
ಕಲಾವಿದರು ಕನ್ನಡ ಬೆಳೆಸಿ ಉಳಿಸುವ ಕೆಲಸ ಮಾಡುತ್ತಿಲ್ಲ ಎಂದು ರಾಜಕಾರಣಿಗಳಿಂದ ಕೇಳಿ ಬರುತ್ತಿದೆ. ಹಲವರು ಇಲ್ಲಿ ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಕನ್ನಡದಲ್ಲಿ ಬೆಳೆದು ಕನ್ನಡಕ್ಕೆ ಸೇವೆ ಸಲ್ಲಿಸದೆ ಪರ ಭಾಷೆಯಲ್ಲಿ ಮಿಂಚುತ್ತಿದ್ದಾರೆ ಹಾಗೂ ಇಲ್ಲಿರುವ ಕಲಾವಿದರು ಎಲ್ಲಿ ಹೋದ್ರಿ? ಯಾಕೆ ನೀವು ಬರುತ್ತಿಲ್ಲ ಎಂದು ಪ್ರಶ್ನೆ ಎದುರಾಗುತ್ತಿದೆ. ಕೆಲವು ದಿನಗಳ ಹಿಂದೆ ಖಾಸಗಿ ಅಂಗಡಿ ಓಪನಿಂಗ್ ಕಾರ್ಯಕ್ರಮದಲ್ಲಿ ನಿಶ್ವಿಕಾ ನಾಯ್ಡು ಭಾಗಿಯಾಗಿದ್ದರು, ಈ ವೇಳೆ ಈ ಹೇಳಿಕೆಗಳ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
'ಭಾಷೆ ಸಿನಿಮಾ ಅಂತ ಬಂದಾಗ ನಾವು ಒಟ್ಟುಗೂಡಿ ಕೆಲಸ ಮಾಡುತ್ತೀವಿ. ಅದೇ ನಮ್ಮ ಜೀವನ. ಇದಕ್ಕೆ ನಾವು ಸಪೋರ್ಟ್ ಮಾಡುವುದಿಲ್ಲ ಅನ್ನೋದು ಹಾರ್ಶ್ ಸ್ಟೇಟ್ಮೆಂಟ್ ಆಗಿರುತ್ತದೆ. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಪೋರ್ಟ್ ಮಾಡುತ್ತಿದ್ದೀವಿ. ಏನೋ ಒಂದು ಕೆಲಸದಿಂದ ಆ ಸಂದರ್ಭದಲ್ಲಿ ನಾವು ಇರಲು ಆಗದೇ ಇದ್ದಂತೆ ಸಮಯದಲ್ಲಿ ಅವರು ನಮ್ಮನ್ನು ಕ್ಷಮಿಸಬೇಕು. ಯಾವುದೇ ಉದ್ದೇಶದಿಂದ ಮಾಡಿರುವ ಸಂದರ್ಭ ಅಲ್ಲ. ಆರ್ಟಿಸ್ಟ್‌ಗಳಾಗಿ ನಾವು ಕಾಣಿಸಿಕೊಂಡಾಗ ನಮಗೆ ಖುಷಿ ಜಾಸ್ತಿ, ಜನರೊಟ್ಟಿಗೆ ಇದ್ದಷ್ಟು ಖುಷಿ ಜಾಸ್ತಿ ಹೀಗಿರುವಾಗ ನಾವು ಯಾಕೆ ಮನೆಯಲ್ಲಿ ಕೂರುತ್ತೀವಿ ಹೇಳಿ?' ಎಂದು ನಿಶ್ವಿಕಾ ನಾಯ್ಡು ಮಾತನಾಡಿದ್ದಾರೆ.
