'ಕ್ಯಾಂಡಿ' ಕೊಡಲು ತುದಿಗಾಲಲ್ಲಿ ನಿಂತಿರೋ ಚಂದನ್ ಶೆಟ್ಟಿ ನಾಲ್ಕನೇ ಪೆಗ್‌ ಹಾಕಿರ್ಬಹುದಾ?

By Shriram Bhat  |  First Published Dec 21, 2024, 8:35 PM IST

'ಟಕೀಲಾ, ಲಕಲಕ ಲ್ಯಾಂಬರ್ಗಿನಿ, ನೋಡು ಶಿವ..' ಹಾಡುಗಳು ಸಹ ಸಖತ್ ಸೌಂಡ್ ಮಾಡಿದ್ದವು. ಆದರೆ ಕಳೆದ ಮೂರು ವರ್ಷಗಳಿಂದ ಚಂದನ್ ಶೆಟ್ಟಿಯವರ ಯಾವುದೇ ಹಾಡುಗಳು ಬಿಡುಗಡೆ ಆಗದೇ ಅವರ ಅಭಿಮಾನಿಗಳ ಮುಖ ಬಾಡಿಹೋಗಿತ್ತು. ಇದೀಗ ಹೊಸ.. 


ಕನಸಿನ ನಗರಿ ಆಸ್ಟ್ರೇಲಿಯಾದ ಸಿಡ್ನಿಯಿಂದ ಮರಳಿ ಮನೆಗೆ ಬಂದಿರುವ ನಟ-ಗಾಯಕ ಹಾಗು ಸಂಗೀತ ನಿರ್ದೇಶಕರಾದ ಚಂದನ್ ಶೆಟ್ಟಿ  (Chandan Shetty) ಸದ್ಯ ಹೊಸದೊಂದು ಸಾಹಸಕ್ಕೆ ಅಣಿಯಾಗಿದ್ದಾರೆ. 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋ ರಿಲೀಸ್‌ಗೆ ರೆಡಿಯಾಗಿದ್ದಾರೆ. ಈ ಮೊದಲಿನ ಎಲ್ಲದಕ್ಕಿಂತ ವಿಶೇಷವಾದ ಸಂಗೀತದ ರಸದೌತಣ ಇದರಲ್ಲಿದೆ ಎಂದು ಸ್ವತಃ ಚಂದನ್ ಶೆಟ್ಟಿಯವರು ಹೇಳಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿರುವ, ಟ್ರೆಂಡಿಂಗ್‌ನಲ್ಲಿರುವ ಗಾಯಕ, ಮ್ಯೂಸಿಕ್ ಕಂಪೋಸರ್, ಲಿರಿಸಿಸ್ಟ್ ಮತ್ತು ರ್‍ಯಾಪರ್ ಅಂದ್ರೆ ಅದು ಚಂದನ್ ಶೆಟ್ಟಿ ಮತ್ತೆ ಹೊಸ ಹುರುಪಿನೊಂದಿಗೆ ಪುಟಿದೇಳುತ್ತಿದ್ದಾರೆ. ಮುಂಬರುವ ತಮ್ಮ ಹೊಚ್ಚ ಹೊಸ ಶೈಲಿಯ ಹಾಡುಗಳ ಮೂಲಕ ಯುವ ಜನತೆ ಹುಚ್ಚೆದ್ದು ಕುಣಿಯುವಂತೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಬಂದಿದ್ದ 'ಟಕೀಲಾ, ತ್ರೀ ಪೆಗ್, ಪಾಟಿ ಫ್ರೀಕ್, ಪಾರ್ಟಿ ಆಂಥಮ್, ಚಾಕಲೇಟ್ ಗರ್ಲ್ (Chocolate Girl) ಹಾಡು, ಮೊದಲಾದ ಹಾಡುಗಳು ಸೋಶಿಯಲ್ ಮೀಡೀಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. 

Tap to resize

Latest Videos

undefined

ಇದೀಗ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಮತ್ತೊಂದು ಪಾರ್ಟಿ ಹಾಡಿನ (party song) ಮೂಲಕ ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಮಾಡಿದ್ದು, ಹೊಸ ಹಾಡಿನ ಕುರಿತು ಜನರಲ್ಲಿ ಭಾರೀ ಕುತೂಹಲ ಮೂಡಿದೆ. ಕಸ ಗುಡಿಸುವವರಿಂದ ಹಿಡಿದು, ಪೆಟ್ರೋಲ್ ಪಂಪ್‌ಗಳಲ್ಲಿ ಕೆಲಸ ಮಾಡುವವರು, ಆಟೋ ರಿಕ್ಷಾದವರು ಅಚ್ಚರಿಯಿಂದ ಆಗಸದತ್ತ ಮುಖ ಮಾಡಿ ನೋಡುತ್ತಿರುವ ಟೀಸರ್ ಇದಾಗಿದೆ. ಕೊನೆಗೆ 'ಕಾಟನ್ ಕ್ಯಾಂಡಿ' ಎನ್ನುವ ಟೈಟಲ್ ಆಕಾಶದಲ್ಲಿ ತೇಲಿ ಬರೋದನ್ನು ತೋರಿಸಲಾಗಿದೆ. ಈ ಹೊಸ ವರ್ಷಕ್ಕೆ ತಯಾರಾಗಿ ಕಾಟನ್ ಕ್ಯಾಂಡಿ (Cotton Candy) ಬರ್ತಿದೆ. 

