ಸೆಲ್ಫಿ ಕೊಟ್ರೆ ಹೆಗಲ ಮೇಲೆನೇ ಕೈಹಾಕೋದಾ ಅಂಕಲ್ಲು! ಸುಮ್ನೆ ಇರ್ತಾರಾ ನಟಿ ರಾಧಿಕಾ ಪಂಡಿತ್​?

Published : Apr 14, 2025, 11:42 AM ISTUpdated : Apr 14, 2025, 01:16 PM IST
ಸೆಲ್ಫಿ ಕೊಟ್ರೆ ಹೆಗಲ ಮೇಲೆನೇ ಕೈಹಾಕೋದಾ ಅಂಕಲ್ಲು! ಸುಮ್ನೆ ಇರ್ತಾರಾ ನಟಿ ರಾಧಿಕಾ ಪಂಡಿತ್​?

ಸಾರಾಂಶ

ನಟಿ ರಾಧಿಕಾ ಪಂಡಿತ್ ಮಕ್ಕಳ ಪಾಲನೆಯಲ್ಲಿ ನಿರತರಾಗಿದ್ದು, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅಭಿಮಾನಿಗಳು ಶುಭ ಕೋರಿದರು. ಕಾರ್ಯಕ್ರಮದಲ್ಲಿ ಯಶ್ ಹಾಡಿಗೆ ರಾಧಿಕಾ ಭಾವುಕರಾದರು. ರಾಧಿಕಾ ಅವರ ಶಿಕ್ಷಕಿಯಾಗುವ ಕನಸು ನನಸಾಗಲಿಲ್ಲ. 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಆದರು. 2016ರಲ್ಲಿ ಯಶ್ ಜೊತೆ ವಿವಾಹವಾದರು, ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ರಾಧಿಕಾ ಅವರ ವಿಡಿಯೋ ವೈರಲ್ ಆಗಿದೆ.

ಯಶ್​ ಮತ್ತು ರಾಧಿಕಾ ಪಂಡಿತ್​ ತಮ್ಮ ಇಬ್ಬರು ಪುಟಾಣಿಗಳಾದ ಮಕ್ಕಳು ಆಯ್ರಾ, ಯಥರ್ವ್‌ ಜೊತೆ ಖುಷಿಯ ಸಂಸಾರ ಮಾಡುತ್ತಿದ್ದಾರೆ. ರಾಧಿಕಾ ಬಣ್ಣದ ಲೋಕದಿಂದ ದೂರವೇ ಆಗಿ ಮಕ್ಕಳ ಪಾಲನೆಯಲ್ಲಿ ತೊಡಗಿದ್ದಾರೆ.  ಆಗಾಗ ಪತಿ ಯಶ್‌ ಜೊತೆಗೆ ಜಾಹೀರಾತುಗಳಲ್ಲಿ ಮಾತ್ರ ಕಾಣಿಸಿಕೊಳ್ತಾರೆ.  ಈಚೆಗಷ್ಟೇ ಇವರು ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಸದ್ಯ ಸಿನಿಮಾದಿಂದ ರಾಧಿಕಾ ಅಂತರ ಕಾಯ್ದುಕೊಂಡಿದ್ದರೂ ಕೂಡ ಅವರ ಮೇಲಿನ ಅಭಿಮಾನಿಗಳ ಕ್ರೇಜ್ ಕಮ್ಮಿಯಾಗಿಲ್ಲ ಎಂಬುದಕ್ಕೆ ಇದು ಉದಾಹರಣೆ ಆಗಿದೆ. ನೆಚ್ಚಿನ ನಟಿಗೆ ಶುಭಹಾರೈಸಲು ಬೆಂಗಳೂರಿನ ರಾಧಿಕಾ ನಿವಾಸದ ಬಳಿ ಇಂದು ಫ್ಯಾನ್ಸ್ ಜಮಾಯಿಸಿದ್ದರು. ಯಶ್‌ ಅವರು ಪತ್ನಿ ರಾಧಿಕಾಗೋಸ್ಕರ  ʼಜೊತೆಯಲಿ ಜೊತೆಯಲಿʼ ಎಂದು ಹಾಡು ಹಾಡಿದ್ದರು.  ಯಶ್‌ ಹಾಡು ಕೇಳಿದವರು ಖುಷಿಯಿಂದ ಕೂಗಿದ್ದಾರೆ. ಇನ್ನು ಪತಿಯ ಹಾಡು ಕೇಳಿ ರಾಧಿಕಾ ಹೃದಯ ತುಂಬಿ ಬಂದಿರುವ ವಿಡಿಯೊ ವೈರಲ್​ ಆಗಿತ್ತು. 

