
'ಲೂಸಿಯಾ' ಸಿನಿಮಾ ರಿಲೀಸ್ ಆಗಿ ಭರ್ಜರಿ ಹತ್ತು ವರ್ಷಗಳಾಗಿವೆ. ಈ ಸಿನಿಮಾ ಬರೋ ಮೊದಲು ನಿರ್ದೇಶಕ ಪವನ್ ಕುಮಾರ್ ಬಗ್ಗೆ ಸ್ಯಾಂಡಲ್‌ವುಡ್‌ಗೆ ಗೊತ್ತಿರಲಿಲ್ಲ. ಮೂಲತಃ ಟೆಕ್ಕಿ ಆಗಿರೋ ಪವನ್ ಕುಮಾರ್ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕಾಲೂರುವ ಎಲ್ಲ ಸಾಧ್ಯತೆಯನ್ನು ಕಂಡುಕೊಂಡರು. ಇವತ್ತಿಗೂ ಪವನ್ ಕುಮಾರ್ ಅವರು ಡಿಫರೆಂಟ್ (Diffearent) ಆಗಿ ಗುರುತಿಸಿಕೊಂಡಿದ್ದಾರೆ. ‘ಲೂಸಿಯಾ’ ಸಿನಿಮಾದಲ್ಲಿ ಅವರು ಹೇಳಿದ ಕಥೆ ಸಖತ್ ಭಿನ್ನವಾಗಿತ್ತು. ನಟ ಸತೀಶ್ ನೀನಾಸಂ ಅವರಿಗೆ ಈ ಚಿತ್ರದಿಂದ ಜನಪ್ರಿಯತೆ (Popularity) ಹೆಚ್ಚಿತ್ತು. 10 ವರ್ಷಗಳನ್ನು ಪೂರೈಸಿರುವ ಕಾರಣಕ್ಕೆ ಸೆ.6ರಂದು ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ಹಾಗೂ ಶೃತಿ ಹರಿಹರನ್ ಜೋಡಿ ಎಲ್ಲರಿಗೂ ಮೋಡಿ ಮಾಡಿತ್ತು. ಲೂಸಿಯಾ ಸಿನಿಮಾದ ಕಾಂಸೆಪ್ಟೇ ವಿಭಿನ್ನವಾಗಿದ್ದು ಉಪೇಂದ್ರ ಅವರ 'ಬುದ್ಧಿವಂತರಿಗೆ ಮಾತ್ರ' ಅನ್ನೋ ಟ್ಯಾಗ್‌ಲೈನ್‌ಗೆ ಪೂರಕವಾಗಿರುವ ಹಾಗೆ ಇತ್ತು.
2013ರ ಸೆ.6ರಂದು ಬಿಡುಗಡೆ ಆದ ಆ ಚಿತ್ರದ ಬಗ್ಗೆ ಸಿನಿಪ್ರಿಯರು ಈಗಲೂ ಮಾತನಾಡುತ್ತಾರೆ. ಈಗ ‘ಲೂಸಿಯಾ’ ಸಿನಿಮಾ 10 ವರ್ಷಗಳನ್ನು ಪೂರೈಸಿದೆ. ಆ ಪ್ರಯುಕ್ತ ಸೆಪ್ಟೆಂಬರ್ 6ರಂದು ಈ ಚಿತ್ರ ಮತ್ತೆ ರಿಲೀಸ್ (re elease) ಆಗುತ್ತಿದೆ. ಅಂದು ದೊಡ್ಡ ಪರದೆಯಲ್ಲಿ ಈ ಸಿನಿಮಾವನ್ನು ಮಿಸ್ (Miss) ಮಾಡಿಕೊಂಡವರು ಈಗ ನೋಡಿ ಎಂಜಾಯ್ ಮಾಡಬಹುದು. ಈ ಸಿನಿಮಾದಲ್ಲಿ ಕನಸು ಮತ್ತು ವಾಸ್ತವದ ಜಗತ್ತನ್ನು ಒಟ್ಟಾಗಿ ತೋರಿಸುವ ಮೂಲಕ ಪವನ್ ಕುಮಾರ್ ಅವರು ಪ್ರೇಕ್ಷಕರ ಮನ ಗೆದ್ದರು. ಈ ಭಿನ್ನವಾದ ಕಥೆಯನ್ನು ಹೇಳಲು ಅವರು ಬಳಸಿದ ವಿಭಿನ್ನ ನಿರೂಪಣಾ ತಂತ್ರವೂ ಸಖತ್ ಹೈಪ್ (Hype) ಕ್ರಿಯೇಟ್ ಮಾಡಿತ್ತು.
ಸಾನ್ಯಾ ಅಯ್ಯರ್ ಕೊರಳಲ್ಲಿ ಪಚ್ಚೆ ನೆಕ್ಲೇಸ್; ಬೆಲೆ ಹೇಳಮ್ಮ 'ಗೌರಿ' ಎಂದ ಹೆಂಗಸರು!
