ಕಂದಾಯ ಇಲಾಖೆ ಅಧಿಕಾರಿಯ ಜೊತೆ ಜಾರಿ ನಿರ್ದೇಶನಾಲಯದ ತೆಕ್ಕೆಗೆ ಬಿದ್ದಿರೋ ಬಹುಭಾಷಾ ನಟಿ ನವ್ಯಾ ನಾಯರ್ ಕುರಿತು ಡ್ರೈವರ್ ಹೇಳಿರೋದೇನು?
ಬಹುಭಾಷಾ ನಟಿ, ಕನ್ನಡದ ‘ಗಜ’, ‘ದೃಶ್ಯ’, ‘ದೃಶ್ಯ 2’, ‘ನಮ್ಮ ಯಜಮಾನ್ರು’ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿರುವ ನವ್ಯಾ ನಾಯರ್ ಹೆಸರೀಗ ಬಹಳ ಸದ್ದು ಮಾಡುತ್ತಿದೆ. ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೂ ಸಹ ನಾಯಕಿಯಾಗಿ ನಟಿಸಿರೋ ನವ್ಯಾ ಹೆಸರು ಕಂದಾಯ ಇಲಾಖೆಯ ಅಧಿಕಾರಿ (IRS Officer) ಜೊತೆ ಥಳಕು ಹಾಕಿಕೊಂಡಿದೆ. ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತರಾಗಿರುವ ಅಧಿಕಾರಿ ಸಚಿನ್ ಸಾವಂತ್ ಜತೆ ರಮ್ಯಾ ಹೆಸರು ಕೇಳಿಬಂದಿದೆ. ಸಚಿನ್ ಸಾವಂತ್ ಅವರನ್ನು ಆಸ್ತಿ ಕಬಳಿಕೆ ಮಾಡಿದ ಆರೋಪದಲ್ಲಿ ಇಡಿ ಅವರನ್ನು ಬಂಧಿಸಿದೆ. ಇದೇ ಪ್ರಕರಣದ ವಿಚಾರಣೆಗೆ ನಟಿ ನವ್ಯಾಗೆ ಇಡಿ ನೋಟಿಸ್ ನೀಡಿದ್ದು ಹಾಜರಾಗುವಂತೆ ಹೇಳಿದೆ. ಸಚಿನ್ ಸಾವಂತ್ ಅವರ ಹಣದ ಅಕ್ರಮ ವರ್ಗಾವಣೆ (Money Laundering) ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರಿಗೆ ನಟಿ ನವ್ಯಾ ನಾಯರ್ ವಿಷಯ ತಿಳಿದು ಬಂದಿತ್ತು. ಈಕೆ, ದುಬಾರಿ ಬೆಲೆಯ ಚಿನ್ನದ ಒಡವೆಗಳನ್ನು ಉಡುಗೊರೆಯಾಗಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ದೂರು ದಾಖಲಾಗಿದ್ದು, ಜಾರಿ ನಿರ್ದೇಶನಾಲಯ (ED) ನೋಟಿಸ್ ರವಾನೆಯಾಗಿದೆ.
ಸಚಿನ್ ಸಾವಂತ್ ಮತ್ತು ನವ್ಯಾ ನಾಯರ್ (Navya Nair) ನಡುವೆ ನಿಕಟ ಸಂಪರ್ಕವಿದ್ದು, ದುಬಾರಿ ಚಿನ್ನಾಭರಣವನ್ನು ನವ್ಯಾ ಅವರು ಸಚಿನ್ರಿಂದ ಉಡುಗೊರೆಯಾಗಿ ಪಡೆದಿದ್ದಾರೆ ಎಂಬ ಆರೋಪ ದಾಖಲಾಗಿದೆ. ಅಷ್ಟೇ ಅಲ್ಲದೇ ಇಬ್ಬರು ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದರ ನಡುವೆಯೇ, ನವ್ಯಾ ಅವರ ಡ್ರೈವರ್ ಪೊಲೀಸರ ಎದುರು ಕೆಲವೊಂದು ಸತ್ಯ ಬಾಯ್ಬಿಟ್ಟಿದ್ದಾರೆ. ವಿಶೇಷ ನ್ಯಾಯಾಲಯದಲ್ಲಿ ನವ್ಯಾ ಅವರ ಚಾಲಕರಾಗಿರುವ ಸಮೀರ್ ಗಬಾಜಿ ನಲವಾಡೆ ಅವರು ಕೆಲವೊಂದು ಮಾಹಿತಿ ನೀಡಿದ್ದಾರೆ. ನವ್ಯಾ ಜೊತೆ ನಿಕಟ ಸಂಪರ್ಕವನ್ನು ಸಚಿನ್ ಅವರು ಅಲ್ಲಗಳೆದ ಬೆನ್ನಲ್ಲೇ ಈಗ ಡ್ರೈವರ್ ಈ ಮಾಹಿತಿ ನೀಡಿದ್ದಾರೆ. 'ನವ್ಯಾ ನಾಯರ್ ನನಗೆ ಆತ್ಮೀಯರು ಅಷ್ಟೇ. ಆದರೆ ನಾನು ಅವರಿಗೆ ಯಾವ ಗಿಫ್ಟ್ ಕೊಟ್ಟಿಲ್ಲ. ನವ್ಯಾ ಅವರನ್ನು ಭೇಟಿ ಮಾಡಿರೋದಿಕ್ಕೆ ಸಾಕ್ಷಿಯೂ ಇಲ್ಲ' ಎಂದು ಸಚಿನ್ ಹೇಳಿದ್ದರು. ಆದರೆ ಚಾಲಕ ಹೇಳ್ತಿರೋದೇ ಬೇರೆ.
