ಮಾಣಿಕ್ಯ ಬ್ಯೂಟಿ ಮದ್ವೆಯಾಗುತ್ತಿರುವುದು ವಯಸ್ಸಿಗೆ ಬಂದ ಇಬ್ಬರು ಮಕ್ಕಳ ತಂದೆಯನ್ನು! ಫ್ಯಾನ್ಸ್‌ ಬೇಸರ

By Suvarna News  |  First Published Mar 4, 2024, 4:40 PM IST

ಮಾಣಿಕ್ಯ ಬ್ಯೂಟಿ ವರಲಕ್ಷ್ಮಿ ಶರತ್‌ಕುಮಾರ್ ಮದ್ವೆಯಾಗುತ್ತಿರುವುದು  ವಯಸ್ಸಿಗೆ ಬಂದ ಇಬ್ಬರು ಮಕ್ಕಳ ತಂದೆಯನ್ನು ಎನ್ನುವ ವಿಷ್ಯ ಬೆಳಕಿಗೆ ಬಂದಿದೆ. ಇವರನ್ನು ಮದ್ವೆಯಾಗ್ತಿರೋದು ಏಕೆ?
 


ಸಮಯ ಬಂದಾಗ ಮದುವೆ ಆಗುತ್ತೆ ಬಿಡಿ. ಮದುವೆಯು ಜೀವನದ ಒಂದು ಭಾಗ ಮಾತ್ರ, ಅದೇ ಜೀವನವಲ್ಲ ಮತ್ತು ಗುರಿಯಲ್ಲ. ನನಗೆ 18 ವರ್ಷವಾದ ನಂತರ ಮನೆಯಲ್ಲಿ ಮದುವೆಯ ಬಗ್ಗೆ ಮಾತನಾಡತೊಡಗಿದ್ದರು ಆದರೆ ನಾನು ಅದಕ್ಕೆ ಬ್ರೇಕ್‌ ಹಾಕಿದೆ. ನನ್ನ  ದೃಷ್ಟಿಯಲ್ಲಿ ಮದುವೆ ಮುಖ್ಯವಲ್ಲ, ಮದುವೆ ಆಗದಿದ್ದರೂ ಪರವಾಗಿಲ್ಲ.  ಸದ್ಯ ಅಂತೂ ಮದ್ವೆನೇ ಬೇಡ, ಅದರಲ್ಲ ನನಗೆ ಇಷ್ಟವೂ ಇಲ್ಲ ಎಂದಿದ್ದರು ಕಿಚ್ಚ ಸುದೀಪ್ ನಾಯಕಿ ವರಲಕ್ಷ್ಮಿ ಶರತ್​ಕುಮಾರ್. ಸುದೀಪ್‌ ಜೊತೆ  ಮಾಣಿಕ್ಯ ಸಿನಿಮಾ ಸೇರಿದಂತೆ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ವರಲಕ್ಷ್ಮಿ ಶರತ್​ಕುಮಾರ್ ಮೊನ್ನೆ  ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ಬೇಡ ಎಂದಿದ್ದರೂ ಮದುವೆಯಾಗಲು ಹೊರಟಿದ್ದು ಅಭಿಮಾನಿಗಳಿಗೆ ಖುಷಿಯನ್ನೇ ತಂದಿತ್ತು. 

ಆದರೆ ಇದೀಗ ಫ್ಯಾನ್ಸ್‌ಗೆ ತುಂಬಾ ನೋವಾಗಿದೆ. ಕೆಲವು ಅಭಿಮಾನಿಗಳು ಭಾವುಕರೂ ಆಗಿದ್ದು, ಹೀಗೆಕೆ ಮಾಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದು ಏನೆಂದರೆ, ಇವರು ಮದುವೆಯಾಗಿದ್ದು ತಮ್ಮ ಬಹುಕಾಲದ ಗೆಳೆಯ  ನಿಖೋಲಯ್ ಸಚ್​ದೇವ್ ಜೊತೆಗೆ. ಆದರೆ ನಿಖೋಲಯ್‌ ಅವರಿಗೆ ಇದಾಗಲೇ ಮದ್ವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ ಎನ್ನುವ ವಿಷಯ ಈಗ ಬಹಿರಂಗಗೊಂಡಿದೆ. ಅಷ್ಟಕ್ಕೂ ನಟಿಗೆ ಈಗ 38 ವರ್ಷ ವಯಸ್ಸು. ಅವರು ಈ ವಯಸ್ಸಿನಲ್ಲಿ ಮದುವೆಯಾಗು ಪ್ಲ್ಯಾನ್‌ ಮಾಡಿದ್ದರೂ, ಎರಡು ಮಕ್ಕಳ ತಂದೆಯ ಜೊತೆ ಮದ್ವೆಯಾಗುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ ಫ್ಯಾನ್ಸ್‌. 

Tap to resize

Latest Videos

undefined

ಅಂದುಕೊಂಡದ್ದೆಲ್ಲಾ ಆಗಬೇಕೆ? ನೆಗೆಟಿವ್​ ಎನರ್ಜಿ ಸುಳಿಯಬಾರದೆ? ನಟಿ ವೈಷ್ಣವಿ ಹೇಳಿದ್ದಾರೆ ಸಿಂಪಲ್​ ಟಿಪ್ಸ್​...

engaged..

