ಎರಡು ಫ್ಯಾಮಿಲಿ ನಡುವೆ ಹಲವು ವಿಚಾರಗಳನ್ನು ಸರಿ ಮಾಡಲು ರಾಯನ್ ಬರಬೇಕಿತ್ತು, ಈಗ ಚೆನ್ನಾಗಿದ್ದೀವಿ: ಮೇಘನಾ ರಾಜ್

Published : Mar 10, 2025, 09:11 AM ISTUpdated : Mar 10, 2025, 09:43 AM IST
ಎರಡು ಫ್ಯಾಮಿಲಿ ನಡುವೆ ಹಲವು ವಿಚಾರಗಳನ್ನು ಸರಿ ಮಾಡಲು ರಾಯನ್ ಬರಬೇಕಿತ್ತು, ಈಗ ಚೆನ್ನಾಗಿದ್ದೀವಿ: ಮೇಘನಾ ರಾಜ್

ಸಾರಾಂಶ

ನಟಿ ಮೇಘನಾ ರಾಜ್ ಮತ್ತು ದಿವಂಗತ ಚಿರಂಜೀವಿ ಸರ್ಜಾ ಅವರ ಮಗ ರಾಯನ್, ಕುಟುಂಬಕ್ಕೆ ಬೆಳಕಾಗಿದ್ದಾರೆ. ಚಿರು ಅಗಲಿಕೆಯ ನೋವಿನಲ್ಲಿದ್ದ ಕುಟುಂಬವನ್ನು ರಾಯನ್ ಒಂದುಗೂಡಿಸಿದನು. ರಾಯನ್ ಹುಟ್ಟಿನಿಂದ ಕುಟುಂಬದಲ್ಲಿ ಸಂಭ್ರಮ ಮರುಕಳಿಸಿತು ಎಂದು ಮೇಘನಾ ಹೇಳಿದ್ದಾರೆ. ರಾಯನ್, ಚಿರು ಅವರಂತೆಯೇ ಝೋನ್ ಔಟ್ ಆಗುವುದು ಮತ್ತು ರೆಡಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು ಮುಂತಾದ ಗುಣಗಳನ್ನು ಹೊಂದಿದ್ದಾನೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಟಾಪ್‌ ಸೆಲೆಬ್ರಿಟಿ ಕಿಡ್‌ ಪಟ್ಟಿ ಸೇರುವುದು ರಾಯನ್ ರಾಜ್ ಸರ್ಜಾ. ನಟಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಮುದ್ದಿನ ಮಗ. ಚಿರು ಅಗಲಿದ ಮೇಲೆ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ರಾಯನ್. ಫ್ಯಾಮಿಲಿಗಳ ನಡುವೆ ಏನೋ ಸರಿಯಾಗಿಲ್ಲ, ಆ ಸಮಸ್ಯ ಇದೆ ಈ ಸಮಸ್ಯೆ ಇದೆ ಎಂದು ಗಾಸಿಪ್ ಕೂಡ ಹಬ್ಬಿತ್ತು. ಆದರೆ ಎಲ್ಲರೂ ಗಮನ ಕೊಟ್ಟಿದ್ದು ಮೇಘನಾ ರಾಜ್ ಆರೋಗ್ಯದ ಮೇಲೆ. ಇಡೀ ಕರ್ನಾಟಕಕ್ಕೆ ಆಸೆ ಇತ್ತು ಮೇಘನಾ ಹೊಟ್ಟೆಯಲ್ಲಿ ಚಿರು ಹುಟ್ಟಿ ಬರಬೇಕು ಎಂದು. ಅದೇ ರೀತಿ ರಾಯನ್ ಹುಟ್ಟಿದ್ದಾರೆ. ರಾಯನ್ ಎಂಟ್ರಿ ಆದ್ಮೇಲೆ ಜೀವನ ಹೇಗೆ ಬದಲಾಗಿದೆ? ರಾಯನ್ ಫ್ಯಾಮಿಲಿಯಲ್ಲಿ ಹೇಗಿದ್ದಾನೆ? ಚಿರು ಮತ್ತು ರಾಯನ್ ಒಂದೇ ಗುಣದವರಾ? ಮೇಘನಾ ರಾಜ್‌ ಹಂಚಿಕೊಂಡಿದ್ದಾರೆ.   

