
ಸ್ಯಾಂಡಲ್‌ವುಡ್ ಟ್ಯಾಲೆಂಟೆಡ್ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ ಕೈ ತುಂಬಾ ಸಿನಿಮಾಗಳಿರುವ ಕಾರಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ಸಮಯ ಮಾಡಿಕೊಂಡು ಪುತ್ರನ ಜೊತೆಯೂ ಕಾಲ ಕಳೆಯುತ್ತಾರೆ.
ರಿಷಭ್‌ಗೆ ಜೋಡಿಯಾಗಲಿದ್ದಾರೆ ಲವ್ ಮಾಕ್ಟೇಲ್ ನಾಯಕಿ..!
2019ರ ಸೂಪರ್ ಹಿಟ್ ಅದ ಬೆಲ್ ಬಾಟಂ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಅದರ ಜೊತೆಗೆ ಹರಿ ಕಥೆ ಅಲ್ಲ ಗಿರಿ ಕಥೆ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಕೊರೋನಾದಿಂದ ಲಾಕ್‌ಡೌನ್ ಸಮಯದಲ್ಲಿ ಜಾರಿಗೊಂಡ ನಿಯಮದ ಪ್ರಕಾರ ಚಿತ್ರೀಕರಣದ ವೇಳೆ ನಿಯಮಿತ ಜನರು ಮಾತ್ರ ಪಾಲ್ಗೊಳಬೇಕು. ಈ ಕಾರಣ ಸೆಟ್‌ನಲ್ಲಿ ಇರುವವರೇ ಎಲ್ಲಾ ಕೆಲಸಗಳನ್ನೂ ಸಮಾನವಾಗಿ ಹಂಚಿಕೊಂಡು ಮಾಡುತ್ತಿದ್ದಾರೆ. ಈ ವೇಳೆ ಸೆರೆ ಹಿಡಿದ ಫೋಟೋ ಶೇರ್ ಮಾಡಿಕೊಂಡ ರಷಬ್ ಇಂಟರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ರಿಷಬ್ ಟ್ಟೀಟ್:
'ಈಗೊಂದು ಆರೇಳು ವರ್ಷಗಳ ಹಿಂದೆ ಇದೇ ನಮ್ ಬಿಸಿನೆಸ್ಸು. #HKGK ಶೂಟಿಂಗ್ ಸೆಟ್‌ನಲ್ಲಿ' ಎಂದು ಬರೆದಿದ್ದಾರೆ. ರಿಷಬ್ ಹಾಕಿರುವ ಫೋಟೋಗೆ ನಿರ್ಮಾಪಕ ಕಾರ್ತಿಕ್ ಗೌಡ್ ಕಾಮೆಂಟ್ ಮಾಡುವ ಮೂಲಕ ಕಾಲು ಎಳೆದಿದ್ದಾರೆ. 'ನಮಗೊಂದು 50 ಕೇಸ್ ಹಾಕಿ' ಎಂದಿದ್ದಾರೆ. ಅದಕ್ಕೆ ರಿಷಬ್ 'ದಯವಿಟ್ಟು ವಿಳಾಸ ತಿಳಿಸಿ' ಎಂದು ಕೇಳಿದ್ದಾರೆ. ಇಬ್ಬರು ಕಾಮೆಂಟ್ ಮೂಲಕವೇ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಂಡಿದ್ದನ್ನು ನೋಡಿ ನೆಟ್ಟಿಗರು ಮಜಾ ತೆಗೆದುಕೊಳ್ಳುತ್ತಿದ್ದಾರೆ.
ರಿಷಬ್ ಶೆಟ್ಟಿ ಫ್ರೆಂಚ್ ಬಿಯರ್ಡ್ ಲುಕ್ ವೈರಲ್; ಕಾಮೆಂಟ್‌ನಲ್ಲಿ ಶುರುವಾಯ್ತು ಫ್ಯಾನ್ಸ್ ಚರ್ಚೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.