ಟ್ರೇನ್ ಹೊರಟ ಕ್ಷಣದಲ್ಲಿ ಹೆಣ್ಣು ಧ್ವನಿಯೊಂದು 'ಏಯ್ ಕುಮಾರ್' ಎಂದು ಕರೆಯುತ್ತಿದ್ದುದು ಕುಮಾರ್‌ಗೆ ಕೇಳಿಸಿತು. ನೋಡಿದರೆ, ಕೈಯಲ್ಲೊಂದು ಬ್ಯಾಗ್ ಹಿಡಿದು ಹುಡುಗಿಯೊಬ್ಬರು ಓಡೋಡಿ ಬರುತ್ತಿದ್ದರು. ಅಂತೂ ಟ್ರೇನ್ ಬಳಿ ಬಂದ ಆ ಹುಡುಗಿ..
ಸ್ಯಾಂಡಲ್‌ವುಡ್‌ನ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ ಅವರು ನಟಿ ಭಾರತಿಯವರನ್ನು ಪ್ರೀತಿಸಿ ಮದುವೆಯಾಗಿದ್ದುಎಲ್ಲರಿಗೂ ಗೊತ್ತು. ಆದರೆ, ಭಾರತಿಗಿಂತ ಮೊದಲು ವಿಷ್ಣುವರ್ಧನ್ ಇನ್ನೊಬ್ಬರನ್ನು ಪ್ರೀತಿಸಿದ್ದರು. ಅವರಿಬ್ಬರ ಪ್ರೀತಿ ಕಾಲೇಜು ದಿನಗಳಲ್ಲೇ ಆಗಿತ್ತು. ಆದರೆ ನಟ ವಿಷ್ಣುವರ್ಧನ್ ಅವರನ್ಜು ಮದುವೆಯಾಗಲು ಸಾಧ್ಯವೇ ಆಗಲಿಲ್ಲ. ಯಾಕೆ ಆ ಹುಡುಗಿ 'ದಾದಾ' ಬಾಳ ಸಂಗಾತಿಯಾಗಲು ಸಾಧ್ಯವಾಗಲಿಲ್ಲ? ಅದು ಲವ್ ಪೇಲ್ಯೂರಾ? ಲವ್ ಬ್ರೇಕಪ್ಪಾ? ಯಾರು ಆ ಹುಡುಗಿ? ಈಗ ಎಲ್ಲಿದ್ದಾರೆ, ಯಾರನ್ನು ಮದುವೆಯಾಗಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ, ನೋಡಿ..
'ಅದು ಸಂಪತ್ ಕುಮಾರ್ (ನಟ ವಿಷ್ಣುವರ್ಧನ್) ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು. ಎಲ್ಲರೂ ಅವರನ್ನು 'ಕುಮಾರ್' ಎಂದೇ ಕರೆಯುತ್ತಿದ್ದರು. ಬಿಎಸ್‌ಸಿ ಓದುತ್ತಿದ್ದ ನಟ ಕುಮಾರ್ ಆ ದಿನಗಳಲ್ಲೇ ನಟರಾಗಬೇಕೆಂದು ಕನಸು ಹೊತ್ತು ನಾಟಕ, ಮಿಮಿಕ್ರಿ ಅದೂ ಇದೂ ಅಂತ ಸ್ಟೇಜ್ ಮೇಲೆ ಅಭಿನಯವನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಹಿಂದಿಯ ದಿಲೀಪ್ ಕುಮಾರ್ ನಟನೆಯ ಚಿತ್ರವೊಂದರಲ್ಲಿ ಒಂದು ಪೋಷಕ ಪಾತ್ರಕ್ಕೆ ಮದ್ರಾಸ್‌ನಲ್ಲಿ ಅಡಿಷನ್ ಇತ್ತು. ಫ್ರೆಂಡ್ಸ್ ಎಲ್ಲರೂ ಕುಮಾರ್‌ರನ್ನು ರೇಲ್ವೆ ಸ್ಟೇಷನ್‌ಗೆ ಕರೆದುಕೊಂಡು ಬಂದು ಬೀಳ್ಕೊಟ್ಟು ಅಲ್ಲಿಂದ ನಿರ್ಗಮಿಸುತ್ತಿದ್ದರು.
