
ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಐಟಿ ಉದ್ಯೋಗಿ ಸಪ್ತಮಿ ಗೌಡ. ಕಾಂತಾರ ಚಿತ್ರದಲ್ಲಿ ಲೀಲಾ ಆಗಿ ಮಿಂಚಿದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಪ್ರಾಜೆಕ್ಟ್‌ಗಳು ಸಪ್ತಮಿ ಗೌಡ ಕೈ ಸೇರುತ್ತಿದೆ. ಸಪ್ತಮಿ ಜರ್ನಿ ಶುರು ಮಾಡಿದ ದಿನದಿಂದ ನೇಮ್,ಫೇಮ್, ಹಣ ಮತ್ತು ಅವಕಾಶ ಹುಡುಕಿಕೊಂಡು ಬರುತ್ತಿದೆ. ಈ ಹೆಸರಿನಲ್ಲಿ ಪವರ್ ಇದ್ಯಾ? ಈ ಹೆಸರನ್ನು ಆಯ್ಕೆ ಮಾಡಿದ್ದು ಯಾರು? ಈ ಹೆಸರಿನ ಅರ್ಥವನ್ನು ಸ್ವತಃ ಸಪ್ತಮಿ ವಿವರಿಸಿದ್ದಾರೆ.
'ನಾನು ಹುಟ್ಟಿದ್ದು ಶನಿವಾರ. ನನ್ನ ತಂದೆಯ ಲಕ್ಕಿ ನಂಬರ್ ಕೂಡ 7 ಆಗಿತ್ತು ಅನ್ನೋ ಕಾರಣಕ್ಕೆ ಸಪ್ತಮಿ ಅಯ್ಕೆ ಮಾಡಿದ್ದರು. ಅಲ್ಲದೆ ನನ್ನ ತಂದೆಗೆ ವೈಟ್ ಅಂದ್ರೆ ತುಂಬಾ ಇಷ್ಟ. 7 ಬಣ್ಣಗಳು ಸೇರಿದರಂತೆ ಬಿಳಿ ಬಣ್ಣ. 7 ಜನ್ಮ, 7 ಬಣ್ಣ, 7 ಸಪ್ತ ರಿಷಿಗಳು ಹಾಗೂ 7 ಸಪ್ತ ಸಾಗರ...ಹೀಗೆ ಸಾಕಷ್ಟು ಇದೆ. 7 ತುಂಬಾ ಸ್ಪೆಷಲ್ ಮತ್ತು ಲಕ್ಕಿ ನಂಬರ್ ಅಂತ ಸಪ್ತಮಿ ಎಂದು ನನಗೆ ಹೆಸರಿಟ್ಟಿದ್ದು. ಇದುವರೆಗೂ ವರ್ಕ್ ಆಗಿದೆ. ಇದರ ಮೇಲೆ ನನಗೆ ನಂಬಿಕೆ ಇಲ್ಲ ಆದರೆ ಕಾನ್ಫಿಡೆನ್ಸ್ ಇದೆ ಅಷ್ಟೇ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಸಪ್ತಮಿ ಮಾತನಾಡಿದ್ದಾರೆ.