ಈ ಪ್ರೊಮೋ ರಿಲೀಸ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಈ ಬಾರಿಯ ಈ ಪಾರ್ಟಿ ಹಾಡಲ್ಲಿ ನಟಿ ಸುಷ್ಮಿತಾ ಗೋಪಿನಾಥ್ ಕಾಣಿಸಿಕೊಂಡಿದ್ದಾರೆ. ಸುಷ್ಮಿತಾ ಅವರು ಕನ್ನಡ ಹಾಗೂ ತೆಲುಗು ಸಿನಿಮಾಗಳು, ಜಾಹೀರಾತುಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿರುವ ನಟಿ. ಚಂದನ್ ಹಾಗೂ ಸುಷ್ಮಿತಾ ಜೋಡಿಯ ಹಾಡು ಯಾವ ರೀತಿ ಮೋಡಿ ಮಾಡಲಿದೆ ಎನ್ನುವ ಕುತೂಹಲ ಸಹಜವಾಗಿಯೇ ಮೂಡಿದೆ. 

ಚಂದನ್ ಶೆಟ್ಟಿ 2011 ರಿಂದಲೂ ತಮ್ಮ ರ್‍ಯಾಪ್ ಸಾಂಗ್ಸ್‌ಗಳ (Rap songs) ಮೂಲಕ ಸದ್ದು ಮಾಡುತ್ತಿದ್ದಾರೆ. ಇಲ್ಲಿವರೆಗೆ ಬರೋಬ್ಬರಿ 15ಕ್ಕಿಂತ ಹೆಚ್ಚು ಹಾಡುಗಳನ್ನು ಇವರು ಕಂಪೋಸ್ ಮಾಡಿ ಹಾಡಿದ್ದಾರೆ. ಜೊತೆಗೆ, ಸಿನಿಮಾಗಳಲ್ಲೂ ಹಾಡುವ ಮೂಲಕ ಅಲ್ಲೂ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಹೊಸ ವರ್ಷಕ್ಕೆ ಹೊಸ ಹಾಡಿನೊಂದಿಗೆ ಫ್ಯಾನ್ಸ್‌ ಮುಂದೆ ಬರಲಿದ್ದಾರೆ 'ನಡೆದಾಡುವ ಹಾರ್ಲಿಕ್ಸ್‌ ಬಾಟೆಲ್' ಎನ್ನಬಹುದಾದ ಪಾದರಸದಂತಹ ಪುರುಷ ಚಂದನ್ ಶೆಟ್ಟಿ!

ಚಂದನ್ ಶೆಟ್ಟಿಯವರ ಮೂರೇ ಮೂರು ಪೆಗ್ಗಿಗೆ ಹಾಡು, ಇವತ್ತಿಗೂ ಯುವಕರ ಫೇವರಿಟ್ ಆಗಿದೆ. ಅಷ್ಟೇ ಅಲ್ಲದೇ ಈ ಮೊದಲು 'ಲಕಲಕ ಲ್ಯಾಂಬರ್ಗಿನಿ, ಟಕೀಲಾ, ತ್ರೀ ಪೆಗ್, ಪಾಟಿ ಫ್ರೀಕ್, ಟಾಪ್‌ ಟು ಗಾಂಚಾಲಿ, ಕರಾಬು, ಕೋಲುಮಂಡೆ' ಹಾಡುಗಳು ಸಖತ್ ಸೌಂಡ್ ಮಾಡಿದ್ದವು. ಆದರೆ ಕಳೆದ ಮೂರು ವರ್ಷಗಳಿಂದ ಚಂದನ್ ಶೆಟ್ಟಿಯವರ ಯಾವುದೇ ಹಾಡುಗಳು ಬಿಡುಗಡೆ ಆಗದೇ ಅವರ ಅಭಿಮಾನಿಗಳ ಮುಖ ಬಾಡಿಹೋಗಿತ್ತು. ಇದೀಗ ಹೊಸ ಹಾಡಿನ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಈ ಹಾಡು ಸಹ 'ಪಾರ್ಟಿ ಆಂಥಮ್' ಆಗಲಿದೆಯೇ? ಕೂತಲ್ಲೇ ಕುಣಿಸಲಿದೆಯೇ? ಉತ್ತರಕ್ಕೆ ಕೆಲವೇ ದಿನ ಬಾಕಿ!  

click me!