ನಿಮ್ಮ ಡ್ಯಾಡಿ ತರಹದ ಸೂಪರ್ ಸ್ಟಾರ್ ಜತೆ ಕೆಲಸ ಮಾಡುವುದು ನಮ್ಮಂಥ ಹೊಸಬರಿಗೆ ತುಂಬಾ ಪುಳಕ ಪಡುವಂಥ ವಿಷಯವಾದರೂ ಜತೆಜತೆಯಲ್ಲೇ ಭಯವೂ ಇರುತ್ತದೆ. ಅಂಥ ಫೀಲ್ ನನಗೆ ಶುರುವಿನಲ್ಲಿ ಇತ್ತು.
ಅದೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ (Rashmika Mandanna)ಅವರು ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು (Mahesh Babu)ಮಗಳ ಪಕ್ಕ ಕುಳಿತಿದ್ದಾರೆ. ಮಹೇಶ್ ಬಾಬು ಮಗಳು ಸಿತಾರಾ 'ನಮ್ಮಪ್ಪನ ಜತೆ ಕೆಲಸ ಮಾಡಿದ್ದು ನಿಮಗೆ ಹೇಗೆ ಅನ್ನಿಸಿತು?' ಎಂಬ ಪ್ರಶ್ನೆಯನ್ನು ಕೇಳುತ್ತಾಳೆ. ಅದಕ್ಕೆ ನಟಿ ರಶ್ಮಿಕಾ ಮಂದಣ್ಣ ಅದೇನು ಉತ್ತರ ಕೊಡಬಹುದು ಎಂದು ವೀಡಿಯೋ ನೋಡುತ್ತಿರುವ ಮಂದಿಗೆ ಕುತೂಹಲ ಕೆರಳುತ್ತದೆ.
ಸಿತಾರಾ (Sitara) ಪ್ರಶ್ನೆಯನ್ನು ಕಣ್ಣರಳಿಸಿ ಕೇಳಿಸಿಕೊಂಡ ನಟಿ ರಶ್ಮಿಕಾ 'ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಡ್ಯಾಡಿ ಜತೆ ಕೆಲಸ ಮಾಡುವುದು ತುಂಬಾ ಈಸಿ' ಎಂದಿದ್ದಾರೆ. ಮುಂದಿನ ಪ್ರಶ್ನೆಗೆ ಹೋದ ಪುಟ್ಟಿ ಸಿತಾರಾ 'ನಮ್ಮಪ್ಪನ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಾಗ ಮೊದಲು ನಿಮ್ಮ ಮನಸ್ಸಿಗೆ ಬಂದ ಭಾವನೆ ಏನು?' ಎಂದು ಕೇಳುತ್ತಾಳೆ. ಅದಕ್ಕೆ 'ಕಿರಿಕ್ ಪಾರ್ಟಿ' ಬೆಡಗಿ ರಶ್ಮಿಕಾ 'ಸಹಜವಾಗಿಯೇ ನನಗೆ ಭಯ ಉಂಟಾಯಿತು. ಏಕೆಂದರೆ, ನಿಮ್ಮಪ್ಪ ಸೂಪರ್ ಸ್ಟಾರ್. ಜತೆಗೆ, ತುಂಬಾ ಸಮಯದಿಂದ ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡಿರುವವರು.
ಅಂಬಾನಿ ಫ್ಯಾಮಿಲಿ ಫಂಕ್ಷನ್‌ನಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗಿದ ಶಾರುಖ್ ಖಾನ್
ನಾನು ಇತ್ತೀಚಿನ ವರ್ಷಗಳಲ್ಲಿ ಬಂದು ಸಿನಿಮಾಗಳಲ್ಲಿ ನಟಿಸಲು ಶುರುಮಾಡಿರುವ ನಟಿ. ನಿಮ್ಮ ಡ್ಯಾಡಿ ತರಹದ ಸೂಪರ್ ಸ್ಟಾರ್ ಜತೆ ಕೆಲಸ ಮಾಡುವುದು ನಮ್ಮಂಥ ಹೊಸಬರಿಗೆ ತುಂಬಾ ಪುಳಕ ಪಡುವಂಥ ವಿಷಯವಾದರೂ ಜತೆಜತೆಯಲ್ಲೇ ಭಯವೂ ಇರುತ್ತದೆ. ಅಂಥ ಫೀಲ್ ನನಗೆ ಶುರುವಿನಲ್ಲಿ ಇತ್ತು. ಅದರೆ, ಕೆಲಸ ಮಾಡುತ್ತಾ ಹೋದಂತೆ ಭಯದ ಜಾಗದಲ್ಲಿ ಧೈರ್ಯ ಹಾಗು ಸಂತೋಷಗಳು ಬಂದು ಕುಳಿತುಕೊಂಡವು. ಸಿನಿಮಾ ಮುಗಿಯುವ ಹೊತ್ತಿಗೆ ಮತ್ತೆ ಮತ್ತೆ ಇಂಥ ವ್ಯಕ್ತಿಗಳ ಜತೆ ಕೆಲಸ ಮಾಡುವ ಅವಕಾಶ ಸಿಗಬೇಕು ಎನಿಸಿದೆ' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ಡಾ ರಾಜ್ ಕಿಡ್ನಾಪ್ ಮಾಡಿ ಹೊರಟ ವೀರಪ್ಪನ್‌ಗೆ ಪಾರ್ವತಮ್ಮನವರು ಚಿಟಿಕೆ ಹೊಡೆದು ಹೀಗೆ ಹೇಳಿದ್ದರಂತೆ!
ಅಂದಹಾಗೆ, ತೆಲುಗು ಸ್ಟಾರ್ ಮಹೇಶ್ ಬಾಬು ಹಾಗೂ ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ಅವರಿಬ್ಬರೂ ಜೋಡಿಯಾಗಿ 'ಸರಿಲೇರು ನೀಕೆವ್ವಾರು (Sarileru Neekevvaru)'ಚಿತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ-ಮಹೇಶ್ ಜೋಡಿಯ ಈ ಸಿನಿಮಾ ಸಕ್ಸಸ್ ಆಗಿದ್ದು, ತೆಲುಗು ಸಿನಿಪ್ರೇಕ್ಷಕರು ಇವರಿಬ್ಬರ ಜೋಡಿಯ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಈ ಇಬ್ಬರೂ ಸಾಕಷ್ಟು ಬ್ಯುಸಿ ಇರುವ ಕಾರಣಕ್ಕೆ ಮತ್ತು ರಶ್ಮಿಕಾ ಕೇವಲ ತೆಲುಗು ಚಿತ್ರವನ್ನು ಮಾಡುತ್ತಿಲ್ಲವಾದ್ದರಿಂದ ಮತ್ತೆ ತೆರೆಯ ಮೇಲೆ ಅವರಿಬ್ಬರ ಜೋಡಿಯನ್ನು ಪ್ರೇಕ್ಷಕರು ಮತ್ತೆ ನೋಡಲು ಸಾಧ್ಯವಾಗಿಲ್ಲ ಅಷ್ಟೇ.