
ನಟ ದರ್ಶನ್ ತೂಗುದೀಪ ( Actor Darshan Thoogudeepa ), ರಚನಾ ರೈ ನಟನೆಯ ‘ದಿ ಡೆವಿಲ್’ ಸಿನಿಮಾ ರಿಲೀಸ್ ಆಗಿದ್ದು, ಅವರ ಅಭಿಮಾನಿಗಳು ಈ ಚಿತ್ರವನ್ನು ಮೆರೆಸುತ್ತಿದ್ದಾರೆ. ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್ ಜೈಲಿನಲ್ಲಿದ್ದರೂ ಕೂಡ, ಅವರ ಸಿನಿಮಾ ಪ್ರಚಾರಕ್ಕೆ ಕೊರತೆಯಿಲ್ಲ. ಈಗ ಅವರ ಪತ್ನಿ ವಿಜಯಲಕ್ಷ್ಮೀ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಈ ಸಿನಿಮಾ ನಾಯಕಿ ರಚನಾ ರೈ ಅವರು ಪ್ರಶ್ನೆಗಳನ್ನು ಕೇಳಿದ್ದು, ಅದಿಕ್ಕೆ ವಿಜಯಲಕ್ಷ್ಮೀ ಅವರು ಉತ್ತರ ಕೊಟ್ಟಿದ್ದಾರೆ. ಬಹಳ ವರ್ಷಗಳ ಬಳಿಕ ಅವರು ಈ ರೀತಿಯಾದ ಸಂವಹನದಲ್ಲಿ ಭಾಗಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವಿಜಯಲಕ್ಷ್ಮೀ ಅವರು, ‘ದಿ ಡೆವಿಲ್’ ಸಿನಿಮಾ ಕುರಿತಂತೆ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಅಂದಹಾಗೆ ದರ್ಶನ್ ಅವರ ಸಂದೇಶವನ್ನು ಅವರು ಅಭಿಮಾನಿಗಳಿಗೆ ತಲುಪಿಸುತ್ತಿದ್ದರು.
ತುಂಬ ಖುಷಿಯಾಗ್ತಿದೆ. ದರ್ಶನ್ ಇಲ್ಲದಿದ್ದರೂ ಅವರನ್ನು, ಅವರ ಸಿನಿಮಾವನ್ನು ತಲೆ ಮೇಲೆ ಹೊತ್ತುಕೊಂಡು ಮೆರಿತಾರೆ ಎನ್ನೋದಕ್ಕೆ ಇದು ಉದಾಹರಣೆ.
ಈ ರೀತಿ ಆಗುತ್ತದೆ ಎಂದು ಗೊತ್ತಿರಲಿಲ್ಲ. ವೃತ್ತಿಯನ್ನು ಅವರು ತುಂಬ ಗೌರವಿಸುತ್ತಾರೆ, ದೇವರಿಗಿಂತ ಜಾಸ್ತಿ ಪೂಜಿಸ್ತಾರೆ. ಈ ಋಣ ತೀರಿಸಲು ಎರಡು ಸಲ ಹುಟ್ಟಬೇಕು ಎನ್ನುತ್ತಾರೆ. ನನಗೆ ಅವರು ವಾರದಲ್ಲಿ ಎರಡ ಸಲ ಫೋನ್ ಮಾಡುತ್ತಾರೆ, ಆದರೆ ಅವರು 12 ಗಂಟೆಗೆ ಫೋನ್ ಮಾಡಿ ಸಿನಿಮಾ ಹೇಗೆ ಬಂದಿದೆ? ಸಿನಿಮಾ ಚೆನ್ನಾಗಿ ಬಂದಿದ್ಯಾ? ಜನರು ಚೆನ್ನಾಗಿ ಮಜಾ ಮಾಡುತ್ತಿದ್ದಾರಾ ಎಂದು ಕೇಳಿದರು.
ನನ್ನ ಬಗ್ಗೆ , ನನ್ನ ಮಗನ ಬಗ್ಗೆ ಮಾತಾಡಿದ್ರೂ ನನಗೆ ಎಫೆಕ್ಟ್ ಆಗೋದಿಲ್ಲ. 90 ಪೆರ್ಸೆಂಟ್ ಜನ ನಮಗೆ ಪ್ರೀತಿ ಕೊಡುತ್ತಾರೆ, ಅದೇ ನನಗೆ ಮ್ಯಾಟರ್ ಆಗುತ್ತದೆ. ನೆಗೆಟಿವ್ ವಿಚಾರಕ್ಕೆ ತಲೆಕೆಡಿಸಿಕೊಳ್ಳೋಲ್ಲ, ನಾನು ಕಾಮೆಂಟ್ಸ್‌ಗಳನ್ನು ಓದೋದಿಲ್ಲ.
ದರ್ಶನ್ ಅವರ ಅಭಿಮಾನಿಗಳು ಅನಕ್ಷರಸ್ಥರು ಎಂದು ಹೇಳುತ್ತಾರಲ್ಲ, ಅವರಿಂದ ಫಂಡ್ ಕಲೆಕ್ಟ್ ಮಾಡಿ ಶಾಲೆ ಆರಂಭಿಸೋಣ. ಅನಕ್ಷರಸ್ಥರು ಎಂದು ಹೇಳಿದವರಿಂದಲೇ ಅವರನ್ನು ಶಿಕ್ಷಿತರನ್ನಾಗಿ ಮಾಡೋಣ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.