ಟ್ರೇನ್ ಹೊರಟ ಕ್ಷಣದಲ್ಲಿ ಹೆಣ್ಣು ಧ್ವನಿಯೊಂದು 'ಏಯ್ ಕುಮಾರ್' ಎಂದು ಕರೆಯುತ್ತಿದ್ದುದು ಕುಮಾರ್‌ಗೆ ಕೇಳಿಸಿತು. ನೋಡಿದರೆ, ಕೈಯಲ್ಲೊಂದು ಬ್ಯಾಗ್ ಹಿಡಿದು ಹುಡುಗಿಯೊಬ್ಬರು ಓಡೋಡಿ ಬರುತ್ತಿದ್ದರು. ಅಂತೂ ಟ್ರೇನ್ ಬಳಿ ಬಂದ ಆ ಹುಡುಗಿ ಕಿಟಕಿ ಮೂಲಕ ಸಂಪತ್ ಕುಮಾರ್ ಕೈಗೆ ಬ್ಯಾಗ್ ಕೊಟ್ಟು 'ಸಂದರ್ಶನಕ್ಕೆ ಹೋಗ್ತಾ ಇದೀಯ, ಇದನ್ನೆಲ್ಲ ಇಟ್ಕೋ, ಆಲ್ ದಿ ಬೆಸ್ಟ್' ಎಂದು ಹೇಳಿದ್ದರು. ಟ್ರೇನ್ ಹೊರಟ ಮೇಲೆ ಕುತೂಹಲದಿಂದ ಕುಮಾರ್ ಬ್ಯಾಗ್ ಒಳಗೆ ಏನಿದೆ ಎಂದು ನೋಡಿದರೆ, ಅದರಲ್ಲಿ ಸ್ವಲ್ಪ ಹಣ, ಎರಡು ಬುಕ್ಸ್ ಹಾಗೂ ಸ್ಯಾಂಡ್‌ವಿಚ್ ಇತ್ತು. ಪ್ರಯಾಣದ ವೇಳೆ ಸಹಾಯ ಆಗುವಂತೆ ಅವುಗಳನ್ನು ಆಕೆ ಕೊಟ್ಟಿದ್ದರು.
ಮಹೇಶ್ ಬಾಬು ಮಗಳು ಸಿತಾರಾ ಪ್ರಶ್ನೆಗೆ ನಟಿ ರಶ್ಮಿಕಾ ಮಂದಣ್ಣ ಶಾಕ್ ಆಗಿ ಗಲಿಬಿಲಿಗೊಂಡ್ರಾ?
ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾಗೆ ಕುಮಾರ್ ಸೆಲೆಕ್ಟ್ ಆದಾಗ ಆ ಹುಡುಗಿ ಆತನ ಕೈ ಹಿಡಿದುಕೊಂಡು 'ನೀನು ನಟನಾಗುವುದು ನನಗೆ ಇಷ್ಟವಿಲ್ಲ. ನಾನು ಡಾಕ್ಟರ್ ಆಗ್ತೀನಿ, ನೀನೂ ಡಾಕ್ಟರ್ ಆಗ್ಬೇಕು ಅಂದಿದ್ದರಂತೆ. ಆದರೆ ಅಂದು ಆಕೆ 'ನಾನು ನಿನ್ನನ್ನು ಪ್ರೀತಿಸ್ತೀನಿ, ನಾವಿಬ್ಬರೂ ಮದುವೆ ಆಗೋಣ ಎಂದಾಗಲೀ, ಅಥವಾ ಅಟ್‌ಲೀಸ್ಟ್, ನಾನು ನಿನ್ನ ಪ್ರೀತಿಸ್ತಾ ಇದೀನಿ ಅಂತ ಕೂಡ ಹೇಳಿರೋದಿಲ್ಲ. ಆದರೆ, ಅವಳ ನಡೆ-ನುಡಿ ಮೂಲಕ ಕುಮಾರ್‌ಗೆ ಅದು ಗೊತ್ತಿತ್ತು, ಕುಮಾರ್ ಕೂಡ ಅವಳನ್ನು ಇಷ್ಟಪಟ್ಟು ಪ್ರೀತಿಸುತ್ತಿದ್ದರಂತೆ. ಆದರೆ, ಅಂದು ಇಬ್ಬರೂ ಏನನ್ನೂ ತಮ್ಮಿಬ್ಬರ 'ಲವ್' ಬಗ್ಗೆ ಹೇಳಿಕೊಂಡಿರುವುದಿಲ್ಲ.
ನಟಿ ಪ್ರಿಯಾಂಕಾ ಚೋಪ್ರಾ ಬುದ್ದಿಮಾತಿಗೆ ತಲೆದೂಗಿದ ಹಾಲಿವುಡ್; ಅಂಥದ್ದೇನು ಹೇಳಿದ್ರು ನೋಡ್ರಿ!
