ಹೋಟೆಲ್‌ನಲ್ಲಿ ನಾನೇ ಬಿಲ್ ಕಟ್ಟುತ್ತಿದ್ದೆ; ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ರಿಷಿಕಾ ಸಿಂಗ್

Published : Apr 13, 2023, 11:22 AM IST
ಹೋಟೆಲ್‌ನಲ್ಲಿ ನಾನೇ ಬಿಲ್ ಕಟ್ಟುತ್ತಿದ್ದೆ; ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ರಿಷಿಕಾ ಸಿಂಗ್

ಸಾರಾಂಶ

ಮದುವೆ ಕಾರ್ಡ್‌ ಪ್ರಿಂಟ್ ಆಗಿತ್ತು, ಶಾಪಿಂಗ್ ಮುಗಿದಿತ್ತು....ಎಲ್ಲಾ ಆದ್ಮೇಲೆ ಮದುವೆ ಮುರಿಯಲು ಕಾರಣವೇನು? ರಿಷಿಕಾ ಸಿಂಗ್ ಮಾತು....

ಕನ್ನಡ ಚಿತ್ರರಂಗದ ಮನೆ ಮಗಳು ರಿಷಿಕಾ ಸಿಂಗ್ ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಭೀಕರ ಅಪಘಾತವಾಗಿ ಬೆನ್ನು ಮೂಲೆ ಮುರಿದುಕೊಳ್ಳುತ್ತಾರೆ. ಎರಡು ವರ್ಷಗಳ ಬೆಸ್ಟ್‌ ರೆಸ್ಟ್‌ ನಂತರ ಓಡಾಡಲು ಶುರು ಮಾಡಿದ್ದಾರೆ. ಈ ಸಮಯದಲ್ಲಿ ತಮ್ಮ ಮದುವೆ ಮುರಿದು ಬಿದ್ದ ಘಟನೆಯನ್ನು ವಿವರಿಸಿದ್ದಾರೆ.  

'ದೊಡ್ಡ ಕಂಪನಿಯಲ್ಲಿ ನಾನು ಪ್ರೀತಿಸುತ್ತಿದ್ದ ಹುಡುಗ ಸಂದೀಪ್ ಕೆಲಸ ಮಾಡುತ್ತಿದ್ದರು ಅವರು ಮೂಲತಃ ಕೇರಳದವರು. ನನ್ನ ಅಣ್ಣ ಮೂಲಕ ನಾವು ಭೇಟಿ ಮಾಡಿದ್ದು. ಇಷ್ಟ ಆಯ್ತು ಮದುವೆ ಆಗುವ ನಿರ್ಧಾರ ಮಾಡಿದ್ವಿ ಆದರೆ ಆ ಸಮಯದಲ್ಲಿ ನನ್ನ ಕೆರಿಯರ್‌ ಸೂಪರ್ ಆಗಿದೆ ಎಂದು ಸಂದೀಪ್‌ಗೆ ಅನಿಸಿತ್ತು ಏಕೆಂದರೆ ನನ್ನ ಶೂಟಿಂಗ್ ಸೆಟ್‌ ಎಲ್ಲಾ ಭೇಟಿ ನೀಡಿದ್ದರು. ಬಣ್ಣದ ಪ್ರಪಂಚಕ್ಕೆ ಬ್ರೇಕ್ ಹಾಕಿ ಅವರನ್ನು ಆಯ್ಕೆ ಮಾಡಿಕೊಂಡೆ ಆದರೆ ಅವರ ಮನಸ್ಸು ತುಂಬಾ ದೊಡ್ಡದು ಹೀಗಾಗಿ ಅವರು ತಾಯಿ ಹೇಳಿದಂತೆ ಬೇಡ ಫ್ರೆಂಡ್ಸ್‌ ಆಗಿರಿ ಹೋಗಿ ಕೆಲಸ ಮಾಡಿ ಎನ್ನುತ್ತಿದ್ದರು. ಮದ್ವೆ ಆಗಿದ್ರೆ ಇಷ್ಟರಲ್ಲಿ ಎರಡು ಮಕ್ಕಳು ಇರುತ್ತಿದ್ದರು. ನಟನೆ ಅನ್ನೋದು ದೇವರು ನಮಗೆ ಕೊಟ್ಟಿರುವ ಭಿಕ್ಷೆ. ಸುಮ್ಮನೆ ಇರುವ ಬದಲು ಇರೋ ಟ್ಯಾಲೆಂಟ್‌ನ ಬಳಸಿಕೊಳ್ಳಬೇಕು ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ಕುಡಿಯುವುದು ತಪ್ಪಲ್ಲ, ಬಾಟಲ್‌ ಓಪನ್ ಮಾಡಿಲ್ಲ ಅಂದ್ರೆ ಪಾರ್ಟಿನೇ ಅಲ್ಲ: ರಿಷಿಕಾ ಸಿಂಗ್

