ಕನ್ನಡದ ಕಣ್ಮಣಿ, ನಟ ಸಾರ್ವಭೌಮ ಡಾ ರಾಜ್‌ಕುಮಾರ್ ಅವರು ಯಾವುದೇ ಸಿನಿಮಾದ ಯಾವುದೇ ದೃಶ್ಯದಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡಿರಲಿಲ್ಲ. ಅಂಥಹ ಯಾವುದೇ ಸಿನಿಮಾದಲ್ಲಿ ನಟಿಸದೇ ಸೈಲೆಂಟಾಗಿ ಅವರ ಅಭಿಮಾನಿಗಳಿಗೆ ಸೈಲೆಂಟಾಗಿ ಸಂದೇಶ ಕೊಟ್ಟರು.
ಕನ್ನಡದ ಕಣ್ಮಣಿ, ನಟ ಸಾರ್ವಭೌಮ ಡಾ ರಾಜ್‌ಕುಮಾರ್ (Dr Rajkumar) ಅವರು ಯಾವುದೇ ಸಿನಿಮಾದ ಯಾವುದೇ ದೃಶ್ಯದಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡಿರಲಿಲ್ಲ. ಅಂಥಹ ಯಾವುದೇ ಸಿನಿಮಾದಲ್ಲಿ ನಟಿಸದೇ ಸೈಲೆಂಟಾಗಿ ಅವರ ಅಭಿಮಾನಿಗಳಿಗೆ ಸೈಲೆಂಟಾಗಿ ಸಂದೇಶ ಕೊಟ್ಟರು. ಜತೆಗೆ, ಸಮಕಾಲೀನ ಸಮಾಜಕ್ಕೆ ಅವುಗಳನ್ನು ಮಾಡದೇ ಜೀವಿಸಬಹುದು, ಸಿನಿಮಾ ನಟರಾಗಿಯೂ ಬಹಳಷ್ಟು ಎತ್ತರಕ್ಕೆ ಏರಬಹುದು ಎಂಬ ಮೇಲ್ಪಂಕ್ತಿಯನ್ನೂ ಹಾಕಿಕೊಟ್ಟರು ಡಾ ರಾಜ್‌ಕುಮಾರ್.
ಆದರೆ, ಅವರ ಮಕ್ಕಳು ಅದನ್ನು ಯಾಕೆ ಪಾಲಿಸಲಿಲ್ಲ? ಅದರಲ್ಲೂ ನಟ ಶಿವರಾಜ್‌ಕುಮಾರ್ (Shiva Rajkumar) ಕೆಲವು ಸಿನಿಮಾಗಳಲ್ಲಿ ಅಂತಹ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ಓಂ, ಜೋಗಿ, ಸಿಂಹದ ಮರಿ ಸೈನ್ಯ, AK-47 ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟ ಶಿವಣ್ಣ ಇಂತಹ ಸನ್ನಿವೇಶಗಳಲ್ಲಿ ನಟಿಸಿದ್ದಾರೆ. ಅವುಗಳನ್ನು ನೋಡಿದ ಹಲವರಿಗೆ 'ಡಾ ರಾಜ್‌ಕುಮಾರ್ ಮಗನಾಗಿ ಶಿವಣ್ಣ ಯಾಕೆ ಇಂಥ ದೃಶ್ಯಗಳಲ್ಲಿ ಅಭಿನಯಿಸಬೇಕಿತ್ತು? ಡಾ ರಾಜ್ ಅವರು ಬದುಕಿದ್ದಾಗಲೇ ಅವರ ಮಗ ಶಿವಣ್ಣ ಅಂತಹ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಅವರು ಏನೂ ಬುದ್ಧಿಮಾತು ಹೇಳಲಿಲ್ಲವೇ? ಅಥವಾ ಶಿವಣ್ಣರೇ ತಮ್ಮ ಅಪ್ಪಾಜಿಯ ಮಾತು ಕೇಳಲಿಲ್ಲವೇ? ಈ ಪ್ರಶ್ನೆಯನ್ನು ಶಿವರಾಜ್‌ಕುಮಾರ್ ಅವರ ಬಳಿ ಕೇಳಬೇಕು ಎಂದು ಹಲವರಿಗೆ ಎನಿಸಿರಬಹುದು.ಅದಕ್ಕೆ ಸ್ವತಃ ನಟ ಶಿವಣ್ಣ ಉತ್ತರಿಸಿದ್ದಾರೆ.
