ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ವೇಳೆ ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಗಾಯಗೊಂಡ ಅಭಿಮಾನಿಗಳಿಗೆ ಯಶ್ ತಲಾ ಒಂದು ಲಕ್ಷ ರೂ. ಸಹಾಯಧನ ನೀಡಿದ್ದಾರೆ.
ಗದಗ (ಫೆ.03): ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ವೇಳೆ ದೊಡ್ಡ ಬ್ಯಾನರ್ ಕಟ್ಟುವ ವೇಳೆ ಮೂವರು ಅಭಿಮಾನಿಗಳು ಮೃತಪಟ್ಟರೆ, ಇನ್ನು ನಾಲ್ಕು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ನೆರವು ನೀಡಿದ್ದ ಯಶ್, ಗಾಯಾಳುಗಳಿಗೂ ನೆರವಾಗುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಗಾಯಾಳುಗಳ ಕುಟುಂಬಕ್ಕೆ ಗೊತ್ತಾಗದಂತೆ ಅವರ ಬ್ಯಾಂಕ್ ಖಾತೆಗೆ ತಲಾ 1 ಲಕ್ಷ ರೂ. ಹಣವನ್ನು ಹಾಕಿದ್ದಾರೆ. ಬ್ಯಾಂಕ್ ಪಾಸ್ ಪುಸ್ತಕವನ್ನು ಎಂಟ್ರಿ ಮಾಡಿಸಿದಾಗ ಹಣ ಬಂದಿರುವುದು ತಿಳಿದು ಬಂದಿದೆ.
ರಾಜ್ಯದಲ್ಲಿ ನಟ ಯಶ್ ಅವರ ಹುಟ್ಟು ಹಬ್ಬದ ದಿನದಂತು ಕರಾಳ ಘಟನೆಯೊಂದು ನಡೆಯಿತು. ಇಡೀ ದೇಶಾದ್ಯಂತ ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಗದಗ ಜಿಲ್ಲೆ ಸೂರಣಗಿ ಗ್ರಾಮದಲ್ಲಿ ಯಶ್ ಅವರ ದೊಡ್ಡ ಕಟೌಟ್ ಅನ್ನು ಜನವರಿ 7 ರ ಮಧ್ಯ ರಾತ್ರಿ ನಿಲ್ಲಿಸುವಾಗ ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿದ್ದರು. ಇದೇ ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಸಹಾಯಧನ ನೀಡಿದ್ದರು. ಇದೇ ವೇಳೆ ಗಾಯಾಳುಗಳಿಗೂ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.
undefined
ಡ್ರೋನ್ ಪ್ರತಾಪ್ ಮೇಲೆ ಮತ್ತೊಂದು ಕೇಸ್: ಮಾಜಿ ಸಿಎಂ ಹೆಸರೇಳಿಕೊಂಡು ಜಿಪಂ ಟಿಕೆಟ್ ಕೊಡಿಸುವುದಾಗಿ ವಂಚನೆ
ಬ್ಯಾನರ್ ಕಟ್ಟುವಾಗ ಸಂಭವಿಸಿದ್ದ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ, ಪ್ರಕಾಶ, ಹನುಮಂತ ಹಾಗೂ ನಾಗರಾಜ್ ಅವರ ಬ್ಯಾಂಕ್ ಖಾತೆಯ ಮಾಹಿತಿ ಪಡೆದಿದ್ದ ಯಶ್ ಅವರ ಟ್ರಸ್ಟ್‌ನ ಸಿಬ್ಬಂದಿ ಜ.22ರಂದು ಯಶ್ ಅವರಿಂದ ತಲಾ ಒಂದೊಂದು ಲಕ್ಷ ರೂ. ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಗಾಯಾಳು ಅಭಿಮಾನಿಗಳಿಗೆ ಮಾಹಿತಿ ಇರಲಿಲ್ಲ. ಟ್ರಸ್ಟ್ ಸಿಬ್ಬಂದಿ ಇವರಿಗೆ ಕರೆ ಮಾಡಿ ಒಂದು ವಾರದ ಹಿಂದೆಯೇ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಿದ್ದಾರೆ. ಆಗ ಪಾಸ್ ಬುಕ್ ತೆಗೆದುಕೊಂಡು ಹೋಗಿ ಎಂಟ್ರಿ ಮಾಡಿಸಿದಾಗ ಹಣ ಬಂದಿರುವುದು ತಿಳಿದುಬಂದಿದೆ.
ಸಂಬಂಧದಲ್ಲಿ ಅಣ್ಣ ತಂಗಿಯಾದ್ರೂ ಲವ್ ಮಾಡಿದ್ರು, ಮನೆಯವರು ವಿರೋಧಿಸಿದ್ದಕ್ಕೆ ಸಾವಿಗೆ ಶರಣಾದ್ರು!
ಇನ್ನು ಜನವರಿ 8 ರಂದು ಯಶ್ ಬರ್ತಡೇ ಹಿನ್ನೆಲೆ ರಾತ್ರಿ ಕಟೌಟ್ ನಿಲ್ಲಿಸುವ ವೇಳೆ ಅವಘಡದಲ್ಲಿ ಹನುಂತ ಹರಿಜನ(21) ಮುರಳಿ ನಡುವಿನಮನಿ (20) ನವೀನ್ ಗಾಜಿ (19) ಸಾವನ್ನಪ್ಪಿದ್ದರು. ಅದೇ ದಿನ ಗೋವಾದಲ್ಲಿ ಶೂಟಿಂಗ್‌ನಲ್ಲಿದ್ದ ಯಶ್ ಮೃತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಇದಾದ ನಂತರ ಗಾಯಾಳುಗಳು ದಾಖಲಾಗಿದ್ದ ಆಸ್ಪತ್ರೆಗೂ ದಾಖಲಾಗಿ ಆಸ್ಪತ್ರೆ ಖರ್ಚುವೆಚ್ಚ ಭರಿಸುವುದಾಗಿ ಹೇಳಿದ್ದರು. ಉತ್ತಮ ಚಿಕಿತ್ಸೆ ನೀಡುವಂತೆ ಆಸ್ಪತ್ರೆಗೂ ಸೂಚನೆ ನೀಡಿದ್ದರು.