ಫೈನಲ್ ಈಯರ್ ಪರೀಕ್ಷೆ ಮುಗಿದು, ರಿಸಲ್ಟ್ ಬರುವ ಹೊತ್ತಿಗೆ ಕುಮಾರ್ (ವಿಷ್ಣುವರ್ಧನ್) ನಾಗರಹಾವು ಸಿನಿಮಾದಲ್ಲಿ ನಟಿಸಿ, ಸಿನಿಮಾ ಬಿಡುಗಡೆಯೂ ಆಗಿತ್ತು, ನಾಗರಹಾವು ಸೂಪರ್ ಹಿಟ್ ದಾಖಲಿಸಿ ಇಡೀ ಕರ್ನಾಟಕ ಆ ಸಿನಿಮಾ ಬಗ್ಗೆ ಮಾತನಾಡುತ್ತಿತ್ತು. ನ್ಯಾಷನಲ್ ಕಾಲೇಜು ಹುಡುಗ ಕುಮಾರ್ ನಟ ವಿಷ್ಣುವರ್ಧನ್ ಆಗಿ, ಸೂಪರ್ ಸ್ಟಾರ್ ಆಗಿ ಬದಲಾಗಿದ್ದರು. ನಾಗರಹಾವು ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ನಟ ಸಂಪತ್ ಕುಮಾರ್ ಅವರ ಹೆಸರನ್ನು 'ವಿಷ್ಣುವರ್ಧನ್' ಎಂದು ಬದಲಾಯಿಸಿದ್ದರು. ರಿಸಲ್ಟ್ ನೋಡಲು ಡೆಲ್ಲಿಯಿಂದ ಬಂದಿದ್ದ ಆ ಹುಡುಗಿಯನ್ನು ನಟ ವಿಷ್ಣುವರ್ಧನ್ 'ಹೆಲ್ಮೆಟ್' ಹಾಕಿಕೊಂಡು 'ಸಾಗರ್' ಥಿಯೇಟರ್‌ಗೆ ಕರೆದುಕೊಂಡು ಬಂದು ಸಿನಿಮಾ ತೋರಿಸಿದ್ದರು.
ಡಾ ರಾಜ್ ಕಿಡ್ನಾಪ್ ಮಾಡಿ ಹೊರಟ ವೀರಪ್ಪನ್‌ಗೆ ಪಾರ್ವತಮ್ಮನವರು ಚಿಟಿಕೆ ಹೊಡೆದು ಹೀಗೆ ಹೇಳಿದ್ದರಂತೆ!
ಅಂದು ನಟ ವಿಷ್ಣುವರ್ಧನ್ ಹೀರೋ ಆಗಿದ್ದು, ತುಂಬಾ ಹೆಸರು ಮಾಡಿದ್ದನ್ನು ಹೇಳಿ ಆಕೆ 'ನನಗೆ ನಿನ್ನ ಬೆಳವಣಿಗೆ ನೋಡಿ ತುಂಬಾ ಖುಷಿ ಆಗ್ತಿದೆ. ಈಗ್ಲೂ ನೀನು ನನ್ನ ಪ್ರೀತಿಸ್ತೀಯಾ' ಎಂದು ಕೇಳಿದ್ದರು. ಆಗ ನಟ ವಷ್ಣುವರ್ಧನ್ 'ಇಲ್ಲ, ನಾನು ನಿನ್ನನ್ನು ಪ್ರೀತಿಸುತ್ತಿಲ್ಲ. ನನ್ನ ಹೃದಯದಲ್ಲಿ ನಾನು ಈಗಾಗ್ಲೇ ಇನ್ನೊಬ್ಬರಿಗೆ ಜಾಗ ಕೊಟ್ಟಿದೀನಿ' ಅಂತ ನೋವಿನಿಂದ ಆಕೆಗೆ ಹೇಳಿದ್ದರು. ಆಗ ಆಕೆ 'ಯಾರು ಆ ಲಕ್ಕಿ ಗರ್ಲ್' ಎಂದು ಕೇಳಲು ನಟ ವಿಷ್ಣುವರ್ಧನ್ 'ಭಾರತಿ' ಎಂದು ನಟಿ ಭಾರತಿಯವರ ಬಗ್ಗೆ ಹೇಳಿದ್ದರು. ಬಳಿಕ ಇಬ್ಬರೂ ಸೈಲೆಂಟ್ ಆಗಿದ್ದರು. ಮೌನ ಮುರಿದ ಆ ಹುಡುಗಿ 'ನನ್ನ ಸದಾಶಿವನಗರಕ್ಕೆ ಡ್ರಾಪ್ ಮಾಡ್ತೀಯಾ' ಎನ್ನಲು ನಟ ವಿಷ್ಣುವರ್ಧನ್ ಆಕೆಯನ್ನು ಡ್ರಾಪ್ ಮಾಡಿ ಬಂದು ತುಂಬಾ ನೋವಿನಿಂದ ಬಿಕ್ಕಿ ಬಿಕ್ಕಿ ಅತ್ತಿದ್ದರು.
