ಯಾವ ಕಾರಣದಿಂದ ಅಪ್ಪು ಇನ್ನಿಲ್ಲ ಅನ್ನೋ ವಿಚಾರವನ್ನೂ ಇನ್ನೂ ನಾಗತ್ತೆ ಬಳಿ ಹೇಳಿಲ್ಲ? ಅಪ್ಪುಗೆ ವಿಶ್ ಮಾಡಿದ ವಿಡಿಯೋ ವೈರಲ್.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದಂದು ಅತ್ತೆ ನಾಗಮ್ಮನವರು ವಿಶ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಪ್ಪುಗೆ 50 ವರ್ಷ ಆಗೋಯ್ತಾ ಎಂದು ಆಶ್ಚರ್ಯ ಪಟ್ಟರು ಹಾಗೂ ಬೇಗ ಬಂದು ಭೇಟಿ ಮಾಡು ಮಗನೆ ಎಂದು ಮನವಿ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇಲ್ಲಿ ಜನರಿಗೆ ಅರ್ಥವಾಗದೇ ಇರುವುದು ಏನೆಂದರೆ ಅಪ್ಪು ಅಗಲಿ 3 ವರ್ಷ ಆದರೂ ಯಾಕೆ ಅವರಿಗೆ ಹೇಳಿಲ್ಲ? ಯಾವ ಕಾರಣದಿಂದ ಮುಚ್ಚಿಟ್ಟಿರುವುದು ಎಂದು? ಈ ಪ್ರಶ್ನೆಗೆ ಗೀತಾ ಶಿವರಾಜ್‌ಕುಮಾರ್ ಉತ್ತರಿಸಿದ್ದಾರೆ.
'ಅಪ್ಪು ವಿಚಾರ ಅತ್ತೆಗೆ ಗೊತ್ತಾಗುವುದು ಬೇಡ. ನಾಗತ್ತೆಗೆ ಈಗ 93 ವರ್ಷ ಅಪ್ಪು ಅಗಲಿ ಮೂರು ವರ್ಷ ಆಗಿದೆ. ಇದುವರೆಗೂ ಅವರಿಗೂ ಅತ್ತೆಗೆ ಸಣ್ಣ ಸುಳಿವು ಸಿಕ್ಕಿಲ್ಲ.ಈ ವಿಚಾರ ಮನಸ್ಸಿಗೆ ತೆಗೆದುಕೊಂಡು ಬಿಡುತ್ತಾರೆ ಹೀಗಾಗಿ ಆ ಜೀವ ಇರಲಿ ಅವರ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ. ಒಂದು ವೇಳೆ ಗೊತ್ತಾಗಿಬಿಟ್ಟರೆ ಖಂಡಿತಾ ನೋವು ಮಾಡಿಕೊಳ್ಳುತ್ತಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಮಗಳಿಗೆ ಡ್ಯಾನ್ಸ್ ಹೇಳಿಕೊಟ್ಟ ಖ್ಯಾತ ರಿಯಾಲಿಟಿ ಶೋ ಸ್ಪರ್ಧಿ; ನಿಜಕ್ಕೂ ಎಲ್ಲರೂ ಶಾಕ್
'ಎರಡು ಮೂರು ವರ್ಷಗಳಿಂದ ಅವರಿಗೆ ಹುಷಾರಿಲ್ಲ. ಈ ವಿಚಾರ ಕೇಳಿದರೆ ಅವರಿಗೆ ತಡೆಯುವ ಶಕ್ತಿ ಇದ್ಯೋ ಇಲ್ವೋ ಅಂತ ಮನೆಯಲ್ಲಿ ಚರ್ಚೆ ಮಾಡಿ ಅತ್ತೆಗೆ ಹೇಳುವುದು ಎಂದು ನಿರ್ಧರಿಸಿದ್ದರು'ಎಂದು ಗೀತಾ ಹೇಳಿದ್ದಾರೆ. ಅಮೆರಿಕಾದಲ್ಲಿ ಆಪರೇಷನ್ ಮುಗಿಸಿಕೊಂಡು ಕೊಂಡ ವಿಶ್ರಾಂತಿ ಪಡೆದ ಶಿವಾಜ್‌ಕುಮಾರ್ ಇತ್ತೀಚಿಗೆ ಗಚೂರಿಗೆ ಭೇಟಿ ನೀಡಿದ್ದರು. ಆಗ ಅತ್ತೆ ನಾಗಮ್ಮನವರ ಜೊತೆ ಮತನಾಡಿಕೊಂಡು ಸಮಯ ಕಳೆದರು.'ಇತ್ತೀಚಿಗೆ ನಾವು ಹೋಗಿ ಭೇಟಿ ಮಾಡಿ ಬಂದ್ವಿ ಆ ಸಮಯದಲ್ಲಿ ಈ ವಿಚಾರ ಬರುವುದಿಲ್ಲ ಅದೇ ನಮಗೂ ಆಶ್ಚರ್ಯ.ಕೆಲವೊಂದು ಅಲ ಅನಿಸುತ್ತದೆ ಅವರಿಗೆ ಈ ವಿಚಾರ ಗೊತ್ತಾಗಿದ್ಯಾ? ನನಗೆ ಗೊತ್ತಿಲ್ಲ ಅಂದುಕೊಂಡಿದ್ದಾರೆ ಹಾಗೆ ಇದ್ದು ಬಿಡೋಣ ಅನಿಸುತ್ತದೆ ಎಂದು ಅವರು ಸುಮ್ಮನೆ ಇದ್ದಾರಾ ಅಂತ ನಮಗೂ ಅನಿಸುತ್ತದೆ. ಅತ್ತೆ ಒಂದು ಸಲನೂ ಊಹೆ ಮಾಡಿಕೊಂಡಿಲ್ವಾ? ಗೊತ್ತಿದ್ದರೂ ಗೊತ್ತಿರಬಹುದು ಅನಿಸುತ್ತದೆ. ನಾನು ನೋಡಿಲ್ಲ ಅಪ್ಪು ಇದಾನೆ ಅಂದುಕೊಂಡಿರಬಹುದು'ಎಂದು ಶಿವಾರಾಜ್‌ಕುಮರ್ ಹೇಳಿದ್ದಾರೆ.
ಅಪ್ಪಾಜಿ ಅಮ್ಮ ರೀತಿ ನಾವು ಲೈಫ್ ಅನುಸರಿಸಲಿಲ್ಲ, ಹೆಸರು ಹಣ ಮರೆ ಮಾಚಿಬಿಡ್ತು: ಪೂರ್ಣಿಮಾ ರಾಮ್‌ಕುಮಾರ್