'ಮದುವೆ ಶಾಪಿಂಗ್ ಅಗಿತ್ತು, ಪತ್ರಿಕೆ ಬಂದಿತ್ತು ಎಲ್ಲಾ ರೆಡಿಯಾಗಿತ್ತು ಆಗ ಮದುವೆ ಬೇಡ ಅನ್ನೋ ನಿರ್ಧಾರ ಮಾಡುತ್ತೀವಿ. ಏಕೆಂದರೆ ನಾನು ಕ್ರ್ಯಾಕ್. ಪ್ರೀತಿಸುವವರು ಎಲ್ಲಾ ಕ್ರ್ಯಾಕ್‌ಗಳೇ. ಬೇಗ ಮದುವೆ ಆಗುತ್ತೀದ್ದೀವಿ ಅನ್ನೋ ಭಾವನೆ ಇಬ್ಬರಿಗೂ ಬಂದಿತ್ತು. ನನ್ನ ಇಡೀ ಜೀವನ ಎಷ್ಟು ಕಷ್ಟ ಪಟ್ಟಿದ್ದೀನಿ ಎಂದು ಪ್ರತಿಯೊಂದು ವಿಚಾರವನ್ನು ಅತನಿಗೆ. ನಾನು ತುಂಬಾ ಇಂಡಿಪೆಂಡೆಂಟ್ ಆಗಿದ್ದೆ ಬಿಲ್ ಕೊಡುತ್ತಿದ್ದೆ ಇಲ್ಲ ನಾವು ಶೇರ್ ಮಾಡುತ್ತಿದ್ವಿ. ಅವರ ತಾಯಿ ತುಂಬಾ ಇಂಡಿಪೆಂಡೆಂಟ್ ಆಗಿರುವ ಕಾರಣ ನನ್ನಲ್ಲಿ ಆ ಗುಣ ಇಷ್ಟ ಪಟ್ಟಿದ್ದಾರ' ಎಂದು ರಿಷಿಕಾ ಹೇಳಿದ್ದಾರೆ. 

ಸೀಟ್‌ ಬೆಲ್ಟ್‌ ಹಾಕಿದ್ದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ: ತಂಗಿ ಬಗ್ಗೆ ಭಾವುಕರಾದ ನಟ ಆದಿತ್ಯ

'ಮದುವೆ ಮುರಿದಾಗ ನನಗೂ ಬೇಸರ ಆಯ್ತು. ನನ್ನ ಕಿವಿ ಮತ್ತು ತಲೆ ಕನೆಕ್ಷನ್‌ ಕಟ್ ಮಾಡಬೇಕು ಅನಿಸುತ್ತಿತ್ತು. ಅವರು ಹೇಳುತ್ತಿದ್ದ ಮಾತು ನನಗೆ ಅರ್ಥ ಆಗುತ್ತಿರಲಿಲ್ಲ ಆದರೆ ಮನಸ್ಸಿನಲ್ಲಿ ಎಲ್ಲೋ ಈ ರೀತಿ ಭಾವನೆ ಇತ್ತು. ಬೇಡ ಮದುವೆ ಎಂದು ಒಂದೇ ಸಲ ಹೇಳಲು ಆಗಲಿಲ್ಲ. ಮದುವೆ ಬೇಡ ಎಂದು ಹೇಳಲು ಹೋದಾಗ ಅವರ ಮನೆಯಲ್ಲಿ ಮದುವೆ ಕಾರ್ಡ್‌ಗೆ ಅರಿಶಿಣ ಕುಂಕುಮ ಹಾಕುತ್ತಿದ್ದರು. ಹಣೆ ಬರಹದಲ್ಲಿ ಬರೆದಿರಬೇಕು ಅದಿಕ್ಕೆ ಈ ರೀತಿ ಆಗಿರುವುದು. ನನ್ನ ಆಕ್ಸಿಡೆಂಟ್ ವಿಚಾರ ಕೂಡ ಏನೂ ಗೊತ್ತಿಲ್ಲದೆ ಆಗಿರುವುದು. ಮದುವೆ ಪ್ಲ್ಯಾನ್ ಆಗಿದ್ದು 2012ರಲ್ಲಿ ಆಗ 21 ವರ್ಷ ಅಷ್ಟೆ. ನನಗೆ ಮೆಚ್ಯೂರಿಟಿ ಇರಲಿಲ್ಲ ಹೀಗಾಗಿ ಅವರ ತಾಯಿ ಅರ್ಥ ಮಾಡಿಕೊಂಡರು. ಆಗ ಅವರೇ ವಿಲನ್ ಅನಿಸುತ್ತಿತ್ತು ಆನಂತರ ಅವರ ಮಾತಿನಲ್ಲಿರುವ ಅರ್ಥ ಈಗ ಗೊತ್ತಾಗುತ್ತಿದೆ ಎಂದಿದ್ದಾರೆ ರಿಷಿಕಾ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