ಮತ್ತೆ 'ಕಾಂತಾರ' ಟೈಮ್‌ ಓಲ್ಡ್ ವಿಡಿಯೋ ವೈರಲ್.. ರಶ್ಮಿಕಾ ಗೆದ್ದಾಗಲೆಲ್ಲಾ ಮೇಲೆದ್ದು ಬರೋದ್ಯಾಕೆ?

Published : Mar 05, 2025, 06:39 PM ISTUpdated : Mar 05, 2025, 08:32 PM IST
ಮತ್ತೆ 'ಕಾಂತಾರ' ಟೈಮ್‌ ಓಲ್ಡ್ ವಿಡಿಯೋ ವೈರಲ್.. ರಶ್ಮಿಕಾ ಗೆದ್ದಾಗಲೆಲ್ಲಾ ಮೇಲೆದ್ದು ಬರೋದ್ಯಾಕೆ?

ಸಾರಾಂಶ

ಕಾಂತಾರ ರಿಲೀಸ್ ಆಗಿ ಅದೆಷ್ಟೋ ವರ್ಷ ಆಯ್ತು.. ರಶ್ಮಿಕಾಗೆ ಈ ಪ್ರಶ್ನೆಯನ್ನು ತೆಲುಗು ಮೀಡಿಯಾದಲ್ಲಿ ಕೇಳಿದ್ದು, ಅದಕ್ಕೆ ರಶ್ಮಿಕಾ ಉತ್ತರ ಕೊಟ್ಟಿದ್ದು ಎಲ್ಲವೂ ಈಗ ತುಂಬಾ ಹಳೆಯ ಕಥೆ. ಆದರೆ, ಈಗ ಅದು ಮತ್ತೆ ಮೇಲೆದ್ದು ಬಂದಿದ್ಯಾಕೆ?.. ನೋಡಿ..

ಕನ್ನಡದಲ್ಲಿ ಹಿಟ್ ದಾಖಲಿಸಿ ಬಳಿಕ ತೆಲುಗಿನಲ್ಲೂ ಸಕ್ಸಸ್ ಕಂಡ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಾಲಿವುಡ್‌ನಲ್ಲಿ ಕೂಡ ಯಶಸ್ಸು ಸಾಧಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಕಾಲಿಟ್ಟಲ್ಲೆಲ್ಲಾ ಗೆಲುವು ಕಂಡಿದ್ದೇ ಹೆಚ್ಚು. ಈ ಮೂಲಕ ಅವರು ಚಿತ್ರರಂಗದ ಪಾಲಿಗೆ ಲಕ್ಕೀ ಹೀರೋಯಿನ್ ಎನ್ನಿಸಿದ್ದಾರೆ. ಕನ್ನಡದ ಬಗ್ಗೆ ಅವರಿಗೆ ಅಭಿಮಾನ ಇದೆಯೋ ಇಲ್ಲವೋ.. ಆದರೆ, ಚಿತ್ರರಂಗದಲ್ಲಿ ಅವರಿಗೆ ಅವಕಾಶಕ್ಕೇನೂ ಕೊರತೆಯಿಲ್ಲ..!

ಆದರೆ.. ವಿವಾದ ಅವರ ಬೆನ್ನು ಬಿಡುತ್ತಿಲ್ಲ.. ಇದೀಗ ಕಾಂತಾರ (Kantara) ಸಿನಿಮಾ ಬಿಡುಗಡೆ ಆಗಿ 2-3 ದಿನಗಳಲ್ಲಿ ನನಗೆ ಅದನ್ನು ನೋಡಲು ಸಾಧ್ಯವಾಗಿಲ್ಲ. ಆದ್ರೆ ಇವತ್ತು ನಾನು ನೋಡಿ ಕಾಂತಾರ ಟೀಮ್‌ಗೆ ಕಂಗ್ರಾಟ್ಸ್ ಹೇಳಿದ್ದೇನೆ. ಅದಕ್ಕವರು ಥ್ಯಾಂಕ್ಸ್ ಕೂಡ ಹೇಳಿದ್ದಾರೆ. ಅವೆಲ್ಲಾ ಪರ್ಸನಲ್ ಮೆಸೇಜ್‌ಗಳಲ್ಲೇ ಮುಗಿದುಹೋಗಿದೆ ಅಂತೇನೂ ಇಲ್ಲ, ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಬಂದಿವೆ. ನಾವು ಪ್ರೊಫೆಶನಲೀ ಏನು ಮಾಡ್ತಿವೋ ಅದು ಕ್ಯಾಮೆರಾ ಮುಂದೆ ಇರುತ್ತೆ..

Actor Avinash: ನಾನು ಊರಲ್ಲಿ ಎಮ್ಮೆ ಕಾಯ್ತಾ ಇದ್ದೆ ಅಂತ ಅಣ್ಣಾವ್ರೇ ಹೇಳಿದ್ರಲ್ಲಾ..! 

ಆದ್ರೆ, ನಮ್ಮನಮ್ಮ ಪರ್ಸ್ನಲ್ ಮೆಸೇಜ್‌ಗಳನ್ನೂ ಕೂಡ ನಾವು ಕ್ಯಾಮೆರಾ ಮುಂದೆ ಇಟ್ಟು ಜಗತ್ತಿಗೆ ತೋರಿಸೋದು ಕಷ್ಟ. ನೋಡಿ, ಒಳಗಡೆ ಏನು ನಡೆಯುತ್ತೆ ಅನ್ನೋದನ್ನ ಜಗತ್ತು ನೋಡೋದಕ್ಕೆ ಸಾಧ್ಯವಿಲ್ಲ.. ಅದನ್ನು ದೇವರು ಮಾತ್ರ ನೋಡಬಲ್ಲ.. ನಾವು ನಮ್ಮ ಪ್ರತೊಯೊಂದು ಮೆಸೇಜ್‌ಗಳನ್ನೂ ಕೂಡ ಕ್ಯಾಮೆರಾ ಮುಂದಿಟ್ಟು ಎಲ್ಲರಿಗೂ ತೋರಿಸೋಕೆ ಸಾಧ್ಯವಿಲ್ಲ. 

ಒಮ್ಮೆ ನಾವೇನಾದ್ರೂ ಹಾಗೆ ಮಾಡಿಬಿಟ್ಟರೆ, ಅದನ್ನೂ ಕೂಡ ಇವ್ರು ಸೋಷಿಯಲ್ ಮೀಡಿಯಾದಲ್ಲಿ ಹಾಕಿಬಿಡ್ತಾರೆ.. ಸೋ, ನಾವು ಪರ್ಸ್ನಲ್ ಲೈಫಲ್ಲಿ ಏನೇ ಮಾಡಿದ್ರೂ ಅದನ್ನೂ ಹೇಳೋದಕ್ಕೆ ಆಗಲ್ಲ.. ಅದೇನೇ ಇದ್ರೂ, ನಮ್ಮನಮ್ಮ ಕೆಲಸಗಳನ್ನು ನಾವು ಮಾಡಿದ ಮೇಲೆ ಜಗತ್ತು ಅದನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೆ ಅನ್ನೋದು ಅದಕ್ಕೇ ಬಿಟ್ಟಿದ್ದು.. ಹಾಗಂತೆ, ಹೀಗಂತೆ ಅನ್ನೋದಕ್ಕೆಲ್ಲಾ ಉತ್ತರ ಕೊಡೋಕೆ ಆಗಲ್ಲ, ಕೊಡಬೇಕಾಗಿಯೂ ಇಲ್ಲ..' ಎಂದಿದ್ದಾರೆ ನಟಿ ರಶ್ಮಿಕಾ. 

ಸಾವಿಗೂ ಮೊದಲು ಮಾಲಾಶ್ರೀಗೆ ಪುನೀತ್ ಹೇಳಿದ್ದು: ನೀವು ದುರ್ಗಿ, ಚಾಮುಂಡಿ ತರ ಇರ್ಬೇಕು!

ಕಾಂತಾರ ರಿಲೀಸ್ ಆಗಿ ಅದೆಷ್ಟೋ ವರ್ಷ ಆಯ್ತು.. ರಶ್ಮಿಕಾಗೆ ಈ ಪ್ರಶ್ನೆಯನ್ನು ತೆಲುಗು ಮೀಡಿಯಾದಲ್ಲಿ ಕೇಳಿದ್ದು, ಅದಕ್ಕೆ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಉತ್ತರ ಕೊಟ್ಟಿದ್ದು ಎಲ್ಲವೂ ಈಗ ತುಂಬಾ ಹಳೆಯ ಕಥೆ. ಆದರೆ, ಈಗ ಅದು ಸೋಷಿಯಲ್ ಮೀಡಿಯಾಗಳಲ್ಲಿ ಮತ್ತೆ ಮೇಲೆದ್ದು ಬಂದು ಡಾನ್ಸ್ ಮಾಡುತ್ತಿದೆ. ಅದಕ್ಕೆ ಕಾರಣ, ಇತ್ತೀಚೆಗೆ ನಟಿ ರಶ್ಮಿಕಾ ಮತ್ತೆ ಒಂದು ವಿವಾದದಲ್ಲಿ ಸಿಲುಕಿಕೊಂಡಿದ್ದು ಎನ್ನಬಹುದೇ? ಗೊತ್ತಿಲ್ಲ..

ಆದರೆ, ನಟಿ ರಶ್ಮಿಕಾರದ್ದು ಅದೇನೇ ವಿವಾದಗಳು ಏಳುತ್ತಿರಲಿ ಹಾಗೂ ಮಲಗುತ್ತಿರಲೀ.. ಅವರು ನಟಿಸಿದ ಸಿನಿಮಾಗಳು ಮಾತ್ರ ಯಶಸ್ಸು ಕಾಣುತ್ತಲೇ ಇದೆ. ಇತ್ತೀಚೆಗೆ ಬಂದ ಛಾವಾ ಅದಕ್ಕೆ ಮತ್ತೊಂದು ಉದಾಹರಣೆ.. ಅದಕ್ಕೂ ಮೊದಲು ತೆರೆಗೆ ಬಂದಿದ್ದ 'ಪುಷ್ಪಾ 2' ಸಿನಿಮಾ ಕೂಡ ಒಂದು ಉದಾಹರಣೆ. ರಶ್ಮಿಕಾ ನಟಿಸಿದ ಸಿನಿಮಾಗಳು ಸತತವಾಗಿ ಗೆಲುವು ಕಾಣುತ್ತಿದೆ. 

ರಮ್ಯಾ ಯಾಕ್‌ ಹಿಂಗ್ ಆಡ್ತಿದಾರೆ? ಸ್ಯಾಂಡಲ್‌ವುಡ್ ಕ್ವೀನ್ 'ಚೆಸ್' ಆಡ್ತಿದಾರಾ ಅಂತಿದಾರಲ್ರೀ..!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