್ದಾರೆ. ಪ್ರತಿಯೊಂದು ಬ್ಯಾಗಿಗೂ ಬಟ್ಟೆ ಕವರ್ ಹಾಕಿ ಇಟ್ಟಿದ್ದಾರೆ. ಟಿವಿ ಪಕ್ಕ ಡ್ರೆಸಿಂಗ್ ಡೇಬಲ್ ಇಟ್ಟಿದ್ದಾರೆ... ಈ ಟೇಬಲ್‌ನ ಈಗಾಗಲೆ ಹಲವು ಸಲ ಮೇಕಪ್ ಮಾಡಿಕೊಳ್ಳುವುದನ್ನು ತೋರಿಸಲು ವಿಡಿಯೋ ಮಾಡಿದ್ದಾರೆ. ಈ ಟೇಬಲ್‌ ಮೇಲೆ ಮತ್ತೊಂದು ಸ್ಪಷಲ್‌ ಇದೆ. ಸಾಮಾನ್ಯವಾಗಿ ಟೇಬಲ್‌ನ ಮೇಘನಾ ತುಂಬಾ ಕ್ಲೀನಾಗಿಟ್ಟುಕೊಂಡಿರುತ್ತಾರೆ ಇಷ್ಟು ನೀಟ್ ಇರಬಾರದು ಎಂದು ರೇಗಿಸಲು ಚಿರು ಪೆನ್‌ ತೆಗೆದುಕೊಂಡು ಆಟೋಗ್ರಾಫ್ ಹಾಕಿದರಂತೆ. ಈವರೆಗೂ ಮೇಘನಾ ಅದನ್ನು ಹಾಗೆ ಉಳಿಸಿಕೊಂಡಿದ್ದಾರೆ. 

ಶಾಲೆಗೆ ಕಾಲಿಟ್ಟ ರಾಯನ್ ಸರ್ಜಾ; ಭಾವುಕರಾದ ಮೇಘನಾ ರಾಜ್!

ಹಾಸಿಗೆ ಪಕ್ಕ ರಾಯನ್‌ ತೊಟ್ಟಿಲು ಇಡಲಾಗಿದೆ. ಅದರ ಪಕ್ಕ ಮೇಘನಾ ವಾಕ್‌ ಇನ್‌ ಕಬೋರ್ಡ್‌ ಮಾಡಿಸಿಕೊಂಡಿದ್ದಾರೆ. ಕಬೋರ್ಡ್‌ ಒಳಗೆ ನಡೆದುಕೊಂಡು ಹೋಗಿ ಬಟ್ಟೆ ಸೆಲೆಕ್ಟ್‌ ಮಾಡಿಕೊಳ್ಳಬಹುದು. ಇದು ಮತ್ತೊಂದು ಸ್ಪೆಷಾಲಿಟಿ. 

'ಮೇಘನಾ ರಾಜ್ ಅವರೇ ನಿಮ್ಮ ಜೊತೆ ನಾನು ತುಂಬಾ ಕನೆಕ್ಟ್‌ ಅಗುತ್ತೀನಿ. ನೀವು ಗರ್ಭಿಣಿ ಆದ ಸಮಯದಲ್ಲಿ ನಾನು ಗರ್ಭಿಣಿ ಆಗಿದ್ದು ಹೀಗಾಗಿ ಸದಾ ರಾಯನ್ ಮತ್ತು ನಿಮ್ಮ ಬಗ್ಗೆ ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ನಲಿನಿ ಎಂಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ ಮೇಡಮ್ ನನಗೆ. ಸ್ಟ್ರಾಂಗ್ ಮಹಿಳೆ ನೀವು.ತುಂಬಾ ತುಂಬಾ ಗೌರವ ನಿಮ್ ಮೇಲೆ ನನಗೆ ಎಂದು ಮೋಹಿತ್ ಹೇಳದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?