ಎರಡು ಫ್ಯಾಮಿಲಿ ನಡುವೆ ಹಲವು ವಿಚಾರಗಳನ್ನು ಸರಿ ಮಾಡಲು ರಾಯನ್ ಬರಬೇಕಿತ್ತು, ಈಗ ಚೆನ್ನಾಗಿದ್ದೀವಿ: ಮೇಘನಾ ರಾಜ್
'ಕನ್ನಡದಲ್ಲಿ ಬೆಳೆದು ಕನ್ನಡದಲ್ಲಿ ಕಾರ್ಯಕ್ರಮ ಮಾಡಿದರೆ ಬರುವುದಿಲ್ಲ ಅನ್ನೋ ವ್ಯಕ್ತಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಹೇಳಿಕೆ ನೀಡಿರುವವರ ಬಗ್ಗೆನೂ ನಾನು ಏನೂ ಹೇಳುವುದಿಲ್ಲ. ಅವರು ನೀಡಿರುವ ಸ್ಟೇಟ್ಮೆಂಟ್ ಬಗ್ಗೆ ನಾನು ಕೇಳಿಸಿಕೊಂಡಿಲ್ಲ ಹಾಗೂ ಮತ್ತೊಬ್ಬರ ಬಗ್ಗೆ ಈ ರೀತಿ ಮಾತನಾಡಬೇಕು ಅಂತ ಹೇಳುವ ಅರ್ಹತೆ ನನಗೆ ಇಲ್ಲ. ಕನ್ನಡಕ್ಕೆ ಇಲ್ಲಿ ಯಾರೂ ಅವಮಾನ ಮಾಡುತ್ತಿಲ್ಲ ಇದು ಅವರ ವಿವೇಚನೆಗೆ ಬಿಟ್ಟಿದ್ದು' ಎಂದು ನಿಶ್ವಿಕಾ ನಾಯ್ಡು ಹೇಳಿದ್ದಾರೆ. ನಿಶ್ವಿಕಾ ಮಾತೃಭಾಷೆ ಕನ್ನಡ ಅಲ್ಲದಿದ್ದರೂ ಕೂಡ ಕನ್ನಡ ಕಲಿತು ಸ್ಪಷ್ಟವಾಗಿ ಮಾತನಾಡುತ್ತಿರುವುದುಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ತಡವಾದರೂ ಪರ್ವಾಗಿಲ್ಲ ಎಂದು ನಿಶ್ವಿಕಾ ಕನ್ನಡ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಕಾಲು ಸುಟ್ಟಿಕೊಂಡು ಹಾಸಿಗೆ ಹಿಡಿದ ಹೆಂಡತಿ ; ಎಡವಟ್ಟಿನ ಬಗ್ಗೆ ಕ್ಲಾರಿಟಿ ಕೊಟ್ಟ ಮಾಸ್ಟರ್ ಆನಂದ್
ವಿಡಿಯೋ ಟ್ರೋಲ್?
'ಒಂದು ಸಮಯದಲ್ಲಿ ನನ್ನ ಫ್ರೆಂಡ್ ಜೊತೆ ಪಾರ್ಟಿ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ಅಲ್ಲಿವರೆಗೂ ನಾನು ಯಾವ ವಿಡಿಯೋ ಅಪ್ಲೋಡ್ ಮಾಡಿರಲಿಲ್ಲ ಆದರೆ ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ಸಮಯದಲ್ಲಿ ಟ್ರೋಲ್ ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಗೊತ್ತಾಗಲಿಲ್ಲ ....ಅಯ್ಯೋ ನಾನು ಮನೆಯಿಂದ ಹೊರಗಡೆ ಹೋಗುವುದಿಲ್ಲ ಜನರಿಗೆ ಕಾಣಿಸಿಕೊಳ್ಳುವುದಿಲ್ಲ ಅನ್ನೋ ಮೈಂಡ್‌ಸೆಟ್‌ಗೆ ಬಂದು ಬಿಟ್ಟೆ. ಆ ಸಮಯದಲ್ಲಿ ಸಪೋರ್ಟ್ ಆಗಿ ನಿಂತಿದ್ದು ನನ್ನ ತಾಯಿ. ನಿನ್ನ ತಾಯಿಯಾಗಿ ನನಗೆ ಸಮಸ್ಯೆ ಇಲ್ಲ ನನ್ನ ಅಕ್ಕ ತಂಗಿ ಅಂತ ಯಾರಿಗೂ ತಲೆ ಕೆಡಿಸಿಕೊಳ್ಳುತ್ತಿಲ್ಲ ನೀನು ಯಾಕೆ ಈ ರೀತಿ ಇದ್ಯಾ ಎನ್ನುತ್ತಿದ್ದರು. ನೀನು ಮನೆಯಲ್ಲಿ ಕುಳಿತುಕೊಂಡಿದ್ದರೂ ಜನರು ತಪ್ಪು ಎನ್ನುತ್ತಾರೆ ನೀನು ಎಂಜಾಯ್ ಮಾಡಿದ್ದರೂ ತಪ್ಪು ಎನ್ನುತ್ತಾರೆ. ದೇವರಿಗೂ ತಪ್ಪು ನೀನು ಎನ್ನುವ ಜನರು ಇರುವಾಗ ನಾನು ಸರಿ ನಾನು ಈ ರೀತಿ ಇರುವುದು ನನ್ನನ್ನು ನಂಬಿ ಎಂದು ಯಾಕೆ ಹೇಳಬೇಕು?' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ನಿಶ್ವಿಕಾ ಮಾತನಾಡಿದ್ದಾರೆ.
ನನಗೆ ಇಷ್ಟು ಹಣ ಕೊಡಿ ಅಂತ ಕೇಳುವ ಮಟ್ಟಕ್ಕೆ ನಾನು ಬೆಳೆದಿಲ್ಲ, ರಶ್ಮಿಕಾಗೆ ಅವರ ದಾರಿ ಗೊತ್ತು: ರಂಜನಿ ರಾಘವನ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.