'ಚಿರು ಅಗಲಿದ ಮೇಲೆ ಪ್ರತಿಯೊಬ್ಬರು ಅವರದ್ದೇ ನೋವಿನಲ್ಲಿ ಇದ್ದರು. ಕುಟುಂಬದಲ್ಲಿ ಹಲವರು ವಿಚಾರಗಳನ್ನು ಸರಿ ಮಾಡಲು ರಾಯನ್ ಬರಬೇಕಿತ್ತು. ರಾಯನ್ ಎಂಟ್ರಿ ಆಗಿದ ತಕ್ಷಣ ಫ್ಯಾಮಿಲಿಯಲ್ಲಿ ಸೆಲೆಬ್ರೆಷನ್ ಶುರುವಾಗಿತ್ತು. ನಮ್ಮ ಫ್ಯಾಮಿಲಿಯಲ್ಲಿ ರಾಯನ್ ನಿಜಕ್ಕೂ glue ಇದ್ದ ಹಾಗೆ. ರಾಯನ್ ಬಂದ ಮೇಲೆ ಫ್ಯಾಮಿಲಿಯಲ್ಲಿ ತುಂಬಾ ಡೈನಾಮಿಕ್ಸ್‌ಗಳು ಬದಲಾಗಿತ್ತು. ಮೊದಲು ಇದ್ದಕ್ಕಿದ್ದಂತೆ ಹೆಚ್ಚಾಗಿ ಕ್ಲೋಸ್ ಆಗಲು ಕಾರಣ ರಾಯನ್. ಫ್ಯಾಮಿಲಿಯಲ್ಲಿ ಸಾಕಷ್ಟು ಕನ್ಫೂಷನ್‌ ಇತ್ತು ನಾವೆಲ್ಲರೂ ಬ್ಯಾಲೆನ್ಸ್‌ ಹುಡುಕುವ ಪ್ರಯತ್ನದಲ್ಲಿ ಇದ್ವಿ ಆಗ ರಾಯನ್ ಬಂದಿದ್ದು. ಇಲ್ಲಿ ಯಾರು ಯಾರನ್ನೂ ದೂರಬಾರದು. ನಾವು ಮನುಷ್ಯರು ಈ ರೀತಿ ಆಗೇ ಆಗುತ್ತದೆ. ರಾಯನ್ ಬಂದಾ ಅಂತ ಗೊತ್ತಾಗಿದ ತಕ್ಷಣ ಎಲ್ಲರೂ ಒಟ್ಟಿಗೆ ಬಂದ್ವಿ' ಎಂದು ಆರ್‌ಜೆ ಮಯೂರ ಯೂಟ್ಯೂಬ್ ಸಂದರ್ಶನದಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ. 

ಕಾಲು ಸುಟ್ಟಿಕೊಂಡು ಹಾಸಿಗೆ ಹಿಡಿದ ಹೆಂಡತಿ ; ಎಡವಟ್ಟಿನ ಬಗ್ಗೆ ಕ್ಲಾರಿಟಿ ಕೊಟ್ಟ ಮಾಸ್ಟರ್ ಆನಂದ್

'ರಾಯನ್ ಸೇಮ್ ಚಿರು ತರನೇ. ಚಿರು ರೀತಿ ರಾಯನ್ ಝೋನ್ ಔಟ್ ಆಗುತ್ತದೆ. ನಾನು ಮಾತನಾಡುತ್ತಿರುತ್ತೀನಿ ಆದರೆ ಅವನ ಕೆಲಸ ಅವನು ಮಾಡುತ್ತಲೇ ಇರುತ್ತಾನೆ. ಚಿರು ಕೂಡ ಹಾಗೆ ಇದ್ದರು. ಮತ್ತೊಂದು ರೆಡಿಯಾಗುವ ವಿಚಾರ. ಚಿರು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದರು ರೆಡಿಯಾಗಲು ಈಗ ರಾಯನ್ ಕೂಡ ಹಾಗೆ ಮಾಡುತ್ತಿದ್ದಾನೆ. ರಾಯನ್ ರಾಯನ್ ಸ್ನಾನ ಮಾಡು ಊಟ ಮಾಡು ಅಂದ್ರೆ 5 ನಿಮಿಷ ಅಂತಾನೆ. ಈ 5 ನಿಮಿಷ ಹೇಳುವ ಅಭ್ಯಾಸ ಹೇಗೆ ಬಂತು ಗೊತ್ತಿಲ್ಲ ಆದರೆ ಚಿರು ಕೂಡ 5ನಿಮಿಷ ಎಂದು ಹೇಳುತ್ತಿದ್ದರು. ಯಾವುದೇ ಕೆಲಸ ಕೇಳಿದರು 5 ನಿಮಿಷ ಕುಟ್ಟಿಮಾ ಮಾಡುತ್ತೀನಿ ಎನ್ನುತ್ತಿದ್ದರು'ಎಂದು ಗೋಲ್ಡ್ ಕ್ಲಾಸ್‌ ವಿತ್ ಮಯೂರದಲ್ಲಿ ಮೇಘನಾ ಹೇಳಿದ್ದಾರೆ. 

ನನ್ನಂಥ ಕೆಟ್ಟ ಎಂಪ್ಲಾಯಿ ಯಾರೂ ಇಲ್ಲ, ಕೈಗೆ 60 ಸಾವಿರ ಬರ್ತಿದ್ದಂತೆ ಕೆಲಸ ಬಿಡುವ ನಿರ್ಧಾರ ಮಾಡಿದೆ: ಸಪ್ತಮಿ ಗೌಡ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