'ಮಿಲನ' ಚಿತ್ರದ ಖ್ಯಾತಿಯ ಪ್ರಕಾಶ್ ವೀರ್ ಅವರ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ 'ಡೆವಿಲ್' ಚಿತ್ರದ ಸ್ಕ್ರಿಪ್ಟ್ ಪೂಜೆ ಎರಡು ತಿಂಗಳ ಹಿಂದೆ ಸರಳವಾಗಿ ನೆರವೇರಿತ್ತು. ಆದರೆ ಚಿತ್ರತಂಡ 'ಡೆವಿಲ್' ಚಿತ್ರದ ಕುರಿತಂತೆ ಇನ್ನು ಯಾವುದೇ ಪ್ರಚಾರ ಕಾರ್ಯ ಆರಂಭ ಮಾಡಿಲ್ಲ.
ನಟ ದರ್ಶನ್ ನಾಯಕತ್ವದ 'ಡೆವಿಲ್' ಚಿತ್ರದ ಸುದ್ದಿ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಚಿತ್ರದ ಫಸ್ಟ್ ಲುಕ್ ಹಾಗೂ ನಾಯಕಿ ಆಯ್ಕೆ ಬಗ್ಗೆ ಸೋಷಿಯಲ್ ಮೀಡಿಯಾಗಲ್ಲಿ ವಿಭಿನ್ನ ಪೋಸ್ಟ್‌ಗಳು ಹರಿದಾಡುತ್ತಿವೆ. ಇವೆಲ್ಲ ಅಧಿಕೃತವಲ್ಲ ಎಂದು ಗೊತ್ತಿದ್ದರೂ ಸುದ್ದಿಯೇನೂ ನಿಂತಿರಲಿಲ್ಲ. ಇಷ್ಟವರೆಗೆ ಚಿತ್ರತಂಡ ಕೂಡ ಈ ಬಗ್ಗೆ ಮಾತನಾಡಿರಲಿಲ್ಲ. ಆದರೆ, ಈಗ ಅಧಿಕೃತವಾಗಿ ಚಿತ್ರತಂಡದಿಂದ ಈ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ ಡೆವಿಲ್ ಚಿತ್ರದ ಬಗ್ಗೆ ಚಿತ್ರತಂಡ 'ಚಿತ್ರದ ಕುರಿತು ನಾವೇ ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುತ್ತೇವೆ. ಅಲ್ಲಿಯವರೆಗೂ ಯಾವುದನ್ನು ನಂಬಬೇಡಿ' ಎಂದು ನಿರ್ದೇಶಕ ಪ್ರಕಾಶ್ ವೀರ್ ಮನವಿ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬುತ್ತಿರುವ ಬಗೆಬಗೆಯ ಸುದ್ದಿಗಳನ್ನು ನೋಡಿ ಡೆವಿಲ್ ಟೀಮ್ಗೆ ಶಾಕ್ ಆಗಿಬಿಟ್ಟಿದೆ ಎನ್ನಬಹುದು. ಅವರಿಗೇ ಗೊತ್ತಿಲ್ಲದೇ ಚಿತ್ರದ ಫಸ್ಟ್ ಲುಕ್, ಹೀರೋಯಿನ್ ಆಯ್ಕೆ ಎಲ್ಲವೂ ಮುಗಿದುಹೋಗಿದೆ ಎಂದರೆ ಯಾರಿಗೆ ಶಾಕ್ ಆಗಲ್ಲ ಹೇಳಿ!?
ಹೌದು, ಕೊನೆಗೂ ಚಿತ್ರತಂಡ ಈ ಬಗ್ಗೆ ಮೌನ ಮುರಿದಿದೆ. ಮಿಲನ ಖ್ಯಾತಿಯ ನಿರ್ದೇಶಕ ಪ್ರಕಾಶ್ ವೀರ್ ಈಗಾಗಲೇ ಹೊರಬಿದ್ದಿರುವ ಸುದ್ದಿ ಯಾವುದೂ ಅಧಿಕೃತವಲ್ಲ, ನಾವೇ ಅದನ್ನು ನೀಡುತ್ತೇವೆ' ಎಂದು ಹೇಳುವ ಮೂಲಕ ಹೊಸ ಕುತೂಹಲ ಸೃಷ್ಟಿಸಿದ್ದಾರೆ. ಈಗ ಯಾರಿರಬಹುದು ನಾಯಕಿ, ಹೇಗಿರಬಹುದು ನಟ ದರ್ಶನ್ ಲುಕ್ ಎಂಬ ಕುತೂಹಲ ಮೂಡತೊಡಗಿದೆ. ಅದಕ್ಕೆ ಉತ್ತರ ಸಿಗುತ್ತದೆ ಎಂಬುದೇನೋ ಕನ್ಫರ್ಮ ಆಯಿತು, ಆದರೆ ಯಾವಾಗ ಎಂಬುದು ಸದ್ಯಕ್ಕೆ ಸಸ್ಪೆನ್ಸ್.
'ಮಲೆನಾಡ ಗೊಂಬೆ'ಗೆ ಮನಸೋತ ಮನೆಹಾಳನಿಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್..!
'ಮಿಲನ' ಚಿತ್ರದ ಖ್ಯಾತಿಯ ಪ್ರಕಾಶ್ ವೀರ್ ಅವರ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ 'ಡೆವಿಲ್' ಚಿತ್ರದ ಸ್ಕ್ರಿಪ್ಟ್ ಪೂಜೆ ಎರಡು ತಿಂಗಳ ಹಿಂದೆ ಸರಳವಾಗಿ ನೆರವೇರಿತ್ತು. ಆದರೆ ಚಿತ್ರತಂಡ 'ಡೆವಿಲ್' ಚಿತ್ರದ ಕುರಿತಂತೆ ಇನ್ನು ಯಾವುದೇ ಪ್ರಚಾರ ಕಾರ್ಯ ಆರಂಭ ಮಾಡಿಲ್ಲ. ಮೊದಮೊದಲು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಪೋಸ್ಟರ್ ಹಾಕಿ 'ಡೆವಿಲ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಂತ ಹೇಳಿಕೊಂಡಿದ್ದರು.
ಹಂಪಿ ಉತ್ಸವದಲ್ಲಿ ಡಾನ್ಸ್ ಮಾಡ್ತಾರೆ 'ಶೇಕ್ ಇಟ್ ಪುಷ್ಪಾವತಿ' ನಟಿ ನಿಮಿಕಾ ರತ್ನಾಕರ್..!
ಈಗ ಡೆವಿಲ್ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿದ್ದಾರೆ ಎಂಬ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಈ ಮೇಲ್ಕಂಡ ಯಾವುದೇ ವಿಷಯಗಳು ಚಿತ್ರತಂಡದ ಅಧಿಕೃತ ಮಾಹಿತಿ ಆಗಿರುವುದಿಲ್ಲ. ಸದ್ಯದಲ್ಲೇ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ. ನಮ್ಮ'ವೈಷ್ಣೊ' ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ 'ಡೆವಿಲ್' ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾಗಳಿಗೆ ಪಾಠ ಮಾಡಿದ್ದಾರೆ ಎನ್ನಬಹುದೇನೋ!
ಇದು ಚೀಲದ ವಿಚಾರ ಅಲ್ಲ, ಶೀಲದ ವಿಚಾರ; ಶೃತಿ ಹರಿಹರನ್ ವಿರುದ್ದ ಗುಡುಗಿದ 'ಮಠ' ಗುರುಪ್ರಸಾದ್