ಕಾಲು ಸುಟ್ಟಿಕೊಂಡು ಹಾಸಿಗೆ ಹಿಡಿದ ಹೆಂಡತಿ ; ಎಡವಟ್ಟಿನ ಬಗ್ಗೆ ಕ್ಲಾರಿಟಿ ಕೊಟ್ಟ ಮಾಸ್ಟರ್ ಆನಂದ್
'ಮದುವೆಗೆ ಗಂಡು ನೋಡುವ ಕಾರ್ಯಕ್ರಮ ಶುರು ಮಾಡಿದ್ದರು. ನಮ್ಮ ತಂದೆ ಒಮ್ಮೆ ತೋರಿಸಿದ್ದರು. ಅಮ್ಮ ಒಬ್ಬ ಹುಡುಗನ ಫೋಟೋ ತೋರಿಸಿದ್ದರು ..'ನನಗೆ ಸಮಸ್ಯೆ ಇಲ್ಲ ಬೇಕಿದ್ದರೆ ನೀನೇ ಮದುವೆ ಮಾಡಿಕೋ ಅಂತ' ಹೇಳಿದ್ದೆ. ಅದಾದ ಮೇಲೆ ಸುಮ್ಮನಾಗಿಬಿಟ್ಟರು. ನಾನು ಏನಾದರೂ ಮದುವೆ ಬಗ್ಗೆ ಹೇಳಿದರೆ ಹುಡುಕಲು ಶುರು ಮಾಡುತ್ತಾರೆ ಇಲ್ಲ ಅಂದ್ರೆ ಇಲ್ಲ. ತಂದೆ ತಾಯಿಗೆ ಹುಡುಕಲು ಹೇಳಿದ್ದೀನಿ ಆದರೆ....ನನ್ನ ವೃತ್ತಿಯನ್ನು ತುಂಬಾ ಇಷ್ಟ ಪಟ್ಟು ಆಯ್ಕೆ ಮಾಡಿರುವುದು ಹೀಗಾಗಿ ಅವರಿಗೂ ಇಷ್ಟ ಆಗಬೇಕು. ಅವನಿಗೆ ಓಕೆ ಆಗಿದರೂ ಅವರ ಅಪ್ಪ ಅಮ್ಮನಿಗೆ ಓಕೆ ಆಗಿರಬಹುದು ಆದರೆ ಕೆಲವು ಸಂಬಂಧಿಕರು ಇರುತ್ತಾರೆ ಅಲ್ವಾ ನಿಮ್ಮ ಸೊಸೆ ಇವರೊಟ್ಟಿಗೆ ರೊಮ್ಯಾನ್ಸ್ ಮಾಡಿದರು ಅಂತ ಕಾಮೆಂಟ್ ಮಾಡುತ್ತಾರೆ. ಗೊತ್ತೋ ಗೊತ್ತಿಲ್ಲದೆನೋ ಅದು ತೊಂದರೆ ಮಾಡುತ್ತದೆ. ಅವರ ಮಾತುಗಳು ನನ್ನ ಗಂಡನಿಗೂ ತೊಂದರೆ ಆಗಿಬಿಡುತ್ತದೆ. ನನ್ನ ಫುಲ್ ಶ್ರಮ ಹಾಕಿ ಇರುತ್ತೀನಿ ಆದರೆ ಆಗಲಿಲ್ಲ ಅಂದ್ರೆ ಹೊರ ನಡೆದುಬಿಡುತ್ತೀನಿ. ಈಗ ಸಿನಿಮಾದಲ್ಲಿ ಶೂಟಿಂಗ್ 10 ಗೆಂಟೆಗೆ ಮುಗಿಯುತ್ತದೆ ಎನ್ನುತ್ತೀವಿ ಆದರೆ ರಾತ್ರಿ 2 ಗಂಟೆಗೆ ಮುಗಿಯಬಹುದು. ಯಾಕೆ ಇಷ್ಟು ಲೇಟ್ ಆಯ್ತು ಅಂತ ಪದೇ ಪದೇ ಪ್ರಶ್ನೆ ಮಾಡುವ ಬದಲು ಅರ್ಥ ಮಾಡಿಕೊಳ್ಳುವವರು ಸಿಗಬೇಕು. ಜೀವನದಲ್ಲಿ ಖುಷಿಯಾಗಿದ್ದೀನಿ' ಎಂದು ಸಪ್ತಮಿ ಗೌಡ ಹೇಳಿದ್ದಾರೆ.
ಎರಡು ಫ್ಯಾಮಿಲಿ ನಡುವೆ ಹಲವು ವಿಚಾರಗಳನ್ನು ಸರಿ ಮಾಡಲು ರಾಯನ್ ಬರಬೇಕಿತ್ತು, ಈಗ ಚೆನ್ನಾಗಿದ್ದೀವಿ: ಮೇಘನಾ ರಾಜ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.