‘ಲೂಸಿಯಾ’ ಸಿನಿಮಾದಲ್ಲಿ ಸತೀಶ್ ನೀನಾಸಂ ಮತ್ತು ಶ್ರುತಿ ಹರಿಹರನ್ ಅವರು ಜೋಡಿಯಾಗಿ ನಟಿಸಿದ್ದರು. ಇಬ್ಬರ ಕಾಂಬಿನೇಷನ್ ಬಹಳ ಚೆನ್ನಾಗಿ ಮೂಡಿಬಂದಿತ್ತು. ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್ ಮುಂತಾದ ಕಲಾವಿದರು ನಿಭಾಯಿಸಿದ ಪಾತ್ರಗಳು ಕೂಡ ಗಮನ ಸೆಳೆದಿದ್ದವು. ಮಂಡ್ಯ ಸೊಗಡಿನ ಭಾಷೆಯಲ್ಲಿ ಸತೀಶ್ ನೀನಾಸಂ ಅವರು ಹೇಳಿದ ಡೈಲಾಗ್ಗಳು ತುಂಬ ಕ್ಯಾಚಿ ಆಗಿದ್ದವು. ಒಟ್ಟಾರೆ ಈ ಸಿನಿಮಾದ ಮೇಕಿಂಗ್ ಡಿಫರೆಂಟ್ ಆಗಿತ್ತು. ಕ್ರೌಡ್ ಫಂಡಿಂಗ್ ಮೂಲಕ ಈ ಚಿತ್ರ ನಿರ್ಮಾಣ ಆಗಿತ್ತು. ಇದೀಗ ಈ ಸಿನಿಮಾವನ್ನು ಮತ್ತೊಮ್ಮೆ ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಈಗ ಸಿಗುತ್ತಿದೆ. ಅದು ಸಿನಿಪ್ರಿಯರಿಗೆ ಖುಷಿ ನೀಡಿದೆ.
ಅಷ್ಟೇ ಅಲ್ಲ, ಈ ಸಿನಿಮಾದ ಹಾಡುಗಳೂ ಸಖತ್ ಹಿಟ್ ಆದವು. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಖತ್ ಕಿಕ್ ನೀಡಿದರೆ ಈ ಸಿನಿಮಾದ ನೆವದಲ್ಲಿ ಕನ್ನಡಕ್ಕೆ ನವೀನ್ ಸಜ್ಜು ಅವರಂಥಾ ದೇಸಿ ಕಂಠದ ಗಾಯಕ ಸಿಗುವಂತಾಯ್ತು. ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಈ ಗಾಯಕನ ದನಿಗೆ ಮಾರು ಹೋಗಿ ಆತನ ಮನೆ ಹುಡುಕಿಕೊಂಡು ಹೋಗಿ ಆತನನ್ನು ಭೇಟಿ ಮಾಡಿದ್ದು ಒಂದು ಕಥೆಯಾದರೆ, ಆ ಬಳಿಕ ತಪಸ್ಸಿನಂತೆ ಈ ಹುಡುಗನನ್ನು ಫೇಮಸ್ ಸಿಂಗರ್ ಆಗಿ ಬದಲಾಯಿಸಿದ್ದು ಇನ್ನೊಂದು ಕಥೆ. ಈ ಎಲ್ಲ ಶ್ರೇಯಸ್ಸು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರಿಗೆ ಹೋಗುತ್ತೆ.
ಈ ಸಿನಿಮಾಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಸಿನಿಮಾದ ಹೀರೋ ಮತ್ತು ಹೀರೋಯಿನ್ ಪುನರ್ ಮಿಲನವಾಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ. 'ಲೂಸಿಯಾ' ಈ ಇಬ್ಬರು ಕಲಾವಿದರ ಲೈಫಲ್ಲೂ ಉತ್ತಮ ಬೆಳವಣಿಗೆ ತಂದುಕೊಟ್ಟ ಸಿನಿಮಾ. ಇದೀಗ ಈ ಸಿನಿಮಾಕ್ಕೆ ಹತ್ತು ವರ್ಷವಾದ ಹಿನ್ನೆಲೆಯಲ್ಲಿ ಪವನ್ ಕುಮಾರ್, ಶ್ರುತಿ ಹರಿಹರನ್ ಮತ್ತು ನೀನಾಸಂ ಸತೀಶ್ ಭೇಟಿ ಮಾಡಿ ಸಿನಿಮಾ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಕೊರಗಜ್ಜನ ಆಧಿಸ್ಥಳದಲ್ಲಿ ನೆಮ್ಮದಿ ಇದೆ: ಮೂರು ತಿಂಗಳಿಗೊಮ್ಮೆ ನಟಿ ರಕ್ಷಿತಾ ಬರ್ತಿರೋದು ಈ ಕಾರಣಕ್ಕೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.