ಮಹೇಶ್ ಬಾಬು ಮಗಳು ಸಿತಾರಾ ಪ್ರಶ್ನೆಗೆ ನಟಿ ರಶ್ಮಿಕಾ ಮಂದಣ್ಣ ಶಾಕ್ ಆಗಿ ಗಲಿಬಿಲಿಗೊಂಡ್ರಾ?
ಆ ಹುಡುಗಿ ಹೆಸರು ಸುಚಿತ್ರಾ. ಉತ್ತರ ಭಾರತದ ದೆಹಲಿ ಮೂಲದವರು, ನಟ ವಿಷ್ಣುವರ್ಧನ್ ಕ್ಲಾಸ್‌ಮೇಟ್. ಅಂದು ನಾಗರಹಾವು ಸಿನಿಮಾ ನೋಡಿ, ಪ್ರೀತಿಯ ಬಗ್ಗೆ ಹೇಳಿಕೊಂಡು ರಿಜೆಕ್ಟ್ ಆಗಿ ಹೋದ ಹುಡುಗಿ ತಿರುಗಿ ಯಾವತ್ತೂ ನಟ ವಿಷ್ಣುವರ್ಧನ್ ಅವರನ್ನು ಭೇಟಿ ಆಗಲೇ ಇಲ್ಲ. ಅಂಥ ಬೆಸ್ಟ್ ಫ್ರೆಂಡ್, ಬೆಸ್ಟ್ ಪ್ರೀತಿ, ಒಳ್ಳೆಯ ಗುಣವಂತೆಯನ್ನು ಕಳೆದಕೊಂಡ ಭಾವನೆ ನಟ ವಿಷ್ಣುವರ್ಧನ್ ಅವರಲ್ಲಿ ಕೊನೆಯವರೆಗೂ ಇತ್ತು ಎನ್ನಲಾಗಿದೆ.
ಹದಿಹರೆಯದಲ್ಲಿ ತುಂಬಾ ನೋಡಿದ್ದೆ ಮೇಡಂ; ತುಕಾಲಿ ಸಂತೋಷ್ ಮಾತಿಗೆ ಅನುಶ್ರೀ ಶಾಕ್
ಆದರೆ ಭಾರತಿಯವರನ್ನು ಮನಸಾರೆ ಪ್ರೀತಿಸಿದ್ದ ನಟ ವಿಷ್ಣುವರ್ಧನ್, ಅವರನ್ನು ಮದುವೆಯಾಗಿ ಸುಂದರ ಸಂಸಾರ ನಡೆಸಿ ನಿರ್ಗಮಿಸಿದ್ದಾರೆ, ಭಾರತಿಯವರಿಗೂ ವಿಷ್ಣು ಅವರ ಜೀವನದಲ್ಲಿ ನಡೆದಿದ್ದ ಈ ಸಂಗತಿ ಗೊತ್ತಿತ್ತು ಎನ್ನಲಾಗಿದೆ. ಆದರೆ, ಅಂದು ನಟಿಯಾಗಿ ಉತ್ತುಂಗದಲ್ಲಿದ್ದ ಭಾರತಿಯವರು ಕೂಡ ನಟ ವಿಷ್ಣುವರ್ಧನ್ ಅವರನ್ನು ಮನಸಾರೆ ಪ್ರೀತಿಸಿ, ಮೆಚ್ಚಿ ಮದುವೆಯಾಗಿ ಆದರ್ಶ ಸಂಸಾರ ನಡೆಸಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ನಟ ವಿಷ್ಣುವರ್ಧನ್ ಜೀವನದಲ್ಲಿ ಇಂಥದ್ದೊಂದು ಪ್ರೇಮಕಥೆ ಇತ್ತು ಎಂಬುದು ಇನ್ನೂ ಹಲವರಿಗೆ ಗೊತ್ತಿಲ್ಲ. ನಟ ವಿಷ್ಣುವರ್ಧನ್ ಈ ಬಗ್ಗೆ ತಮ್ಮ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.