ಗಿಲ್ಲಿ ಜೊತೆ ಸಿನಿಮಾ ಮಾಡ್ಬೇಕು ಎಂದಿದ್ದ ಶಿವರಾಜ್‌ಕುಮಾರ್; ಆ ವಿಡಿಯೋ ವೈರಲ್ ಆಗಿ ಈಗೇನಾಯ್ತು ನೋಡಿ!

Published : Dec 13, 2025, 03:32 PM IST
Gilli Nata Shivarajkumar

ಸಾರಾಂಶ

ಬಿಗ್ ಬಾಸ್‌ ಗೆಲ್ಲುವ ಫೆವರೆಟ್ ಎನ್ನಿಸಿರುವ ಗಿಲ್ಲಿ ನಟನಿಗೆ ಈಗಾಗಲೇ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿವೆ. ಈಗ ಬಿಗ್ ಬಾಸ್ ಶೋನಲ್ಲಿ ಗಿಲ್ಲಿಯ ಟೈಮಿಂಗ್ ಹಾಗೂ ಪಂಚಿಂಗ್ ಡೆಲಿವರಿ ಎಲ್ಲವೂ ಬಹಳಷ್ಟು ಜನರಿಗೆ ಇಷ್ಟ ಆಗಿದೆ. ಹೀಗಾಗಿ, ಅವರಿಗೆ ಬರೋ ಆಫರ್ ಮತ್ತಷ್ಟು ಹೆಚ್ಚಬಹುದು ಎನ್ನುವ ನಿರೀಕ್ಷೆ ಇದೆ.

ಹಾಟ್ ಫೆವರೆಟ್ ಅಂದ್ರೆ ಗಿಲ್ಲಿ ನಟ

ಕನ್ನಡದ ಜನಪ್ರಿಯ ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸದ್ಯಕ್ಕೆ ಹಾಟ್ ಫೆವರೆಟ್ ಅಂದ್ರೆ ಗಿಲ್ಲಿ ನಟ. ಗಿಲ್ಲಿ ನಟ (Gilli Nata Nataraj) ನಟರಾಜ್ ಖ್ಯಾತಿ ಈಗ ಬಿಗ್ ಬಾಸ್ ಮನೆ ಹಾಗೂ ಕಿರುತೆರೆಗಷ್ಟೇ ಸೀಮಿತವಾಗಿಲ್ಲ. ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾ ತೆರೆಗೆ ಬಂದ ಮೇಲೆ, ನಟ ಗಿಲ್ಲಿ ಅವರು ಈಗ ಸ್ಟಾಂಡಲ್‌ವುಡ್ ಆಕ್ಟರ್ ಎಂಬ ಹಣೆಪಟ್ಟಿಯನ್ನೂ ಹಚ್ಚಿಕೊಂಡಿದ್ದಾರೆ. ಈ ಮೊದಲೂ ಕೂಡ ಗಿಲ್ಲಿ ನಟ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬುದು ಬಹುತೇಕರಿಗೆ ಗೊತ್ತು. ಆದ್ರೆ ಇದೀಗ ಅವರು ಕನ್ನಡದ ಸ್ಟಾರ್ ನಟ ದರ್ಶನ್ (Darshan Thoogudeepa) ಜೊತೆ ಬಿಗ್ ಬಜೆಟ್‌ ಸಿನಿಮಾದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಅದೀಗ ಕರ್ನಾಟಕದಲ್ಲಿ ಬರೋಬ್ಬರಿ 1000ಕ್ಕಿಂತ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಗಿಲ್ಲಿ ಈಗ ಇನ್ನೂ ಹೆಚ್ಚು ಫೇಮಸ್ ಆಗಿಬಿಟ್ಟಿದ್ದಾರೆ.

ಗಿಲ್ಲಿ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ.. ಈಗ ಅವರು ಸಾಕಷ್ಟು ಜನಪ್ರಿಯತೆ ನಟ. ಗಿಲ್ಲಿಗೆ ಶಿವರಾಜ್ ಕುಮಾರ್‌ ಅವರನ್ನು ಕಂಡರೆ ತುಂಬಾನೇ ಅಭಿಮಾನ ಇದೆಯಂತೆ. ಗಿಲ್ಲಿ ಜೊತೆ ಸಿನಿಮಾ ಮಾಡೋದಾಗಿ ಶಿವರಾಜ್‌ಕುಮಾರ್ ಅವರು ಈ ಮೊದಲು ಹೇಳಿದ್ದರು. ಆ ಸಂದರ್ಭದ ವಿಡಿಯೋ ಈಗ ವೈರಲ್ ಮಾಡಲಾಗುತ್ತಿದೆ. ಗಿಲ್ಲಿ ಅಭಿಮಾನಿಗಳು ಇದನ್ನು ವೈರಲ್ ಮಾಡಿ, ಶಿವಣ್ಣ ಜೊತೆ ಗಿಲ್ಲಿಯ ಸಿನಿಮಾ ಯಾವಾಗ ಅಂತ ಕಾಯ್ತಾ ಇರೋ ಹಾಗಿದೆ ಸದ್ಯದ ಸ್ಥಿತಿಗತಿ.

ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದವರು

ಗಿಲ್ಲಿ ನಟ ನಟರಾಜ್ ಅವರು ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದವರು. ಅವರು ಈ ಮೊದಲು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸರ್‌'ನಲ್ಲಿ ಡ್ಯಾನ್ಸರ್ ಅಲ್ಲದೇ ಕಾಣಿಸಿಕೊಂಡಿದ್ದರು. ಈ ಶೋಗೆ ಶಿವರಾಜ್‌ಕುಮಾ‌ರ್ ಅವರು ಜಡ್ಜ್ ಸ್ಥಾನದಲ್ಲಿ ಇದ್ದರು. ಶಿವರಾಜ್‌ಕುಮಾರ್ ಅವರಿಗೆ ಗಿಲ್ಲಿಯ ಕಾಮಿಡಿ ಭಾರೀ ಇಷ್ಟ ಆಗಿತ್ತು. ಈ ವೇಳೆ ಶಿವಣ್ಣ ಅವರು ಹೇಳಿದ ಒಂದು ಮಾತು ಗಮನ ಸೆಳೆದಿತ್ತು.

ಶಿವರಾಜ್‌ಕುಮಾ‌ರ್ ಅವರು ಗಿಲ್ಲಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಇದಕ್ಕೆ ಕಾರಣ ಅವರ ನಡೆದುಕೊಳ್ಳುತ್ತಿದ್ದ ರೀತಿ. ಕಾಮಿಡಿ ಟೈಮಿಂಗ್ ನೋಡಿ ಶಿವಣ್ಣ ಕಂಗಾಲಾಗಿದ್ದರು. ಆಗ ಅವರು ಒಂದು ಮಾತನ್ನು ಹೇಳಿದ್ದರು. 'ನಿಜವಾಗಲೂ ಇವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು. ಗಿಲ್ಲಿ ನೋಡಿದಾಗಲೆಲ್ಲ ತಮಿಳಿನ ಹಾಸ್ಯ ನಟ ಚಂದ್ರಬಾಬುನ ನೆನಪಾಗುತ್ತಾರೆ. ಅವರು ಅದ್ಭುತ ಕಾಮಿಡಿಯನ್. ಇವರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡುತ್ತೇನೆ' ಎಂದು ಶಿವಣ್ಣ ಹೇಳಿದ್ದರು.

ಶಿವಣ್ಣ ಆ ಮಾತುಗಳನ್ನು ಹೇಳಿದ ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಬಂದಿದ್ದ ದಿನಕರ್ ತುಗುದೀಪ ಕೂಡ ಗಿಲ್ಲಿಯ ನಟನೆ-ಕಾಮಿಡಿ ಕಂಡು ಇಷ್ಟಪಟ್ಟಿದ್ದರು. ಅವರ ಡ್ಯಾನ್ಸ್ ಅಲ್ಲವೇ ಅಲ್ಲ, ಬದಲಿಗೆ ಡ್ಯಾನ್ಸ್ ಬಳಿಕ ಗಿಲ್ಲಿ ನಟ ಮಾತನಾಡುತ್ತಾ ಇದ್ದ ರೀತಿಗೆ ದಿನಕರ್ ತೂಗುದೀಪ ಫುಲ್ ಫಿದಾ ಅಗಿದ್ದರು.

ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿವೆ

ಬಿಗ್ ಬಾಸ್‌ ಗೆಲ್ಲುವ ಫೆವರೆಟ್ ಎನ್ನಲಾಗುತ್ತಿರುವ ಗಿಲ್ಲಿ ನಟನಿಗೆ ಈಗಾಗಲೇ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿವೆ. ಈಗ ಬಿಗ್ ಬಾಸ್ ಶೋನಲ್ಲಿ ಗಿಲ್ಲಿಯ ಟೈಮಿಂಗ್ ಹಾಗೂ ಪಂಚಿಂಗ್ ಡೆಲಿವರಿ ಎಲ್ಲವೂ ಬಹಳಷ್ಟು ಜನರಿಗೆ ಇಷ್ಟ ಆಗಿದೆ. ಹೀಗಾಗಿ, ಅವರಿಗೆ ಬರೋ ಆಫರ್ ಮತ್ತಷ್ಟು ಹೆಚ್ಚಬಹುದು ಎನ್ನುವ ನಿರೀಕ್ಷೆ ಇದೆ. ಈಗಂತೂ ಎಲ್ಲಕ್ಕಿಂತ ಮುಖ್ಯವಾಗಿ, ದರ್ಶನ್ 'ಡೆವಿಲ್' ಸಿನಿಮಾದಲ್ಲಿನ ಅವರ ನಟನೆ ಹಾಗೂ ಪಂಚಿಂಗ್ ಡೈಲಾಗ್ ಭಾರೀ ಗಮನಸೆಳೆಯುತ್ತಿದೆ. ಇದೀಗ, ನಟ ಶಿವಣ್ಣ ಜೊತೆಗೆ ಗಿಲ್ಲಿ ಯಾವಾಗ ಸಿನಿಮಾ ಮಾಡಬಹುದು, ದಿನಕರ್ ತೂಗುದೀಪ ಅವರು ಗಿಲ್ಲಿಗೆ ಯಾವಾಗ ಅವಕಾಶ ಕೊಡಬಹುದು ಎಂದು ಗಿಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟನ ಜೊತೆ ಕಾಣಿಸಿಕೊಂಡ ದುನಿಯಾ ವಿಜಯ್ ಪುತ್ರಿ: ಯಾಕೆ ಗೊತ್ತಾ?
ಲವ್ ಅಲ್ಲ, ಥ್ರಿಲ್ಲರ್ ಅಲ್ಲ.. ಇದು ಫ್ಯಾಂಟಸಿ + ಲಾಜಿಕ್: 45 ಬಗ್ಗೆ ಅರ್ಜುನ್ ಜನ್ಯಾ ಹೇಳಿದ್ದೇನು?