ಪುನೀತ್-ಶಿವಣ್ಣ ಜತೆಗಿನ 'ಲಾಸ್ಟ್ ಈವೆಂಟ್' ಪ್ರಶ್ನೆಗೆ ರಾಕಿಂಗ್ ಸ್ಟಾರ್ ಯಶ್ ಎಂಥಾ ಉತ್ತರ ಕೊಟ್ರು ನೋಡಿ!
ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ನಟ ಶಿವಣ್ಣ 'ಅಪ್ಪ ಯಾವತ್ತೂ ಹೇಳ್ತಾ ಇದ್ರು, ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕು, ಜತೆಗೆ ನಿರ್ಮಾಪಕರು ನಿರ್ದೇಶಕರು ಏನು ನಿರೀಕ್ಷೆ ಮಾಡ್ತಾರೋ ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು ಅಂತ ನಮ್ಮಪ್ಪಾಜಿನೇ ಸ್ವತಃ ಹೇಳ್ತಾ ಇದ್ರು. ಯಾವುದೇ ನಿರ್ಬಂಧಗಳನ್ನು ಅಥವಾ ಸ್ವಂತಿಕೆಗೆ ಪೆಟ್ಟುನೀಡುವಂಥ ರೀತಿಯಲ್ಲಿ ಅಪ್ಪಾಜಿ ಎಂದಿಗೂ ನಡೆದುಕೊಳ್ಳಲಿಲ್ಲ. ನಮ್ಮ ಅಭಿಪ್ರಾಯಗಳಿಗೆ ಕೂಡ ಅವರು ಬೆಲೆ ಕೊಡ್ತಾ ಇದ್ರು...' ಅಂತ ಶಿವಣ್ಣ ಹೇಳಿದ್ದಾರೆ.
ಅನ್ನ ಕೊಟ್ಟ ಊರಿಗೆ 'ದೊಡ್ಡ ಗಿಫ್ಟ್' ಕೊಡಲು ಪ್ಲಾನ್; ದೊಡ್ಡಣ್ಣನ ಹೃದಯ ಅದೆಷ್ಟು ದೊಡ್ಡದು ..!
ಎಂತಹ ಮಾತು ನೋಡಿ! 'ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಅನ್ನ ನೀಡುವ ಧಣಿ ನಿರ್ಮಾಪಕರು ಹಾಗು ಸಿನಿಮಾ ಚುಕ್ಕಾಣಿ ಹಿಡಿದಿರುವ ನಿರ್ದೇಶಕರು ಮಾಡಿಕೊಂಡಿರುವ ಕಥೆಗೆ ತಕ್ಕಂತೆ, ಅವರ ನಿರೀಕ್ಷೆಗೆ ಒಪ್ಪಿ ಸಿನಿಮಾ ಮಾಡಬೇಕು' ಎಂಬ ಮಾತು ನಟರಿಗೆ ವೇದವಾಕ್ಯ ಎಂದೇ ಹೇಳಬಹುದು. ಈ ಕಾರಣಕ್ಕೆ ಡಾ ರಾಜ್ ಕುಮಾರ್ ಅವರ ಮಗನಾಗಿದ್ದರೂ ನಟ ಶಿವಣ್ಣ ಬಹಳಷ್ಟು ಸಿನಿಮಾಗಳಲ್ಲಿ ಅಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ವಿರೋಧ ವ್ಯಕ್ತಪಡಿಸಲಿಲ್ಲ. ಹಲವರ ಮನಸ್ಸಿನಲ್ಲಿ ಓಡಾಡುತ್ತಿದ್ದ ಪ್ರಶ್ನೆಗೆ ನಟ ಶಿವಣ್ಣ ಸ್ಪಷ್ಟವಾದ ಹಾಗೂ ನೇರವಾದ ಉತ್ತರ ಕೊಟ್ಟಿದಾರೆ.
ದೊಡ್ಮನೆ ಕುಡಿಯ 'ಸರಳ ಪ್ರೇಮಕ್ಕೆ' ಆಶೀರ್ವದಿಸಲು ಬಸ್ ತಗೊಂಡು ಬಂದ್ರಲ್ಲ ಕರುನಾಡ ಫ್ಯಾನ್ಸ್!