ಇಂತಿಪ್ಪ ರಾಧಿಕಾ ಅವರ ವಿಡಿಯೋ ಒಂದು ವೈರಲ್​ ಆಗಿದೆ. ಇದರಲ್ಲಿ ವ್ಯಕ್ತಿಯೊಬ್ಬರು ಪೋಸ್​ ಕೊಡುವುದಕ್ಕಾಗಿ ನಟಿಯ ಹೆಗಲ ಮೇಲೆ ಕೈಹಾಕಿದ್ದಾರೆ. ಫೋಟೋಗೆ ಪೋಸ್​ ಕೊಡಲು ಅನುವು ಮಾಡಿಕೊಟ್ಟ ನಟಿಗೆ ಇದರಿಂದ ಇರುಸು ಮುರುಸು ಉಂಟಾಗಿದೆ. ಆ ಕೈಯನ್ನು ಒಂದೇ ಸಮನೆ ತೆಗೆದು ಕೊನೆಗೆ ನಗುಮುಖ ಮಾಡಿಕೊಂಡು ಆ ವ್ಯಕ್ತಿಯ ಜೊತೆ ಮಾತನಾಡಿದ್ದಾರೆ. ವಿಡಿಯೋ ವೈರಲ್​ ಆಗಿದೆ. ಗಂಡ ಬಿಟ್ಟು ಯಾರೂ ನನ್ನನ್ನು ಮುಟ್ಟಬಾರದು ಎಂದು ಇದಕ್ಕೆ ಶೀರ್ಷಿಕೆ ಕೊಡಲಾಗಿದ್ದು, ಇದನ್ನು ನೋಡಿ ಅಭಿಮಾನಿಗಳು ಗುಡ್​ ಗುಡ್​ ಎನ್ನುತ್ತಿದ್ದಾರೆ.  

ಕಿಸ್‌ ಮಾಡಲು ಹೋದ್ರೆ ಅಲ್ಲಿ ಮುಟ್ಬೇಡಿ, ಇಲ್ಲಿ ಮುಟ್ಬೇಡಿ ಅಂತಾರೆ! ದುಃಖ ತೋಡಿಕೊಂಡ ಕಿಚ್ಚ ಸುದೀಪ್‌

ಇನ್ನು ನಟಿ ರಾಧಿಕಾ ಕುರಿತು ಹೇಳುವುದಾದರೆ,  ರಾಧಿಕಾ ಅವರಿಗೆ ಶಿಕ್ಷಕಿಯಾಗಬೇಕೆನ್ನುವ ಕನಸು ಇತ್ತು.  2007ರಲ್ಲಿ ರಾಧಿಕಾ ಅಂತಿಮ ವರ್ಷದ ಬಿಕಾಂ ಓದುತ್ತಿದ್ದಾಗ, ಅಶೋಕ್ ಕಶ್ಯಪ ತಮ್ಮ ನಿರ್ದೇಶನದ 'ನಂದ ಗೋಕುಲ' ಧಾರಾವಾಹಿಯಲ್ಲಿ  ನಟಿಸುವ ಅವಕಾಶ ದೊರೆಯಿತು. ಈ ಸೀರಿಯಲ್‌ನಲ್ಲಿ ಅಡಿಷನ್ ಇಲ್ಲದೇ ಆಯ್ಕೆಯಾದರು. ಅದೇ ವರ್ಷ ಮತ್ತೊಂದು ಧಾರಾವಾಹಿ ಸುಮಂಗಲಿನಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಅವರ ಬಣ್ಣದ ಲೋಕ ಆರಂಭವಾಯಿತು. ಶಿಕ್ಷಕಿಯ ಕನಸು ಅಲ್ಲಿಯೇ ಕನಸಾಗಿ ಉಳಿಯಿತು. 
 