Ex. Next. pic.twitter.com/HPk6WUBZWI

— Celluloid (@CelluloidIn)

ನಿಖೋಲಯ್ ಸಚ್​ದೇವ್ ಅವರು ಈ ಮೊದಲು ಕವಿತಾ ಎಂಬುವವರನ್ನು ಮದ್ವೆಯಾಗಿದ್ದರು. ಅವರಿಗೆ ಈಗ ಇಬ್ಬರು ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ಪುತ್ರಿ ಕಾಶಾ ಪವರ್‌ಲಿಫ್ಟ್‌ನಲ್ಲಿ ರಾಷ್ಟ್ರಮಟ್ಟದ ಪದಕ ಪಡೆದುಕೊಂಡಿದ್ದಾರೆ. ದಂಪತಿ ಈಗ ಡಿವೋರ್ಸ್‌ ಪಡೆದುಕೊಂಡಿದ್ದು, ಇದಾದ ಮೇಲೆ  ನಟಿ ಅವರನ್ನು ಪ್ರೀತಿಸಿದರು ಎನ್ನಲಾಗುತ್ತಿದೆ. ಅಂದಹಾಗೆ ವರಲಕ್ಷ್ಮಿ ಶರತ್ ಕುಮಾರ್ ಅವರು,  ತಮಿಳಿನ ಖ್ಯಾತ ನಟ ಶರತ್ ಕುಮಾರ್ ಹಾಗೂ ನಟಿ ರಾಧಿಕಾ ಶರತ್​ಕುಮಾರ್ ಅವರ ಪುತ್ರಿ. ಇವರ ಎಂಗೇಜ್ಮೆಂಟ್‌ ಸದ್ದಿಲ್ಲದೇ ಸರಳವಾಗಿ ನೆರವೇರಿದ್ದು, ಅದರ ಫೋಟೋಗಳು ವೈರಲ್​ ಆದ ಬಳಿಕ ವಿಷಯ ಬೆಳಕಿಗೆ ಬಂದಿದೆ.  

ಅಷ್ಟಕ್ಕೂ  ನಿಖೋಲಯ್ ಸಚ್​ದೇವ್ ಹಾಗೂ ವರಲಕ್ಷ್ಮಿ ಶರತ್ ಕುಮಾರ್  ಹಲವು ವರ್ಷಗಳಿಂದಲೂ ಪರಿಚಿತರಾಗಿದ್ದು, ಸುದೀರ್ಘ ಗೆಳೆತನದ ಬಳಿಕ ಮದುವೆಯ ಮುದ್ರೆ ಬಿದ್ದಿದೆ.   ವರಲಕ್ಷ್ಮಿ ಮತ್ತು ಬೆಂಗಳೂರಿಗೆ ಬಹಳ ನಂಟಿದೆ. ಏಕೆಂದರೆ ಈಕೆ ಹುಟ್ಟಿದ್ದು ಬೆಂಗಳೂರಿನಲ್ಲಿ. ಕನ್ನಡದಲ್ಲಿ ಮಾಣಿಕ್ಯ ಮತ್ತು ರನ್ನ ಚಿತ್ರದಲ್ಲಿ ಕಾಣಿಸಿಕೊಂಡರೂ, ಬೇರೆ ಭಾಷೆಗಳಲ್ಲಿ ಇವರು ಹೆಸರು ಮಾಡಿದ್ದಾರೆ. ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ‘ಹನುಮಾನ್’ನಲ್ಲಿ ವರಲಕ್ಷ್ಮಿ ಶರತ್​ಕುಮಾರ್ ನಟಿಸಿದ್ದಾರೆ. ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಅವರು ಇತ್ತೀಚೆಗೆ ಧನುಷ್ ಅವರ ತಮಿಳು ಚಿತ್ರ ರಾಯನ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಶಬರಿ ಎಂಬ ತೆಲುಗು ಚಿತ್ರದ ಹೊರತಾಗಿ ಮಲಯಾಳಂ ಚಿತ್ರ ಕಲರ್ಸ್ ನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಇವರು ತೆಲುಗು ಹುಡುಗಿ. ಸತತ ತೆಲುಗು ಚಿತ್ರಗಳೊಂದಿಗೆ ಯಶಸ್ಸು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್​ನಲ್ಲಿ ಸ್ಟಾರ್ ಇಮೇಜ್ ಪಡೆದಿದ್ದಾರೆ. ತಮಗೆ ಮ್ಯಾಚ್‌ ಆಗುವಂತೆ ಕಂಟೆಂಟ್‌ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ನಟಿ ನಟಿಸಿದ ಬಹುತೇಕ ಚಿತ್ರಗಳು ಯಶಸ್ವಿಯಾಗಿವೆ.  

ನಿಮ್ಮ ಚಡ್ಡಿ, ಬನಿಯನ್‌ ಮಾರಿದ್ರೂ ಮೂರು ಖಾನ್‌ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್‌: ಈಗ?
 

click me!