ಕಂದಾಯ ಅಧಿಕಾರಿ ಜೊತೆ ಸಿಕ್ಕಿಬಿದ್ದ ‘ನಮ್ಮ ಯಜಮಾನ್ರು’ ನಟಿ: ಇಡಿ ತೆಕ್ಕೆಯಲ್ಲಿ ನವ್ಯಾ!
ನವ್ಯಾ ನಾಯರ್ ಅವರು ಸಚಿನ್ ಅವರ ಗರ್ಲ್ಫ್ರೆಂಡ್ (Gillfriend) ಎಂದು ಹೇಳಿಕೆ ನೀಡಿದ್ದಾರೆ ಎಂದು ಸುದ್ದಿಯಾಗಿದೆ. ಅಂದಹಾಗೆ ಸಚಿನ್ ಹಾಗೂ ನವ್ಯಾ ಇಬ್ಬರೂ ವಿವಾಹಿತರೇ. ನವ್ಯಾ ಅವರಿಗೆ ಮಗ ಕೂಡ ಇದ್ದಾನೆ. ಇದರ ಹೊರತಾಗಿಯೂ ಇವರಿಬ್ಬರ ಸಂಬಂಧ ಇತ್ತು ಎನ್ನುವ ಅರ್ಥದಲ್ಲಿ ಡ್ರೈವರ್ ಹೇಳಿದ್ದಾರೆ. ಈ ಹಿಂದೆ ನವ್ಯಾ ಇದ್ದ ಬಿಲ್ಡಿಂಗ್‌ನಲ್ಲಿಯೇ ನವ್ಯಾ ನಾಯರ್ ಮನೆಯಿತ್ತು. ನವ್ಯಾ ಕೊಚ್ಚಿಗೆ ಶಿಫ್ಟ್ ಆದ ಮೇಲೆ ಸಚಿನ್ ಅವರು 15-20 ಸಲ ಅವರನ್ನು ಭೇಟಿ ಮಾಡಿದ್ದರು. ಸುಮಾರು ಎರಡು ಲಕ್ಷ ರೂಪಾಯಿಯ ಕಾಲ್ಗೆಜ್ಜೆಯನ್ನು ನವ್ಯಾ ಅವರಿಗೆ ಸಚಿನ್ ಉಡುಗೊರೆಯಾಗಿ ನೀಡಿದ್ದರು ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ನವ್ಯಾ ನಾಯರ್‌ಗೆ 2010ರಲ್ಲೇ ಮದುವೆಯಾಗಿದೆ. ಮುಂಬೈ ಮೂಲದ ಉದ್ಯಮಿ ಸಂತೋಷ್ ಮೆನನ್ (Santosh Menon)ಜೊತೆ ನವ್ಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಮಗ ಕೂಡ ಇದ್ದಾನೆ. ಮದುವೆ ನಂತರದಲ್ಲಿ ನವ್ಯಾ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸಿಲ್ಲ. ಭರತನಾಟ್ಯ ಕಾರ್ಯಕ್ರಮಗಳನ್ನೇ ಹೆಚ್ಚು ನೀಡುತ್ತಿರುವ ನವ್ಯಾ ಅವರು ಅನೇಕ ಡಾನ್ಸ್ ರಿಯಾಲಿಟಿ ಶೋಗಳ ನಿರ್ಣಾಯಕರಾಗಿ ಕೆಲಸ ಮಾಡಿದ್ದಾರೆ.
IRS ಅಧಿಕಾರಿ ಜತೆ ತಗ್ಲಾಕ್ಕೊಂಡ್ರೆ ‘ನಮ್ಮ ಯಜಮಾನ್ರು’ ನಟಿ ಈ ವಿಡಿಯೋ ಶೇರ್ ಮಾಡೋದಾ?