ಸೀರಿಯಲ್​ನಲ್ಲಿ ಅವರ ಅಭಿನಯ ನೋಡುತ್ತಿದ್ದಂತೆಯೇ,  ಫೋಟೋಗಳು ಮ್ಯಾಗಜಿನ್‌ಗಳಲ್ಲಿ ಪ್ರಕಟವಾಗಿದ್ದವು. ಈ ಸೌಂದರ್ಯಕ್ಕೆ ನಿರ್ದೇಶಕ ಶಶಾಂಕ್ ಮನಸೋತರು. ಆ ಸಮಯದಲ್ಲಿ ಅವರು  ತಮ್ಮ ಮೊಗ್ಗಿನ ಮನಸ್ಸು ಸಿನಿಮಾಗೆ ನಾಯಕಿಯ ಹುಡುಕಾಟದಲ್ಲಿದ್ದರು. ಹೊಸ ಮುಖದ ಹುಡುಕಾಟದಲದ್ಲಿದ್ದ ಅವರಿಗೆ ರಾಧಿಕಾ ಕಂಡರು.  ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದರು. ಈ ಚಿತ್ರದ ಅಭಿನಯಕ್ಕೆ ಇವರಿಗೆ ಫಿಲ್ಮ್ ಫೇರ್ ಮತ್ತು ರಾಜ್ಯ ಪ್ರಶಸ್ತಿ ನೀಡಲಾಯಿತು. ಚೊಚ್ಚಲ ಸಿನಿಮಾದಲ್ಲೇ ರಾಜ್ಯ ಪ್ರಶಸ್ತಿ ಪಡೆದ ಹಗ್ಗೆಳಿಕೆಗೆ ರಾಧಿಕಾ ಪಾತ್ರರಾದರು. ರಾತ್ರೋರಾತ್ರಿ ಸೂಪರ್​ ಸ್ಟಾರ್​ ಆದರು ನಟಿ. ಇದಾದ ಬಳಿಕ ಅವರಿಗೆ ಹಲವು ಚಿತ್ರಗಳು ಅರಸಿ ಬಂದವು.  ಒಲವೇ ಜೀವನ ಲೆಕ್ಕಚಾರ, ಲವ್, ಗುರು, ಕೃಷ್ಣನ್ ಲವ್ ಸ್ಟೋರಿ, ಗಾನಾ ಬಜಾನ, ಹುಡುಗರು, ಅಲೆಮಾರಿ, ಬ್ರೆಕಿಂಗ್ ನ್ಯೂಸ್, ಅದ್ಧೂರಿ, ಸಾಗರ್, ಡ್ರಾಮಾ, ಕಡ್ಡಿಪುಡಿ, ದಿಲ್‌ವಾಲಾ, ಬಹುದ್ದೂರ್, ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು.   ರಾಧಿಕಾ ಪಂಡಿತ್ 2016ರ ಡಿಸೆಂಬರ್ 9ರಂದು ಯಶ್ ಜೊತೆ ಮದುವೆಯಾಯಿತು. ಇವರಿಗೆ ಈಗ ಐರಾ ಹಾಗೂ ಯಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ.
 

ಆ ನಟ ನನ್ನ ಕ್ರಷ್​, ಅವ್ರ ಮದ್ವೆಯಾದಾಗ ಹಾರ್ಟ್​ ಬ್ರೇಕ್​ ಆಗೋಯ್ತು- ಬಿಕ್ಕಿ ಬಿಕ್ಕಿ ಅತ್ತೆ ಎಂದ ಸಾನ್ವಿ ಸುದೀಪ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?
ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar