'ಜಲಪಾತ' ಕನ್ನಡಕ್ಕೊಂದು ಪರಿಸರ ಕಾಳಜಿ ಚಿತ್ರ; ರವೀಂದ್ರ‌ ತುಂಬರಮನೆ-ರಮೇಶ್ ಬೇಗಾರ್!

Published : Apr 12, 2023, 06:51 PM ISTUpdated : Apr 13, 2023, 11:02 AM IST
'ಜಲಪಾತ' ಕನ್ನಡಕ್ಕೊಂದು ಪರಿಸರ ಕಾಳಜಿ ಚಿತ್ರ; ರವೀಂದ್ರ‌ ತುಂಬರಮನೆ-ರಮೇಶ್ ಬೇಗಾರ್!

ಸಾರಾಂಶ

ಪರಿಸರ ಕಾಳಜಿ ಕಥೆ ಹೇಳಲು ಮುಂದಾಗಿದ್ದಾರೆ ರವೀಂದ್ರ ತುಂಬರಮನೆ ಮತ್ತು ರಮೇಶ್ ಬೇಗಾರ್...

ವೈಶಂಪಾಯನ ತೀರ ಸಿನಿಮಾ ಡೈರೆಕ್ಟ್ ಮಾಡಿದ್ದ ರಮೇಶ್ ಬೇಗಾರ್ ಸಧ್ಯ 'ಜಲಪಾತ' ಸಿನ್ಮಾ ನಿರ್ದೇಶನ ಮಾಡ್ತಿದ್ದಾರೆ. ಇವತ್ತಿನ ಎಲೆಕ್ಟ್ರಾನಿಕ್ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚಿದ್ದು ಈ ಒತ್ತಡಕ್ಕೆ ಪರಿಹಾರ ನಿಸರ್ಗದಲ್ಲಿ ಮಾತ್ರ ಸಾಧ್ಯ. ಪ್ರಕೃತಿ, ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದ ಕುರಿತಾದ ಕಥೆಯೇ ಈ ಜಲಪಾತ. 

೪೦ ವರ್ಷಗಳ ಹಿಂದೆ ಭಾರತದ ಆಹಾರ ಪದ್ದತಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಆರೋಗ್ಯಕರವಾಗಿತ್ತು, ಆದ್ರೆ ಈಗ ಮಣ್ಣಿನಲ್ಲಿ ಸತ್ವ ಇಲ್ಲ, ಆಹಾರದಲ್ಲಿ ಕಲಬೆರಿಕೆ ಹಾಗೂ ರಾಸಾಯನಿಕ ವಸ್ತುಗಳ ವಿಪರೀತ ಬಳಕೆಯಿಂದ ಜನರಲ್ಲಿ ಸಮಸ್ಯೆಗಳು ಹೆಚ್ಚಿವೆ. ಹೀಗಾಗಿ ಪೂರ್ವಿಕರ ಜೀವನ ಶೈಲಿ ಹಾಗೂ ಆಹಾರ ಪದ್ದತಿ ಮತ್ತೆ ಮರುಕಳಿಸ್ಬೇಕು ಅನ್ನೋ ಕಾರಣಕ್ಕೆ  ಸಾಮಾಜಿಕ ಚಿಂತಕ ಹಾಗೂ ಇಂಡಸ್ ಹರ್ಬ್ಸ್ ಎಂ.ಡಿ. ರವೀಂದ್ರ ತುಂಬರಮನೆ ಜಲಪಾತಕ್ಕೆ ವಿಷಯ-ವಿಚಾರ ನೀಡೋದರ‌ ಜೊತೆಗೆ ನಿರ್ಮಾಣದ ರುವಾರಿಯೂ ಆಗಿದ್ದಾರೆ.

ಜಲಪಾತ ಚಿತ್ರಕ್ಕೆ‌ ರಜನೀಶ್ ನಾಯಕರಾಗಿ ನಟಿಸಿದ್ರೆ, ನಾಗಶ್ರೀ‌ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.ನೈಸರ್ಗಿಕ ಹಾಗೂ ಸಾವಯವ ಕೃಷಿ ಕಮ್ಯೂನಿಟಿ ಕಲ್ಪನೆಯ ರುವಾರಿಯೂ ಆಗಿರೋ  ರವೀಂದ್ರ ತುಂಬರಮನೆ" ಅವ್ರು ಮೊನ್ನೆಯಷ್ಟೆ ಬೆಂಗಳೂರಿನಿಂದ ೯೦ ಕಿ.ಲೋ ಮೀಟರ್ ದೂರದಲ್ಲಿರೋ ಮದ್ದೂರಿನ "ಮಧುವನ"ದಲ್ಲಿ ವಸಂತೋತ್ಸವ ಕಾರ್ಯಕ್ರಮವನ್ನು ಮಾಡಲಾದ್ದು. ಯುಗಾದಿ ಹಾಗೂ ಸುಗ್ಗಿ ಹಬ್ಬದಂತೆ ವಾತಾರಣವನ್ನು ಕ್ರಿಯೇಟ್ ಮಾಡಿದ್ರು. ಈ ಜಾಗದಲ್ಲಿಯೇ ಜಲಪಾತ ಸಿನಿಮಾದ ಸಿಕ್ವೆನ್ಸ್ ಶೂಟಿಂಗ್ ಮಾಡಲಾಯ್ತು. ಬೆಂಗಳೂರಿನ ಟೆನ್ಶನ್ ಹಾಗೂ ಬ್ಯೂಸಿ ಬದುಕಿನ ಜಂಜಾಟದಲ್ಲಿದ್ದ ನೂರಾರು ಜನ ಮಧುವನಕ್ಕೆ ಭೇಟಿಕೊಟ್ಟು ಸಂಗೀತ ಹಾಗೂ ಆಟಗಳನ್ನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗ್ಲೆ ಶೃಂಗೇರಿ ಸುತ್ತಮುತ್ತ ೧೮ದಿನಗಳ ಕಾಲ ಶೂಟಿಂಗ್ ನಡೆದಿದ್ದು ಸಧ್ಯ ಮಧುವನದ ವಸಂತೋತ್ಸವದಲ್ಲಿ ಚಿತ್ರೀಕರಣ ನಡೆಯುತ್ತಿದೆ..

ಸಚಿವ ಕೆ.ಗೋಪಾಲಯ್ಯ ಅವರಿಂದ ಬಿಡುಗಡೆಯಾಯಿತು "ಮಾಜರ್" ಚಿತ್ರದ ಹಾಡುಗಳು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೇದಿಕೆ ಮೇಲೆಯೇ 'ಕಚಡಾ ನನ್​ ಮಗನೆ, ಪಾಪಿ ನನ್​ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್​ ನಟರು ಸುಸ್ತು!
ಚೆಲುವಿನ ಚಿತ್ತಾರ ಕ್ಲೈಮ್ಯಾಕ್ಸ್‌ನಲ್ಲಿ ಅಮೂಲ್ಯ ಕೈಲಿದ್ದ ಮಗು ಈಗ ಹೇಗಾಗಿದ್ದಾನೆ?